ಬ್ಯಾಂಕ್ ಅಕೌಂಟ್ ಜೊತೆ ಆಧಾರ್ NPCI ಲಿಂಕ್ ಮಾಡಿಸಿದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಾಗೂ ಯುವನಿಧಿ ಯೋಜನೆಯ 3000 ಹಣ ಸಿಗೋದು.! ಕೂಡಲೇ ಈ ಕೆಲಸ ಮಾಡಿ

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಎಲ್ಲಾ ಆರ್ಥಿಕ ವ್ಯವಹಾರವೂ ಕೂಡ ಆನ್ಲೈನಲ್ಲಿಯೇ ಹೆಚ್ಚಾಗಿ ಜರುಗುತ್ತಿದೆ. ಸರ್ಕಾರದಿಂದ ಸಿಗುವ ಅನುದಾನಗಳು ಸಹಾಯಧನಗಳು ಸ್ಕಾಲರ್ಶಿಪ್ ಜೊತೆಗೆ ಸಾಲಗಳು ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ ಜಮೆ ಆಗುತ್ತದೆ.

ಈಗ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು ಘೋಷಿಸಿರುವ ಗ್ಯಾರಂಟಿ ಕಾರ್ಡ್ ಯೋಜನೆಯ ಸಹಾಯಧನಗಳಾದ ಮಹಿಳೆಯರಿಗೆ ಸಿಗುವ 2000 ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಮತ್ತು ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಸಿಗುವ ಯುವನಿಧಿ ಸಹಾಯಧನ ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ.

ಇವುಗಳಿಗೆ ಸಂಬಂಧಪಟ್ಟ ಹಾಗೆ ಇರುವ ಮಾರ್ಗಸೂಚಿ ಮತ್ತು ಕಂಡೀಶನ್ ಗಳನ್ನು ತಿಳಿಸಿದಾಗ ಮಾನ್ಯ ಮುಖ್ಯಮಂತ್ರಿಗಳು ಒಂದು ವಿಷಯದ ಬಗ್ಗೆ ಹೆಚ್ಚು ಒತ್ತು ಕೊಟ್ಟು ತಿಳಿಸಿದರು. ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುವ ಮಹಿಳೆಯರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಆ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು NPCI ಲಿಂಕಾಗಿ ಆಧಾರ್ ಸೀಡ್ ಆಗಿರುವ ಬ್ಯಾಂಕ್ ಖಾತೆಯನ್ನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಮಹಿಳೆಯರು ದಾಖಲೆಯಾಗಿ ಕೊಡಬೇಕು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳಿಗೂ ಇದೇ ಕಂಡಿಷನ್ ಅಪ್ಲೈ ಆಗುತ್ತದೆ. ಯುವನಿಧಿ ಯೋಜನೆಯಡಿ ಸಹಾಯಧನ ಪಡೆಯಲು ಬಯಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬ್ಯಾಂಕ್ ಖಾತೆ ಮಾಹಿತಿ ನೀಡುವ ಸಮಯದಲ್ಲಿ ಆ ಬ್ಯಾಂಕ್ ಖಾತೆಗೆ NPCI ಲಿಂಕ್ ಆಗಿದೆಯಾ ಎಂದರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನಂಬರ್ ಸೀಡಿಂಗ್ ಆಗಿದೆಯೇ ಎನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ನಂತರ ನೀಡಬೇಕು.

ಅಂತಹ ಬ್ಯಾಂಕ್ ಖಾತೆ ಮಾಹಿತಿ ನೀಡಿ ಅರ್ಜಿ ಹಾಕಿದ ಫಲಾನುಭವಿಗಳಿಗೆ ಮಾತ್ರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಹಾಯಧನ ವರ್ಗಾವಣೆ ಆಗುತ್ತದೆ. NPCI ಲಿಂಕಿಂಗ್ ಅನ್ನು ಖಾಸಗಿ ವಲಯದ ಮತ್ತು ಸರ್ಕಾರಿ ವಲಯದ ಎಲ್ಲಾ ಬ್ಯಾಂಕ್ ಅಕೌಂಟ್ ಗಳಿಗೂ ಕೂಡ ಮಾಡಿಸಬಹುದು. ಒಬ್ಬ ವ್ಯಕ್ತಿಯ ಒಂದು ಬ್ಯಾಂಕ್ ಅಕೌಂಟ್ ಗೆ ಮಾತ್ರ NPCI ಲಿಂಕ್ ಆಗಿರುತ್ತದೆ.

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಮತ್ತು NPCI ಲಿಂಕ್ ನಿಮ್ಮ ಅಕೌಂಟಿಗೆ ಆಗಿಲ್ಲ ಎಂದರೆ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಅಲ್ಲಿ ಅರ್ಜಿ ಪಡೆದು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿಮ್ಮ ಆಧಾರ್ ವಿವರವನ್ನು ಕೊಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಆರ್ಥಿಕ ಸಹಾಯವನ್ನು ಪಡೆಯಬೇಕು ಎಂದರೆ ಈ ರೀತಿ ಅವರ ಬ್ಯಾಂಕ್ ಖಾತೆಗಳು NPCI ಲಿಂಕ್ ಆಗಿರಲೇಬೇಕು ಇದು ಕಡ್ಡಾಯವಾಗಿದೆ.

ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಬ್ಯಾಂಕ್ ಖಾತೆಗೆ NPCI ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳಬಹುದು. ಅದಕ್ಕಾಗಿ ನೀವು ಮೊದಲು ಆಧಾರ್ ಕಾರ್ಡನ್ನು ನೀಡುವ ಭಾರತದ ಅಧಿಕೃತ ಸಂಸ್ಥೆ ಆದ UIDAI ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ NPCI ಲಿಂಕ್ ಚೆಕ್ ಮಾಡುವ ಕುರಿತಾಗಿ ಆಪ್ಷನ್ ಇರುತ್ತದೆ, ಅದರ ಮಾಹಿತಿ ಬರುತ್ತದೆ. ಯಶಸ್ವಿಯಾಗಿ ಎಲ್ಲಾ ಹಂತವನ್ನು ಪೂರ್ತಿಗೊಳಿಸಿದರೆ ನಿಮ್ಮ ಯಾವ ಅಕೌಂಟ್ NPCI ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತದೆ. ಒಂದುವೇಳೆ ಯಾವುದೇ ಬ್ಯಾಂಕ್ ಖಾತೆಗಳು ನಿಮ್ಮ ಆಗಿಲ್ಲ ಎಂದರೆ ಅದನ್ನು ಕೂಡ ತೋರಿಸುತ್ತದೆ. ಈ ವಿಧಾನದಲ್ಲಿ ಚೆಕ್ ಮಾಡಿಕೊಂಡು ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ NPCI ಲಿಂಕ್ ಮಾಡಿಸಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now