ಗಿಫ್ಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮ ಹುಟ್ಟು ಹಬ್ಬ, ಮದುವೆ-ಮುಂಜಿ, ಹಬ್ಬಗಳು, ಶುಭ ಸಮಾರಂಭ ಅಂತಾ ಬಂದ್ರೆ, ಬೇಗ ನೆನಪಾಗೋದು ಗಿಫ್ಟ್. ಇದು ಬಟ್ಟೆ ಅಥವಾ ಬೇರೆ ಯಾವುದಾದ್ರೂ ವಸ್ತುಗಳ ರೂಪದಲ್ಲಿ ಇರಬಹುದು. ಕೆಲವೊಮ್ಮೆ ನಮ್ಗೆ ಯಾರೋ ಕೊಟ್ಟ ಗಿಫ್ಟ್ನ ಬೇರೆಯವ್ರು ಇಷ್ಟಪಟ್ರೆ ಬೇರೆ ಆಯ್ಕೆ ಇಲ್ಲದೇ ಕೊಟ್ಟುಬಿಡುತ್ತೀವಿ.
ಇಲ್ಲ ಅಂದ್ರೆ, ಅವರೇ ನಾವು ಅನುಮತಿ ಕೊಡೋ ಮುಂಚೇನೆ ನಮ್ಮಿಂದ ಕಿತ್ತುಕೊಳ್ಳುತ್ತಾರೆ. ಆದ್ರೆ, ಇದೀಗ ಒಂದು ಹೊಸ ಕಾನೂನು ಬಂದಿದೆ. ಹೌದು, ಇಲ್ಲಿ ಜೀವನ ಹಂಚಿಕೊಂಡಿರೋ ಗಂಡನಿಗೆ ಹೆಂಡ್ತಿ ಉಡುಗೊರೆಗಳ ಮೇಲೆ ಯಾವುದೇ ಹಕ್ಕಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೌದು, ಸಾಮಾನ್ಯವಾಗಿ ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಥವಾ ಇನ್ನಿತರ ಶುಭ ಸಮಾರಂಭದಲ್ಲಿ ಮಹಿಳೆಯರಿಗೆ ಸಂಬಂಧಿಕರು ಅಥವಾ ಅವರ ಸ್ನೇಹಿತರು ನೀಡುವ ಉಡುಗೊರೆಗಳ ಮೇಲೆ ಆಕೆಗೆ ಮಾತ್ರ ಸಂಪೂರ್ಣ ಹಕ್ಕು ಇರುತ್ತದೆ. ಇಂತಹ ಉಡುಗೊರೆಯ ಗಂಡ ಅಥವಾ ಅವರ ಮನೆಯವರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್ ಮಹಿಳಾ ಪರವಾದ ಮಹತ್ವದ ತೀರ್ಪನ್ನು ನೀಡಿದೆ.
ಭಾರತೀಯ ಸಂಪ್ರದಾಯದಲ್ಲಿ ಎಲ್ಲ ಜಾತಿ, ಧರ್ಮಗಳಲ್ಲಿಯೂ ಮದುವೆ ಸೇರಿ ಇನ್ನಿತರೆ ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡುವುದು ತೀರಾ ಸಾಮಾನ್ಯವಾದ ವಿಚಾರವಾಗಿದೆ. ಆದರೆ, ಉಡುಗೊರೆಗಳು ಸಣ್ಣದ್ದಾಗಿರಬಹುದು ಅಥವಾ ಬೆಲೆ ಬಾಳುವಂಥದ್ದಾಗಿರಬಹುದು. ಆದರೆ, ಹೀಗೆ ಉಡುಗೊರೆಯಾಗಿ ಸಿಕ್ಕ ವಸ್ತುಗಳ ಮೇಲೆ ಗಂಡ- ಹೆಂಡತಿ ಇಬ್ಬರಿಗೂ ಅಧಿಕಾರ ಇರುತ್ತದೆ ಎಂದು ನಾವು ತಿಳಿದುಕೊಂಡಿರುತ್ತೇವೆ.
ಆದರೆ, ನಮ್ಮ ಊಹೆ ತಪ್ಪಾಗಿದೆ. ಮದುವೆ ಅಥವಾ ಇನ್ನಿತರ ಸಮಾರಂಭಗಳಲ್ಲಿ ಹೆಂಡತಿ ಅಥವಾ ಪತ್ನಿಗೆ ಬಂದ ಉಡುಗೊರೆಗಳ ಮೇಲೆ ಸಂಪೂರ್ಣವಾಗಿ ಆಕೆಗೇ ಹಕ್ಕು ಇರುತ್ತದೆ ಎಂದು ಛತ್ತೀಸ್ಗಢ ಹೈಕೋರ್ಟ್ ಮಹತ್ತರವಾದ ತೀರ್ಪನ್ನು ನೀಡಿದೆ. ಮಹಿಳೆಯರು ಅನೇಕ ಸಂದರ್ಭಗಳಲ್ಲಿ ಅನೇಕ ರೀತಿಯ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ.
ಮದುವೆಯ ಮೊದಲು ಅಥವಾ ನಂತರ ಮಹಿಳೆಯರು ಖಂಡಿತವಾಗಿಯೂ ಉಡುಗೊರೆಗಳನ್ನು ಪಡೆಯುತ್ತಾರೆ. ಹೀಗಾಗಿ ಛತ್ತೀಸ್ಗಢ ಹೈಕೋರ್ಟ್ ಇತ್ತೀಚೆಗೆ ಸ್ತ್ರಿಧಾನ್ (ಉಡುಗೊರೆ) ಪ್ರಕರಣದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ವಿವಾಹದ ಮೊದಲು ಅಥವಾ ನಂತರ, ನಿಶ್ಚಿತಾರ್ಥ ಅಥವಾ ವಿದಾಯ ಸಂದರ್ಭದಲ್ಲಿ ಮಹಿಳೆಗೆ ಉಡುಗೊರೆಯಾಗಿ ನೀಡಿದ ಆಸ್ತಿಯು ಆಕೆಯ ಸ್ವಂತದ್ದಾಗಿದೆ.
ಅವಳ ಸಂತೋಷಕ್ಕಾಗಿ ಅದನ್ನು ಖರ್ಚು ಮಾಡುವ ಹಕ್ಕಿದೆ. ಅದರ ಮೇಲೆ ಗಂಡನಿಗೆ ಹಕ್ಕಿಲ್ಲ ಎಂದು ಆದೇಶಿಸಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯ ಪರವಾಗಿ ತೀರ್ಪು: ಛತ್ತೀಸ್ಗಢ ರಾಜ್ಯದ ಅಂಬಿಕಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನದ ಪ್ರಕರಣ ದಾಖಲಾಗಿತ್ತು. ಮದುವೆಯಾಗಿ ಕೆಲವು ವರ್ಷಗಳ ಸಂಸಾರ ನಡೆಸಿದ್ದ ಪತಿ-ಪತ್ನಿ ಇಬ್ಬರೂ ವಿವಾಹ ವಿಚ್ಛೇದನ ಪಡೆದಿದ್ದರು.
ಈ ವೇಳೆ ತನಗೆ ಉಡುಗೊರೆಯಾಗಿ ಬಂದಿದ್ದ ಆಸ್ತಿ ಮತ್ತು ವಸ್ತುಗಳನ್ನು ಗಂಡನ ಮನೆಯಿಂದ ಹಿಂದಿರುಗಿಸುವಂತೆ ಮಹಿಳೆ ಕೇಳಿಕೊಂಡಿದ್ದರು. ಆದರೆಮ ಇದನ್ನು ತೊರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಪತಿಯ ಪರವಾಗಿ ತೀರ್ಪು ನೀಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್ನಲ್ಲಿ ಗೆಲುವು ಸಾಧಿಸಿ ಪತ್ನಿ: ಈ ತೀರ್ಪಿನ ವಿರುದ್ಧ ಮಹಿಳೆ 2021ರ ಡಿಸೆಂಬರ್ ವೇಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ತ್ರಿಸದಸ್ಯ ಪೀಠವು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದೆ. ಜೊತೆಗೆ, ಪತ್ನಿಗೆ ಬಂದ ಉಡುಗೊರೆಯ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಮಹಿಳಾ ಪರವಾದ ಮಹತ್ವದ ನಿರ್ಧಾರವನ್ನ ಹೊರಡಿಸಿದೆ. ಈ ಮೂಲಕ ಮಹಿಳೆ ಪಡೆದ ಉಡುಗೊರೆ ಮತ್ತು ವಸ್ತುಗಳನ್ನು ಪಡೆಯುವ ಹಕ್ಕು ಆಕೆಗೆ ಮಾತ್ರ ಇದೆ ಎಂದು ತ್ರಿಸದಸ್ಯ ಪೀಠವು ಆದೇಶಿಸಿದೆ.