ಬ್ಯಾಂಕ್ ನಲ್ಲಿ ಉದ್ಯೋಗ ಮಾಡಬೇಕು ಎನ್ನುವುದು ಬಹುತೇಕ ಯುವಜನತೆಯ ಇಚ್ಛೆ. ಯಾಕೆಂದರೆ ಹೆಚ್ಚಿನ ಕೆಲಸದ ಒತ್ತಡವಿಲ್ಲ, ಮತ್ತು ಅತಿ ಹೆಚ್ಚಿನ ರಜಾ ದಿನಗಳು ಸಿಗುತ್ತವೆ, ಆರಾಮಾಗಿ AC ರೂಮಿನಲ್ಲಿ ಕುಳಿತು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಸ್ಪಂದಿಸುತ್ತ ಕೆಲಸ ಮಾಡುವ ಅವಕಾಶ ಸಿಗುತ್ತದೆ ಹಾಗಾಗಿ ಬ್ಯಾಂಕ್ ಕೆಲಸವೇ ಬೆಸ್ಟ್ ಎಂದು ಹೇಳುವ ಮಂದಿ ಸಾಕಷ್ಟು ಜನರಿದ್ದಾರೆ. ಇವರಿಗೆಲ್ಲಾ ಒಂದು ಸಿಹಿ ಸುದ್ದಿ ಇದೆ.
IDBI ಬ್ಯಾಂಕ್ ನಲ್ಲಿ (IDBI Recruitment) ಹಲವು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಅರ್ಹತಾ ಮಾನದಂಡಗಳನ್ನು ಪೂರೈಸುವವರು ಅರ್ಜಿ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಳ್ಳಬಹುದಾಗಿದೆ. ಆಸಕ್ತರಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ನಾವು ಸಹ ಈ ಲೇಖನದಲ್ಲಿ ನೇಮಕಾತಿ ಕುರಿತಾಗಿ ನೋಟಿಫಿಕೇಶನ್ ನಲ್ಲಿ ಇರುವ ಎಲ್ಲಾ ಪ್ರಮುಖ ಸಂಗತಿಗಳನ್ನು ವಿವರಿಸಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಇನ್ನು ಬಂದಿಲ್ಲವೇ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!
ಉದ್ಯೋಗ ಸಂಸ್ಥೆ:- IDBI ಬ್ಯಾಂಕ್
ಹುದ್ದೆ ಹೆಸರು:- ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (Chief Information Security Officer).
ಒಟ್ಟು ಹುದ್ದೆಗಳ ಸಂಖ್ಯೆ:- 01 ಹುದ್ದೆ
ವೇತನ ಶ್ರೇಣಿ:- ರೂ.15 ರಿಂದ ರೂ.20 ಲಕ್ಷದವರೆಗೆ (ವಾರ್ಷಿಕ ಪ್ಯಾಕೇಜ್)
ಶೈಕ್ಷಣಿಕ ವಿದ್ಯಾರ್ಹತೆ:-
* ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು.
* ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಣತಿ ಇರಬೇಕು.
* ಪ್ರಾದೇಶಿಕ ಭಾಷೆಯಲ್ಲಿ ಪರಿಣತಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
* ಈಗಾಗಲೇ ಕೆಲಸದ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 45 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 60 ವರ್ಷಗಳು
ಈ ಸುದ್ದಿ ಓದಿ:- ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.!
ಅರ್ಜಿ ಸಲ್ಲಿಸುವ ವಿಧಾನ:-
* IDBI ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ಗೆ https://www.idbibank.in/idbi-bank-careers-current-openings.aspx ಗೆ ಭೇಟಿ ನೀಡಿ.
* Career ವಿಭಾಗಕ್ಕೆ ಹೋಗಿ Current Openings ಆಯ್ಕೆ ಮಾಡಿ
* Post ವಿಭಾಗಕ್ಕೆ ಹೋಗಿ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರಾ ಅದನ್ನು ಸೆಲೆಕ್ಟ್ ಮಾಡಿ.
* ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಇದಕ್ಕೆ ಸಂಬಂಧಿಸಿದಂತೆ ಕೇಳಿರುವ ನಿಮ್ಮ ವೈಯುಕ್ತಿಕ ವಿವರಗಳನ್ನು ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಿ. ಶೈಕ್ಷಣಿಕ ವಿದ್ಯಾರ್ಹತೆ, ಕೆಲಸದ ಅನುಭವ, ವಯೋಮಿತಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಗಳನ್ನು ನಮೂದಿಸಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದ ಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ, ಮುಂದಿನ ದಿನಗಳಲ್ಲಿ ಇದರ ಅವಶ್ಯಕತೆ ಇರುತ್ತದೆ.
ಈ ಸುದ್ದಿ ಓದಿ:- ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ, ವೇತನ 28,000
ಆಯ್ಕೆ ವಿಧಾನ:-
* ಮೊದಲಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗುತ್ತದೆ
* ಇದರಲ್ಲಿ ನಿಗದಿಪಡಿಸಿದ ಅಂಕಗಳನ್ನು ಪಡೆದು ಸೆಲೆಕ್ಟ್ ಆದವರಿಗೆ ನೇರ ಸಂದರ್ಶನ ಮಾಡಲಾಗುತ್ತದೆ
* ನಂತರ ಮುಂದಿನ ಹಂತದಲ್ಲಿ ಮೆಡಿಕಲ್ ಟೆಸ್ಟ್ ಕೂಡ ಮಾಡಲಾಗುತ್ತದೆ
* ಅಂತಿಮವಾಗಿ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 05 ಮೇ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24 ಮೇ, 2024.