ಫೋಟೋದಲ್ಲಿ ಕಾಣುವ ಕನ್ನಡದ ಈ ಸ್ಟಾರ್ ನಟ ಯಾರೆಂದು ತಿಳಿಸಿ.

ನೀವಿಲ್ಲಿ ನೋಡುತ್ತಿರುವಂತಹ ಸ್ಟಾರ್ ನಟ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೆ ಇವರು ಭಾರತೀಯ ಚಲನಚಿತ್ರದ ನಟ ಹಾಗೂ ನಿರ್ದೇಶಕ ಅಷ್ಟೇ ಅಲ್ಲದೆ ನಿರ್ಮಾಪಕ, ಚಿತ್ರ ಕಥೆಗಾರ, ನಿರೂಪಕ ಮತ್ತು ಹಿನ್ನೆಲೆ ಗಾಯಕನಾಗಿ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ಇವರು ನಟನಾಗಿ ನಟಿಸಿದ್ದಾರೆ ಇವರು ಮೂಲತಹ ಕರ್ನಾಟಕದ ಶಿವಮೊಗ್ಗದವರು ಇವರ ತಂದೆ ಹೆಸರು ಸಂಜೀವ್ ಸರೋವರ್ ಮತ್ತು ತಾಯಿಯ ಹೆಸರು ಸರೋಜಾ. ಈ ನಟ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಇವರಿಗೆ ಮದುವೆಯಾಗಿ ಈಗ ಒಬ್ಬಳು ಮಗಳು ಸಹ ಇದ್ದಾಳೆ.

WhatsApp Group Join Now
Telegram Group Join Now

ಈ ತಂದೆ ಮಕ್ಕಳ ಒಂದು ಬಾಂಧವ್ಯ ನೋಡಿದರೆ ತುಂಬಾ ಖುಷಿಯಾಗುತ್ತದೆ ಅಷ್ಟರ ರಮಟ್ಟಿಗೆ ಇವರ ಒಂದು ಒಡನಾಟ ಇದೆ ತಮ್ಮ ಮಗಳನ್ನು ಇವರು ತುಂಬಾ ಇಷ್ಟಪಡುತ್ತಾರೆ. ಈ ಚಿತ್ರ ನಟ ಕನ್ನಡ ಚಿತ್ರರಂಗಕ್ಕೆ ಬಂದಂತಹ ಸಮಯದಲ್ಲಿ ಅಷ್ಟೇನೂ ಹೆಸರು ಮಾಡಿರಲಿಲ್ಲ ಹಾಗೆ ಇವರ ಪ್ರಾರಂಭದ ದಿನಗಳು ಸಹ ಅಷ್ಟೊಂದು ಚೆನ್ನಾಗಿರಲಿಲ್ಲ ಇವರು ನಟಿಸಿದ ಮೊದಲ ಸಿನಿಮಾ ಎಂದರೆ ಅದು ಸ್ಪರ್ಶ. ಈ ಒಂದು ಸಿನಿಮಾದಲ್ಲಿ ಇವರು ಗುರುತಿಸಿಕೊಂಡರು ನಂತರದಲ್ಲಿ ಬಂದಂತಹ ಹಲವು ಸಿನಿಮಾಗಳಲ್ಲಿ ಇವರ ನಟನೆಯನ್ನು ನೋಡಿ ಅಭಿಮಾನಿಗಳು‌ ಹುಟ್ಟಿಕೊಂಡರು. ಹುಚ್ಚ, ನಂದಿ ಮತ್ತು ಸ್ವಾತಿಮುತ್ತು ಈ ಚಿತ್ರಗಳಿಗೆ ಇವರಿಗೆ ಸತತವಾಗಿ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನಾಗಿ ಫಿಲಂ ಫೇರ್ ಪ್ರಶಸ್ತಿಯನ್ನು ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನಂತರದಲ್ಲಿ ಈ ಸ್ಟಾರ್ ನಟ ಹಿಂತಿರುಗಿ ನೋಡಿದ್ದೇ ಇಲ್ಲ ಅವರ ಜೀವನ ಅಲ್ಲಿಂದ ಶುರುವಾಗಿ ಇಲ್ಲಿಯ ತನಕ ಅವರು ನಟನೆಯಲ್ಲಿ ಮುಂದುವರಿಸುತ್ತಿಕೊಂಡು ಹೋಗುತ್ತಿದ್ದಾರೆ ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಂತಹ ಈ ನಟನನ್ನು ಬಣ್ಣದ ಲೋಕ ಕೈ ಬಿಟ್ಟಿಲ್ಲ. ಅದೃಷ್ಟ ಎಂಬುವುದು ಇವರ ಮನೆಯ ಬಾಗಿಲಲ್ಲಿ ನಿಂತಿದೆ ಎಂದು ಹೇಳಬಹುದು. ಎಷ್ಟೋ ಅಭಿಮಾನಿಗಳು ಇವರನ್ನು ನೋಡಲು, ಇವರ ಮಾತನಾಡಿಸಲು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಇದೀಗ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ನಲ್ಲಿ ಇವರು ನಿರೂಪಣಕನಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಇವರ ನಿರೂಪಣೆಯನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದಾರೆ.

ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿರುವಂತಹ ಇವರು ಕನ್ನಡ ಭಾಷೆಯ ಮೇಲೆ ಸಾಕಷ್ಟು ಒಲವನ್ನು ಇಟ್ಟುಕೊಂಡಿದ್ದಾರೆ, ನೇರ ನುಡಿ ಹಾಗೆಯೇ ತಮ್ಮದೇ ಆದಂತಹ ಒಂದು ಗಾಂಭೀರ್ಯತೆಯನ್ನು ಹೊಂದಿರುವಂತಹ ಇವರನದನು ನೋಡಿದರೆ ಎಂತಹವರಿಗು ಸಹ ಇವರಂತೆ ಇರಬೇಕು ಎಂದು ಅನಿಸುವುದು ಖಂಡಿತ. ಅಭಿಮಾನಿಗಳು ಇವರನ್ನು ಕಿಚ್ಚ, ಬಾದ್ ಶಾಹ್, ಅಭಿನಯ ಚಕ್ರವರ್ತಿ ಇನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ ಇವರ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿರುತ್ತಾರೆ ಹಾಗೆ ಇವರ ಸಿನಿಮಾಗಳನ್ನು ರಿಲೀಸ್ ಮಾಡುವಂತಹ ಸಂದರ್ಭದಲ್ಲಿ ಹಬ್ಬದ ವಾತಾವರಣವನ್ನು ಎಲ್ಲೆಡೆ ಸೃಷ್ಟಿ ಮಾಡುತ್ತಾರೆ. ಕರ್ನಾಟಕದಲ್ಲಿ ಹೆಚ್ಚಾಗಿ ಇವರ ಅಭಿಮಾನಿಗಳು ಇದ್ದಾರೆ ಅಷ್ಟೇ ಅಲ್ಲದೆ ಇತರ ಭಾಷೆಗಳಲ್ಲೂ ಸಹ ನಟಿಸಿರುವುದರಿಂದ ಅನ್ಯ ಭಾಷೆಯ ಅಭಿಮಾನಿಗಳನ್ನು ಸಹ ಇವರು ಹೊಂದಿದ್ದಾರೆ. ಈ ಸ್ಟಾರ್ ನಟ ಯಾರೆಂದು ನಿಮಗೆ ತಿಳಿದರೆ ತಪ್ಪದೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now