ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರ್ಕಾರವು ಪ್ರತಿ ತಿಂಗಳು ಅವರ ಜೀವನ ನಿರ್ವಹಣೆಗಾಗಿ ಕನಿಷ್ಠ ಮೊತ್ತದ ಹಣವನ್ನು ಪಿಂಚಣಿ (Pension) ರೂಪದಲ್ಲಿ ನೀಡಿ ನೆರವಾಗುತ್ತಿದೆ.
ಈಗಾಗಲೇ ನಮ್ಮ ದೇಶದಲ್ಲಿ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಈ ಯೋಜನೆಗಳ ಮೂಲಕ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ಅವಿವಾಹಿತರು, ದೌರ್ಜನ್ಯ ಕೊಳಗಾದ ಮಹಿಳೆಯರು, ಆಸಿಡ್ ದಾಳಿಗೆ ಒಳಗಾದ ಮಹಿಳೆಯರು, ಆ.ತ್ಮಹ.ತ್ಯೆ ಮಾಡಿಕೊಂಡ ರೈತನ ಮಡದಿ ಹೀಗೆ ಆಯಾ ವರ್ಗಕ್ಕೆ ಅನುಸಾರವಾಗಿ ಅವರಿಗೆ ನಿಗದಿಯಾಗಿರುವ ಪಿಂಚಣಿಯನ್ನು ಪಡೆಯುತ್ತಿದ್ದಾರೆ.
ಪ್ರತಿ ತಿಂಗಳು ತಪ್ಪದೇ ಸರ್ಕಾರದ ವತಿಯಿಂದ ಅವರ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿ ಖಾತೆಗೆ ಈ ಹಣವು ವರ್ಗಾವಣೆಯಾಗುತ್ತಿದೆ. ಇನ್ನು ಹಲವು ಕಡೆ ಅಂಚೆ ಇಲಾಖೆ ಸಿಬ್ಬಂದಿ ಮನೆ ಮನೆಗೆ ಹೋಗಿ ಈ ಹಣವನ್ನು ತಲುಪಿಸುತ್ತಿದ್ದಾರೆ. ಆದರೆ ಇನ್ನು ಮುಂದೆ ಇದರಲ್ಲಿ ವ್ಯತ್ಯಾಸವಾಗಲಿದೆ, ಅದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅದೇನೆಂದರೆ ಈ ರೀತಿ ಪಿಂಚಣಿ ಪಡೆಯುತ್ತಿರುವವರಲ್ಲಿ ಕೆಲವರು ಸರ್ಕಾರವನ್ನ ವಂಚಿಸಿ ಅಕ್ರಮವಾಗಿ ಹಣ ಹೊಡೆಯುತ್ತಿದ್ದಾರೆ, ಒಬ್ಬ ಫಲಾನುಭವಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ನೀಡಿ ಹಣ ಪಡೆಯುತ್ತಿರುವುದು ಮತ್ತು ಅನರ್ಹ ವ್ಯಕ್ತಿಯು ಕೂಡ ಈ ಯೋಜನೆಯಲ್ಲಿರುವುದು ಗಮನಕ್ಕೆ ಬಂದಿರುವುದರಿಂದ ಇದರ ಕುರಿತ ಸರಿಯಾದ ಅಂಕಿ ಅಂಶಗಳನ್ನು ಸರ್ವೆ ಮಾಡಲು ಸರ್ಕಾರವು ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.
ಮೊದಲಿಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ (Adhar link to Bank account) ಮಾಡುವುದರಿಂದ ಅರ್ಧಕ್ಕಿಂತ ಹೆಚ್ಚು ನಕಲಿ ಫಲವಾಗಿಗಳ ಪತ್ತೆಯಾಗುತ್ತದೆ ಎಂದು ಊಹಿಸಲಾಗಿದೆ. ಹಾಗಾಗಿ ಶೀಘ್ರವೇ ಈ ಪ್ರಕ್ರಿಯೆ ಪೂರ್ತಿಗೊಳಿಸುವಂತೆ ಕೇಂದ್ರ ಸರ್ಕಾರವು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಆದೇಶ ನೀಡಿದೆ.
ಪ್ರತಿ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಕೂಡ ಈ ರೀತಿ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಪಿಂಚಣಿ ಪಡೆಯುತ್ತಿರುವವರ ವಿವರ ಇರುತ್ತದೆ. ಅವರ ಯಾವ ಬ್ಯಾಂಕ್ ಖಾತೆಗೆ ಹಣ ಹೋಗುತ್ತಿದೆ ಅಥವಾ ಯಾವ ಯೋಜನೆಯಿಂದ ಹಣ ಹೋಗುತ್ತದೆ ಎನ್ನುವುದರ ವಿವರ ಇದೆ.
ಇದರ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಸ್ವತಃ ತಾವೇ ಹೋಗಿ ತಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಗೆ ಬೇಟೆಕೊಟ್ಟು ಆಧಾರ್ ಕಾರ್ಡ್ ಹಾಗೂ ಅವರ ಖಾತೆ ವಿವರವನ್ನು ನೀಡಿ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮನವಿ ಮಾಡುವುದರಿಂದ ಅವರವರ ಬ್ಯಾಂಕ್ ಖಾತೆ ಜೊತೆಗೆ ಅವರ ಆಧಾರ್ ಕಾರ್ಡ್ ಲಿಂಕ್ ಆಗಿ ಸರಿಯಾದ ಅಂಕಿ ಅಂಶ ಸರ್ಕಾರಕ್ಕೆ ತಲುಪುತ್ತದೆ.
ಈ ಪ್ರಕ್ರಿಯೆಗೆ ಸರ್ಕಾರವು ಹಲವು ಬಾರಿ ಕಾಲಾವಕಾಶ ನೀಡಿದ್ದು ಈಗ ಅಂತಿಮವಾಗಿ ಅಕ್ಟೋಬರ್ 25ಕ್ಕೆ ಕೊನೆಗೊಳಿಸಿದೆ. ಈ ರೀತಿ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳು ಈಗಾಗಲೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ್ದಾರೆ. ಇನ್ನು ಸಹ ಇದಕ್ಕೆ ತಡ ಮಾಡುತ್ತಾ ಇರುವ ಪಿಂಚಣಿ ದಾರರು ತಕ್ಷಣವೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.
ಇಲ್ಲವಾದಲ್ಲಿ ನಿಮ್ಮ ಖಾತೆಗಳಿಗೆ ಹಣ ವರ್ಗಾವಾಣೆಯಾಗುವುದು ಸ್ಥಗಿತಗೊಂಡರೆ ನೀವೇ ಜವಾಬ್ದಾರಿ ಎಂದು ಸರ್ಕಾರ ತಿಳಿಸಿದೆ. ಸಾಮಾನ್ಯವಾಗಿ ಮನೆ ಮನೆಗಳಲ್ಲಿ ಕೂಡ ಈ ರೀತಿ ಪಿಂಚಣಿ ಪಡೆಯುವ ಫಲಾನುಭವಗಳು ಇರುತ್ತಾರೆ ಹಾಗಾಗಿ ಇನ್ನು ಯಾರಿಗೆಲ್ಲಾ ಮಾಹಿತಿ ತಲುಪಿಲ್ಲ ಅವರಿಗೆ ಮಾಹಿತಿ ತಲುಪಿಸುವ ಸಲುವಾಗಿ ಈ ಮಾಹಿತಿಯನ್ನು ನಿಮ್ಮ ಕುಟುಂಬದ ಹಾಗೂ ಸ್ನೇಹಿತರ ಜೊತೆ ತಪ್ಪದೆ ಶೇರ್ ಮಾಡಿ.