ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ (RDWSD) ಸಿಹಿ ಸುದ್ದಿ ಇದೆ. ಅದೇನೆಂದರೆ, ಇಲಾಖೆಯಲ್ಲಿ ಖಾಲಿ ಇರುವ ಸುಮಾರು 150ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಲಾಖೆಯು ನೇಮಕಾತಿ ಪ್ರಕ್ರಿಯೆ (recruitment) ಆರಂಭಿಸಿದೆ.
ಇದರ ಸಲುವಾಗಿ ಅಧಿಸೂಚನೆ ಕೂಡ ಹೊರಡಿಸಿದ್ದು, ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ಮತ್ತು ವಯೋಮಿತಿ ಇನ್ನಿತರ ಮಾನದಂಡಗಳನ್ನು ನಿಗದಿಪಡಿಸಿ ಅವುಗಳ ವಿವರವನ್ನು ಪ್ರಕಟಣೆಯಲ್ಲಿ ತಿಳಿಸಿದೆ. ಆ ಪ್ರಕಾರವಾಗಿ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕೂಡ ಹುದ್ದೆಗಳು ಖಾಲಿ ಇವೆ.
ನೀವು ಕೂಡ ಆಕಾಂಕ್ಷಿಗಳಾಗಿದ್ದರೆ ತಪ್ಪದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿರುವ ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಇಲಾಖೆಯ ಹೆಸರು:- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD).
ಒಟ್ಟು ಹುದ್ದೆಗಳ ಸಂಖ್ಯೆ:- 155
ಹುದ್ದೆಗಳ ವಿವರ:-
● ಪ್ರೊಕ್ಯೂರ್ ಮೆಂಟ್ ಕನ್ಸಲ್ಟೆಂಟ್
● ಮಾನಿಟರಿಂಗ್ & ಎವಲ್ಯೂಯೇಷನ್ ಕನ್ಸಲ್ಟೆಂಟ್
● ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್
● ಸೋಷಿಯಲ್ ಡೆವಲಪ್ಮೆಂಟ್ ಕನ್ಸಲ್ಟೆಂಟ್
● ಫೈನಾನ್ಸ್ ಕನ್ಸಲ್ಟೆಂಟ್
ಉದ್ಯೋಗ ಸ್ಥಳ:- ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ…
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ಹುದ್ದೆಯನುಸಾರ ರೂ.50,000 – ರೂ.75,000 ವರೆಗೆ ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
● ಪ್ರೊಕ್ಯೂರ್ ಮೆಂಟ್ ಕನ್ಸಲ್ಟೆಂಟ್ – B.E / B.tec in ಸಿವಿಲ್ ಇಂಜಿನಿಯರಿಂಗ್
● ಮಾನಿಟರಿಂಗ್ & ಎವಲ್ಯೂಯೇಷನ್ ಕನ್ಸಲ್ಟೆಂಟ್ – BCA /B.E in ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫರ್ಮೇಷನ್ ಟೆಕ್ನಾಲಜಿ
● ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್ – B.E / B.tec / M.tec in ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್
● ಸೋಷಿಯಲ್ ಡೆವಲಪ್ಮೆಂಟ್ ಕನ್ಸಲ್ಟೆಂಟ್ – MSW / MA in ಸೋಷಿಯಾಲಜಿ ಅಥವಾ PG in ರೂರಲ್ ಡೆವಲಪ್ಮೆಂಟ್ / MBA.
● ಫೈನಾನ್ಸ್ ಕನ್ಸಲ್ಟೆಂಟ್ – MBA / M.Com (ಫೈನಾನ್ಸ್ )
● ಇದರ ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ ನಿಗದಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿಸಲ್ಲಿಸಲು ಗರಿಷ್ಠ ವಯೋಮಿತಿ 45 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲೆ ತಿಳಿಸಿದ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿಗಳನ್ನು ಹೊಂದಿರುವ ಅಭ್ಯರ್ಥಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ
● ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ ಮ, ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಕೇಳಲಾಗುವ ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
● ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ತಪ್ಪದೆ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ ಮುಂದೆ ಇದು ನಿಮ್ಮ ಉಪಯೋಗಕ್ಕೆ ಬರುತ್ತದೆ.
ಅರ್ಜಿ ಶುಲ್ಕ:-
ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:-
● ದಾಖಲೆ ಪರಿಶೀಲನೆ
● ಸಂದರ್ಶನ
● ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 19 ಅಕ್ಟೋಬರ್ 2023.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04 ನವೆಂಬರ್ 2023.