ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವಿರುವ ವೈಮನಸ್ಸಿನ ಕಾರಣದಿಂದ ವಿ’ಚ್ಛೇ’ದ’ನ ಆಗುತ್ತಿರುವುದಕ್ಕಿಂತ ಅವರ ಕುಟುಂಬಸ್ಥರ ಮೇಲಿನ ಕೋಪ, ಅಸಮಾಧಾನದಿಂದ ಡಿ’ವೋ’ರ್ಸ್ ಆಗುತ್ತಿರುವುದು ಹೆಚ್ಚು. ಅನೇಕ ಕುಟುಂಬಗಳಲ್ಲಿ ನನ್ನ ಗಂಡನದ್ದು ಏನು ಸಮಸ್ಯೆ ಇಲ್ಲ ಆದರೆ ನನ್ನ ಅತ್ತೆ, ಮಾವ ಅಥವಾ ಅತ್ತಿಗೆ, ನಾದಿನಿ, ಬಾವ, ಮೈದುನ ಇವರು ಸರಿ ಇಲ್ಲ ಆದರೆ ಬೇರೆ ಮನೆ ಮಾಡಲು ಗಂಡ ಒಪ್ಪುವುದಿಲ್ಲ.
ಹಾಗಾಗಿ ತವರು ಮನೆಗೆ ಬಂದೆ ಎಂದು ದೂರು ಹೇಳುವ ಹೆಣ್ಣು ಮಕ್ಕಳನ್ನು ನೋಡಿದ್ದೇವೆ ಅಥವಾ ಗಂಡನನ್ನು ಸೇರಿಸಿ ಎಲ್ಲರ ಮೇಲು ದೌರ್ಜನ್ಯದ ಮತ್ತು ವರದಕ್ಷಿಣೆಯ ಕೇಸ್ ಹಾಕಿ ವಿಚ್ಛೇದನ ಪಡೆದುಕೊಳ್ಳುವ ಹೆಣ್ಣು ಮಕ್ಕಳ ಸಂಖ್ಯೆಗೂ ಕಡಿಮೆ ಇಲ್ಲ. ಆದರೆ ಕಾನೂನಿನಲ್ಲಿ ಹೆಣ್ಣುಮಗಳು ಮದುವೆಯಾದ ಮೇಲೆ ಅತ್ತೆ ಮಾವನ ಜೊತೆ ಇರಲು ಆಗುವುದಿಲ್ಲ ಎಂದು ಹೇಳುವಂತಿಲ್ಲ ಎನ್ನುವ ಕಾನೂನು ಇದೆ.
ಆಕೆಗೆ ತನ್ನ ಪತಿ ಕುಟುಂಬದವರ ಜೊತೆ ಏನು ಸಮಸ್ಯೆ ಇಲ್ಲದೆ ಅತ್ತೆ ಮಾವನ ಜೊತೆ ಬಾಳುವುದಿಲ್ಲ ಎಂದು ಹೇಳುವಂತಿಲ್ಲ. ಯಾಕೆಂದರೆ ಈಗಿನ ಕಾಲದಲ್ಲಿ ಒಬ್ಬನೇ ಮಗ ಇರುತ್ತಾರೆ ಅಥವಾ ಪೋಷಕರು ವಯಸ್ಸಾಗಿರುವವರು ಇರುತ್ತಾರೆ ಅಥವಾ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿ ಇರುವುದಿಲ್ಲ. ಇಂತಹ ಸಮಯದಲ್ಲಿ ಅವರು ಮಗನ ಆಸರೆ ಬಯಸುವುದು ಮಾಮೂಲಿ.
ಆದರೆ ಸೊಸೆಗೆ ಅತ್ತೆ ಮಾವನ ಜೊತೆ ಹೊಂದಾಣಿಕೆ ಆಗಿಲ್ಲ ಎನ್ನುವ ಕಾರಣಕ್ಕೆ ಪತಿಯನ್ನು ಬೇರೆ ಮನೆ ಮಾಡಿ ಕರೆದುಕೊಂಡು ಹೋದರೆ ಪೋಷಕರು ಏನು ಮಾಡಬೇಕು. ಈ ಕಾರಣಕ್ಕಾಗಿ ಈ ರೀತಿ ಒಂದು ಕಾನೂನನ್ನು ದೃಷ್ಟಿಯಿಂದ ರಚಿಸಲಾಗಿದೆ. ಆದರೆ ಇದನ್ನು ಕಾನೂನಿನ ತನಕ ಎಳೆಯುವ ವಿಚಾರವೇ ಏರ್ಪಡಬಾರದು. ಹೆತ್ತವರ ಋಣ ತೀರಿಸುವುದು ಮಕ್ಕಳ ಕರ್ತವ್ಯ.
ಆದರೆ ಈ ರೀತಿ ಕೂಡ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಈ ವಿಷಯದ ಬಗ್ಗೆ ಕಾನೂನಿನಲ್ಲಿ ಏನಿದೆ ಎಂದು ಪ್ರಸ್ತಾಪ ಮಾಡಲೇಬೇಕು. ಒಂದು ವೇಳೆ ಮಹಿಳೆಯೊಬ್ಬಳು ತನ್ನ ಪತಿ ತಂದೆ ತಾಯಿಯನ್ನು ಬಿಟ್ಟು ಬೇರೆ ಬಂದು ಸಂಸಾರ ಮಾಡಬೇಕು ಬೇರೆ ಮನೆ ಮಾಡಬೇಕು ಎಂದು ಕೋರ್ಟ್ ನಲ್ಲಿ ಮನವಿ ಸಲ್ಲಿಸಿದರೆ ಅದು ನಿಲ್ಲುವುದಿಲ್ಲ.
ಯಾಕೆಂದರೆ ಸುಪ್ರೀಂಕೋರ್ಟ್ ಹಿಂದೊಮ್ಮೆ ನರೇಶ್ ಮತ್ತು ಮೀನಾ ಎನ್ನುವ ದಂಪತಿಗಳ ವಿಚಾರದಲ್ಲಿಯೇ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಅದೇನೆಂದರೆ, ಭಾರತದಂತಹ ದೇಶದಲ್ಲಿ ತನ್ನದೇ ಆದ ಪದ್ಧತಿಗಳು ಇವೆ. ನಮ್ಮ ನೆಲದ ಸಂಸ್ಕೃತಿಯ ಪ್ರಕಾರ ಮದುವೆ ಆದ ಹೆಣ್ಣುಮಗಳು ಗಂಡನ ಮನೆಗೆ ಹೋಗಿ ನೆಲೆಸಬೇಕು.
ಇದೇ ಆಧಾರದ ಮೇಲೆ ಮದುವೆಗಳು ನಿಂತಿರುವುದರಿಂದ ಆಕೆ ಗಂಡನನ್ನು ಬೇರೆ ಮನೆ ಮಾಡು ಎಂದು ಕೇಳುವಂತಿಲ್ಲ ಅಥವಾ ಗಂಡನ ಮನೆಗೆ ಹೋಗುವುದಿಲ್ಲ ಗಂಡನೇ ತವರು ಮನೆಗೆ ಬಂದು ತನ್ನ ಜೊತೆ ಇರಲಿ ಎಂದು ಕೇಳುವುದಕ್ಕೂ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಇದನ್ನು ಅರ್ಥಮಾಡಿಕೊಳ್ಳದೆ ಆ ಮಹಿಳೆಯು ಹಠ ಮಾಡಿದ್ದೆ ಆದರೆ ಪತಿಯು ಈ ಕಾರಣವನ್ನು ಕೊಟ್ಟು ಆಕೆಯಿಂದ ವಿ’ಚ್ಛೇ’ದ’ನ ಪಡೆಯಲು ಅವಕಾಶವಿದೆ.
ಆದರೆ ಆಕೆಯ ಮನಸ್ಥಿತಿಯನ್ನು ಬದಲಾಯಿಸುವ ಅಥವಾ ಆಕೆಯ ಈ ದುರ್ವರ್ತನೆಯ ಕಾರಣ ಆಕೆಗೆ ಶಿಕ್ಷೆ ಕೊಡಿಸುವ ಹಕ್ಕು ಅಥವಾ ಅಧಿಕಾರ ಅಥವಾ ಅವಕಾಶ ಆತನಿಗೆ ಇರುವುದಿಲ್ಲ. ಇಷ್ಟೆಲ್ಲಾ ಆಗುವುದರ ಬದಲು ಹೆಣ್ಣು ಮಕ್ಕಳು ತಮ್ಮ ಜವಾಬ್ದಾರಿ ಹಾಗೂ ಸಂಸ್ಕೃತಿಯನ್ನು ಅರಿತರೆ, ಮನೆಯು ನಂದನವನವಾಗಿ ಬದುಕು ಸಾರ್ಥಕವಾಗುತ್ತದೆ ಅಲ್ಲವೇ?…