ವಾಸ್ತು ಶಾಸ್ತ್ರ ಎನ್ನುವುದು ಮನೆಗೆ ಬಹಳ ಮುಖ್ಯ. ಯಾವ ಕಟ್ಟಡವನ್ನು ನಿರ್ಮಿಸುವಾಗ ಪಾಸ್ತಶಾಸ್ತ್ರವನ್ನು ನೋಡಿ ಜ್ಯೋತಿಷಿಗಳ ಸೂಚನೆ ಮೇರೆಗೆ ಆ ನಿಯಮದಿಂದ ಕಟ್ಟಿರುತ್ತಾರೆ ಮತ್ತು ಆ ಮನೆಗೆ ಬಂದು ವಾಸಿಸುವವರು ಅದೇ ಪ್ರಕಾರವಾಗಿ ವಾಸ್ತುವಿಗೆ ಮಹತ್ವ ಕೊಟ್ಟು ನಡೆದುಕೊಳ್ಳುತ್ತಾರೋ ಅಂತಹ ಮನೆಗಳಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಹಣಕಾಸು ಇವುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಕಡಿಮೆ ಇರುತ್ತವೆ.
ಅಥವಾ ಯಾವುದೇ ಸಮಸ್ಯೆ ಬಂದರೂ ಕೂಡ ಅದಕ್ಕೆ ಪರಿಹಾರ ಕೂಡ ಅಷ್ಟೇ ಬೇಗ ಸಿಗುತ್ತದೆ. ಒಟ್ಟಿನಲ್ಲಿ ಬಹಳ ಸರಳವಾದ ಸಂತೋಷವಾದ ಜೀವನವನ್ನು ಕಳೆಯುತ್ತಾರೆ. ಇದರ ತದ್ವಿರುದ್ಧವಾಗಿ ವಾಸ್ತು ಶಾಸ್ತ್ರದ ಬಗ್ಗೆ ನಿರ್ಲಕ್ಷ ಮಾಡಿದಾಗ ಸಾಕಷ್ಟು ಕಷ್ಟ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಒಂದು ವೇಳೆ ನಿಮಗೆ ಗೊತ್ತಿದ್ದೋ ಗೊತ್ತಿರದೆಯೋ ಈ ರೀತಿ ನಿಮ್ಮ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಿದೆ ಎಂದಾದರೆ ಅಥವಾ ವಾಸ್ತು ಚೆನ್ನಾಗಿದ್ದರೂ ನಕರಾತ್ಮಕ ಶಕ್ತಿಗಳ ಪ್ರಭಾವ ಉಂಟಾಗಿದೆ ಎಂದರೂ ಕೂಡ ನಿಮಗೆ ಕಷ್ಟಗಳು ತಪ್ಪಿದ್ದಲ್ಲ. ಇದನ್ನು ಹೇಗೆ ಗುರುತಿಸಬಹುದು ಎಂದರೆ ವಿನಾ ಕಾರಣ ಮನೆಯಲ್ಲಿ ಜಗಳ ಆಗೋತಿರುತ್ತದೆ.
ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪಗಳು ಉಂಟಾಗಿ ಜೋರಾಗಿ ಮಾತುಕತೆಗಳು ನಡೆಯುತ್ತವೆ, ಮನೆಯಲ್ಲಿ ಇರುವುದಕ್ಕೆ ಕಿರಿಕಿರಿ ಆಗುತ್ತಿರುತ್ತದೆ, ಹಣಕಾಸಿನ ತೊಂದರೆ ಅನಾರೋಗ್ಯ ಸಮಸ್ಯೆ ಯಾವುದನ್ನೂ ಮಾಡಲು ಆಸಕ್ತಿ ಇಲ್ಲದೆ ಇರದಿರುವುದು ಈ ರೀತಿ ಬಹಳ ನಕರಾತ್ಮಕವಾದ ಪ್ರಭಾವ ಬೀರುತ್ತದೆ. ಅಂತಹ ಸಮಯದಲ್ಲಿ ನಾವು ಯಾವುದೋ ನರ ದೃಷ್ಟಿ ಅಥವಾ ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕ ಶಕ್ತಿ ಮನೆಗೆ ಆವರಿಸಿದೆ ಎಂದು ಅರ್ಥೈಸಿಕೊಳ್ಳಬೇಕು.
ಈ ದೋಷಗಳನ್ನು ಕಳೆಯಬೇಕು ಎಂದರೆ ಅಥವಾ ಮನೆಗೆ ನೆಗೆಟಿವ್ ಎನರ್ಜಿ ಬರಬಾರದು ಎಂದರೆ ವಾಸ್ತು ಶಾಸ್ತ್ರದಲ್ಲಿ ಕೆಲವು ಟಿಪ್ಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಅವು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತವೆ ಅಥವಾ ಮನೆಗೆ ಬರದಂತೆ ತಡೆಯುತ್ತವೆ.
ಕೆಲವು ದೃಷ್ಟಿ ದೋಷ ಬೀಳದಂತೆ ಮನೆ ಹಾಗೂ ಮನೆ ಮಂದಿಯನ್ನು ರಕ್ಷಿಸುತ್ತದೆ ಅಂತಹ ವಿಶೇಷವಾದ ವಸ್ತುಗಳ ಪಾಲಿನಲ್ಲಿ ಅಷ್ಟದಾಟು ಕಾಳಿ ಮಹಾಮಂತ್ರ ಎನ್ನುವ ಫೋಟೋ ಬಹಳ ವಿಶೇಷವಾದದ್ದು. ಯಾಕೆಂದರೆ ಈ ಫೋಟೋ ನೋಡುವುದಕ್ಕೂ ಕೂಡ ಬಹಳ ಆಕರ್ಷಿಕವಾಗಿದ್ದು ನೋಡಿದವರ ಗಮನ ಸೆಳೆಯುವಷ್ಟು ಪ್ರಭಾವ ಬೀರುತ್ತದೆ.
ಕಾಳಿ ಮಹಾಮಾತೆಯ ಕೃಪಾಕಟಾಕ್ಷ ಇದ್ದರೆ ಜೀವನದಲ್ಲಿ ಯಾವುದೇ ಕಷ್ಟವನ್ನು ಬೇಕಾದರೂ ಧೈರ್ಯವಾಗಿ ಎದುರಿಸಬಹುದು ಜೊತೆಗೆ ತಾಯಿ ಐಶ್ವರ್ಯ ಹಾಗೂ ಬುದ್ಧಿಯನ್ನು ಕೂಡ ನೀಡುತ್ತಾಳೆ ಹಾಗಾಗಿ ಇಷ್ಟೆಲ್ಲ ಪ್ರಭಾವ ಹೊಂದಿರುವ ಈ ಫೋಟೋವನ್ನು ನೀವು ನಿಮ್ಮ ಮನೆಗೆ ತರಲೇಬೇಕು.
ಓಂ ಹ್ರೀಂ ಕ್ರೀಂ ಐಶ್ವರ್ಯ ಕಾಳಿಯೇ ನಮಃ ಎನ್ನುವ ಬೀಜ ಮಂತವನ್ನು ಕೂಡ ಹೊಂದಿದ್ದು ಇದು ಮನೆಯ ದಿಕ್ಕುಗಳು ಹಾಗೂ ಉಪ ದಿಕ್ಕುಗಳಿಗೆ ಎನರ್ಜಿಯನ್ನು ಪಾಸ್ ಮಾಡುತ್ತದೆ. ಈ ಚಿತ್ರವನ್ನು ನೀವು ಮನೆಯ ದಕ್ಷಿಣ ದಿಕ್ಕಿನ ಗೋಡೆಗೆ ಹಾಕಬೇಕು ಮತ್ತು ಪ್ರತಿದಿನವೂ ತಾಯಿಯ ಈ ಬೀಜಾಕ್ಷರಿ ಮಂತ್ರವನ್ನು ಹೇಳಿ ಭಕ್ತಿಯಿಂದ ನಮಿಸಬೇಕು. ಆಗ ಮನೆಯಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿ ಕೂಡ ಹೋಗುತ್ತದೆ. ಹೆಸರಿನಲ್ಲಿ ಐಶ್ವರ್ಯ ಕೂಡ ಇರುವುದರಿಂದ ನಿಮಗೆ ಹಣಕಾಸಿನ ತೊಂದರೆಗಳು ಪರಿಹಾರವಾಗಿ ಹಣದ ಹೊಳೆಯೇ ಹರಿಯಲು ಶುರು ಆಗುತ್ತದೆ.