ಕೇಂದ್ರ ಸರ್ಕಾರದಿಂದ ಅನೇಕ ಉಳಿತಾಯ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲೂ ಪಿಂಚಣಿ ಯೋಜನೆಗೆ (Pension Scheme) ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಯಾಕೆಂದರೆ ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿ ಈ ರೀತಿ ಪಿಂಚಣಿ ವ್ಯವಸ್ಥೆಯನ್ನು ಪಡೆಯಲು ಅತಿ ಕಡಿಮೆ ಜನರಿಗೆ ಅವಕಾಶ ಇದೆ.
ಹಾಗಾಗಿ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲರೂ ಕೂಡ ಈ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವೇ ಅಟಲ್ ಪೆನ್ಷನ್ ಯೋಜನೆ (Atal Pension Scheme) ಎನ್ನುವ ಯೋಜನೆಯನ್ನು ರೂಪಿಸಿದೆ. 2015 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Naredra Modi) ಅವರು ಅಟಲ್ ಪೆನ್ಷನ್ ಯೋಜನೆಯ ಪರಿಚಯಿಸಿದರು.
ಈ ಯೋಜನೆಯಲ್ಲಿ 60 ವರ್ಷಗಳಾದ ಬಳಿಕ ಅವರ ಹೂಡಿಕೆ ಆಧಾರದ ಮೇಲೆ ಗರಿಷ್ಠ 5000 ವರೆಗೂ ಕೂಡ ಪೆನ್ಷನ್ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಈ ರೀತಿ ಪೆನ್ಷನ್ ಪಡೆಯಬೇಕು ಎಂದರೆ ಹೂಡಿಕೆ ಕೂಡ ಅಗತ್ಯ. ನೀವು 7ರೂ. ಹೂಡಿಕೆ ಮಾಡಿದರು ಸಾಕು 5000ರೂ. ವರೆಗೆ ಪೆನ್ಷನ್ ಪಡೆಯಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ ನೋಡಿ.
ಈ ರೀತಿ ಪಿಂಚಣಿ ಯೋಜನೆಗಳ ಅವಶ್ಯಕತೆ ಇರುವುದು ಬಡವರು ಹಾಗೂ ಸಾಮಾನ್ಯ ವರ್ಗದವರಿಗೆ. ಆದರೆ ಅವರಿಗೆ ಸದಾ ಕಾಲ ಸಂಸಾರದ ನಿರ್ವಹಣೆಯ ಖರ್ಚು ಇದ್ದೇ ಇರುತ್ತದೆ. ಇದನ್ನೆಲ್ಲಾ ಸರಿದೂಗಿಸಿಕೊಂಡು ಹೂಡಿಕೆ ಮಾಡುವುದು ದೊಡ್ಡ ವಿಚಾರವೇ ಸರಿ, ಹಾಗಾಗಿ ಕಡಿಮೆ ಪ್ರೀಮಿಯಂ ಇರುವ ಯೋಚನೆಗಳನ್ನು ಆರಿಸುತ್ತಾರೆ.
ಇದನ್ನು ಅರ್ಥ ಮಾಡಿಕೊಂಡಿರುವ ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಹೊರೆಯಾಗಬಾರದು ಎಂದು ಕನಿಷ್ಠ 7 ರೂ. ಹೂಡಿಕೆ ಮಾಡಲು ಕೂಡ ಅವಕಾಶ ನೀಡಿದೆ. ನೀವು ದಿನ ಒಂದಕ್ಕೆ ರೂ.7 ಹೂಡಿಕೆ ಮಾಡಿದ ತಿಂಗಳಿಗೆ 210ರೂ. ಆಗುತ್ತದೆ. ಈ ರೀತಿ ತಿಂಗಳಿಗೆ 210ರೂ. ಹೂಡಿಕೆ ಮಾಡುತ್ತಾ ಬಂದರೆ 60 ವರ್ಷ ಆದ ಬಳಿಕ ಖಚಿತವಾಗಿ ಪ್ರತಿ ತಿಂಗಳು 5000ರೂ. ಬರುತ್ತದೆ.
ಅಟಲ್ ಪೆನ್ಷನ್ ಯೋಜನೆ ಕುರಿತು ಇನ್ನಷ್ಟು ಪ್ರಮುಖ ಮಾಹಿತಿಗಳು:-
● ಭಾರತೀಯ ನಾಗರೀಕರು ಮಾತ್ರ ಈ ಯೋಜನೆಯನ್ನು ಖರೀದಿಸಬಹುದು.
● ಹತ್ತಿರದ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಈ ಯೋಜನೆ ಖರೀದಿಸಲು ಅವಕಾಶವಿದೆ.
● ಈ ಯೋಜನೆಯನ್ನು 18 ವರ್ಷದಿಂದ 40 ವರ್ಷ ವಯಸ್ಸಿನ ಒಳಗಿನವರು ಮಾತ್ರ ಖರೀದಿಸಬಹುದು.
● 60 ವರ್ಷಗಳವರೆಗೆ ನೀವು ವಿಮೆ ಪಾವತಿಸಬೇಕು, 60 ವರ್ಷ ತುಂಬಿದ ಬಳಿಕ ನಿಮಗೆ ಪ್ರತಿ ತಿಂಗಳು ಪಿಂಚಣಿ ಬರುತ್ತದೆ ಹಾಗೂ ನಿಮ್ಮ ನಿಧನದ ನಂತರ ನಾಮಿನಿಗೆ ನಿಮ್ಮ ಹೂಡಿಕೆ ಮೊತ್ತ ಹೋಗುತ್ತದೆ. ಒಂದು ವೇಳೆ ನೀವು ಪಿಂಚಣಿ ತೆಗೆದುಕೊಳ್ಳುವ ಮುನ್ನವೇ ಮೃ’ತಪಟ್ಟಿದ್ದರೆ ಆಗಲು ಸಹ ಹೂಡಿಕೆಗೆ ಅನ್ವಯವಾಗುವ ಬಡ್ಡಿದರದ ಸಮೇತ ನಾಮಿನಿಗೆ ಹಣ ಹೋಗುತ್ತದೆ.
● ಈ ಯೋಜನೆಯಡಿ ಹೂಡಿಕೆ ಮಾಡಿರಲೇಬೇಕು, ನೀವು ಯೋಜನೆ ಖರೀದಿಸುವುದು ವಿಳಂಬವಾದಷ್ಟು ನಿಮ್ಮ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ. 18 ವರ್ಷಕ್ಕೆ ಪ್ರೀಮಿಯಂ ಖರೀದಿಸಿದರೆ ದಿನಕ್ಕೆ 7ರೂ. ನಂತೆ ತಿಂಗಳಿಗೆ 210ರೂ. ಹೂಡಿಕೆ ಮಾಡಿದರೆ ಸಾಕು 5,000ರೂ. ಪೆನ್ಷನ್ ಪಡೆಯಬಹುದು.
● ಈ ಯೋಜನೆ ಖರೀದಿಸಲು ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ಗುರುತಿನ ಚೀಟಿ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ.