ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಯೋಜನೆ ಕೂಡ ಒಂದು. ಇದೊಂದು ಧೀರ್ಘಕಾಲಿಕ ಹೂಡಿಕೆ ಯೋಜನೆಯಾಗಿದ್ದು, ಪಿಂಚಣಿ ರೂಪದ ಸೌಲಭ್ಯವನ್ನು ಕೂಡ ನೀಡುತ್ತಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ ಆಗಿರುವುದರಿಂದ ದೇಶದ ಕೋಟ್ಯಾಂತರ ಜನತೆ ನಿಶ್ಚಿಂತೆಯಾಗಿ PPF ಖಾತೆಯನ್ನು ತೆರೆಯುತ್ತಿದ್ದಾರೆ. ಅಂಚೆ ಕಚೇರಿಯಲ್ಲಿ ಕೂಡ PPF ಖಾತೆ ತೆರೆಯುವ ಅವಕಾಶ ಇದ್ದು, ಇದರ ಕುರಿತ ಪ್ರಮುಖ ಮಾಹಿತಿ ಹೀಗಿದೆ.
* ಭಾರತೀಯ ನಾಗರಿಕರ ಮಾತ್ರ ಅಂಚೆ ಕಚೇರಿಯಲ್ಲಿ PPF ಖಾತೆ ತೆಗೆಯಲು ಅವಕಾಶ.
* PPF ಖಾತೆ ತೆರೆಯಲು ಯಾವುದೇ ರೀತಿಯ ವಯಸ್ಸಿನ ಮಿತಿ ಇಲ್ಲ, ಚಿಕ್ಕ ಮಕ್ಕಳ ಹೆಸರಿನಲ್ಲೂ ಕೂಡ ಪೋಷಕರು PPF ಖಾತೆ ತೆರೆಯಬಹುದು.
* ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಒಂದೇ ಒಂದು PPF ಖಾತೆ ಹೊಂದಲು ಸಾಧ್ಯ.
* ಪ್ರಸ್ತುತವಾಗಿ PPF ಹೂಡಿಕೆಗೆ 7.1% ಬಡ್ಡಿದರ ಅನ್ವಯವಾಗುತ್ತದೆ.
* PPF ನ ಹೂಡಿಕೆ ಹಾಗೂ ಅದರಿಂದ ಬರುವ ಲಾಭಕ್ಕೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ.
* ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು.
* ಈ ಹಣವನ್ನು lump-sum ಹಾಗೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದು ಅಥವಾ ಪ್ರತಿ ತಿಂಗಳು installment ಮಾದರಿಯಲ್ಲಿ ಕೂಡ ಹೂಡಿಕೆ ಮಾಡಬಹುದು.ಯಾವುದಾದರೂ ಒಂದು ತಿಂಗಳು ಹೂಡಿಕೆ ಮಾಡದೇ ಇದ್ದರೆ ಯಾವುದೇ ರೀತಿಯ ದಂಡ ಬೀಳುವುದಿಲ್ಲ ಮತ್ತು ಪ್ರತಿ ತಿಂಗಳು ನಿಶ್ಚಿತ ಒಂದೇ ಮೊತ್ತದ ಹಣ ಪಾವತಿ ಮಾಡಬೇಕು ಎನ್ನುವ ನಿಯಮವು ಇಲ್ಲ ಎಷ್ಟು ಸಾಧ್ಯ ಅಷ್ಟು ಹಣವನ್ನು ಗರಿಷ್ಠ ಮಿತಿಯೊಳಗೆ ಕಟ್ಟಬಹುದು.
* ಈ ಯೋಜನೆಯ ಮೆಚ್ಯುರಿಟಿ ಅವಧಿ 15 ವರ್ಷಗಳು, ಇದು ಮುಗಿದ ನಂತರ ಮುಂದುವರಿಸಲು ಇಚ್ಚಿಸಿದರೆ ಇನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು.
* PPF ಖಾತೆ ತೆರೆದ 3 ವರ್ಷಗಳ ನಂತರ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ನಿಮ್ಮ ಹೂಡಿಕೆ ಆಧಾರದ ಮೇಲೆ ನಿಮ್ಮ ಸಾಲದ ಮೊತ್ತ ನಿರ್ಧಾರವಾಗುತ್ತದೆ.
* ನಿಮ್ಮ ಹೂಡಿಕೆ ಹಣವನ್ನು ಹಿಂಪಡೆಯುವುದಾದರೆ ಯೋಜನೆಯನ್ನು ಆರಂಭಿಸಿದ 5 ವರ್ಷಗಳ ನಂತರ ಹೂಡಿಕೆಯ 50% ಹಣವನ್ನು ಹಿಂಪಡೆಯಬಹುದು.
* ಮೆಡಿಕಲ್, ಎಜುಕೇಶನ್ ಅಥವಾ ಮದುವೆ ಉದ್ದೇಶಕ್ಕಾಗಿ ಮೆಚುರಿಟಿ ಅವಧಿಗೂ ಮುನ್ನವೇ Premature close ಮಾಡಿದರೆ ನಿಮ್ಮ ಹೂಡಿಕೆಗೆ ನಿಗದಿಯಾಗಿದ್ದ ಬಡ್ಡಿದರದಲ್ಲಿ 1% ಕಡಿತವಾಗುತ್ತದೆ.
* ಉದಾಹರಣೆಯೊಂದಿಗೆ ನಿಮ್ಮ ಹೂಡಿಕೆಗೆ ಲಾಭ ಎಷ್ಟು ಬರುತ್ತದೆ ಎಂದು ಲೆಕ್ಕಾಚಾರ ಹಾಕುವುದಾದರ, ನೀವು ಪ್ರತಿ ತಿಂಗಳು 500ರೂ. ಹೂಡಿಕೆ ಮಾಡುತ್ತಿದ್ದೀರಿ ಎಂದುಕೊಳ್ಳೋಣ 15 ವರ್ಷಕ್ಕೆ ನಿಮ್ಮ ಹೂಡಿಕೆ ಮೊತ್ತ ರೂ.90,000 ಆಗಿರುತ್ತದೆ, ಅದಕ್ಕೆ 7.1% ಬಡ್ಡಿದರದ ಅನ್ವಯ ರೂ.67,784 ಬಡ್ಡಿ ರೂಪದ ಲಾಭ ಸಿಗುತ್ತದೆ. ಒಟ್ಟಾರೆಯಾಗಿ ನಿಮಗೆ PPF ಖಾತೆ ಮೆಚುರಿಟಿ ಸಮಯದಲ್ಲಿ ರೂ.1,57,784 ಸಿಗುತ್ತದೆ.
* ನಿಮ್ಮ PPF ಖಾತೆಯನ್ನು ಒಂದು ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಲು ಅವಕಾಶವಿದೆ.
* ನಾಮಿನಿ ಫೆಸಿಲಿಟಿ ಕೂಡ ಇರುತ್ತದೆ
* ಯೋಜನೆ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳಿ ಅಥವಾ ನೇರವಾಗಿ ಅಂಚೆ ಕಚೇರಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.