ನಾವು ರೈತರ ಜೀವನ ನೋಡಿ ಎಷ್ಟು ಆರಾಮಾಗಿದ್ದರೆ, ಹಳ್ಳಿಗಳಲ್ಲಿ ಪ್ರಕೃತಿ ಮತ್ತೆ ನೆಮ್ಮದಿಯಾಗಿದ್ದಾರೆ ಎಂದುಕೊಳ್ಳುತ್ತೇವೆ. ಆದರೆ ರೈತನಿಗಿರುವ ಜವಾಬ್ದಾರಿ ಅಷ್ಟಿಷ್ಟಲ್ಲ. ಆತ ತಾನು ಬೆಳೆಯುವ ಪ್ರತಿಯೊಂದು ಬೆಳೆಯನ್ನು ಆರೈಕೆ ಜೋಪಾನ ಮಾಡಿದರೆ ಮಾತ್ರ ಆತನ ಬದುಕು, ಅದಕ್ಕಾಗಿ ಯಾವುದೇ ಟೈಮ್ ಲಿಮಿಟ್ ಇಲ್ಲದೆ ಹಗಲಿರುಳು ಶ್ರಮ ಪಡುತ್ತಿರುತ್ತಾನೆ.
ಸರಿಯಾದ ಸಮಯಕ್ಕೆ ಬೆಳೆಗೆ ನೀರು ಕಟ್ಟಬೇಕು ಈಗಿನ ಕಾಲದಂತೂ ಕರೆಂಟ್ ಸೌಲಭ್ಯದ ಬಗ್ಗೆ ಗೊತ್ತೇ ಇದೆ ಜೊತೆಗೆ ಮೋಟಾರ್ ಆನ್ ನಲ್ಲಿಯೇ ಇಟ್ಟು ಎಲ್ಲೂ ಹೋಗುವಂತೆಯೂ ಇಲ್ಲ ಆಫ್ ಮಾಡುವವರಿಗೆ ಕಾಯಿಲೆ ಬೇಕು ಅಥವಾ ಬೇರೆ ಕಡೆ ಹೋದಾಗ ಎಷ್ಟೇ ಕೆಲಸ ಇದ್ದರೂ ಬಂದು ಮೋಟರ್ ಆನ್ ಮಾಡಿ ಬೆಳೆಗಳಿಗೆ ನೀರು ಹಾಯಿಸಲೇಬೇಕು ಇದಕ್ಕಿಂತ ಇನ್ನು ಹೆಚ್ಚಿನ ರಿಸ್ಕ್ ಇರುತ್ತದೆ.
ಸದ್ಯಕ್ಕೆ ಬೆಳೆಗಳಿಗೆ ನೀರು ಕೊಡಲು ರೈತನಿಗಾಗುತ್ತಿರುವ ಕಷ್ಟ ಪರಿಹರಿಸುವುದಕ್ಕಾಗಿ ಆಟೋ ಕಿಸಾನ್ (Auto Kisan) ಟೆಕ್ನಾಲಜಿ ಇಂದ ಒಂದು ಡಿವೈಸ್ (Device) ಮಾಡಲಾಗಿದೆ. ಇದನ್ನು ರೈತ ಅಳವಡಿಸಿಕೊಳ್ಳುವುದರಿಂದ ತಾನು ಎಲ್ಲೇ ಇದ್ದರೂ ಟೆಕ್ನೋಲಜಿ ಸಹಾಯದಿಂದ ಡಿಜಿಟಲ್ ಆಗಿ ತನ್ನ ಮೋಟರ್ ಆಪರೇಟ್ (Pumpset Motor Control) ಮಾಡಬಹುದು.
ಈ ಸುದ್ದಿ ಓದಿ:- ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಮತ್ತು ಏಕಕಾಲಕ್ಕೆ 5 ಜನರು ಇದಕ್ಕೆ ಕನೆಕ್ಟ್ ಆಗಿರುವ 5 ಫೋನ್ ನಿಂದ ಆಪರೇಟ್ ಮಾಡುವ ಅವಕಾಶವು ಕೊಡಲಾಗಿದೆ. ರೈತ ಒಂದು ವೇಳೆ ನೋಡಲಾಗದಿದ್ದಾಗ ಅವರ ಕುಟುಂಬದ ಬೇರೆ ಯಾರಾದರೂ ಇದನ್ನು ನೋಡಿಕೊಳ್ಳಬಹುದು. ಹಾಗೆಯೇ ಖಾಲಿ ಮೋಟಾರ್ ರನ್ ಆದರೆ ಮೋಟರ್ ಸುಟ್ಟು ಹೋಗುತ್ತದೆ ಇಂತಹ ಸಂದರ್ಭದಲ್ಲಿ ರೈತನ ಗೋಳು ಹೇಗಿರುತ್ತದೆ ಎಂದು ರೈತರಿಗಷ್ಟೇ ಗೊತ್ತು ಈ ಟೆಕ್ನಾಲಜಿ ಅಳವಡಿಸಿಕೊಳ್ಳುವುದರಿಂದ ಖಾಲಿ ಮೋಟಾರ್ ರನ್ ಆಗುವುದಿಲ್ಲ, ಇಮ್ಮಿಡಿಯೇಟ್ ಆಫ್ ಆಗುತ್ತದೆ.
ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ಈ ಟೆಕ್ನಾಲಜಿ ಮೂಲಕ ಟೈಮರ್ (timer set) ಸೆಟ್ ಮಾಡಬಹುದು. ರೈತನು ಬೇರೆ ಕೆಲಸ ಇದ್ದು ಗದ್ದೆಗೆ ಹೋಗಲು ಆಗದೆ ಇದ್ದರೆ ಒಂದು ದಿನ ಟೈಮ್ ಸೆಟ್ ಮಾಡಿದರೆ ಆ ಟೈಮ್ ನಲ್ಲಿ ಆಟೋಮೆಟಿಕ್ ಆಗಿ ಮೋಟಾರ್ ಆನ್ ಆಗುತ್ತದೆ ಮತ್ತು ಆಫ್ ಕೂಡ ಆಗುತ್ತದೆ. ಹೈ ವೋಲ್ಟೇಜ್ ಅಥವಾ ಲೋ ವೋಲ್ಟೇಜ್ ಈ ರೀತಿ ವೇರಿಯೇಷನ್ ಆದಾಗ ಆಟೋಮೆಟಿಕ್ ಆಗಿ ಆಫ್ ಆಗುತ್ತದೆ.
ಈಗಾಗಲೇ ಹಲವರು ಆಟೋ ಸ್ಟಾರ್ಟ್ ಹಾಕಿಕೊಂಡಿರುತ್ತಾರೆ ಇದು ಕರೆಂಟ್ ಬಂದಾಗ ಆನ್ ಆಗುತ್ತದೆ ಹೋದಾಗ ಆಫ್ ಆಗುತ್ತದೆ ಅಷ್ಟೇ ಆದರೆ ಈ ಆಟೋ ಕಿಸಾನ್ ಸಾಫ್ಟ್ವೇರ್ ನಿಂದ ಹತ್ತಾರು ಉಪಯೋಗವಿದೆ ಮತ್ತು ಮೋಟಾರ್ ನಲ್ಲಿ ವೈರಿಂಗ್ ಸಮಸ್ಯೆ ಇದ್ದರೆ ಪ್ರೊಟೆಕ್ಷನ್ ಕೂಡ ಕೊಡುತ್ತದೆ.
ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-
ಕರೆ ಮೂಲಕ ಮತ್ತು SMS ಮೂಲಕ ಕಂಟ್ರೋಲ್ ಮಾಡಬಹುದು ಮತ್ತು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಒಟ್ಟಾರೆಯಾಗಿ ಮೋಟಾರ್ ಗೆ ಈ ಡಿವೈಸ್ ಸ್ಟೆಪಲೈಝರ್ ರೀತಿ ಕೂಡ ಕೆಲಸ ಮಾಡುತ್ತದೆ ಎನ್ನಬಹುದು. ಆರು ವರ್ಷಗಳಿಂದ ಈ ಕಂಪನಿ ಕರ್ನಾಟಕದಲ್ಲಿದ್ದು ಕರ್ನಾಟಕದ ಬೇರೆ ಬೇರೆ ಭಾಗದ ಸಾವಿರಾರು ರೈತರುಗಳು ಇದನ್ನು ಈಗಾಗಲೇ ಬಳಸುತ್ತಿದ್ದಾರೆ.
ಯಾವುದೇ ಕೃಷಿ ಮೇಳಕ್ಕೆ ರೈತ ಹೋದಾಗಲೂ ಈ ಡಿವೈಸ್ ಬಗ್ಗೆ ಖಂಡಿತ ಅಲ್ಲಿ ಪ್ರೋಗ್ರಾಮ್ ಇರುತ್ತದೆ ಹೆಚ್ಚಿನ ವಿವರ ತಿಳಿದುಕೊಳ್ಳಬಹುದು ಮತ್ತು ಬಳಸಿರುವ ರೈತರ ರಿವ್ಯೂಗಳನ್ನು ಕೂಡ ಕೇಳಬಹುದು. ರೈತ ಸಿಮ್ ಕಾರ್ಡ್ ಖರೀದಿಸಬೇಕು ಅಷ್ಟೇ, ನೆಟ್ವರ್ಕ್ ಅನುಕೂಲತೆಗಾಗಿ ಮಿನಿ ಆಂಟೆನಾ ಕೂಡ ಕೊಡುತ್ತಿದೆ 18 ತಿಂಗಳುಗಳ ವಾರಂಟಿ ಜೊತೆಗೆ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಗಳನ್ನು ಕೂಡ ಚೆನ್ನಾಗಿ ಕಂಪನಿ ನಿರ್ವಹಿಸುತ್ತದೆ. ಆಸಕ್ತಿ ಇರುವ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.