ಈ ತಳಿ ಸೀಬೆ ಬೆಳೆದರೆ ಖರ್ಚು ಕಡಿಮೆ, 6 ಲಕ್ಷ ಆದಾಯ ಖಚಿತ.!

 

WhatsApp Group Join Now
Telegram Group Join Now

ಬದಲಾಗುತ್ತಿರುವ ಕಾಲಕ್ಕೆ ತಕ್ಕ ಹಾಗೆ ರೈತನು ಕೂಡ ತನ್ನ ಕೃಷಿಯಲ್ಲಿ ಆಧುನಿಕತೆ ತರುತ್ತಿದ್ದಾನೆ. ಈಗ ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಕೆಲಸ ಸರಾಗ ಮಾಡಿಕೊಂಡಿರುವ ರೈತನು ಇರುವ ಸವಲತ್ತುಗಳನ್ನು ಬಳಸಿಕೊಂಡು ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದೇನೆ ಮತ್ತು ತೋಟಗಾರಿಕೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರಂತೂ ಸೀಸನ್ ಗೆ ತಕ್ಕ ಹಾಗೆ ಅಥವಾ ಯಾವ ಬೆಳೆಗಳಿಗೆ ಹೆಚ್ಚು ಬೆಲೆ ಇದೆಯೋ ಅವುಗಳನ್ನು ಬೆಳೆಯುವ ಮೂಲಕ ಕೈತುಂಬ ಆದಾಯ ಮಾಡುತ್ತಿದ್ದಾರೆ.

ರೈತರಿಗೆ ಮಿಶ್ರ ಕೃಷಿ ಪದ್ಧತಿಯು ಅಪಾರ ಅನುಕೂಲತೆ ಮಾಡಿಕೊಡುತ್ತಿದ್ದು ಇದನ್ನು ಹೊರತುಪಡಿಸಿ ತರಕಾರಿ, ಹಣ್ಣುಗಳು, ಸೊಪ್ಪು ಇದನ್ನು ಬೆಳೆಯುವ ರೈತರು ಕೂಡ ಬಹು ರಾಷ್ಟ್ರೀಯ ಕಂಪನಿ ಕೆಲಸಗಾರನಿಗಿಂತ ಕಡಿಮೆ ಇಲ್ಲದಂತೆ ಹಣ ಮಾಡುತ್ತಿದ್ದಾರೆ. ಆದರೆ ಕೃಷಿ ಮಾಡುವುದಕ್ಕೂ ಕೂಡ ಒಂದು ಪದ್ಧತಿ ಇದೆ, ಸರಿಯಾಗಿ ಪ್ಲಾನ್ ಮಾಡಿ ಕೃಷಿಯಲ್ಲಿ ತೊಡಗಿಕೊಂಡಿದ್ದೇ ಆದರೆ ನಷ್ಟ ಆಗುವ ಚಾನ್ಸೇ ಇಲ್ಲ ಎನ್ನುತ್ತಾರೆ ಪ್ರಗತಿಪರ ಸೀಬೆ ಕೃಷಿಗಾರ ರೈತರೊಬ್ಬರು.

ಈ ಸುದ್ದಿ ಓದಿ:- LIC ನೇಮಕಾತಿ ಅಧಿಸೂಚನೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಇವರು ನೀಡಿರುವ ಮಾಹಿತಿ ಜೊತೆಗೆ ಈ ಲೇಖನದಲ್ಲಿ ಸೀಬೆ ಕೃಷಿ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಚಿಕ್ಕಬಳ್ಳಾಪುರ ಸಮೀಪದ ಹಳ್ಳಿಯಲ್ಲೊಬ್ಬರು ರೈತರು ತಮ್ಮ ಜಮೀನಿನಲ್ಲಿ 12 ಅಡಿ ಅಂತರದಲ್ಲಿ 1200 ಸೀಬೆ ಮರಗಳನ್ನು ನೆಟ್ಟು ಪೋಷಿಸಿದ್ದಾರೆ.

ಥೈವಾನ್ ತಳಿಯನ್ನು ಆರಿಸಿಕೊಂಡಿರುವ ಇವರು ಉಳಿದವರಿಗೂ ಕೂಡ ಇದನ್ನೇ ಸೂಚಿಸುತ್ತಿದ್ದಾರೆ ಮತ್ತು ಥೈವಾನ್ ಮಾತ್ರವಲ್ಲದೆ ಇನ್ನು ಹಲವಾರು ತಳಿಗಳು ಇದ್ದು ಎಲ್ಲದಕ್ಕೂ ಮಾರುಕಟ್ಟೆಯಲ್ಲಿ ಅಷ್ಟೇ ಬೇಡಿಕೆ ಇದೆ. ಸೀಬೆ ಕೃಷಿ ಮಾಡುವುದು ಖಂಡಿತ ಅಷ್ಟೊಂದು ರಿಸ್ಕ್ ಅಲ್ಲ, ಒಂದು ಸೇಬಿಗೆ ಇರುವಷ್ಟೇ ಬೆಲೆ ಹಾಗೂ ಪೋಷಕಾಂಶಗಳು ಸೀಬೆಗೂ ಕೂಡ ಇರುವುದರಿಂದ ಖಂಡಿತ ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ.

ಈ ಸುದ್ದಿ ಓದಿ:- LIC ನೇಮಕಾತಿ ಅಧಿಸೂಚನೆ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಆದರೆ ಎಲ್ಲ ರೈತರು ಕೂಡ ಸೀಬೆ ಕೃಷಿಯಲ್ಲಿ ತೊಡಗಿಕೊಂಡರೆ ಕಾಂಪಿಟೇಶನ್ ಹೆಚ್ಚಾಗುತ್ತದೆ ಹಾಗಾಗಿ ಪೂರ್ತಿ ಒಂದೇ ಬೆಳೆಯುವುದರ ಬದಲು ಮಿಶ್ರ ಬೆಳೆ ಅನುಸರಿಸಬೇಕು ಮತ್ತು ಆದಷ್ಟು ಒಂದು ಎಕರೆ ಅಥವಾ ಸಾವಿರ ಗಿಡಗಳು ಈ ರೀತಿ ಪ್ಲಾನ್ ಮಾಡಿ ಕಡಿಮೆ ಮಾಡಿಕೊಳ್ಳಬೇಕು ಇದೇ ಸೂಕ್ತ ಎನ್ನುವ ಸಲಹೆ ನೀಡುತ್ತಾರೆ.

ಒಂದು ವೇಳೆ ಮಿಶ್ರ ಕೃಷಿ ಮಾಡುವವರೇ ಆದರೆ ನೇರಳೆ ತೆಂಗು ಅಡಿಕೆ ಇತ್ಯಾದಿಗಳನ್ನು ಇವುಗಳ ಮಧ್ಯೆ ನೆಟ್ಟು ಲಾಭ ಮಾಡಿಕೊಳ್ಳಬಹುದು. ಮೊದಲ ಫಸಲು ಬರುವುದಕ್ಕೆ ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ ನಂತರ ಪ್ರತಿ ವರ್ಷವೂ ಕೂಡ ಖಚಿತ ಆದಾಯ ಸಿಗುತ್ತದೆ ಈಗ ನಾವು ನೆಟ್ಟಿರುವ ಮರಕ್ಕೆ ಕಡಿಮೆ ಎಂದರು ವರ್ಷಕ್ಕೆ 5 ರಿಂದ 6 ಲಕ್ಷ ಲಾಭ ಬರುತ್ತಿದೆ.

ಈ ಸುದ್ದಿ ಓದಿ:- ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

ಒಂದು ಗಿಡವೂ 200KG ವರೆಗೂ ಫಲ ಕೊಡುತ್ತವೆ, ಮರ ಒಂದಕ್ಕೆ ರೈತರಿಗೆ 700 – 1200 ವರೆಗೆ ಬೆಲೆ ನಿಗದಿ ಮಾಡಿಕೊಂಡು ಖರೀದಿಸುತ್ತಾರೆ. ಅಹಮದಾಬಾದ್ ನಿಂದ ತಳಿಗಳನ್ನು ತಂದಿದ್ದೇ ಆಗ ಒಂದು ಗಿಡಕ್ಕೆ 200 ರೂಪಾಯಿ ಇತ್ತು ಈಗ ಬಹಳ ಕಡಿಮೆ ಬೆಲೆಗೆ ಸಿಗುತ್ತಿದೆ ವರ್ಷಕ್ಕೆ ಒಂದು ಬಾರಿ ಸೀಸನ್ ಮುಗಿದ ಮೇಲೆ ಮರಗಳು ಎತ್ತರ ಆಗದಂತೆ ಕಟಾವು ಮಾಡಿಸುತ್ತೇವೆ ಅದನ್ನು ಬಿಟ್ಟು ಹನಿ ನೀರಾವರಿ ಪದ್ಧತಿ ಅನುಸರಿಸುತ್ತೇವೆ.

ಗಿಡದ ಸುತ್ತ ಗೊಬ್ಬರದ ಗುಂಡಿ ತೆಗೆಯುತ್ತೇವೆ ಮೊದಲಿಗೆ ಹಸುವಿನ ಗೊಬ್ಬರ ಹಾಕಿ ಮೂರು ತಿಂಗಳಿಗೊಮ್ಮೆ ಬೇವಿನ ಹಿಂಡಿ ಕಡಲೆ ಹಿಂಡಿ ಇತ್ಯಾದಿಗಳನ್ನು ನೀಡುತ್ತೇವೆ. ಫಸಲು ಬಂದ ಮೇಲೆ ಹೂಜಿ ಕಾಟಕ್ಕಾಗಿ ಸ್ಪ್ರೇ ಮಾಡಲೇಬೇಕು ಇದಿಷ್ಟೇ ಇದರ ಬಂಡವಾಳ ಆರಾಮಾಗಿ ರೈತನೊಬ್ಬ ಸೀಬೆ ಕೃಷಿಯನ್ನು ದೈರ್ಯವಾಗಿ ಆರಂಭಿಸಬಹುದು ಎನ್ನುವ ಸಲಹೆ ಕೊಡುತ್ತಾರೆ ಇವರು ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now