ನಮ್ಮ ಆಹಾರ ಪದ್ಧತಿ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಮೊದಲೆಲ್ಲಾ ಮನುಷ್ಯರು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ದುಡಿಯುತ್ತಿದ್ದರು. ಆದರೆ ಈಗ ಊಟದ ಪರಿವೇ ಇಲ್ಲದೆ ಸ್ಪರ್ಧಾತ್ಮಕ ಬದುಕಿನ ಈ ಓಟದಲ್ಲಿ ಬಿಸಿಯಾಗಿ ಬಿಟ್ಟಿದ್ದಾರೆ. ನಾವು ತಿನ್ನುತ್ತಿರುವ ಆಹಾರ ಧಾನ್ಯಗಳ ಶೈಲಿಯೂ ಕೂಡ ಬದಲಾಗಿ ಹೋಗಿದೆ. ರಾಗಿ, ಬೆಲ್ಲ ಸ್ಥಾನವನ್ನು ಬೇರೆ ಧಾನ್ಯಗಳು ತುಂಬಿವೆ.
ಆದರೆ ಇದೇ ತಪ್ಪಾಗಿ ನಮ್ಮ ಆರೋಗ್ಯಕ್ಕೆ ಕಂಟಕವಾಗಿದೆ. ಅದರಲ್ಲೂ ನಾವು ಪ್ರತಿನಿತ್ಯ ತಿನ್ನುತ್ತಿರುವ ಐದು ಬಿಳಿ ರೂಪದ ವಸ್ತುಗಳು ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿ ಬಿಟ್ಟಿದೆ. ನಮಗೆ ಗೊತ್ತಿದ್ದೋ ಗೊತ್ತಿಲದೆಯೋ ನಾವು ಈ ಸುಳಿಗೆ ಸಿಲುಕಿದ್ದೇವೆ. ಆದರೆ ಇನ್ನು ಮುಂದೆಯಾದರೂ ಇದರ ಬಗ್ಗೆ ಎಚ್ಚೆತ್ತುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತದೆ.
● ಸಕ್ಕರೆ:- ನಮ್ಮಲ್ಲಿ ಮಧುಮೇಹಿಗಳು ಮಾತ್ರ ಸಕ್ಕರೆ ಪದಾರ್ಥ ತಿನ್ನಬಾರದು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಇದು ತಪ್ಪು ನಾವು ಆರೋಗ್ಯವಾಗಿರಬೇಕು ಎಂದು ಬಯಸುವ ಎಲ್ಲರೂ ಶುಗರ್ ಲೆಸ್ ಆಗಿರುವುದೇ ಒಳ್ಳೆಯದು. ಯಾಕೆಂದರೆ ಸಕ್ಕರೆ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಆಂಟಿ ಇನ್ಫ್ಲೋಮೇಟರಿ ಚೇಂಜಸ್ ಮಾಡುತ್ತದೆ. ಇದರ ಕಾರಣದಿಂದಾಗಿ ಆರ್ಥ್ರರಿಟಿಸ್, ಒಬೆಸಿಟಿ, ಉರಿಯೂತ, ಹೆಣ್ಣು ಮಕ್ಕಳಿಗೆ PCOD ಸಮಸ್ಯೆ ಹೆಚ್ಚಾಗುತ್ತದೆ. ದೇಹದಲ್ಲಿ ಕ್ಯಾನ್ಸರ್ ಸೆಲ್ ಗಳ ಬೆಳವಣಿಗೆಗೆ ಸಕ್ಕರೆಯಲ್ಲಿರುವ ಅಂಶಗಳು ಪೂರಕವಾಗಿರುವುದರಿಂದ ಕ್ಯಾನ್ಸಲ್ ಕಾರಕ ಎಂದೇ ಹೇಳಬಹುದು.
● ಮೈದಾ:- ಮೈದಾ ರಿಫೈನ್ ಆಗಿ ತಯಾರಾಗುವ ಒಂದು ಪದಾರ್ಥವಾಗಿದೆ ಇದನ್ನು ಫ್ಯಾಕ್ಟರಿಗಳಲ್ಲಿ ತಯಾರಿಸುವಾಗ ಬಳಸುವ ರಾಸಾಯನಿಕವಾದ ಅಲ್ಫಾಕ್ಸಿನ್ ಬಳಸಿರುತ್ತಾರೆ. ಇದು ಜೀರ್ಣಾಂಗ ವ್ಯೂಹದ ಅಂಗಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಅದರಲ್ಲೂ ಜಠರ ಮತ್ತು ಕರುಳಿನಲ್ಲಿರುವ ಬೀಟಾ ಕಣಗಳನ್ನು ಕೊಲ್ಲುತ್ತದೆ. ಆದ್ದರಿಂದ ಮೈದಾ ಹಾಗೂ ಮೈದಾ ಬಳಸಿ ಮಾಡುವ ಬೇಕರಿ ಉತ್ಪನ್ನಗಳಿಂದ ಎಷ್ಟು ದೂರ ಇರುತ್ತೇವೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದು.
● ಉಪ್ಪು:- ಉಪ್ಪು ಈಗ ಒಂದು ಬಹಳ ದೊಡ್ಡ ಬಿಸಿನೆಸ್ ಆಗಿಬಿಟ್ಟಿದೆ. ಉಪ್ಪಿಗಿಂತ ರುಚಿ ಇಲ್ಲ ನಿಜ ಆದರೆ ಈ ಉಪ್ಪಿನ ಹೆಚ್ಚಿನ ಸೇವನೆ ಆಗುತ್ತಿರುವುದರಿಂದ ವಯಸ್ಸಾಗುವುದಕ್ಕಿಂತ ಮುಂಚೆ ತಲೆಕೂದಲು ಬೆಳ್ಳಗಾಗುತ್ತಿದೆ ಮತ್ತು ಚರ್ಮ ಸುಕ್ಕಾಗುತ್ತಿದೆ. ಮೂಳೆಗಳಲ್ಲಿರುವ ಡೆನ್ಸಿಟಿ ಯನ್ನು ಇದು ಕಡಿಮೆ ಮಾಡುವುದರಿಂದ ಸಂಧಿವಾತದಂತಹ ಆರೋಗ್ಯ ಸಮಸ್ಯೆಗಳು ಅತಿಯಾದ ಉಪ್ಪಿನ ಸೇವನೆಯಿಂದ ಬಾಧಿಸುತ್ತಿದೆ. ಆದ್ದರಿಂದ ಆಡೆಡ್ ಶುಗರ್ ರೀತಿ ಆಡೆಡ್ ಸಾಲ್ಟ್ ನಿಂದ ದೂರ ಇರುವುದು ಒಳ್ಳೆಯದು.
● ಹಾಲು:- ಹಾಲು ಒಂದು ಸಂಪೂರ್ಣ ಆಹಾರ ಎಂದು ಹೇಳಲಾಗುತ್ತಿತ್ತು. ಅದು ನಿಜ ಆದರೆ ಈಗ ಜೆನೆಟಿಕಲಿ ಮೋಡಿಫೈ ಆದ ಹಸಗಳ ಹಾಲನ್ನು ತೆಗೆದುಕೊಳ್ಳುತ್ತಿರುವುದರಿಂದ ಈ ಹಾಲಿನ ಸೇವನೆ ದೇಹದ ಮೇಲೆ ದುಷ್ಪರಿಣಾಮಗಳನ್ನೇ ಬೀರುತ್ತಿದೆ. ಒಂದು ನಾಟಿ ಹಸುವಿನ ಹಾಲು ಉತ್ತಮ ಆದರೆ ಇಂದಿನ ದಿನಗಳಲ್ಲಿ ಹ ಹಳ್ಳಿಯ ಪ್ರದೇಶಕ್ಕೂ ಕೂಡ ಸಂಸ್ಕರಿಸಿದ ಹಾಲಿನ ಪ್ಯಾಕೆಟ್ ಕಡೆ ಹೋಗುತ್ತಿರುವುದರಿಂದ ಇವುಗಳ ಅತಿಯಾದ ಸೇವನೆ ನಿಲ್ಲಿಸುವುದೇ ಒಳ್ಳೆಯದು ಎಂದು ಹೇಳಬಹುದು.
● ಅಕ್ಕಿ:- ಪಾಲಿಶ್ ಮಾಡಿದ ಎಲ್ಲಾ ಅಕ್ಕಿಯು ಕೂಡ ಆರೋಗ್ಯಕ್ಕೆ ಕೆಟ್ಟದೇ, ಏಕೆಂದರೆ ಪಾಲಿಶ್ ಮಾಡಿದ ಮೇಲೆ ಅದಕ್ಕೆ ದೇಹಕ್ಕೆ ಪೂರಕವಾದ ಯಾವುದೇ ಅಂಶಗಳು ಇರುವುದಿಲ್ಲ. ಕಾರ್ಬೋಹೈಡ್ರೇಟ್ಸ್ ಗಳು ಮಾತ್ರ ಇರುತ್ತದೆ. ಆ ಕಾರ್ಬೋಹೈಡ್ರೇಟ್ಸ್ ಗಳಿಂದ ದೇಹಕ್ಕೆ ಯಾವುದೇ ಪ್ರಯೋಜನ ಇಲ್ಲ, ಬದಲಾಗಿ ಕೆಲ ದೇಹದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಫಾಲಿಶ್ ಮಾಡದ ಅಕ್ಕಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಈಗ ನಾವು ಹೇಳಿದ ಇಷ್ಟು ಅಂಶಗಳಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯ ಉತ್ತಮ ಪಡಿಸಿಕೊಳ್ಳಿ.