ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎನಿಸಿರುವ SBI (State bank of Mysore) ಬ್ಯಾಂಕು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಕೊಡುತ್ತಿದೆ. ಉಳಿತಾಯ ಯೋಜನೆಗಳು, ಹೂಡಿಕೆ ಯೋಜನೆಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಬಾರಿ ಹಿರಿಯ ನಾಗರಿಕರಿಗಾಗಿ (for Senior Citizens new Scheme) ಹೊಸ ಯೋಜನೆ ತಂದಿದ್ದು ಇದರ ಬಗ್ಗೆ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಹಿರಿಯ ನಾಗರಿಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಹೊಂದಿರುತ್ತಾರೆ. ಈ ಸಮಯದಲ್ಲಿ ಸೂಕ್ತ ನೆರವು ದೊರೆಯದಿದ್ದರೆ ಜೀವನ ಸಾಗಿಸುವುದು ಕ’ಷ್ಟ ಆಗುತ್ತದೆ. ಹಾಗಾಗಿ ಅವರ ನಿವೃತ್ತಿ ಜೀವನದ ಬಗ್ಗೆ ಅವರೇ ಸರಿಯಾದ ಪ್ಲಾನ್ ಹೊಂದಿರಬೇಕು ಮತ್ತು ದುಡಿಯುವ ವಯಸ್ಸಿನಿಂದ ಹಣ ಉಳಿಸಿ ನಂತರ ಅದನ್ನು ಒಂದು ಒಳ್ಳೆ ಕಡೆ ಹೂಡಿಕೆ ಮಾಡಿದರೆ ಉತ್ತಮ. ಈ ರೀತಿ ಪ್ಲಾನ್ ಮಾಡಿರುವ ಹಿರಿಯ ನಾಗರಿಕರಿಗೆ SBI ನ ಸ್ಥಿರ ಠೇವಣಿ(Fixed Deposits) ಯೋಜನೆ ಬಹಳಷ್ಟು ಸೂಕ್ತ ಆಗಿದೆ.
SBI ನಲ್ಲಿ ಸ್ಥಿರ ಠೇವಣಿ ಇರುವವರಿಗೆ ಕೆಲ ಪ್ರಮುಖ ಮಾಹಿತಿಗಳು:-
● 7 ದಿನಗಳಿಂದ 10 ವರ್ಷಗಳವರೆಗೂ ಕೂಡ ಸ್ಥಿರ ಠೇವಣಿಯನ್ನು ಇಡಬಹುದು.
● ಸಾಮಾನ್ಯ ಗ್ರಾಹಕರಿಗೆ ಈ ಸ್ಥಿರ ಠೇವಣಿ ಯೋಜನೆಗಳಲ್ಲಿ 6.5% ಬಡ್ಡಿದರ ಸಿಕ್ಕರೆ ಹಿರಿಯ ನಾಗರಿಕರಿಗೆ ಹೆಚ್ಚುವರಿಯಿಗಿ 0.50% ಸಿಗುತ್ತದೆ.
● ಒಂದು ವೇಳೆ ಹಿರಿಯ ನಾಗರಿಕರು ಒಂದೇ ಬಾರಿಗೆ 10 ವರ್ಷಗಳವರೆಗೆ ಹೂಡಿಕೆ ಮಾಡಲು ನಿರ್ಧಾರ ಮಾಡಿದರೆ ಅವರಿಗೆ 7.5% ಬಡ್ಡಿದರವು ಅವರ ಹೂಡಿಕೆ ಹಣಕ್ಕೆ ಅನ್ವಯವಾಗುತ್ತದೆ.
● ಒಬ್ಬ ಹಿರಿಯ ನಾಗರಿಕರು 10ಲಕ್ಷ ಹಣವನ್ನು ಹತ್ತು ವರ್ಷಗಳ ಕಾಲಕ್ಕೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಸಿಗುವ ಬಡ್ಡಿ 11, 02,349 ರೂಪಾಯಿಗಳು. ಅಂದರೆ ಒಟ್ಟಿಗೆ 10 ವರ್ಷಗಳಲ್ಲಿ 21,02,349 ರೂಪಾಯಿಗಳು ಸಿಗುತ್ತವೆ.
● ತಾನು ಹೂಡಿಕೆ ಮಾಡಿದ ಮೊತ್ತಕ್ಕಿಂತ ಡಬಲ್ ಆದಾಯವನ್ನು ಪಡೆಯುವಂತಹ ಯೋಜನೆ ಇದಾಗಿದೆ
● ಫೆಬ್ರುವರಿ 15 2023 ರಿಂದ ಈ ಯೋಜನೆಯಲ್ಲಿ 2 ಕೋಟಿ ಗಿಂತ ಕಡಿಮೆ ಠೇವಣಿಯ ಮೇಲಿನ ಬಡ್ಡಿ ದರವನ್ನು 0.25% ನಷ್ಟು SBI ಹೆಚ್ಚಿಗೆ ಮಾಡಿದೆ.
● SBI ನ ಈ FD ಯೋಜನೆಯಲ್ಲಿ ಐದು ವರ್ಷಗಳ ತೆರಿಗೆ ವಿನಾಯಿತಿಯನ್ನೂ ಸೆಕ್ಷನ್ 80C ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಆದರೆ FD ಇಂದ ಗಳಿಸಿದ ಬಡ್ಡಿಗೆ ತೆರಿಗೆ ಇರುತ್ತದೆ. ಆದಾಯ ತೆರಿಗೆ ನಿಯಮದ ಪ್ರಕಾರ ಈ ಯೋಜನೆಗಳು ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳುತ್ತವೆ ಆದರೆ ಯೋಜನೆ ಮೆಚೂರ್ ಆಗುವ ಸಮಯದಲ್ಲಿ ಠೇವಣಿದಾರರು ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ.
ನೀವು ಯಾವ ರೀತಿಯ ತೆರಿಗೆ ಕಟ್ಟುತ್ತಿರುವ ಅದರ ಸ್ಲಾಬ್ ದರದ ಆಧಾರದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿದರೆ SBI ನ ಈ FD ಯೋಜನೆಯಲ್ಲಿ ಹಿರಿಯ ನಾಗರಿಕರು ಠೇವಣಿ ಇಟ್ಟರೆ ಹೆಚ್ಚಿನ ಲಾಭ ಪಡೆದುಕೊಳ್ಳುವುದಂತು ಸುಳ್ಳಲ್ಲ.
● SBI ಬ್ಯಾಂಕ್ ನ ಈ ಹೂಡಿಕೆಗೆ ನಾಮಿನಿ (Nominee) ಫೆಸಿಲಿಟಿ ಕೂಡ ಲಭ್ಯವಿದೆ, ಒಂದು ವೇಳೆ ಯೋಜನೆ ಖರೀದಿಸಿದವರು ಮೃ’ತ ಪಟ್ಟಲ್ಲಿ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವು ಅವರು ಸೂಚಿಸಿರುವ ನಾಮಿನಿಗೆ ಹೋಗುತ್ತದೆ.