ಮನೆ ಕಟ್ಟಿಸುವುದು ಎನ್ನುವ ವಿಚಾರ ಬಂದಾಗ ಪ್ಲಾಸ್ಟರಿಂಗ್ ಎನ್ನುವುದು ಕೂಡ ಬಹಳ ಮುಖ್ಯವಾದ ವಿಚಾರ. ಪ್ಲಾಸ್ಟರಿಂಗ್ ನಿಂದಲೇ ಮನೆಯ ಔಟ್ ಲುಕ್ ಚೆನ್ನಾಗಿ ಕಾಣುವುದು. ಪ್ಲಾಸ್ಟರಿಂಗ್ ಮಾಡುವಾಗ ಎಷ್ಟು ಜಾಗ್ರತೆ ವಹಿಸಿದರೂ ಸಾಲದು, ಯಾಕೆಂದರೆ ಇದರಲ್ಲಿ ವ್ಯತ್ಯಾಸಗಳೇನಾದರು ಆದರೆ ಹೇರ್ ಲೈನ್ ಕ್ರಾಕ್ ಗಳು ಬರುತ್ತವೆ.
ಈ ರೀತಿ ಹೇರ್ ಲೈನ್ ಕ್ರಾಕ್ ಗಳ ಸಮಸ್ಯೆ ಬರಬಾರದು ಎಂದರೆ ನಾವು ಬಳಸುವ ಮೆಟೀರಿಯಲ್ ಗಳು ಒಳ್ಳೆಯ ಗುಣಮಟ್ಟದ್ದಾಗಿರಬೇಕು ಎನ್ನುವುದು ಎಷ್ಟು ಮುಖ್ಯವೋ, ಪ್ಲಾಸ್ಟರಿಂಗ್ ಮಾಡಲು ಬಳಸುವ ಮೆಟೀರಿಯಲ್ ಗಳ ರೇಷಿಯೋ ಮತ್ತು ಆ ಮಡ್ಡಿಯ ಮಂದ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. ಇದರೊಂದಿಗೆ ಮೆಶ್ ಬಳಸಬೇಕಾದ ಜಾಗಗಳನ್ನು ಮಿಸ್ ಮಾಡುವಂತಿಲ್ಲ.
ಈ ಸುದ್ದಿ ಓದಿ:- ಈ ಜಿಲ್ಲೆ ರೈತರಿಗೆ ಉಚಿತ ಅರಣ್ಯ ಭೂಮಿ ಹಂಚಿಕೆ.!
ಪ್ಲಾಸ್ಟರಿಂಗ್ ಮಾಡುವ ಮೊದಲೇ ಗೋಡೆಗಳನ್ನು ನೆನೆಸಿರಬೇಕು, ಮೊದಲು ವಾಲ್ ಗಳನ್ನು ಕ್ಯೂರಿಂಗ್ ಮಾಡಿ ಅದು ಚೆನ್ನಾಗಿ ನೀರು ಹಿಡಿದು ಒಣಗಿದ ಮೇಲೆ ಕ್ಯೂರಿಂಗ್ ಮಾಡುವಾಗಲು ಕೂಡ ಗೋಡೆಗಳನ್ನು ಒದ್ದೆ ಮಾಡಿ ಆಮೇಲೆ ಪ್ಲಾಸ್ಟರಿಂಗ್ ಮಾಡಬೇಕು ಇಲ್ಲವಾದಲ್ಲಿ ಏನಾಗುತ್ತದೆ ಎಂದರೆ ನೀವು ಪ್ಲಾಸ್ಟರಿಂಗ್ ಮಾಡಿದಾಗ ಅದರಲ್ಲಿ ಇರುವ ತೇವವನ್ನು ಗೋಡೆಗಳು ಎಳೆದುಕೊಂಡು ಬಿಡುತ್ತವೆ,
ಇದರಿಂದ ಅದು ಸರಿಯಾಗಿ ಫಿಕ್ಸ್ ಆಗದೆ ಹೇರ್ ಲೈನ್ ಕ್ರಾಕ್ ಗಳು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇನ್ನೊಂದು ಪ್ರಾಬ್ಲಮ್ ಏನೆಂದರೆ ಫುಲ್ ಡ್ರೈ ಆಗಿ ಇದ್ದರು ಸರಿಯಾಗಿ ಪ್ಲಾಸ್ಟರಿಂಗ್ ಆಗದೆ ಅವು ಬಿದ್ದು ಹೋಗುತ್ತಿರುತ್ತವೆ. ಫಿನಿಶಿಂಗ್ ಚೆನ್ನಾಗಿ ಬರುವುದಿಲ್ಲ ಮತ್ತು ನೀಟಾಗಿ ಫಿಕ್ಸ್ ಕೂಡ ಆಗುವುದಿಲ್ಲ ಈ ಸಮಸ್ಯೆ ಆಗಬಾರದು ಎಂದು ಸ್ವಲ್ಪ ಸ್ವಲ್ಪ ಗೋಡೆ ಒದ್ದೆ ಮಾಡಿ ಪ್ಲಾಸ್ಟರಿಂಗ್ ಮಾಡಲಾಗುತ್ತದೆ.
ಈ ಸುದ್ದಿ ಓದಿ:-SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಬೇಸರದ ಸುದ್ದಿ.!
ಪ್ಲಾಸ್ಟರಿಂಗ್ ರೇಷಿಯೋ ಮನೆ ಪೂರ್ತಿ ಒಂದೇ ರೀತಿ ಇರುವುದಿಲ್ಲ. ಇಂಟೀರಿಯರ್ ಗೆ ಬೇರೆ, ಮನೆ ಹೊರ ಗೋಡೆಗಳಿಗೆ ಬೇರೆ ಮತ್ತು ರೂಫ್ ಗೆ ಬೇರೆ ರೀತಿ ಇರುತ್ತದೆ. ಅದಕ್ಕೆ ತಕ್ಕ ಹಾಗೆ ನೋಡಿಕೊಂಡು ಬೇರೆ ಬೇರೆ ರೀತಿಯ ರೇಷಿಯೋದಲ್ಲಿ ಸ್ಲರಿ ಮಾಡಿಕೊಳ್ಳಬೇಕು.
ಮತ್ತೊಂದು ವಿಷಯ ಎಂದರೆ ಇದಕ್ಕೆ ಬೇಕಾಗುವಷ್ಟು ಸಿಮೆಂಟ್ ಆಗಲಿ ಮರಳಾಗಲಿ ಮತ್ತೊಂದು ಮೆಟೀರಿಯಲ್ ಆಗಲಿ ಎಲ್ಲವನ್ನು ಎಷ್ಟು ಬೇಕು ಎಂದು ಒಂದೇ ಬಾರಿಗೆ ಲೆಕ್ಕ ಹಾಕಿ ಮನೆ ಪೂರ್ತಿ ಒಂದೇ ಲಾಟ್ ನಲ್ಲಿ ತಂದರೆ ಮನೆ ಪೂರ್ತಿ ಒಂದೇ ರೀತಿಯ ಫಿನಿಶಿಂಗ್ ಲುಕ್ ಬರುತ್ತದೆ. ಒಂದು ವೇಳೆ ಸ್ವಲ್ಪ ತಂದು ಖಾಲಿಯಾದಾಗ ತರೋಣ ಎಂದುಕೊಂಡರೆ ಬೇರೆ ಲಾಟ್ ನಲ್ಲಿ ಬಂದ ಕ್ವಾಲಿಟಿ ಬೇರೆ ರೀತಿ ಇದ್ದು ಫಿನಿಶಿಂಗ್ ಸಮಾಧಾನಕರವಾಗಿ ಬರದೆ ಹೋಗಬಹುದು.
ಈ ಸುದ್ದಿ ಓದಿ:-ರೈತರಿಗೆ ವಾಟರ್ ಪಂಪ್ ವಿದ್ಯುತ್ ಅಗತ್ಯವಿಲ್ಲ, ಲೈಫ್ ಟೈಮ್ ವಾರೆಂಟಿ.!
ಸ್ಯಾಂಡ್ ಸಿಮೆಂಟ್ ವಾಟರ್ ಇದೆಲ್ಲವನ್ನು ಸೇರಿಸಿ ಸಿಮೆಂಟ್ ಮಾರ್ಟರ್ ಮಾಡಿಕೊಂಡು ಅದರಿಂದ ಪ್ಲಾಸ್ಟರಿಂಗ್ ಮಾಡಲಾಗುತ್ತದೆ ಇದರಲ್ಲಿ ಯಾವುದರ ರೇಷಿಯೋ ಎಷ್ಟು ಇರಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಜನರು ಬಳಸುವ ಒಂದು ಅನುಪಾತದ ಪಟ್ಟಿಯನ್ನು ನೀಡುತ್ತಿದ್ದೇವೆ.
* ಎಕ್ಸ್ಟರ್ನಲ್ ಪ್ಲಾಸ್ಟರ್ 1-3 – 1:6
* ಸೀಲಿಂಗ್ ಪ್ಲಾಸ್ಟರ್ 1:2 – 1:3
* ಇಂಟರ್ನಲ್ ಪ್ಲಾಸ್ಟರ್ (ಸ್ಯಾಂಡ್ ಒಳ್ಳೆಯ ಗುಣಮಟ್ಟದ್ದಾಗಿದ್ದರೆ) – 1:6
* ಇಂಟರ್ನಲ್ ಪ್ಲಾಸ್ಟರ್ (ಒಂದು ವೇಳೆ ಸ್ಯಾಂಡ್ ಗುಣಮಟ್ಟ ಉತ್ತಮವಾಗಿರದೇ ಇದ್ದರೆ) – 1:5