ಬಡ ಹಾಗೂ ಮಧ್ಯಮ ವರ್ಗದವರ ಬದುಕೇ ಹೀಗೆ, ತಿಂಗಳು ಪೂರ್ತಿ ದುಡಿದು ತಿಂಗಳ ಕೊನೆಯಲ್ಲಿ ಪಡೆದ ಸಂಬಳವು ಎರಡು ದಿನಗಳಲ್ಲಿ ಕರೆಂಟ್ ಬಿಲ್, ವಾಟರ್ ಬಿಲ್, ಮನೆ ಬಾಡಿಗೆ, ಮಕ್ಕಳ ಫೀಸ್, ರೇಷನ್ ಬಿಲ್, ಹಾಲಿನ ಬಿಲ್ ಕಟ್ಟುವುದರಲ್ಲಿ ಮುಗಿದು ಹೋಗಿರುತ್ತದೆ. ಇದನ್ನು ಮನಗಂಡು ಸರ್ಕಾರಗಳು ಕೂಡ ಜನಸಾಮಾನ್ಯರ ಬದುಕನ್ನು ಸರಾಗಗೊಳಿಸುವ ಉದ್ದೇಶದಿಂದ ಕೆಲವು ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಅನುಕೂಲತೆ ಮಾಡಿಕೊಡುತ್ತಿವೆ.
ಆ ಪ್ರಕಾರವಾಗಿ ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ 2024ರ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಗಳು ಯಶಸ್ವಿಯಾಗಿ ಜನಸಾಮಾನ್ಯರ ಮನೆ ತಲುಪಿದೆ. ಆದರೆ ಕೆಲವರು ಈ ಯೋಜನೆಗಳಿಗೆ ನೋಂದಾಯಿಸಿಕೊಂಡಿದ್ದರು ಕಇದರ ಅನುಕೂಲತೆ ಪಡೆದುಕೊಳ್ಳಲು ಆಗುತ್ತಿಲ್ಲ, ಅದರಲ್ಲಿ ಗೃಹಜೋತಿ (Gruhajyoti Scheme) ಯೋಜನೆಯು ಕೂಡ ಒಂದು.
ಗೃಹಜ್ಯೋತಿ ಯೋಜನೆ ಮೂಲಕ ಕುಟುಂಬ ಒಂದಕ್ಕೆ ಗರಿಷ್ಠ 200 ಯೂನಿಟ್ ಗಳವರೆಗೆ (free Current upto 200 Unit) ಉಚಿತ ವಿದ್ಯುತ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಆ ಕುಟುಂಬವು ಕಳೆದ ಒಂದು ವರ್ಷದಲ್ಲಿ ಸರಾಸರಿ ಎಷ್ಟು ಬಳಕೆ ಮಾಡಿದೆ ಅದರ 10 ಯೂನಿಟ್ ಗಳಷ್ಟು ಮಾತ್ರ ಹೆಚ್ಚಿಗೆ ಬಳಕೆ ಮಾಡಬಹುದು ಎನ್ನುವ ಮಿತಿ ಹೇರಿದೆ.
ಈ ಸುದ್ದಿ ಓದಿ:- ಅಂಚೆ ಇಲಾಖೆ ನೇಮಕಾತಿ 10th & 12th ತೇರ್ಗಡೆಯಾದವರು ಅರ್ಜಿ ಸಲ್ಲಿಸಿ.!
ಹೀಗಿದ್ದು ಇಷ್ಟು ತಿಂಗಳುಗಳ ಕಾಲ ಯೋಜನೆ ಪ್ರಕಾರವಾಗಿ ಕಡಿಮೆ ಬಳಸಿ ಜೀರೋ ಕರೆಂಟ್ ಬಿಲ್ (Zero Current Bill) ಪಡೆದವರು ಫೆಬ್ರವರಿ ತಿಂಗಳಿನಿಂದ ಹೆಚ್ಚು ಬಿಲ್ ಪಡೆಯುತ್ತಿದ್ದಾರೆ. ಕಾರಣವೇನೆಂದರೆ, ಬೇಸಿಗೆ ಶುರುವಾಗಿರುವ ಕಾರಣ ಸಹಜವಾಗಿ ಮನೆಯಲ್ಲಿ ಫ್ಯಾನ್, AC, ಕೂಲರ್ ಗಳ ಬಳಕೆ ಹೆಚ್ಚಾಗಿದೆ.
ಮಕ್ಕಳು ಮನೆಯಲ್ಲಿರುವ ಕಾರಣ TV ಹೆಚ್ಚು ಹೊತ್ತು ರನ್ ಆಗುತ್ತದೆ ಇದೆಲ್ಲಾ ಕಾರಣಗಳಿಂದ ಹೆಚ್ಚಿನ ಕರೆಂಟ್ ಖರ್ಚಾಗಿ ನಿಮಗೆ ನೀಡಿದ್ದ ಉಚಿತ ವಿದ್ಯುತ್ ಬಳಕೆ ಗಡಿ ದಾಟಿದೆ. ಇದರ ಬಗ್ಗೆ ಬೇಸರ ಪಟ್ಟುಕೊಂಡು ಹೆಚ್ಚಿನ ಬಿಲ್ ಪಾವತಿ ಮಾಡುತ್ತಿರುವ ಜನರಿಗೆಲ್ಲ ಮನೆ ಕರೆಂಟ್ ಬಿಲ್ ಕಡಿಮೆಗೊಳಿಸಿಕೊಳ್ಳಲು ಈ ಲೇಖನದಲ್ಲಿ ಕೆಲ ಟಿಪ್ಸ್ ನೀಡುತ್ತಿದ್ದೇವೆ. ತಪ್ಪದೇ ಇವುಗಳನ್ನು ಫಾಲೋ ಮಾಡಿ ಮುಂದಿನ ತಿಂಗಳಿನಿಂದ ಯಥಾವತ್ತಾಗಿ ಜೀರೋ ಕರೆಂಟ್ ಬಿಲ್ ಪಡೆಯಿರಿ.
* ಅವಶ್ಯಕತೆ ಇಲ್ಲದ ಸಂದರ್ಭದಲ್ಲಿ ಎಲ್ಲಾ ಎಲೆಕ್ಟ್ರಿಕ್ ಡಿವೈಸ್ ಸ್ವಿಚಸ್ ಆಫ್ ಮಾಡಿ
* ಆದಷ್ಟು ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಗಾಳಿ ಬೆಳಕು ರೋಮ್ ಒಳಗೆ ಬರುವಂತೆ ನೋಡಿಕೊಳ್ಳಿ. ನ್ಯಾಚುರಲ್ ಆಗಿ ಮನೆ ತಂಪಾಗುತ್ತದೆ.
ಈ ಸುದ್ದಿ ಓದಿ:- ತಿಂಗಳಿಗೆ ಲಕ್ಷ ಲಕ್ಷ ಆದಾಯ ಬರುವ ಮೆಡಿಕಲ್ ಶಾಪ್ ಇಡುವುದು ಹೇಗೆ.? ಬಂಡವಾಳ ಎಷ್ಟು.? ಯಾವೆಲ್ಲಾ ದಾಖಲೆಗಳು ಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
* ಮನೆಯಿಂದ ಹೊರಗೆ ಹೋಗುವಾಗ ಟಿವಿ, ಫ್ರಿಡ್ಜ್, ಎಲ್ಲಾ ಕೋಣೆಗಳ ಬಲ್ಬ್ ಹಾಗು ಮತ್ತಿತರ ಎಲೆಕ್ಟ್ರಿಕಲ್ ಡಿವೈಸ್ ಸ್ವಿಚ್ ಆಫ್ ಮಾಡಿದ್ದೀರ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳಿ
* ನೀವು ಟಿವಿ ನೋಡದೆ ಇರುವಾಗಲೂ ಆನ್ ಮಾಡಿ ಇಡುವುದು ಅಥವಾ ರೂಮ್ ಒಳಗೆ ಇಲ್ಲದೆ ಇರುವಾಗಲೂ ಫ್ಯಾನ್ ಸ್ವಿಚ್ ಆನ್ ಮಾಡಿ ಇರುವುದು ಜೊತೆಗೆ ಲ್ಯಾಪ್ಟಾಪ್ ಮೊಬೈಲ್ ಚಾರ್ಜರ್ಗಳನ್ನು ಆನ್ ಮಾಡಿ ಗಮನ ಕೊಡದೆ ಇರುವುದು ಇದೆಲ್ಲವೂ ವಿದ್ಯುತ್ ಬಿಲ್ ಜಾಸ್ತಿ ಮಾಡುತ್ತದೆ
* ನೀವಿನ್ನು ತುಂಬಾ ಹಳೆಯದಾದ ಬಲ್ಬ್ ಬಳಸುತ್ತಿದ್ದರೆ LED ಲೈಟ್‌ಗೆ ಬದಲಾಯಿಸಿ, ಹೆಚ್ಚಿನ ಬೆಳಕಿನೊಂದಿಗೆ ಕಡಿಮೆ ವಿದ್ಯುತ್ ವಿನಿಯೋಗವಾಗುತ್ತದೆ
* ಫ್ಯಾನ್, AC, ಕೂಲರ್ ಇತ್ಯಾದಿ ಯಾವುದೇ ಎಲೆಕ್ಟ್ರಿಕಲ್ ಉಪಕರಣ ಖರೀದಿಸಿದರೂ ಗುಣಮಟ್ಟ ಅತ್ಯುತ್ತಮವಾಗಿರಲಿ ಆಗ ವಿದ್ಯುತ್ ಬಳಕೆ ಕಡಿಮೆ ಆಗುತ್ತದೆ
* ಬೇಸಿಗೆ ಬಿಸಿಲಿನಲ್ಲೂ ಗೀಸರ್ ಅನ್ನು ಹೆಚ್ಚಾಗಿ ಬಳಸುವ ಅಗತ್ಯ ಇಲ್ಲ, ಸ್ನಾನ ಮಾಡುವ ಮೊದಲು 5 ನಿಮಿಷ ಗೀಸರ್ ಸ್ವಿಚ್ ಹಾಕಿ ಮತ್ತೆ ಆಫ್ ಮಾಡಿ ಸಾಕು. ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನವೇ ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು, ವಿದ್ಯುತ್ ಬಳಕೆಯು ಉಳಿತಾಯವಾಗುತ್ತದೆ.