LIC ಈ ಸ್ಕೀಮ್ ನಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಜೀವನ ಪರ್ಯಂತ ಪ್ರತಿ ತಿಂಗಳು 12,000 ಪಿಂಚಣಿ ಬರುತ್ತೆ.!

ಹಣ ಎನ್ನುವುದು ಬದುಕಿನಲ್ಲಿ ಬಹಳ ಮುಖ್ಯವಾದ ಸಂಗತಿಯಾಗಿದೆ. ಜೀವನದಲ್ಲಿ ಕೆಲವರಿಗೆ ಬಹಳ ಬೇಗ ಹಣದ ಪ್ರಾಮುಖ್ಯತೆ ತಿಳಿಯುತ್ತದೆ. ಕೆಲವರು ವಿದ್ಯಾಭ್ಯಾಸ ಮುಗಿಸಿ ದುಡಿಯಲು ಆರಂಭಿಸಿದ ಮೇಲೆ ಇದರ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಒಟ್ಟಾರೆಯಾಗಿ ಹಣ ಎಲ್ಲರಿಗೂ ಪಾಠ ಕಲಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.

WhatsApp Group Join Now
Telegram Group Join Now

ಹಣದ ಬಗ್ಗೆ ನಾವು ನಿರ್ಲಕ್ಷ ತೋರಿ ಸರಿಯಾಗಿ ಪ್ಲಾನಿಂಗ್ ಮಾಡದೇ ಇದ್ದರೆ ಜೀವನದ ಇಳಿ ವಯಸ್ಸಿನಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲದೆ, ದುಡಿಯುವ ವಯಸ್ಸು ಅಲ್ಲದೆ, ಜೇಬಿನಲ್ಲಿ ಹಣ ಕೂಡ ಇಲ್ಲದೆ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಮಾಡಿಕೊಂಡ ಸಂದರ್ಭದಲ್ಲಿ ಇತರರ ಆಸರೆಯಲ್ಲಿ ಕಷ್ಟಪಟ್ಟು ಬದುಕಬೇಕಾಗುತ್ತದೆ.

ಹೀಗಾಗಬಾರದು ಎಂದರೆ ನಾವು ಆರೋಗ್ಯವಾಗಿರುವಾಗಲೇ ನಮ್ಮ ವೃದ್ಯಾಪ್ಯದ ಬಗ್ಗೆ ಯೋಚನೆ ಮಾಡಬೇಕು. ಹಿಂದೆಲ್ಲ 60 ವರ್ಷ ತುಂಬಿದ ಬಳಿಕ ರಿಟೈರ್ಮೆಂಟ್ ತೆಗೆದುಕೊಂಡ ಮೇಲೆ ಸಂಧ್ಯಾ ಕಾಲವನ್ನು ಆಸ್ವಾದಿಸುತ್ತಿದ್ದರು. ಆದರೆ ಈಗಿನ ಜೀವಿತಾವಧಿಯಲ್ಲಿ ಅಷ್ಟು ಆಯಸ್ಸು ಬದುಕಿರುತ್ತೇವಾ? ಎನ್ನುವುದೇ ಅನುಮಾನವಾಗಿದೆ.

ಈ ಸುದ್ದಿ ಓದಿ:- ನಿಮ್ಮ ಜಮೀನಿಗೆ ಹೋಗಲು ಅಕ್ಕ ಪಕ್ಕದವರು ದಾರಿ ಬಿಡುತ್ತಿಲ್ಲವೇ,‌ ಇಲ್ಲಿದೆ ನೋಡಿ ಪರಿಹಾರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ಹಾಗಾಗಿ ಬದುಕಿನಲ್ಲಿ ಬಹಳ ಬೇಗ ಸೆಟಲ್ ಆಗಬೇಕು ಎನ್ನುವುದೇ ಎಲ್ಲರ ಇಚ್ಚೆ ಈಗ ಅಸಲಿ ವಿಚಾರ ಏನೆಂದರೆ ನೀವು ದುಡಿಯಲು ನಿಲ್ಲಿಸಿದ ಮೇಲೆ ನಿಮಗೆ ಪ್ರತಿ ತಿಂಗಳು ಬರುವ ಆದಾಯ ಮಾತ್ರ ಕಡಿಮೆ ಆಗಬಾರದು ಎಂದರೆ ನಿಮ್ಮ ಉಳಿತಾಯದ ಹಣವನ್ನು ನೀವು ಸರಿಯಾಗಿ ಇನ್ವೆಸ್ಟ್ಮೆಂಟ್ ಮಾಡಬೇಕು.

ಈಗ ಅದಕ್ಕಾಗಿ ಹತ್ತಾರು ಆಪ್ಷನ್ಗಳು ಇವೆ. ಅಂಚೆ ಕಚೇರಿ ಯೋಜನೆಗಳು, ಬ್ಯಾಂಕ್ ನಲ್ಲಿ ವಿವಿಧ ಹೂಡಿಕೆ ಯೋಜನೆಗಳು, ಮ್ಯೂಚುವಲ್ ಫಂಡ್, ಸ್ಟಾಕ್ ಮಾರ್ಕೆಟ್, ಶೇರ್ ಮಾರ್ಕೆಟ್ ಇತ್ಯಾದಿ ಇತ್ಯಾದಿ. ಆದರೆ ನಮ್ಮ ಹಣಕ್ಕೆ ಲಾಭ ಮಾತ್ರ ಅಲ್ಲದೆ ಸೇಫ್ಟಿ ಕೂಡ ಎಷ್ಟಿದೆ ಎನ್ನುವುದಕ್ಕೂ ಅಷ್ಟೇ ಗಮನ ಕೊಡಬೇಕು. ಇಲ್ಲವಾದಲ್ಲಿ ಅಸಲು ಇಲ್ಲ ಲಾಭವೂ ಇಲ್ಲ ಎನ್ನುವ ರೀತಿ ಆಗಿಬಿಡುತ್ತದೆ.

ಈ ಪ್ರಕರವಾಗಿ ಹೇಳುವುದಾದರೆ LIC ದೇಶದಲ್ಲಿ ನಂಬಿಕಾರ್ಹ ಸಂಸ್ಥೆಯಾಗಿದೆ ಇದುವರೆಗೂ LIC ಜೀವವಿಮೆ ಪಾಲಿಸಿಗಳಿಗೆ ಹೆಸರುವಾಸಿಯಾಗಿತ್ತು, ಆದರೆ ಈಗ ಹತ್ತಾರು ಯೋಜನೆಗಳ ಆಯ್ಕೆಗಳು ಇದ್ದು ಪ್ರತಿಯೊಂದು ವರ್ಗದ ಪ್ರತಿಯೊಬ್ಬ ವಯಸ್ಸಿನ ವ್ಯಕ್ತಿಯ ಅವಶ್ಯಕತೆ ಅನುಸರಿಸಿ ಹೊಚ್ಚ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ.

ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಬರುತ್ತೆ ಗೊತ್ತಾ.? ಇಲ್ಲಿದೆ ನೋಡಿ ಪಕ್ಕಾ ಲೆಕ್ಕಾ.!

ಇದರಲ್ಲಿ ಹಿರಿಯ ನಾಗರಿಕರಿಗಾಗಿಯೇ ಮಾಡಿಸಲಾದ ಪ್ರತಿ ತಿಂಗಳು ಪಿಂಚಣಿ ಬರುವಂತಹ ಪಿಂಚಣಿ ಆಧಾರಿತ ಯೋಜನೆಗಳೂ ಇವೆ. ಇಂತಹ ಯೋಜನೆಗಳಲ್ಲಿ ಒಂದು LIC ಸರಳ ಪಿಂಚಣಿ ಯೋಜನೆ(LIC Sarala Pension Scheme). ನಿವೇನಾದರೂ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಜೀವನ ಪರ್ಯಂತ ರೂ.12,000 ಪಿಂಚಣಿ ಪಡೆಯಬಹುದು ಈ ಯೋಜನೆ ಕುರಿತ ಮಾಹಿತಿ ಹೇಗಿದೆ ನೋಡಿ.

ಯೋಜನೆ ಹೆಸರು:- LIC ಸರಳ ಪಿಂಚಣಿ ಯೋಜನೆ.

ಯೋಜನೆಯ ವೈಶಿಷ್ಟ್ಯಗಳು:-

* 40 ವರ್ಷದಿಂದ 60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಏಕಬಾರಿಗೆ ತನ್ನ ಉಳಿತಾಯವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು 40ನೇ ವಯಸ್ಸಿನಿಂದಲೇ ವಾರ್ಷಿಕವಾಗಿ 12,000 ದಿಂದ ಗರಿಷ್ಠ 58,000 ದ ವರೆಗೆ ಪಿಂಚಣಿ ಪಡೆಯಬಹುದು. ಈ ಯೋಜನೆಯಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಕೂಡ ಖಾತೆ ತೆರೆಯಬಹುದು.

ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!

* ಈ ಪಿಂಚಣಿಯನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ಹಾಗೂ ವಾರ್ಷಿಕವಾಗಿ ಪಡೆಯಲು ಅವಕಾಶವಿದೆ ನಿಮ್ಮ ಯೋಜನೆಗೆ ಆರು ತಿಂಗಳು ತುಂಬಿದ ಬಳಿಕ ಉಳಿತಾಯದ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ LIC ಶಾಖೆಗೆ ಭೇಟಿ ಕೊಡಿ ಅಥವಾ ಏಜೆಂಟ್ ಗಳನ್ನು ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now