ಮನೆ ಕಟ್ಟಿಸುವಾಗ ಈ ವಿಚಾರಗಳು ತಿಳಿದಿದ್ದರೆ 4-5 ಲಕ್ಷ ಹಣ ಉಳಿಸಬಹುದು, ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ.!

 

WhatsApp Group Join Now
Telegram Group Join Now

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಗೆ ಮನೆ ಕಟ್ಟುವುದು ಎಷ್ಟು ಜವಾಬ್ದಾರಿಯುತ ಕೆಲಸ ಹಾಗೂ ಹೈ ಬಜೆಟ್ ನ ಕೆಲಸ ಎನ್ನುವುದನ್ನು ತಿಳಿಸುತ್ತದೆ. ಸದ್ಯಕ್ಕೆ ಈಗಿನ ಕಾಲದಲ್ಲಿ ಎರಡು ದಿನ ಮದುವೆ ಬೇಕಾದರೂ ಮಾಡಬಹುದು ಆದರೆ ವರ್ಷಪೂರ್ತಿ ಗಮನ ಕೊಡಬೇಕಾದ ಮನೆ ಕಟ್ಟಿಸುವ ಕೆಲಸ ಬಹಳ ರಿಸ್ಕ್.

ಯಾಕೆಂದರೆ ದಿನ ಪ್ರತಿ ಇದಕ್ಕೆ ಖರ್ಚು ಇದ್ದೇ ಇರುತ್ತದೆ ಮತ್ತು ಅಷ್ಟೇ ಸಮಯವನ್ನು ಕೂಡ ಕೊಡಬೇಕು. ದುಡಿದ ಒಂದೊಂದು ರೂಪಾಯಿಯನ್ನು ಕೂಡ ಲೆಕ್ಕ ಹಾಕಿ ಮನೆಗೆ ಖರ್ಚು ಮಾಡುತ್ತಿರುತ್ತೇವೆ ಇಂತಹ ಸಮಯದಲ್ಲಿ ಯಾವುದರಲ್ಲಾದರೂ ರೂ.1000 ಉಳಿದರೂ ಏನೋ ಒಂದು ರೀತಿಯ ಸಮಾಧಾನ.

ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-

ಹಾಗಾಗಿ ಈ ರೀತಿ ಮನೆ ಕಟ್ಟುವ ಕನಸು ಹೊಂದಿರುವ ಪ್ರತಿಯೊಬ್ಬರು ಕೆಲವು ಮುಖ್ಯವಾದ ಸಂಗತಿಗಳನ್ನು ತಿಳಿಸುತ್ತಿದ್ದೇವೆ ಇದರ ಬಗ್ಗೆ ಗೊತ್ತಿದ್ದರೆ ಮನೆ ಕಟ್ಟುವ ಸಮಯದಲ್ಲಿ ಆಗುವ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಕಡಿಮೆ ಎಂದರೂ 2BHK ಮನೆಗೆ 3-4 ಲಕ್ಷ ಹಣ ಉಳಿಸಬಹುದು. ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

* ಮನೆ ಕಟ್ಟಿಸಲು ಆರಿಸುವ ಜಾಗ ಬಹಳ ಉಳಿತಾಯ ಮಾಡಿಕೊಳ್ಳುತ್ತದೆ. ನೀವು ಸೈಟ್ ಖರೀದಿಸುವಾಗಲೇ ರಸ್ತೆ ಲೆವೆಲ್ ಗೆ ಇರುವ ಮತ್ತು ಚೌಕಾಕಾರ ಹಾಗೂ ಆಯತಾಕಾರವಾಗಿರುವ ಸೈಟ್ ಗಳನ್ನು ಖರೀದಿಸಿದ್ದೇ ಆದರೆ ಲಕ್ಷಾಂತರ ರೂಪಾಯಿ ಹಣ ಉಳಿಸಬಹುದು. ಇಲ್ಲವಾದಲ್ಲಿ ಅದನ್ನು ಲೆವೆಲ್ ಮಾಡುವುದಕ್ಕೆ ಫೌಂಡೇಶನ್ ಹಾಗೂ ಫ್ಲಿಂಥ್ ಗೆ ಮತ್ತು ಸರಿಯಾಗಿ ಶೇಪ್ ಸಿಗದ ಕಾರಣ ಅವುಗಳನ್ನು ಕವರ್ ಮಾಡಿ ಒಂದು ಒಳ್ಳೆ ಲುಕ್ ಗೆ ತರುವುದಕ್ಕೆ ಅನವಶ್ಯಕವಾಗಿ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!

* ಹೊರಗಿನ ವಾಲ್‌ಗಳಿಗೆ 9 ಇಂಚು & 6 ಇಂಚು‌ ಥಿಕ್ ನೆಸ್ ಕೊಟ್ಟರೆ ಸಾಕು, ಒಳಗಿನ ವಾಲ್ ಗಳಿಗೆ ಇಷ್ಟು ಅಗತ್ಯ ಇಲ್ಲ. 4 ಇಂಚು ಥಿಕ್ನೆಸ್ ಇರಲಿ ಆದರೆ ಲಿಂಟಲ್ ಕೊಡುವುದನ್ನು ಮರೆಯಬಾರದು.

* ಸಿಮೆಂಟ್ ವಿಚಾರದಲ್ಲಿ ಕೂಡ ಯಾವುದೋ ಜಾಹೀರಾತುಗಳಿಗೆ ಮಾರು ಹೋಗಿ ಫ್ಯಾನ್ಸಿ ಸಿಮೆಂಟ್ ಗೆ ವ್ಯರ್ಥವಾಗಿ ಹೆಚ್ಚು ಹಣ ಸುರಿಯಬೇಡಿ ಮಾಮೂಲಿ ಸಿಮೆಂಟ್ ಒಳ್ಳೆಯ ಬ್ರಾಂಡ್ ಖರೀದಿಸಿ ಸಾಕು. ಆದರೆ ಮೂರು ತಿಂಗಳಿಗಿಂತ ಹೆಚ್ಚು ಹಳೆಯದಾಗಿರಬಾರದು ಎನ್ನುವುದು ನೆನಪಿನಲ್ಲಿ ಇರಲಿ. ಕನ್ಸ್ಟ್ರಕ್ಷನ್ ಗೆ 53 ಗ್ರೇಡ್ ಮತ್ತು ಪ್ಲಾಸ್ಟರಿಂಗ್ ಗೆ 43 ಗ್ರೇಡ್ ಬಳಸಿ PPC ಸಿಮೆಂಟ್ ಹಿಡಿಯುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡರು ಒಂದು ಬ್ಯಾಗ್ ಗೆ ಉಳಿದವುಗಳಿಗಿಂತ ಇದೇ ಗುಣಮಟ್ಟದಲ್ಲಿ ರೂ.10 ಉಳಿಸಬಹುದು.

ಈ ಸುದ್ದಿ ಓದಿ:- ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!

* ಫ್ರಂಟ್ ಎಲಿವೇಶನ್ ನಲ್ಲೂ ಕೂಡ ಹತ್ತಾರು ಬಗ್ಗೆ ಟೈಲ್ಸ್ ಬಳಸುವುದು ಪೇಂಟಿಂಗ್ ಮಾಡಿಸುವುದು ಇವುಗಳಿಂದ ಕೂಡ ಖರ್ಚು ಹೆಚ್ಚಾಗಬಹುದು. ಹಾಗಾಗಿ ಕನ್ಸ್ಟ್ರಕ್ಷನ್ ಸಮಯದಲ್ಲಿಯೇ ನೀವು ಇಂಜಿನಿಯರ್ ಗಳಿಗೆ ಹೇಳಿದರೆ ಸಿವಿಲ್ ನಲ್ಲಿ ಕಡಿಮೆ ಖರ್ಚಿನಲ್ಲಿ ಒಳ್ಳೆ ಲುಕ್ ಬರುವ ರೀತಿ ಫಿನಿಶಿಂಗ್ ಮಾಡಿ ಕೊಡುತ್ತಾರೆ. ಇದರಿಂದಲೂ ಹಣ ಉಳಿಸಬಹುದು ಇದೇ ರೀತಿಯಾಗಿ ಇನ್ನೂ ಸಾಕಷ್ಟು ಮುಖ್ಯವಾದ ಅಂಶಗಳು ಇದ್ದು ಇದೆಲ್ಲದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಕೊನೆವರೆಗೂ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now