ಡಿಜಿಟಲೀಕರಣದ (Digitalization) ವಿಷಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking) ಒಂದು ದೊಡ್ಡ ಕ್ರಾಂತಿಯೇ ನಡೆದಿದೆ ಎನ್ನಬಹುದು. ಯಾಕೆಂದರೆ ಇಂದು ನಾವು ಯಾವುದೇ ಬ್ಯಾಂಕ್ ಗಳಿಗೆ ಭೇಟಿ ಕೊಡದೆ ಬಹುತೇಕ ಬ್ಯಾಂಕ್ ನ ಎಲ್ಲಾ ಸೇವೆಗಳನ್ನು ಕೂಡ ನಿಮಿಷಗಳಲ್ಲಿ ಬೆರಳ ತುದಿಯಲ್ಲಿ ಆನ್ಲೈನ್ ಮೂಲಕ (online) ಪಡೆಯಬಹುದು.
UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಇವುಗಳ ಮೂಲಕವೂ ನಾವು ಯಾವುದೇ ಚೆಕ್ ಬುಕ್ ಅಥವಾ ಚಲನ್ ಗಳ ಸಹಾಯವಿಲ್ಲದೆ ಖಾತೆಗಳಲ್ಲಿ ಹಣ ಹಾಕುವುದು ಹಣ ವರ್ಗಾಯಿಸುವುದು ಇವುಗಳನ್ನು ಸಲೀಸಾಗಿ ಮಾಡುತ್ತಿದ್ದೇವೆ. ATM ಮಿಷನ್ ಗಳು ನಮ್ಮ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್ ಗೆ ನಗದು ರೂಪದಲ್ಲಿ ಪಡೆಯುವುದಕ್ಕೆ ಅನುಕೂಲತೆ ಮಾಡಿಕೊಟ್ಟಿದೆ.
ಈ ಸುದ್ದಿ ಓದಿ:- ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 32,044 ಬಡ್ಡಿ ಸಿಗುತ್ತೆ.!
RD, FD, ಲೈಫ್ ಇನ್ಸೂರೆನ್ಸ್ ಗಳು ಮತ್ತು ಟರ್ಮ್ ಇನ್ಶುರೆನ್ಸ್ ಗಳು ಇವುಗಳನ್ನು ಖರೀದಿಸುವುದೇ ಆಗಲಿ ಅಥವಾ ಇವುಗಳಿಗೆ ಪ್ರೀಮಿಯಂ ಗಳನ್ನು ಪಾವತಿಸುವುದೇ ಆಗಲಿ ಎಲ್ಲವನ್ನು ಕೂಡ ಆನ್ಲೈನ್ ನಲ್ಲಿ ಮಾಡಬಹುದು. ಇದಕ್ಕೂ ಮೀರಿದ ಎಷ್ಟೋ ಅನುಕೂಲತೆಗಳು ಸೇವೆಗಳನ್ನು ಪಡೆಯುವುದರಿಂದ ಹಿಡಿದು ಅದರ ಬಗ್ಗೆ ಪ್ರಶ್ನೆ ಮಾಡುವ, ದೂರು ಸಲ್ಲಿಸುವವರೆಗೆ ಎಲ್ಲವೂ ಆನ್ಲೈನ್ ನಲ್ಲಿಯೇ ನಡೆಯುತ್ತಿರುವುದರಿಂದ ಚೆಕ್ ಗೆ ಇರುವ ಮೌಲ್ಯ ಕಡಿಮೆ ಆಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ.
ಆದರೆ ಇಲ್ಲಿ ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೆ, ಚೆಕ್ ಗಳು (Cheque) ಎಂದಿಗೂ ಕೂಡ ತನ್ನ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಯಾವುದೇ ರೀತಿ ಆನ್ಲೈನ್ ವಹಿವಾಟು ನಡೆದರು ಅದಕ್ಕೆ ಒಂದು ದಿನಕ್ಕೆ ಇಂತಿಷ್ಟೇ ಮಿತಿ ಎಂದು ಇರುತ್ತದೆ ಮತ್ತು ಆನ್ಲೈನ್ ವ್ಯವಹಾರವು ಎಷ್ಟು ಅನುಕೂಲಕರವೋ ಅಷ್ಟೇ ರಿಸ್ಕ್ ಕೂಡ ಹೊಂದಿದೆ.
ಹೀಗಾಗಿ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡುವವರು ಚೆಕ್ ಮೂಲಕವೇ ವ್ಯವಹರಿಸುತ್ತಾರೆ, ಇದಕ್ಕೆ ಮಿತಿ ಇರುವುದಿಲ್ಲ ಮತ್ತು ಒಬ್ಬರಿಂದ ಮತ್ತೊಬ್ಬರಿಗೆ ಹಣ ಕೊಟ್ಟಿರುವುದಕ್ಕೆ ದಾಖಲೆ ಕೂಡ ಇರುತ್ತದೆ. ಹಾಗಾದರೆ ಚೆಕ್ ಗಳನ್ನು ನೀಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಇದು ನೂರರಷ್ಟು ಸೇಫಾ? ಎಂದರೆ ಅದಕ್ಕೂ ಕೂಡ ಹೌದು ಎಂದು ಹೇಳಲಾಗುವುದಿಲ್ಲ.
ಈ ಸುದ್ದಿ ಓದಿ:- ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ.! ಈ ತಪ್ಪು ಮಾಡಿದರೆ ಬೀಳುತ್ತದೆ 10,000 ದಂಡ.!
ಯಾಕೆಂದರೆ ನೀವು ಸರಿಯಾದ ರೀತಿಯಲ್ಲಿ ಚೆಕ್ ಬರೆದು ಕೊಡದೆ ಇದ್ದರೆ ಚೆಕ್ ಕೊಟ್ಟವರಿಗೆ ಅನೇಕ ರೀತಿ ಸಮಸ್ಯೆ ಎದುರಾಗಲಿದೆ ಹಾಗಾಗಿ ಯಾವ ರೀತಿ ಚೆಕ್ ಕೊಡಬೇಕು ಮತ್ತು ಇದರಿಂದ ತಪ್ಪಾದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
* ಚೆಕ್ ಬರೆಯುವಾಗ ಆತುರದಿಂದ ಚೆಕ್ ಬರೆಯುವುದಕ್ಕೆ ಹೋಗಬೇಡಿ, ತಾಳ್ಮೆಯಿಂದ ಸರಿಯಾಗಿ ಬರೆಯಿರಿ. ಯಾಕೆಂದರೆ ಬ್ಯಾಂಕ್ ಚೆಕ್ ನಲ್ಲಿ ಯಾವುದೇ ಒಂದು ಸಣ್ಣ ತಪ್ಪು ಆಗಿದ್ದರು ಕೂಡ ಆ ಚೆಕ್ ವೆಸ್ಟ್ ಆಗುತ್ತದೆ. ಬ್ಯಾಂಕ್ ಅದನ್ನು ಪರಿಗಣಿಸುವುದಿಲ್ಲ.
* ತಪ್ಪಾಗಿ ಸಹಿಯನ್ನು ಮಾಡಬೇಡಿ, ಚೆಕ್ ನೀಡುವವರ ಸಹಿ ಬಹಳ ಮುಖ್ಯವಾದ ವಿಷಯವಾಗಿರುತ್ತದೆ. ಅದರಲ್ಲೂ ಚೆಕ್ ಮುಂಭಾಗದಲ್ಲಿ ಸಹಿ ಮಾಡುವುದು ಮಾತ್ರವಲ್ಲದೆ ಚೆಕ್ ನ ಹಿಂಭಾಗದಲ್ಲಿಯೂ ಕೂಡ ಸಹಿ ಮಾಡಬೇಕು. ಆಗ ಅದನ್ನು ಯಾರು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.
ಈ ಸುದ್ದಿ ಓದಿ:- ರೈತರಿಗೆ ಗುಡ್ ನ್ಯೂಸ್.! ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ.!
* ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅದಕ್ಕಿಂತ ಹೆಚ್ಚಿಗೆ ಮೊತ್ತಕ್ಕೆ ಚೆಕ್ ನೀಡಬಾರದು. ಈ ರೀತಿ ಮಾಡಿದರೆ ಅಪರಾಧವಾಗುತ್ತದೆ. ನಿಮ್ಮಿಂದ ಚೆಕ್ ತೆಗೆದುಕೊಂಡಿರುವ ವ್ಯಕ್ತಿ ಬ್ಯಾಂಕ್ ಗೆ ಹಣ ವಿಥ್ ಡ್ರಾ ಮಾಡಲು ಹೋಗಿ ನಿಮ್ಮ ಖಾತೆಯಲ್ಲಿ ಅಷ್ಟು ಹಣ ಇಲ್ಲದೆ ಇದ್ದಾಗ ನಿಮ್ಮ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಬಹುದು.
* ಚೆಕ್ ಬರೆಯುವಾಗ ಸಹಿ ಮಾಡುವುದರ ಜೊತೆಗೆ ಅಂದಿನ ಡೇಟ್ (Date) ಹಾಕುವುದನ್ನು ಮರೆಯಬೇಡಿ. ಒಂದು ವೇಳೆ ನೀವು ಕೊಟ್ಟಿದ್ದ ಚೆಕ್ ಕಳೆದುಹೋಗಿ ಅದು ಇನ್ಯಾರದೋ ಕೈ ಸೇರಿ, ಆ ವ್ಯಕ್ತಿ ಬ್ಯಾಂಕಿಗೆ ಚೆಕ್ ಹಾಕುವ ಸಮಯದಲ್ಲಿ ದಿನಾಂಕ ಮೀರಿದ್ದರೆ ಮಿಸ್ ಯೂಸ್ ಆಗುವುದು ತಪ್ಪುತ್ತದೆ.
* ಚೆಕ್ ಬರೆಯುವಾಗ ಮತ್ತು ಇನ್ಯಾವುದೇ ಮುಖ್ಯವಾದ ವಿಷಯ ಬರೆಯುವಾಗ ಅಥವಾ ಸಹಿ ಮಾಡುವಾಗ ಪರ್ಮನೆಂಟ್ ಇಂಕ್ ಅಥವಾ ಬಾಲ್ ಪೆನ್ ಬಳಸಿ. ನೀವು ಬರೆದ ಅಕ್ಷರವನ್ನು ದುರುದ್ದೇಶದಿಂದ ತಿದ್ದಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಹಾಕಿದ್ದವರಿಗೆ ಗುಡ್ ನ್ಯೂಸ್.!
* ಚೆಕ್ ನಲ್ಲಿ ಹಣದ ಮೊತ್ತವನ್ನು ಬರೆದ ಮೇಲೆ ಇಂಗ್ಲೀಷಿನಲ್ಲಾದರೆ only ಹಾಗೂ ಕನ್ನಡದಲ್ಲಾದರೆ ಮಾತ್ರ ಎಂದು ಬರೆಯಿರಿ ಮತ್ತು ಸಂಖ್ಯೆಗಳ ಮುಂದೆ ಒಂದು ಅಡ್ಡ ಗೆರೆ ಹಾಕಿ ಎರಡು ಸೊನ್ನೆ ಬರೆಯಿರಿ. ಆಗ ಯಾರೂ ಕೂಡ ನಿಮ್ಮ ಚೆಕ್ ನಲ್ಲಿ ಇರುವ ಮೊತ್ತವನ್ನು ಬದಲಾಯಿಸಿ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವಿಲ್ಲ.
* ಯಾರಿಗೂ ಖಾಲಿ ಬ್ಲಾಂಕ್ ಚೆಕ್ (Blank Cheque) ಕೊಡಬೇಡಿ. ನಂಬಿಕೆ ಎನ್ನುವುದು ಬಹಳ ಸೂಕ್ಷ್ಮವಾದ ವಿಚಾರ. ಹಣಕಾಸಿನ ವಿಚಾರದಲ್ಲಿ ಕುರುಡಾಗಿ ನಂಬಿ ಬ್ಲಾಂಕ್ ಚೆಕ್ ಗೆ ಸಹಿ ಹಾಕಬೇಡಿ. ನೀವು ಭದ್ರತೆಯ ಉದ್ದೇಶದಿಂದ ಚೆಕ್ ಕೊಡುವುದಾದರೆ ಬ್ಲಾಂಕ್ ಚೆಕ್ ಗೆ ಸಹಿ ಮಾಡಿ ಕೊಡುವ ಸಂದರ್ಭದಲ್ಲಿ ಆ ಚೆಕ್ ನಲ್ಲಿ ರದ್ದು ಪಡಿಸಿ ಎಂದು ಬರೆದು ಸಹಿ ಮಾಡಿ ದಿನಾಂಕ ಬರೆದು ಕೊಡಬೇಕು.