ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಮಹತ್ವದ ಸೂಚನೆ.! ಈ ತಪ್ಪು ಮಾಡದಂತೆ ಎಚ್ಚರ

ಬ್ಯಾಂಕ್ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸಣ್ಣ ತಪ್ಪಿನಿಂದ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್ ಗಳು ಆನ್ಲೈನ್ ಸೇವೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡ್ತಿವೆ. ಮನೆಯಲ್ಲಿಯೇ ಕುಳಿತು ದೇಶ-ವಿದೇಶದಲ್ಲಿರುವವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್ ಎಲ್ಲ ಕೆಲಸಗಳನ್ನೂ ಆನ್ಲೈನ್ ಮೂಲಕವೇ ಮಾಡಬಹುದು.

WhatsApp Group Join Now
Telegram Group Join Now

ಹೌದು, ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಆನ್ಲೈನ್ ಮೂಲಕ ಹಣದ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ. ಹೀಗಾಗಿ, ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪಿನಿಂದಾಗಿ ಬೇರೆಯವರ ಖಾತೆಗೆ ಹಣವನ್ನು ಕಳುಹಿಸುವುದು ಕೂಡ ನಡೆಯುತ್ತದೆ. ಕಮ್ಮಿ ಹಣ ಹೋದ್ರೆ ಕೆಲವರು ಅಷ್ಟೊಂದು ತಲೆಕೆಡಿಸಿಕೊಳ್ಳುವುದಕ್ಕೆ ಹೋಗೋದಿಲ್ಲ. ಆದರೆ, ದೊಡ್ಡ ಮಟ್ಟದ ಹಣ ಹೋದ್ರೆ ಮತ್ತು ನಾವು ಕಷ್ಟಪಟ್ಟು ದುಡಿದಿರುವ ಹಣ ಬೇರೆಯವರ ಖಾತೆಗೆ ಯಾವುದೇ ಕಾರಣ ಇಲ್ಲದೆ ಹೋಗೋದು ಯಾರು ಕೂಡ ಸಹಿಸಲ್ಲ.

ಇಂದಿನಿಂದ ಉಚಿತ ವಿದ್ಯುತ್, ಆದರೆ ಈ ಜನರು ಮಾತ್ರ ಬಿಲ್ ಕಟ್ಟಬೇಕಾಗುತ್ತದೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ಒಂದು ವೇಳೆ ಈ ರೀತಿ ಪರಿಸ್ಥಿತಿ ನಿಮಗೂ ಎದುರಾದಾಗ ಏನು ಮಾಡಬೇಕು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನಿಮ್ಮ ಬ್ಯಾಂಕಿನ ಹೋಂ ಬ್ರಾಂಚ್ ಗೆ ಕರೆ ಮಾಡಿ ನಡೆದ ವಿಷಯದ ಬಗ್ಗೆ ಸಂಪೂರ್ಣವಾಗಿ ಅವರಿಗೆ ನೀಡಬೇಕು. ಆ ಸಂದರ್ಭದಲ್ಲಿ ಅವರು Complaint Request Number ಅನ್ನು Raise ಮಾಡಿ ಅದನ್ನು ನಿಮಗೆ ನೀಡುತ್ತಾರೆ.

ಇಲ್ಲವಾದಲ್ಲಿ ಈ ಘಟನೆ ನಡೆದ ಕೂಡಲೇ ನೀವು ಕಸ್ಟಮರ್ ಕೇರ್ ಕೂಡ ಕರೆ ಮಾಡಿ ಅವರಿಗೆ ನಡೆದಿರುವಂತಹ ಘಟನೆಯ ವಿವರಗಳನ್ನು ನೀಡಬಹುದಾಗಿದೆ. ಒಂದು ವೇಳೆ ಆಕ್ಟಿವ್ ಇಲ್ಲದೆ ಇರೋ ಖಾತೆಗೆ ನಿಮ್ಮ ಹಣ ಹೋದರೆ ಅದು ಕೂಡಲೇ ನಿಮಗೆ ವಾಪಸ್ ಆಗುತ್ತೆ. ಆದರೆ, ಒಂದು ವೇಳೆ ಮಾನ್ಯವಾಗಿರುವಂತಹ ಅಕೌಂಟ್ ಗೆ ಹೋದರೆ, ಇದರಲ್ಲಿ ತಪ್ಪು ನಿಮ್ಮದೇ ಆಗಿರುತ್ತದೆ ಎಂಬುದಾಗಿ ಬ್ಯಾಂಕಿನ ನಿಯಮಗಳು ಹೇಳುತ್ತವೆ.

ಇನ್ಮುಂದೆ ಗಂಡಸರಿಗೂ ಪ್ರತಿ ತಿಂಗಳು 3000 ಕೊಡಲು ನಿರ್ಧರಿಸಿದ ಸರ್ಕಾರ. ಇದ್ಯಾವ ಸ್ಕೀಮ್ ಅಂತ ಒಮ್ಮೆ ನೋಡಿ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಅಲ್ಲಿಸಿ ಹಣ ಪಡೆಯಬಹುದು.!

ಹೀಗಾಗಿ, ಒಂದು ಲಕ್ಷ ಕ್ಕಿಂತ ಹೆಚ್ಚು ಹಣ ಕಳಿಸುವಾಗ ನೀವು ಎಚ್ಚರವಹಿಸಿ. ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಭಾರತದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ SBI ಯಾವುದೇ ಖಾತೆಗೂ ಕೂಡ ಹಣವನ್ನು ವರ್ಗಾಯಿಸುವ ಮುಂಚೆ ಅದರ ಸಂಪೂರ್ಣ ವಿವರಗಳನ್ನು Verify ಮಾಡುವಂತಹ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಹಾಗೂ ಕೇವಲ ನಿಮ್ಮದೇ ಆಗಿರುತ್ತದೆ.

ನೀವು ಈ ರೀತಿ ಪರಿಸ್ಥಿತಿಯಲ್ಲಿ ಕೂಡಲೇ ಹೋಂ ಬ್ರಾಂಚ್ ಗೆ ಈ ಕುರಿತಂತೆ ದೂರನ್ನು ಸಲ್ಲಿಸಬಹುದು ಹಾಗೂ ಹೋಂ ಬ್ರಾಂಚ್ ಕೂಡ ಹಣವನ್ನು ವಾಪಸು ತರುವಂತಹ ಮ್ಯಾಕ್ಸಿಮಮ್ ಪ್ರಯತ್ನವನ್ನು ಮಾಡಬಹುದು. ಆದರೆ, ಒಂದು ವೇಳೆ ಹಣವನ್ನು ವಾಪಸ್ಸು ತರದೆ ಹೋದಲ್ಲಿ ಬ್ಯಾಂಕ್ ಇದರ ಜವಾಬ್ದಾರಿಯನ್ನು ವಹಿಸುವುದಿಲ್ಲ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.

ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!

ಅದರಲ್ಲೂ, ವಿಶೇಷವಾಗಿ UPI ಅಂತಹ ಅಪ್ಲಿಕೇಶನ್ ಗಳಲ್ಲಿ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವ ಮೂಲಕ ನೀವು ಎಲ್ಲಾ ವಿವರಗಳನ್ನು ಎರಡೆರಡು ಬಾರಿ ಚೆಕ್ ಮಾಡಿದ ನಂತರವಷ್ಟೇ ಹಣವನ್ನು ವರ್ಗಾವಣೆ ಮಾಡಲು PIN ಕೋಡ್ ಅನ್ನು ಹಾಕಿ. ಇನ್ನು ಆನ್ಲೈನ್ ಬ್ಯಾಂಕಿಂಗ್ ಮಾಡೋಕ್ಕಿಂತ ಮುಂಚೆ ಯಾವ ಅಕೌಂಟ್ ನಂಬರಿಗೆ ನೀವು ಅಮೌಂಟ್ ಅನ್ನು ಟ್ರಾನ್ಸ್ಫರ್ ಮಾಡುತ್ತಿದ್ದೀರಿ ಹಾಗೂ ಅದರ IFSC ಕೋಡ್ ಅನ್ನು ಸರಿಯಾಗಿ ಲಗತ್ತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಇದನ್ನು ಬೇಜವಾಬ್ದಾರಿತನದಿಂದ ಒಂದು ವೇಳೆ ನಿರ್ವಹಿಸಿದರೆ, ನೀವೇ ಇದಕ್ಕೆ ದಂಡವನ್ನು ಕಟ್ಟಬೇಕಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now