ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!

 

ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರು (construction workers) ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಗುರುತಿನ ಚೀಟಿ (Labour card) ಪಡೆದಿದ್ದಲ್ಲಿ ಅವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಸಿಗುತ್ತಿತ್ತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್, ವಿದ್ಯಾರ್ಥಿ ಕಿಟ್, ಉಚಿತ ಟ್ಯಾಬ್ ಲ್ಯಾಪ್ಟಾಪ್, ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಸೇರಿದಂತೆ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಮುಂತಾದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿತ್ತು.

ಆದರೆ ಏಕಾಏಕಿ ಸರ್ಕಾರವು (Karnataka government) ಕಟ್ಟಡ ಕಾರ್ಮಿಕರ ಕುರಿತಾಗಿ ಆದೇಶವೊಂದನ್ನು ಹೊರಡಿಸಿ ಎಲ್ಲರಿಗೂ ಶಾ’ಕ್ ನೀಡಿದೆ. ಈವರಿಗೆ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ಗುರುತಿಸಿಕೊಂಡು ಲೇಬರ್ ಕಾರ್ಡ್ ಪಡೆದಿದ್ದವರಿಗೆಲ್ಲ ಕಾರ್ಡ್ ನವೀಕರಣದ (Renewal) ಸುದ್ದಿ ಶಾ’ಕ್ ನೀಡಿದೆ.

ಎಚ್ಚರ ಸಾರ್ವಜನಿಕರೇ, ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು ಇಲ್ಲದಿದ್ದರೆ ಹಣ ಬರಲ್ಲ.!

ಈ ರೀತಿ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ಲೇಬರ್ ಕಾರ್ಡ್ ಹೊಂದಿರುವವರು ಕಾರ್ಡ್ ನವೀಕರಣ ಮಾಡಿಸಿಕೊಳ್ಳಬೇಕು ಎನ್ನುವುದಕ್ಕಿಂತ ಕಾರ್ಡ್ ನವೀಕರಣ ಮಾಡಿಸಿಕೊಳ್ಳುವಾಗ ನೀಡಬೇಕಾದ ಅಗತ್ಯ ದಾಖಲೆಗಳ ವಿಚಾರವಾಗಿ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ ಹಾಗೂ ಸರ್ಕಾರ ಹೊರಡಿಸಿರುವ ಈ ಆದೇಶದ ವಿರುದ್ಧ ಈಗ ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರು ಆಕ್ರೋ-ಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಕಟ್ಟಡ ಕಾರ್ಮಿಕರ ಲೇಬರ್ ಕಾರ್ಡ್ ನವೀಕರಣದ ಕುರಿತು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅದರ ಪ್ರಕಾರವಾಗಿ ಸರ್ಕಾರ ತಿಳಿಸಿರುವುದೇನೆಂದರೆ, ಕಾರ್ಡ್ ನವೀಕರಣ ಮಾಡಿಸುವಾಗ ಕೆಲವು ಹೊಸ ದಾಖಲೆಗಳನ್ನು ಪಡೆಯಬೇಕು ಎಂದು ಹೇಳಿರುವುದು ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ನಾಳೆಯಿಂದ ಉಚಿತ ಬಸ್ ಯೋಜನೆ ಬಂದ್.! ಸರ್ಕಾರದ ಹೊಸ ಆದೇಶ ನೋಡಿ.!

ಕಾರ್ಡ್ ನವೀಕರಣ ಸಮಯದಲ್ಲಿ ಕಳೆದ 12 ತಿಂಗಳಿನಲ್ಲಿ ಕನಿಷ್ಠ 90 ದಿನಗಳ ಕಾಲ ವೇತನ ಪಡೆದಿರುವ ಬಗ್ಗೆ ವೇತನ ಚೀಟಿಯನ್ನು ಕಟ್ಟಡದ ಮಾಲಿಕ ಅಥವಾ ಮೇಸ್ತ್ರಿಯಿಂದ ಕಡ್ಡಾಯವಾಗಿ ಪಡೆದಿರಬೇಕು. ಈ ವೇತನ ಚೀಟಿಯನ್ನು ಆನ್ಲೈನ್ ನಲ್ಲಿ ಅರ್ಜಿ ಜೊತೆ ಸಲ್ಲಿಸಬೇಕು ಇದರೊಂದಿಗೆ ಹಾಜರಾತಿ ಹಾಗೂ ಕಟ್ಟಡ ನಿರ್ಮಿಸಲು ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ಮಾಲೀಕ ಪಡೆದ ಅನುಮತಿ ಪತ್ರವನ್ನು ಕೂಡ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಆದೇಶ ಹೊರಡಿಸಿದೆ.

ಆದರೆ ಈ ಆದೇಶವನ್ನು ರದ್ದು ಮಾಡಬೇಕು ಎಂದು ತೀವ್ರ ಅಸಮಾಧಾನದಿಂದ ಕಟ್ಟಡ ಕಾರ್ಮಿಕರು ಆಗ್ರಹಿಸುತ್ತಿದ್ದಾರೆ. ಈ ವಿಷಯದಲ್ಲಿ ಕಾರ್ಮಿಕರ ಅಳಲು ಏನೆಂದರೆ ರಾಜ್ಯದಲ್ಲಿ 44. 84 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಕಾರ್ಡ್ ನವೀಕರಣ ಮಾಡಿಸಿಕೊಳ್ಳುವುದಕ್ಕೆ ಆನ್ಲೈನ್ ಸೆಂಟರ್ ಗಳಿಗೆ ಹೋದಾಗ ದಾಖಲಾತಿಗಳ ಕೊರತೆಯಿಂದ ನವೀಕರಣ ಆಗುತ್ತಿಲ್ಲ.

ಹೀಗಾಗಿ ಕಾರ್ಮಿಕ ಇಲಾಖೆ ಕಚೇರಿಗೆ ಹೋಗುವಂತಾಗಿದೆ, ಅಲ್ಲಿಯೂ ಸಹ ಅಧಿಕಾರಿಗಳು ಸರ್ಕಾರದ ಆದೇಶವನ್ನು ಕಾರ್ಮಿಕರಿಗೆ ತಿಳಿಸಿ ವಾಪಸ್ ಕಳಿಸುತ್ತಿದ್ದಾರೆ. ಸರ್ಕಾರವು ನಕಲಿ ಕಾರ್ಡ್ ಹೊಂದಿರುವವರನ್ನು ಕಂಡುಹಿಡಿದು ಕ್ರಮ ಕೈಗೊಳ್ಳಲು ಈ ಆದೇಶ ಹೊರಡಿಸಿರಬಹುದು, ಆದರೆ ಏಕಾಏಕಿ ಮೂರು ತಿಂಗಳ ವೇತನ ಚೀಟಿ ಮತ್ತು ಹಾಜರಾತಿ ಬಗ್ಗೆ ದಾಖಲೆ ಕೇಳಿದರೆ ಅದನ್ನು ತರುವುದು ಅಸಾಧ್ಯ. ಹೀಗಾಗಿ ಪ್ರಾಮಾಣಿಕ ಕಾರ್ಮಿಕರಿಗೂ ಕೂಡ ಸಮಸ್ಯೆ ಆಗುತ್ತಿದೆ ಆದ್ದರಿಂದ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಿದ್ದಾರೆ.

ನಿಮಗೆ ಪೆನ್ಷನ್ ಹಣ ಹೆಚ್ಚಿಗೆ ಬರಬೇಕಾ.? 3 ದಿನದ ಒಳಗೆ ಈ ಕೆಲಸ ಮಾಡಿ.! ಈಗ ಬರುತ್ತಿರುವ ಪಿಂಚಣಿ ಹಣಕ್ಕಿಂತ ಹೆಚ್ಚಿನ ಹಣ ಸಿಗುತ್ತೆ.!

ಸರ್ಕಾರ ಇದ್ದಕ್ಕಿದ್ದಂಗೆ ಹೊರಟಿರುವ ಈ ಆದೇಶದಿಂದ ಮಹಿಳಾ ಕಾರ್ಮಿಕರಿಗೆ ಬಹಳ ಸಮಸ್ಯೆ ಆಗುತ್ತಿದೆ ಅವರಿಗೆ ಸಿಗಬೇಕಿದ್ದ ಹೆರಿಗೆ ಸಹಾಯಧನ, ಪಿಂಚಣಿ, ವೈದ್ಯಕೀಯ ಸೌಲಭ್ಯಗಳಿಗೂ ಹಾಗೂ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ, ಅರ್ಹರಿಗೂ ಸ್ಕಾಲರ್ಶಿಪ್ ಹಾಗೂ ಮದುವೆ ಪ್ರೋತ್ಸಾಹ ಧನ ಕೂಡ ಪಡೆಯಲು ಆಗುತ್ತಿಲ್ಲ ಎಂದು ತಮಗಾಗಿರುವ ಸಮಸ್ಯೆಯನ್ನು ವಿವರಿಸುತ್ತಿದ್ದಾರೆ.

ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಆರ್ ಜಾಧವ್ ಅವರು ಪ್ರತಿಕ್ರಿಯಿಸಿ ರಾಜ್ಯ ಕಾರ್ಮಿಕ ಮಂಡಳಿ ಆದೇಶವನ್ನು ಜಿಲ್ಲಾ ಕೇಂದ್ರಗಳಲ್ಲಿ ತಿದ್ದುಪಡಿ ಮಾಡುವುದು ಅಸಾಧ್ಯ ಆದರೆ

ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ. ಸರ್ಕಾರ ಮುಂದೆ ಏನು ಕ್ರಮ ಕೈಗೊಳ್ಳಲಿದೆ ಕಾದು ನೋಡೋಣ.

Leave a Comment

%d bloggers like this: