ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳು 3000 ಪಿಂಚಣಿ ನೀಡಲು ಹೊಸ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ.!

 

ಉದ್ಯೋಗಿಗಳು ಹಾಗೂ ಉದ್ಯಮಿಗಳು ದುಡಿಯುವ ವಯಸ್ಸಿನಲ್ಲಿಯೇ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಒಂದಷ್ಟು ಹಣವನ್ನು ಉಳಿತಾಯ ಮಾಡಿ ಇಟ್ಟುಕೊಂಡಿರುತ್ತಾರೆ. ಕೆಲವು ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರವೇ ಪಿಂಚಣಿ ಸೌಲಭ್ಯವನ್ನು ಕೂಡ ನೀಡುತ್ತದೆ. ಆದರೆ ಅಸಂಘಟಿತ ವಲಯದ ಕಾರ್ಮಿಕನಾಗಿ ದುಡಿಯುವ ರೈತನಿಗೆ ಮಾತ್ರ ಭವಿಷ್ಯದ ದಿನಗಳ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ.

ಅಲ್ಲದೆ ಕೃಷಿ ಚಟುವಟಿಕೆಯಲ್ಲಿ ಬರುವ ಲಾಭಾಂಶದ ಬಗ್ಗೆ ಯಾವುದೇ ನಿಶ್ಚಿತ ಊಹೆ ಕೂಡ ಮಾಡಲು ಸಾಧ್ಯವಾಗದ ಕಾರಣ ವಯಸ್ಸಾದ ಮೇಲೆ ರೈತನ ಬಳಿ ಬದುಕು ನಿರ್ವಹಣೆ ಮಾಡಲು ಹಣ ಇರುತ್ತದೆ ಎಂದು ಊಹಿಸಲು ಅಸಾಧ್ಯ. ಹಾಗಾಗಿ ರೈತನಿಗೂ (Farmers) ಕೂಡ ತನ್ನ ಸಂಧ್ಯಾಕಾಲದಲ್ಲಿ ಬದುಕು ನಿರ್ವಹಿಸಲು ಸರಳ ಆಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕನಿಷ್ಠ ಖಾತರಿ ಪಿಂಚಣಿ (Pension) ನೀಡುವಂತಹ ಯೋಜನೆಯನ್ನು ಜಾರಿಗೆ ತಂದಿದೆ.

ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!

ಕಿಸಾನ್ ಮನ್ ಧನ್ (Kisan Mandhan Scheme) ಯೋಜನೆ ಎನ್ನುವ ಹೆಸರಿನ ಕೇಂದ್ರ ಸರ್ಕಾರದ (Central government) ಬೆಂಬಲಿತ ಯೋಜನೆಯಲ್ಲಿ ರೈತನು ದುಡಿಯುವ ವಯಸ್ಸಿನಲ್ಲಿಯೇ ಹಣವನ್ನು ಕೂಡಿಟ್ಟು ಬಂದರೆ ಆತನಿಗೆ 60 ವರ್ಷ ತುಂಬಿದ ಬಳಿಕ ಆತನ ಉಳಿತಾಯಕ್ಕೆ ಅನುಸಾರವಾಗಿ 3000ರೂ. ತನಕ ಪ್ರತಿ ತಿಂಗಳು ಪಿಂಚಣಿ ಬರುತ್ತದೆ ಹಾಗೂ ಒಂದು ವೇಳೆ ರೈತ ಮೃ’ತ ಪಟ್ಟರೆ ಆತನ ಪತ್ನಿಗೂ ಕೂಡ ಇದೇ ರೀತಿ ಖಾತರಿ ಪಿಂಚಣಿ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ಕೃಷಿ ಕುಟುಂಬದ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡರಲೇ ಬೇಕಾದ ಯೋಜನೆ ಇದಾಗಿದೆ ಎಂದರು ತಪ್ಪಾಗುವುದಿಲ್ಲ. ಹಾಗಾಗಿ ಈ ಯೋಜನೆ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಲು ಈ ಅಂಕಣವನ್ನು ತಪ್ಪದೆ ಪೂರ್ತಿಯಾಗಿ ಓದಿ.

ಎಚ್ಚರ ಸಾರ್ವಜನಿಕರೇ, ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು ಇಲ್ಲದಿದ್ದರೆ ಹಣ ಬರಲ್ಲ.!

ಯೋಜನೆ ಹೆಸರು:- ಕಿಸಾನ್ ಮನ್ ಧನ್ ಯೋಜನೆ
ಪಿಂಚಣಿ ಸೌಲಭ್ಯ ನೀಡುವುದು:- ಕೇಂದ್ರ ಸರ್ಕಾರ

ಕಿಸಾನ್ ಮನ್ ಧನ್ ಯೋಜನೆಯ ಪ್ರಮುಖ ಅಂಶಗಳು:

● ಕಿಸಾನ್ ಮನ್ ಧನ್ ಯೋಜನೆಯನ್ನು 18 ವರ್ಷದಿಂದ 40 ವರ್ಷದ ವಯಸ್ಸಿನ ಒಳಗಿನ ಯಾವುದೇ ರೈತ ಖರೀದಿಸಬಹುದು
● ಗರಿಷ್ಠ 2 ಹೆಕ್ಟೇರ್ ವರೆಗೆ ಕೃಷಿ ಭೂಮಿ ಹೊಂದಿರುವ ರೈತ ಮಾತ್ರ ಈ ಯೋಜನೆಗೆ ಅರ್ಹನಾಗಿರುತ್ತಾನೆ.
● ಪ್ರತಿ ತಿಂಗಳು ಕೂಡ ಕನಿಷ್ಠ 50 ರೂಪಾಯಿಯಿಂದ ಗರಿಷ್ಠ 200 ರೂಪಾಯಿವರೆಗೆ ರೈತನು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು.
● 60 ವರ್ಷ ತುಂಬಿದ ಬಳಿಕ ಈತನ ಉಳಿತಾಯಕ್ಕೆ ಅನುಗುಣವಾಗಿ 3000ರೂ. ವರೆಗೂ ಕೂಡ ಪ್ರತಿ ತಿಂಗಳು ಪಿಂಚಣಿ ರೈತನ ಬ್ಯಾಂಕ್ ಖಾತೆಗೆ ಬರುತ್ತದೆ.
● ಒಂದು ವೇಳೆ ಪ್ರೀಮಿಯಂ ಪಾವತಿ ಮಾಡುತ್ತಿದ್ದ ರೈತನ ಮೃ’ತಪಟ್ಟರೆ ಆತನ ಪತ್ನಿಗೆ ಅದರ 50%ರಷ್ಟು ಪಿಂಚಣಿ ಹೋಗುತ್ತದೆ.
● ಪತ್ನಿಯೂ ಮ’ರ’ಣ ಹೊಂದಿದ ಬಳಿಕ ಯೋಜನೆಯ ಮೊತ್ತವು ವಾರಸುದಾರರಿಗೆ ಸಲ್ಲುತ್ತದೆ

ಯೋಜನೆ ಖರೀದಿಸಲು ಬೇಕಾಗುವ ಪ್ರಮುಖ ದಾಖಲೆಗಳು:-

● ರೈತನ ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್ ವಿವರ
● ಮೊಬೈಲ್ ಸಂಖ್ಯೆ
● ಇನ್ನಿತರ ಪ್ರಮುಖ ದಾಖಲೆಗಳು.

ಅರ್ಜಿ ಸಲ್ಲಿಸುವ ವಿಧಾನ:-

● ಕೃಷಿ ಮನ್ ಧನ್ ಯೋಜನೆ ಖರೀದಿಸಲು ಇಚ್ಛಿಸುವ ರೈತರು ಹತ್ತಿರದಲ್ಲಿರುವ CSC ಸೆಂಟರ್ ಗೆ ಹೋಗಿ ಮಾಹಿತಿ ಪಡೆದು ಪೂರಕ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಖರೀದಿಸಬಹುದು
● 60 ವರ್ಷ ತುಂಬುವವರೆಗೂ ಪ್ರತಿ ತಿಂಗಳು ರೈತನ ಖಾತೆಯಿಂದ ಈ ಪ್ರೀಮಿಯಂ ಗೆ ನಿಗದಿಪಡಿಸಿದ ಮೊತ್ತವು ಕಡಿತವಾಗುತ್ತಿರುತ್ತದೆ.
● ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೂ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

Leave a Comment

%d bloggers like this: