ಗೃಹಜ್ಯೋತಿ ಯೋಜನೆಯ ರೂಲ್ಸ್ ಚೇಂಜ್, ಸರ್ಕಾರದಿಂದ ಫಲಾನುಭವಿಗಳ ಆಡಿಟ್, ಯಾರೆಲ್ಲಾ ಉಚಿತ ವಿದ್ಯುತ್ ವ್ಯಾಪ್ತಿಯಿಂದ ಹೊರಗೆ ಬೀಳುತ್ತಾರೆ ಗೊತ್ತಾ.?

ಕಾಂಗ್ರೆಸ್ ಪಕ್ಷವು (Congress Party) ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ಪ್ರಚಾರದ ವೇಳೆಯಲ್ಲಿ ಪ್ರಣಾಳಿಕೆಯಲ್ಲಿ (Manifesto) ಬಳಸಿದ್ದ ಪಂಚಖಾತ್ರಿ ಯೋಜನೆಗಳ (Guarantee Scheme) ಅಸ್ತ್ರದ ಪೈಕಿ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆ ಗೃಹ ಜ್ಯೋತಿ (Gruhajyothi Scheme) ಯೋಜನೆಯಾಗಿತ್ತು. ಕತ್ತಲು ಮುಕ್ತ ಕರ್ನಾಟಕ ಎನ್ನುವ ಧ್ಯೇಯ ಹೊಂದಿದ್ದ ಈ ಗೃಹ ಜ್ಯೋತಿ ಯೋಜನೆಗೆ ನೂತನ ಸರ್ಕಾರ ಸ್ಥಾಪನೆ ಆದ ಮೇಲೆ ಜೂನ್ ತಿಂಗಳಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗಿತ್ತು.

WhatsApp Group Join Now
Telegram Group Join Now

ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕದ ಎಲ್ಲಾ ಕುಟುಂಬಗಳ ಫಲಾನುಭವಿಗಳು ಗೃಹಜ್ಯೋತಿ ಯೋಜನೆಗೆ ತಮ್ಮ ಮನೆಯ ವಿದ್ಯುತ್ ಖಾತೆಯ ಸಂಖ್ಯೆ ಹಾಗೂ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಕೊಟ್ಟು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದರು. ಸರ್ಕಾರವು ಆದೇಶಿಸಿದಂತೆ ಸರ್ಕಾರ ಹೊರಡಿಸಿದ ಮಾರ್ಗಸೂಚನೆಯಲ್ಲಿ ಇದ್ದ ಕಂಡೀಷನ್ ಪ್ರಕಾರ ವಿದ್ಯುತ್ ಬಳಕೆ ಮಾಡಿದ ಕುಟುಂಬಗಳು, ಜುಲೈ ತಿಂಗಳಿನಲ್ಲಿ ಬಳಸಿದ ವಿದ್ಯುತ್ ಗೇ ಆಗಸ್ಟ್ ತಿಂಗಳಿನಲ್ಲಿ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ.

ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳು 3000 ಪಿಂಚಣಿ ನೀಡಲು ಹೊಸ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ.!

ಅವರು ಜೀರೋ ವಿದ್ಯುತ್ ಬಿಲ್ ಪಡೆಯಲಿದ್ದಾರೆ ಸರ್ಕಾರ ವಿಧಿಸಿದ್ದ ಕಂಡಿಷನ್ ಗಳ ಪೈಕಿ ಮುಖ್ಯವಾದ ಕಂಡಿಷನ್ ಗಳೆಂದರೆ 200 ಯೂನಿಟ್ ವರೆಗಿನ ಬಳಕೆಗೆ ಮಾತ್ರ ಉಚಿತ ವಿದ್ಯುತ್ ಎನ್ನುವುದಾಗಿತ್ತು ಮತ್ತು ಜುಲೈ ತಿಂಗಳಲ್ಲಿ ಈ ಉಚಿತ ವಿದ್ಯುತ್ ಸೌಲಭ್ಯ ಪಡೆಯಬೇಕಾದರೆ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಬೇಕು ಎನ್ನುವುದಾಗಿತ್ತು.

ಗೃಹಜ್ಯೋತಿ ಯೋಜನೆಗೆ ಆರಂಭಿಕ ದಿನಗಳಲ್ಲಿ ಸರ್ವರ್ ಹೊಡೆತ ಬಿದ್ದಿದ್ದು ಇನ್ನು ಮುಂತಾದ ಅನೇಕ ಸಮಸ್ಯೆಗಳು ಕೂಡ ಉಂಟಾಗಿತ್ತು ಹಾಗೂ ಸರ್ಕಾರ ಹೇಳಿದ್ದ ಕಂಡಿಷನ್ ಗಳಿಂದ ಜನ ಗೊಂದಲಕ್ಕೂ ಒಳಗಾಗಿದ್ದರು ಈಗ ಅಂತಿಮವಾಗಿ ಈ ಜುಲೈ ತಿಂಗಳಿನಲ್ಲಿ ಯಾರೆಲ್ಲಾ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಅಗಲಿದ್ದಾರೆ ಎನ್ನುವ ಪಟ್ಟಿ ಸಿದ್ಧವಾಗಿದೆ.

ಕಟ್ಟಡ ಕಾರ್ಮಿಕರಿಗೆ ಬಿಗ್ ಶಾ-ಕ್ ಕಾರ್ಮಿಕ ಕಾರ್ಡುಗಳ ರದ್ದತಿಗೆ ಆದೇಶ ಹೊರಡಿಸಿದೆ ಸರ್ಕಾರ.!

ವಿದ್ಯುತ್ ಸರಬರಾಜು ಕಂಪನಿಗಳು (ESCOM) ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 1.92 ಕೋಟಿ ಗೃಹಬಳಕೆದಾರರಿದ್ದು 90% ಅಧಿಕ ಜನ ಮಾಸಿಕ ಸರಾಸರಿ 200 ಯೂನಿಟ್‌ಗಿಂತ ಕಡಿಮೆ ಬಳಕೆ ವಿದ್ಯುತ್‌ ಮಾಡುತ್ತಿದ್ದಾರೆ. ಇವರಲ್ಲಿ ಅಂದಾಜು 1.18 – 1.80 ಕೋಟಿ ಮಂದಿ ಸೇವಾ ಸಿಂಧು ಪೊರ್ಟಲ್‌ ಮೂಲಕ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಇವರು ಆಗಸ್ಟ್‌ ತಿಂಗಳಲ್ಲಿ ಜುಲೈ ತಿಂಗಳ ಉಚಿತ ವಿದ್ಯುತ್ ಸೌಲಭ್ಯ ಪಡೆಯಲಿದ್ದಾರೆ ಆಗಸ್ಟ್ 5ರಂದು ಈ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಲಾಂಚ್ ಆಗಲಿದೆ. ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮತ್ತು ಇಂಧನ ಸಚಿವರು ಕೆ.ಜಾರ್ಜ್ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆಯಿಂದ ಉಚಿತ ಬಸ್ ಯೋಜನೆ ಬಂದ್.! ಸರ್ಕಾರದ ಹೊಸ ಆದೇಶ ನೋಡಿ.!

ಗೃಹಜ್ಯೋತಿ ಯೋಜನೆಗೆ ಈಗ ನೋಂದಣಿ ಮಾಡಿರುವವರ ಜೊತೆಗೆ ಅಮೃತ್‌ ಜ್ಯೋತಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಫಲಾನುಭವಿಗೂ ಇದು ಅನ್ವಯ ಆಗಲಿದೆ ಎಂದು ಇವರಿಗೆ ಇಂಧನ ಸಚಿವ ಕೆ.ಜಾರ್ಜ್‌ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಭಾಗ್ಯಜ್ಯೋತಿಗೆ ಕುಟುಂಬ ಜ್ಯೋತಿಗೆ ಇಲ್ಲಿಯ ತನಕ ಪ್ರತಿ ತಿಂಗಳು 40 ಯೂನಿಟ್‌ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿತ್ತು ಈಗ ಅದನ್ನು 53 ಯೂನಿಟ್‌ ಹಾಗು 10% ಹೆಚ್ಚುವರಿ ಮಾಡಲು ನಿರ್ಧರಿಸಲಾಗಿದೆ. ಅಮೃತ್‌ಜ್ಯೋತಿ 75 ಯೂನಿಟ್‌ ಈಗ ಅದು 75 ಯೂನಿಟ್‌ ಜೊತೆಗೆ 10% ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ಈಗ ಎಲ್ಲರೂ ಕೂಡ ಗೃಹಜ್ಯೋತಿ ವ್ಯಾಪ್ತಿಗೆ ಬರುತ್ತಾರೆ ಎಂದು ತಿಳಿಸಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now