ಕರ್ನಾಟಕದ ಗ್ಯಾರಂಟಿ ಕಾರ್ಡ್ (Gyaranty Scheme) ಯೋಜನೆಗಳೆಂದೇ ಕರೆಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು (Congress party) ತನ್ನ ಪ್ರಣಾಳಿಕೆಯಲ್ಲಿ (Manifesto) ಘೋಷಿಸಿಕೊಂಡಿದ್ದ ಪಂಚ ಖಾತ್ರಿ ಯೋಜನೆಗಳನ್ನು ಈಗ ಹಂತ ಹಂತವಾಗಿ ಸರ್ಕಾರವು (government) ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ (Shakthi yojane) ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ (free ticket) ಸಿಗುತ್ತಿದೆ, ಗೃಹಜ್ಯೋತಿ (Gruha jyothi) ಯೋಜನೆಗೂ ಕೂಡ ಅರ್ಜಿ ಆಹ್ವಾನವಾಗಿತ್ತು.
ಜೂನ್ 25ರ ಒಳಗೆ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳು ಕೂಡ ಜುಲೈ ತಿಂಗಳಲ್ಲಿ ಝೀರೋ ವಿದ್ಯುತ್ ಬಿಲ್ (zero current bill) ಪಡೆಯಲಿದ್ದಾರೆ. ಹಾಗೆ ಜುಲೈ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆ (Annabhagya) ಕೂಡ ಜಾರಿಗೆ ಬಂದಿದೆ ಆದರೆ ಅನ್ನಭಾಗ್ಯ ಯೋಜನೆಯಡಿ 10Kg ಅಕ್ಕಿ ನೀಡಲು ಸಾಧ್ಯವಾಗದ ಕಾರಣ ಪ್ರತಿ ಸದಸ್ಯನಿಗೆ 5Kg ಅಕ್ಕಿ ಹಾಗೂ ಉಳಿದ 5Kg ಅಕ್ಕಿಗೆ ಬದಲಾಗಿ ಒಂದು ಕೆಜಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 170 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥನ (head of the family) ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಿದೆ.
ಬಡತನ ರೇಖೆಗಿಂತ ಕೆಳಗಿರುವ ಕರ್ನಾಟಕದ ಲಕ್ಷಾಂತರ ಪಡಿತರಚೀಟಿದಾರರು ಈಗಾಗಲೇ ಇದರ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತು ಗೃಹಲಕ್ಷ್ಮಿ(Gruha lakshmi) ಯೋಜನೆಗೂ ಜುಲೈ 19 ರಿಂದ ಅರ್ಜಿ ಆಹ್ವಾನಕ್ಕೆ ಚಾಲನೆ ಸಿಕ್ಕಿದೆ. ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆ ಪ್ರಯುಕ್ತ ಗೃಹಲಕ್ಷ್ಮಿ ಯೋಜನೆಯು ಲಾಂಚ್ ಅಗಲಿದ್ದು ಆಗಸ್ಟ್ ತಿಂಗಳಿಂದ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರ ಖಾತೆಗೆ 2000ರೂ. ಸಹಾಯಧನ DBT ಮೂಲಕ ವರ್ಗಾವಣೆಯಾಗಲಿದೆ.
ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ಆಗಸ್ಟ್ 15ರಂದು ಯೋಜನೆ ಲಾಂಚ್ ಆಗಲು ಸಾಧ್ಯವಾಗದೆ ಹೋದರೆ ಆ ವಾರದಲ್ಲಿ ಖಚಿತವಾಗಿ ಯೋಜನೆ ಜಾರಿಗೆ ಬರಲಿದೆ. ಯುವನಿಧಿ (Yuva Nidhi) ಯೋಜನೆ ಬಗ್ಗೆ ಸಾಕಷ್ಟು ನಿರುದ್ಯೋಗಿ ಯುವಕ ಯುವತಿಯರು ಪ್ರಶ್ನೆ ಮಾಡಿದ್ದರು, ಈಗ ಸರ್ಕಾರದಿಂದ ಅದಕ್ಕೂ ಕೂಡ ಸ್ಪಷ್ಟ ಉತ್ತರ ಸಿಕ್ಕಿದೆ. ಇತ್ತೀಚಿಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಈ ಕುರಿತು ತಿಳಿಸಿ ಡಿಸೆಂಬರ್ ತಿಂಗಳ ಒಳಗಡೆ ಯುವನಿಧಿ ಯೋಜನೆಯು ಕೂಡ ಜಾರಿಗೆ ಬರಲಿದೆ ಎನ್ನುವುದನ್ನು ಸ್ಪಷ್ಟಪಡಿಸಿ ಅದರ ಮಾರ್ಗಸೂಚಿ ಬಗ್ಗೆ ತಿಳಿಸಿದ್ದಾರೆ.
ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ RBI ಹೊಸ ಸೂಚನೆ.! ಕೂಡಲೇ ಈ ಸುದ್ದಿ ನೋಡಿ ಎಚ್ಚೆತ್ತುಕೊಳ್ಳಿ.!
ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರು ಪಡೆಯುತ್ತಿರುವ ಉಚಿತ ಬಸ್ ಯೋಜನೆಯು ಕಾರಣಾಂತರಗಳಿಂದ ಸ್ಟಾಪ್ ಆಗಲಿದೆ ಎನ್ನುವ ಗಾಳಿಸುದ್ದಿ ಹರಿದಾಡುತ್ತಿತ್ತು. ಆದರೆ ಸರ್ಕಾರ ಈ ರೀತಿ ಘೋಷಣೆ ಮಾಡಿಲ್ಲ. ಬದಲಾಗಿ ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಪಡೆಯುವುದಕ್ಕೆ ಸ್ಮಾರ್ಟ್ ಕಾರ್ಡ್ (Shakthi Smart card) ಪಡೆಯಲು ತಂತ್ರಾಂಶವನ್ನು (website) ಸಿದ್ದಪಡಿಸುತ್ತಿದೆ.
ಯೋಜನೆ ಜಾರಿಯಾದ ಸಮಯದಲ್ಲಿಯೇ ಮೂರು ತಿಂಗಳವರೆಗೂ ಕೂಡ ಕರ್ನಾಟಕದ ಮಹಿಳೆಯರು ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣಕ್ಕೆ ಟಿಕೆಟ್ ಪಡೆಯಬಹುದು. ಆದರೆ ಮೂರು ತಿಂಗಳ ಒಳಗಡೆ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು ಎಂದು ಸೂಚನೆ ನೀಡಿತ್ತು. ಆದರೆ ಅದಕ್ಕಾಗಿ ಅರ್ಜಿ ಆರಂಭ ಕಾರ್ಯ ಶುರು ಮಾಡಿರಲಿಲ್ಲ. ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯಕ್ರಮ ಮುಗಿದ ಬಳಿಕ ಶೀಘ್ರವಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಅರ್ಜಿ ಆಹ್ವಾನ ಮಾಡುವ ಸಾಧ್ಯತೆ ಇದೆ.
ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ 1 ಲಕ್ಷ ಬೆಳೆವಿಮೆ, ತಪ್ಪದೆ ನೋಂದಣಿ ಮಾಡಿಸಿ.!
ಸರ್ಕಾರದ ಸೇವಾ ಸಿಂಧು ವೆಬ್ಸೈಟ್ ನಲ್ಲಿ ಶಕ್ತಿ ಯೋಜನೆ ವಿಭಾಗ ಓಪನ್ ಆಗುತ್ತಿರಲಿಲ್ಲ, ಆದರೆ ಈಗ ಅದಕ್ಕಾಗಿ ಸಿದ್ಧತೆ ನಡೆಯುತ್ತಿರುವುದನ್ನು ನೋಡಬಹುದಾಗಿದೆ. ಹಾಗೆ ಯಾವುದೇ ಕಾರಣಕ್ಕೂ ಉಚಿತ ಪ್ರಯಾಣದ ಯೋಜನೆ ಸ್ಟಾಪ್ ಆಗುವುದಿಲ್ಲ, ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆಗುವವರೆಗೂ ಕೂಡ ಯಾವುದೇ ತೊಂದರೆ ಇಲ್ಲದೆ ಮಹಿಳೆಯರು ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣ ಮಾಡಬಹುದು ಎನ್ನುವುದು ಕೂಡ ಸರ್ಕಾರದ ಕಡೆಯಿಂದ ಸ್ಪಷ್ಟವಾಗಿದೆ.