ಬ್ಯಾಂಕ್ ಅಕೌಂಟ್ ಇದ್ದವರ ಗಮನಕ್ಕೆ.

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಬ್ಯಾಂಕ್(Bank Account) ಖಾತೆ ಹೊಂದಿರುವ ಎಲ್ಲಾ ಸಾರ್ವಜನಿಕರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ ಅದೇನೆಂದರೆ ಇನ್ನು ಮುಂದೆ ಬ್ಯಾಂಕ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಅಂದರೆ ನಿಮ್ಮ ಖಾತೆಯಲ್ಲಿ ಇಂತಿಷ್ಟು ಹಣವನ್ನು ಇಡುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಕೂಡ ತೆಗೆದುಕೊಂಡರು ಬ್ಯಾಂಕ್ ನಿಂದ ಯಾವುದೇ ರೀತಿಯಾದಂತಹ ದಂಡವನ್ನು ಕೂಡ ವಿಧಿಸುವುದಿಲ್ಲ.

ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಬಹಳ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( Reserve bank of India) ಕೆಲವು ಶರತ್ತುಗಳನ್ನು ಹಾಗೂ ನಿಯಮಗಳನ್ನು ನೀಡಲಾಗಿತ್ತು ಎಲ್ಲ ಬ್ಯಾಂಕುಗಳು ನಗರ ಪ್ರದೇಶಗಳಲ್ಲಿ ಇಂತಿಷ್ಟು ಗ್ರಾಮೀಣ ಪ್ರದೇಶದಲ್ಲಿ ನಿಯಮಗಳು ಅದೆಲ್ಲವನ್ನು ಕೂಡ ತೆಗೆದುಹಾಕಿ ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕ್ ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

ಹಾಗಾದರೆ ನೀವು ಕೂಡ SBI ನ ಗ್ರಾಹಕರಾಗಿದ್ದರೆ ಅಥವಾ HDFC ಅಥವಾ ICICI ಹೀಗೆ ಯಾವುದೇ ಬ್ಯಾಂಕ್ ಅಕೌಂಟ್ ಹೊಂದಿರುವ ಗ್ರಾಹಕರಾಗಿದ್ದರೆ. ಪ್ರತಿಯೊಬ್ಬರೂ ಕೂಡ ಈ ದಿನ ನಾವು ಹೇಳುವ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ RBI ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡವನ್ನು ವಿಧಿಸಲಾಗುತ್ತದೆ.

ಪ್ರದೇಶವಾರು ಬ್ಯಾಂಕ್ ನಲ್ಲಿ ಎಷ್ಟು ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಬೇಕು ಎಂದು ಈ ಹಿಂದೆ ಆರ್‌ಬಿಐ ಬ್ಯಾಂಕುಗಳಿಗೆ ಸಲಹೆ ನೀಡುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅದರಂತೆ ಅಂದಿನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಶುಲ್ಕ ಕಡ್ಡಾಯವಾಗಿತ್ತು ಆದರೆ ಈಗ ಬ್ಯಾಂಕ್ ನ ಗ್ರಾಹಕರಿಗೆ ಸದ್ಯದಲ್ಲಿಯೇ ಶುಭ ಸುದ್ದಿ ಸಿಗಲಿದೆಯಂತೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ನಿಮಗೆಲ್ಲಾದರೂ ದಂಡವನ್ನು ಅನುಭವಿಸಿದ್ದರೆ ಈ ಸುದ್ದಿ ನಿಮಗೆ ಬಹಳ ಉಪಯುಕ್ತವಾಗುತ್ತದೆ.

ಇದನ್ನು ಕಾರ್ಯಗತಗೊಳಿಸಿದರೆ ನೀವು ಭವಿಷ್ಯದಲ್ಲಿ ದಂಡವನ್ನು ಪಾವತಿಸಬೇಕಾದಂತಹ ಅಗತ್ಯ ಬರುವುದಿಲ್ಲ. ಹೌದು ಹೊಸ ನಿಯಮ ಗಳನ್ನು ಮಾಡಿದ ನಂತರ ನೀವು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯ ಇರುವುದಿಲ್ಲ. ವಿವಿಧ ಬ್ಯಾಂಕ್ ಖಾತೆಗಳ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಅನ್ನು ವಿವಿಧ ಮೊತ್ತದಲ್ಲಿ ನಿಗದಿಪಡಿಸಲಾಗಿದೆ ಪೆನಾಲ್ಟಿ ಶುಲ್ಕಗಳು ಜಿಎಸ್‌ಟಿ ಅನ್ನು ಒಳಗೊಂಡಿದೆ. ಖಾತೆದಾರರು ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ.

ಹಣಕಾಸು ಖಾತೆ ರಾಜ್ಯ ಸಚಿವರು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಪ್ರಮುಖವಾದ ಹೇಳಿಕೆ ನೀಡಿದ್ದಾರೆ ಬ್ಯಾಂಕ್ ಗಳ ಆಡಳಿತ ಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸಿ ಕನಿಷ್ಠ ಬ್ಯಾಲೆನ್ಸ್ ಇಡದೆ ಇರುವವರ ಖಾತೆಗಳ ಮೇಲಿನ ದಂಡವನ್ನು ಮನ್ನ ಮಾಡಬಹುದು ಎಂಬ ತೀರ್ಮಾನವನ್ನು ಕೈ ಗೊಳ್ಳಬಹುದು ಎಂದಿದ್ದಾರೆ. ಆದರೆ ಈ ತಿಂಗಳ ಅಂತ್ಯದಿಂದ ಬಜೆಟ್ ಸಭೆಗಳು ಇವೆ ಬಜೆಟ್ ಗು ಮುನ್ನ ಈ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳು ಇದೆ ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದಕ್ಕೂ ನನ್ನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯನ್ನು ರದ್ದುಗೊಳಿಸುವ ಅಧಿಕಾರ ಬ್ಯಾಂಕುಗಳ ಆಡಳಿತ ಮಂಡಳಿಗಳ ಕೈಯಲ್ಲಿದೆ ಎಂದಿದ್ದರು ದಂಡ ವಸೂಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಹಕರ ಮೇಲಿದೆ ಎಂದಿದ್ದಾರೆ ಆದರೆ ಬಜೆಟ್ ಸಭೆಗಳು ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಬರುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now