ಕೃಷಿ ಮಾಡುವುದು ಎಂದರೆ ಬೆಳೆ ಬೆಳೆಯುವುದು ಮಾತ್ರ ಕಷ್ಟವಲ್ಲ. ಒಬ್ಬ ರೈತನ ಕಷ್ಟ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ಯಾಕೆಂದರೆ ಬೀಳುವ ಮಳೆಯನ್ನು ಹಾಗೂ ಈ ಭೂಮಿ ತಾಯಿ ಎನ್ನುವ ಮಣ್ಣನ್ನು ನಂಬಿಕೊಂಡು ಆತ ಬೆಳೆ ಬಿತ್ತಿದ್ದರೂ ಪ್ರತಿದಿನವೂ ಕೂಡ ಕೂಲಿ ಕಾರ್ಮಿಕರಿಗೆ ಕೊಡಬೇಕಾದ ಹಣ, ಕೃಷಿಗೆ ಬೇಕಾದ ಕಚ್ಚಾ ವಸ್ತುಗಳ ಖರೀದಿಗೆ ಬಂಡವಾಳ ಹೊಂದಿಸುವುದು, ಜಮೀನಿಗೆ ರಕ್ಷಣೆ ಸೇರಿದಂತೆ ಅನೇಕ ಜವಾಬ್ದಾರಿಗಳು ಆತನಿಗೆ ಇರುತ್ತವೆ.
ಇದರಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಡಬೇಕು ಇಲ್ಲವಾದಲ್ಲಿ ಅಷ್ಟು ದಿನಗಳ ಶ್ರಮವು ಬೆಳೆ ಬಂದ ಸಮಯದಲ್ಲಿ ಒಂದೇ ದಿನದಲ್ಲಿ ನೀರಾಗಿ ಹೋಗುತ್ತದೆ. ಇತ್ತೀಚಿನ ದಿನಗಳಂತೂ ಬೆಲೆ ಜಾಸ್ತಿ ಇರುವ ಬೆಳೆಗಳನ್ನು ಕಳ್ಳತನ ಮಾಡುವುದು ಅಥವಾ ಹೊಟ್ಟೆಕಿಚ್ಚಿಗೆ ಹಾಳು ಮಾಡುವುದು ಇಂತಹ ಕೇಸ್ ಗಳು ಹೆಚ್ಚಾಗುತ್ತಿವೆ.
ಈ ಸುದ್ದಿ ಓದಿ:- 1 ಮರದಲ್ಲಿ 300 ಕಾಯಿವರೆಗೂ ಫಲ ಸಿಗುತ್ತೆ.! ತೆಂಗಿನ ಮರ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ಅಧಿಕ ಲಾಭ ಪಡೆಯಬಹುದು.!
ಆದರೆ ಪ್ರತಿ ಬಾರಿಯೂ ಪೊಲೀಸ್ ಪ್ರೊಟಕ್ಷನ್ ಕೇಳಲು ಸಾಧ್ಯವೇ? ಹಾಗಾಗಿ ನೀವೇ ನಿಮ್ಮ ಜಮೀನನ್ನು ಸರ್ಪಗಾವಲಿನಲ್ಲಿ ಇಡಲು ಟೆಕ್ನಾಲಜಿಯೊಂದು ನಿಮ್ಮ ಅನುಕೂಲಕ್ಕೆ ಬರುತ್ತಿದೆ. ಯಾವ ರೈತ ಪ್ರತಿನಿತ್ಯವು ಜಮೀನಿನಲ್ಲಿ ಇರಲು ಆಗುವುದಿಲ್ಲ ಅಂತಹ ರೈತನ ಜಮೀನಿನ ರಕ್ಷಣೆಗಾಗಿ ಮತ್ತು ಜಮೀನಿನಲ್ಲಿ ಏನೇನು ಆಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಇದನ್ನು ಅಳವಡಿಸಿಕೊಳ್ಳುವುದು ಉತ್ತಮ.
ನೀವೇನಾದರೂ ಜಮೀನಿಗೆ ಸೆಕ್ಯೂರಿಟಿ ಹಾಕಿದರೆ ಆತನಿಗೂ ಸಂಬಳ ಕೊಡಬೇಕಾಗುತ್ತದೆ ಮತ್ತು ಆತ ದಿನದ 24 ಗಂಟೆಯೂ ಒಂದೇ ರೀತಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಈ ಹೊಸ ಸೋಲಾರ್ ಕ್ಯಾಮೆರಾ ಇನ್ಸ್ಟಾಲ್ ಮಾಡಿಸಿಕೊಳ್ಳಿ ಇದು ಸೋಲಾರ್ ಶಕ್ತಿಯನ್ನು ಉಪಯೋಗಿಸಿಕೊಂಡು ನಿಮ್ಮ ಜಮೀನಿಗೆ ಸೋಲಾರ್ ಬೆಳಕು ನೀಡುವುದು ಮಾತ್ರವಲ್ಲದೆ 24 ಗಂಟೆಯೂ ಜಮೀನಿನಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದರ ಲೈವ್ ರೆಕಾರ್ಡಿಂಗ್ ದಾಖಲೆ ಕೊಡುತ್ತದೆ.
ಈ ಸುದ್ದಿ ಓದಿ:- BMTC ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಅರ್ಜಿ ಲಿಂಕ್ ಬಿಡುಗಡೆ, ಮೊಬೈಲ್ ನಲ್ಲೇ ಹೀಗೆ ಅರ್ಜಿ ಸಲ್ಲಿಸಿ.!
ನೀವು ಅಮೆರಿಕದಲ್ಲಿ ಇದ್ದರೂ ಕೂಡ ನಿಮ್ಮ ಜಮೀನಿನಲ್ಲಿ ಕ್ಯಾಮೆರಾ ಓಪನ್ ಮಾಡಿ ನಿಂತಲ್ಲಿಯೇ ಕಂಟ್ರೋಲ್ ಮಾಡಬಹುದು. ಈ ಸೋಲಾರ್ ಕ್ಯಾಮೆರಾ ಗಳಲ್ಲಿ ಸುರಕ್ಷಾ ಐ ಡಬಲ್ ಕ್ಯಾಮೆರಾದಿಂದ ಎಲ್ಲಾ ಮಾಹಿತಿ ಪಡೆಯಬಹುದು. ಕ್ಯಾಮೆರಾ ಗಳಲ್ಲಿ ಹಲವಾರು ಹಲವು ವೈವಿಧ್ಯಗಳಿದ್ದು, ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾ ಅಳವಡಿಸಿಕೊಂಡರೆ 100 ಮೀಟರ್ ಗಳವರೆಗೆ ಉದ್ದ ಮತ್ತು 120 ಮೀಟರ್ ಅಗಲದ ವರೆಗೆ ಏಕಮುಖವಾಗಿ ಎಲ್ಲವನ್ನು ಕ್ಯಾಪ್ಚರ್ ಮಾಡುತ್ತದೆ.
ಮತ್ತೊಂದು ಬಗೆಯ ಸೋಲಾರ್ ಕ್ಯಾಮೆರಾ 360 ಡಿಗ್ರಿ ತಿರುಗಿ 650 ಎಲ್ಲವನ್ನು ಕ್ಯಾಪ್ಚರ್ ಮಾಡುತ್ತದೆ ನೀವು ಇದಕ್ಕೆ ಆನ್ಲೈನ್ ನಲ್ಲಿ ಆರ್ಡರ್ ಮಾಡಿದರೂ ಸಾಕು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಂಡು ಉಚಿತವಾಗಿ ಇನ್ಸ್ಟಾಲೇಶನ್ ಕೂಡ ಕಂಪೆನಿಯಿಂದ ಮಾಡಿಸಿಕೊಳ್ಳಬಹುದು ಎರಡು ವರ್ಷಗಳ ವಾರಂಟಿ ಕೂಡ ಇರುತ್ತದೆ ಮತ್ತು ಅಷ್ಟೇ ಚೆನ್ನಾಗಿ ಲೈಫ್ ಲಾಂಗ್ ಸರ್ವಿಸ್ ಕೂಡ ಸಿಗುತ್ತದೆ.
ಈ ಸುದ್ದಿ ಓದಿ:- ದಾನವಾಗಿ ಕೊಟ್ಟ ಆಸ್ತಿಯನ್ನು ಮರಳಿ ಪಡೆಯಲು ಅವಕಾಶ ಇದೆಯೇ.? ಇದರ ಬಗ್ಗೆ ಕಾನೂನು ಹೇಳುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಕರ್ನಾಟಕದಲ್ಲಿ ಅಭಿವೃದ್ಧಿಪಡಿಸಿರುವ ಈ ಟೆಕ್ನಾಲಜಿಯನ್ನು ಬೀದರ್ ನಿಂದ ಚಾಮರಾಜನಗರದವರೆಗೆ ಯಾವುದೇ ಹಳ್ಳಿಯ ರೈತ ಬಯಸಿದರು ಕೂಡ ಕೇವಲ ರೂ.16,500 ಗೆ 2 ವಾರಗಳ ಮೆಮೋರಿಯೊಂದಿಗೆ ಅಳವಡಿಸಿ ಕೊಡುತ್ತಾರೆ.
ಕಂಪನಿಯಿಂದ ಒಮ್ಮೆ ಇನ್ಸ್ಟಾಲೇಶನ್ ಆದ ಬಳಿಕ ತಿಂಗಳಿಗೆ ಒಂದು ಕ್ಯಾಮೆರಾ ಗೆ ಒಂದು ಸಿಮ್ ನಂತೆ ಈ ಎರಡೂ ಕ್ಯಾಮೆರ್ ಗೆ 2 ಸಿಮ್ ಹಾಕಿ 180 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು 2 ಕ್ಯಾಮರ ಗಳಿಂದ ಒಟ್ಟು ರೂ.350 ಖರ್ಚು ಮಾಡಿದರೆ ಯಾವುದೇ ಸೆಕ್ಯೂರಿಟಿ ಹಾಕಬೇಕಾದ ಅಗತ್ಯ ಇಲ್ಲದೆ 100% ನಿಮ್ಮ ಜಮೀನಿಗೆ ಭದ್ರತೆ ಸಿಗುತ್ತದೆ.
ಈ ಸುದ್ದಿ ಓದಿ:- ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್
ನೀವು ಎರಡು ಕಡೆಯಿಂದ ವಾಯ್ಸ್ ಮೆಸೇಜ್ ಕೂಡ ಪಾಸ್ ಮಾಡಬಹುದು ಜಮೀನಿಗೆ ಯಾರಾದರೂ ಬಂದರೆ ನೀವೇ ಅವರನ್ನು ಗದರಿಸಿ ಕಳುಹಿಸಬಹುದು ಅಷ್ಟು ಉತ್ತಮವಾಗಿದೆ. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಳಾಸ ಅಥವಾ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ.
ವಿಳಾಸ:-
ಎನರ್ಜಿ ಎಫಿಶಿಯಂಟ್ ಲೈಟ್ಸ್,
48/A, 153, 5ನೇ ಮೇನ್,
ಇಂಡಸ್ಟ್ರಿಯಲ್ ಏರಿಯಾ,
ಸುಗುಣ ಹಾಸ್ಪಿಟಲ್ ಹಿಂಭಾಗ,
ಪ್ರಕಾಶ್ ನಗರ,
ಬೆಂಗಳೂರು.
ಮೊಬೈಲ್ ಸಂಖ್ಯೆ:- 7760483262 / 7619436315 / 7483838561 / 8088767146