Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಇಂದು ಕೋರ್ಟು ಕಛೇರಿ ಅಲೆಯುವವರಲ್ಲಿ ಹಣ ಆಸ್ತಿಗೆ ಸಂಬಂಧಪಟ್ಟ ಸಮಸ್ಯೆಗಳಿಂದಲೇ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಭಾರತದಲ್ಲಿ ಕುಟುಂಬ ವ್ಯವಸ್ಥೆ ಬಗ್ಗೆ ಬಲವಾದ ನಂಬಿಕೆ ಇತ್ತು ಮತ್ತು ಸಂಬಂಧಗಳಿಗೆ ಗೌರವ ಕೊಡುತ್ತಿದ್ದರು ಆದರೆ ಈಗ ಎಲ್ಲರಿಗೂ ಹಣ ಆಸ್ತಿ ಎನ್ನುವುದೇ ಮುಖ್ಯವಾಗಿ ಹೋಗಿದೆ.
ಹಿಂದೆ ಯಾವುದೋ ಮೂರನೇ ವ್ಯಕ್ತಿ ಜೊತೆ ಅಥವಾ ದಾಯಾದಿಗಳ ಜೊತೆ ನಡೆಯುತ್ತಿದ್ದ ಆಸ್ತಿ ಕಲಹಗಳು, ವ್ಯಾಜ್ಯಗಳು ಇಂದು ಗಂಡ-ಹೆಂಡತಿ ನಡುವೆ, ತಂದೆ-ಮಕ್ಕಳ ನಡುವೆ, ಸಹೋದರ-ಸಹೋದರಿ ನಡುವೆ ನಡೆಯುತ್ತಿದೆ.
ಹೀಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ಇರಲೇಬೇಕು, ಹೀಗಿದ್ದಾಗ ಮಾತ್ರ ನಾವು ಕೇಸ್ ಹಾಕುತ್ತಿರುವುದು, ನಡೆಸುತ್ತಿರುವುದು ಕಾನೂನು ಬದ್ಧವಾಗಿರುತ್ತದೆ ಎನ್ನುವುದು ತಿಳಿಯುತ್ತದೆ ಹಾಗಾಗಿ ಕಾನೂನಿನ ಬಗ್ಗೆ ಒಂದು ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:-ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! 50 ಸಾವಿರದವರೆಗೆ ಸಹಾಯಧನ ಪಡೆಯಿರಿ.!
ಅದೇನೆಂದರೆ ದಾನ ಪತ್ರ ಮಾಡಿದ ಮೇಲೆ ಅದನ್ನು ಮರಳಿ ಪಡೆಯಲು ಸಾಧ್ಯವೇ ಎನ್ನುವುದು. ಇದು ಅನೇಕರ ಪ್ರಶ್ನೆ, ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿರುವ ಸ್ಥಿರಾಸ್ತಿ ಅಥವಾ ಚರಾಸ್ಥಿಯನ್ನು ಮತ್ತೊಬ್ಬರಿಗೆ ತನ್ನ ಸ್ವಯಂ ಇಚ್ಛೆಯಿಂದ ಬಿಟ್ಟುಕೊಡುವುದಕ್ಕೆ ದಾನ ಪತ್ರ ಮಾಡುವುದು ಎನ್ನುತ್ತಾರೆ.
ಈ ರೀತಿ ಆಸ್ತಿಯ ಮೇಲಿನ ಹಕ್ಕನ್ನು ವರ್ಗಾವಣೆ ಮಾಡುವ ಅಥವಾ ಬಿಟ್ಟು ಕೊಡುವಾಗ ಅದು ವ್ಯಾಲ್ಯೂಡ್ ಆಗಿರಬೇಕೆಂದರೆ ದಾನವಾಗಿ ಕೊಡುತ್ತಿರುವ ವ್ಯಕ್ತಿಗೆ ಆ ಆಸ್ತಿ ಮೇಲೆ ಸಂಪೂರ್ಣ ಅಧಿಕಾರ ಇರಬೇಕು ಮತ್ತು ದಾನಪತ್ರವಾದ ಮೇಲೆ ಆ ಆಸ್ತಿಯು ರಿಜಿಸ್ಟರ್ ಆಗಬೇಕು, ಕೊಡುವವರು ಮಾತ್ರವಲ್ಲದೆ ಸ್ವೀಕರಿಸುವವರೆಗೂ ಕೂಡ ಒಪ್ಪಿಗೆ ಇದ್ದು ಸಹಿ ಮಾಡಿರಬೇಕು.
ಒಂದು ವೇಳೆ ರಿಜಿಸ್ಟರ್ ಆಗುವ ಮುನ್ನವೇ ದಾನಪತ್ರ ಮಾಡಿದ ವ್ಯಕ್ತಿ ಮೃ’ತ ಹೊಂದಿದರೆ ಆಗಲೂ ಅದು ಮಾನ್ಯವಾಗುವುದಿಲ್ಲ. ಹೀಗೆ ಸಾಕಷ್ಟು ನಿಯಮಗಳಿವೆ. ಇಷ್ಟು ಕಠಿಣ ನಿಯಮಗಳು ಇರಲು ಕಾರಣ ಏನೆಂದರೆ ಒಮ್ಮೆ ಈ ದಾನಪತ್ರ ಮಾಡಿಸಿದ ಮೇಲೆ ಅದನ್ನು ರದ್ದುಪಡಿಸುವುದು ಬಹಳ ಕಷ್ಟ ಎಂದು ಆಗಿದ್ದು ಮಾಡಬೇಕಾದ ಸಂದರ್ಭ ಬಂದರೆ ಅದಕ್ಕೂ ಅವಕಾಶವಿದೆ. ಅದರ ವಿವರಣೆ ಹೀಗಿದೆ ನೋಡಿ.
ಈ ಸುದ್ದಿ ಓದಿ:-ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
* ದಾನ ಕೊಟ್ಟವರು ಸ್ವೀಕರಿಸಿದವರು ಇಬ್ಬರು ಒಪ್ಪಿ ಮಾತ್ರ ಆ ದಾನ ಪತ್ರವನ್ನು ಕ್ಯಾನ್ಸಲ್ ಮಾಡಿಸಬಹುದು ಸಬ್ ರಿಜಿಸ್ಟರ್ ಆಫೀಸಿಗೆ ಹೋಗಿ ಕ್ಯಾನ್ಸಲೇಷನ್ ಡೀಡ್ ಮಾಡಿಸಿ ಅದಕ್ಕೆ ಸಂಬಂಧಪಟ್ಟ ಪ್ರೊಸೀಜರ್ ಗಳನ್ನು ಫಾಲೋ ಮಾಡುವ ಮೂಲಕ ಕ್ಯಾನ್ಸಲ್ ಮಾಡಿಸಿಕೊಳ್ಳಬಹುದು.
* ಕೆಲವರು ದಾನ ಪತ್ರ ಮಾಡುವಾಗ ಕೆಲವು ಕಂಡಿಶನ್ ಗಳನ್ನು ಹಾಕಿ ಅದನ್ನು ಪೂರೈಸಲು ಒಪ್ಪುವುದಕ್ಕೆ ಸಹಿ ಹಾಕಿದ ಮೇಲೆ ಸಹಿ ಮಾಡಿ ದಾನಪತ್ರ ಮಾಡಿಕೊಟ್ಟಿರುತ್ತಾರೆ. ಈ ರೀತಿ ಒಪ್ಪಂದ ಮಾಡಿಕೊಂಡು ನಿಯಮಗಳನ್ನು ಮುರಿದಾಗಲೂ ಕೂಡ ಅದಕ್ಕೆ ದಾಖಲೆ ವಿವರಣೆ ಕೊಟ್ಟು ದಾನ ಪತ್ರ ಕ್ಯಾನ್ಸಲ್ ಮಾಡಬಹುದು.
* ಈ ಮೇಲೆ ತಿಳಿಸಿದಂತೆ ದಾನಪತ್ರ ಮಾಡಿದವರಿಗೆ ಆಸ್ತಿ ಮೇಲೆ ಸಂಪೂರ್ಣ ಅಧಿಕಾರ ಇಲ್ಲದೆ ಇದ್ದಾಗ ಕೂಡ ಕ್ಯಾನ್ಸಲ್ ಮಾಡಿಸಬಹುದು. ಉದಾಹರಣೆಗೆ ಪಿತ್ರಾರ್ಜಿತವಾಗಿ ಬಂದ ತಂದೆ ಆಸ್ತಿಯ ಮೇಲೆ ಆ ತಂದೆಯ ಎಲ್ಲಾ ಮಕ್ಕಳಿಗೂ ಅಧಿಕಾರವಿರುತ್ತದೆ. ಆದರೆ ಒಬ್ಬ ಪುತ್ರ / ಪುತ್ರಿ ಸಂಪೂರ್ಣ ಆಸ್ತಿಯನ್ನು ದಾನ ಪತ್ರ ಮಾಡಿಸಿ ಮತ್ತೊಬ್ಬರಿಗೆ ಕೊಟ್ಟಿದ್ದಾಗ ಉಳಿದವರು ಅದನ್ನು ಚಾಲೆಂಜ್ ಮಾಡಿ ಕ್ಯಾನ್ಸಲ್ ಮಾಡಿಸಬಹುದು.
ಈ ಸುದ್ದಿ ಓದಿ:-ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ.! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ತಿಳಿಯಲು ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
* ಮೋ’ಸದಿಂದ, ಬಲವಂತದಿಂದ ಅಥವಾ ಕ್ರಿಮಿನಲ್ ನಡವಳಿಕೆಯಿಂದ ಬೆದರಿಕೆ ಹಾಕಿ ದಾನಪತ್ರ ಮಾಡಿಸಿದಾಗಲೂ ಕೂಡ ಅದನ್ನು ಕ್ಯಾನ್ಸಲ್ ಮಾಡಿ ಕೊಳ್ಳುವುದಕ್ಕೆ ಅವಕಾಶ ಇರುತ್ತದೆ.
* ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007ರ ಅಡಿಯಲ್ಲಿ ತಂದೆ ತಾಯಿಯ ಸ್ವಯಾರ್ಜಿತ ಆಸ್ತಿ ಪಡೆದ ಮಕ್ಕಳು ಅವರಿಗೆ ಆಶ್ರಯ ನೀಡದೆ, ಆಹಾರ ಮತ್ತು ಆರೋಗ್ಯ ರಕ್ಷಣೆ ಇವುಗಳಿಗೆ ತೊಂದರೆ ಮಾಡಿದರೆ ಆಗಲೂ ಕೂಡ ಕಾಯ್ದೆಯ ನೆರವಿನಿಂದ ನ್ಯಾಯ ಪಡೆಯಬಹುದು. ಈ ವಿಚಾರವಾಗಿ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಕಾನೂನು ಸಲಹ ಕೇಂದ್ರ ಭೇಟಿಯಾಗಿ.