ರೈತರಿಗಾಗಿ (farmers) ಸರ್ಕಾರದ (government) ಕಡೆಯಿಂದ ಹಲವಾರು ಯೋಜನೆಗಳ ಅನುಕೂಲತೆ ಸಿಗುತ್ತದೆ. ಈ ಯೋಜನೆಗಳ ಮೂಲಕ ರೈತನ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳು ಅಥವಾ ಕೃಷಿ ಪರಿಕರಗಳು ಅಥವಾ ಕೃಷಿಗೆ ಸಾಲ ಇತ್ಯಾದಿಗಳನ್ನು ಪಡೆಯಬಹುದಾಗಿತ್ತು.
ಇತ್ತೀಚಿಗೆ ಬೆಳೆ ವಿಮೆ ಹಾಗೂ ಕೃಷಿಗೆ ಪ್ರೋತ್ಸಾಹ ಧನ ಸರ್ಕಾರ ಕಡೆಯಿಂದ ಸಿಗುತ್ತಿದೆ ಎನ್ನುವುದು ಗೊತ್ತು ಇವುಗಳನ್ನು ಹೊರತುಪಡಿಸಿ ಹಲವಾರು ವರ್ಷಗಳಿಂದ ರೈತನಿಗಾಗಿಯೇ ಮೀಸಲಾದ ಒಂದು ವಿಶೇಷ ಯೋಜನೆಯನ್ನು ಭಾರತ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅಂಚೆ ಇಲಾಖೆ ಜಾರಿಗೆ ತಂದಿದೆ ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ.
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಜಮೆ ಆಗದವರು.? ಈ ಕೆಲಸ ಮಾಡಿ ಸಾಕು ಹಣ ಅಕೌಂಟ್ ಗೆ ಬರುತ್ತೆ.!
ಈ ಯೋಜನೆ ವಿಶೇಷತೆ ಏನೆಂದರೆ ಕಿಸಾನ್ ವಿಕಾಸ್ ಪತ್ರ ಎಂದು ರೈತನೇ ಹೆಸರನ್ನೇ ಹೊಂದಿರುವ ಈ ಯೋಜನೆಯಲ್ಲಿ ರೈತ ಹೂಡಿದ ಹಣವು ಶೀಘ್ರದಲ್ಲಿ ದುಪ್ಪಟ್ಟಾಗುತ್ತದೆ ಮತ್ತು ಅಂಚೆ ಕಚೇರಿಗೆ ಯೋಜನೆ ಆಗಿರುವುದರಿಂದ 100% ರಷ್ಟು ಹೂಡಿಕೆ ಮಾಡಿದ ಹಣಕ್ಕೆ ಭದ್ರತೆಯು ಇರುತ್ತದೆ ಇಂತಹ ವಿಶೇಷವಾದ ಯೋಜನೆ ಕುರಿತ ವಿವರ ಹೀಗಿದೆ ನೋಡಿ.
ಯೋಜನೆ ಹೆಸರು:- ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra Scheme)
ಯೋಜನೆ ಕುರಿತ ಪ್ರಮುಖ ಅಂಶಗಳು:-
* ಮೊದಲು ಹೇಳಬೇಕಾದ ಮುಖ್ಯ ವಿಷಯ ಏನೆಂದರೆ ಯೋಜನೆ ಹೆಸರೇ ಸೂಚಿಸುವಂತೆ ಈ ಯೋಜನೆಯನ್ನು ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದಲೇ ರೂಪಿಸಲಾಗಿತ್ತು ಆದರೆ ನಂತರದ ದಿನಗಳಲ್ಲಿ 10 ವರ್ಷ ವಯಸ್ಸಿನ ಮೇಲ್ಪಟ್ಟ ಭಾರತದ ಯಾವುದೇ ನಾಗರಿಕ ಈ ಯೋಜನೆ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.
* ಪ್ರತಿ ತ್ರೈಮಾಸಿಕಕೊಮ್ಮೆ ಕಿಸಾನ್ ವಿಕಾಸ್ ಪತ್ರ ಯೋಜನೆ ಬಡ್ಡಿದರವು ಪರಿಷ್ಕೃತವಾಗುತ್ತಿರುತ್ತದೆ. ಪ್ರಸ್ತುತವಾಗಿ 7.50% ಬಡ್ಡಿದರ ಅನ್ವಯವಾಗುತ್ತಿದೆ
* ಈ ಯೋಚನೆಯ ಮೆಚ್ಯುರಿಟಿ ಅವಧಿ 115 ತಿಂಗಳುಗಳು (10 ವರ್ಷಗಳು)
ಈ ಸುದ್ದಿ ಓದಿ:- ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!
* ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು 10 ವರ್ಷದಲ್ಲಿ ದುಪ್ಪಟ್ಟಾಗಿ ನಿಮ್ಮ ಕೈ ಸೇರುತ್ತದೆ ಎನ್ನುವುದೇ ಈ ಯೋಜನೆಯ ಮುಖ್ಯ ಆಕರ್ಷಣ ಸಂಗತಿಯಾಗಿದೆ. ನೀವೇನಾದರೂ ರೂ.10 ಲಕ್ಷ ಯೋಜನೆಯಡಿ ಇಂದು ಹೂಡಿಕೆ ಮಾಡಿದರೆ ಇನ್ನು 10 ವರ್ಷಗಳಲ್ಲಿ ಅದು ರೂ.20 ಲಕ್ಷ ಹಣವಾಗಿರುತ್ತದೆ.
* ಕನಿಷ್ಠ ರೂ.1000 ದಿಂದ ಗರಿಷ್ಠ ಯಾವುದೇ ಮಿತಿ ಇಲ್ಲದೆ ಈ ಯೋಜನೆಯಡಿ ಹಣ ಹೂಡಿಕೆ ಮಾಡಬಹುದು
* ರೂ.1.5 ಲಕ್ಷದವರೆಗೆ ಸೆಕ್ಷನ್ 1961ರ ಸೆಕ್ಷನ್ 80C ನಡಿ ತೆರಿಗೆ ವಿನಾಯಿತಿ ಇರುತ್ತದೆ
* 10 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಒಂಟಿಯಾಗಿ, ಜಂಟಿಯಾಗಿ ಅಥವಾ ಮೂರು ಜನರು ಒಟ್ಟಾಗಿ ಈ ಯೋಜನೆ ಖಾತೆ ತೆರೆಯಬಹುದು.
ಈ ಸುದ್ದಿ ಓದಿ:- BMTC ನೇಮಕಾತಿ 2024, 10th ಪಾಸ್ ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ ವೇತನ 25,300/-
* ಯೋಜನೆ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಲಭ್ಯವಿದೆ (ಕಿಸಾನ್ ವಿಕಾಸ್ ಪತ್ರ ಯೋಜನೆಯ ಸರ್ಟಿಫಿಕೇಟ್ ನೀಡಿ ನೀವು ಗೃಹ ಸಾಲ ಅಥವಾ ಇನ್ನಿತರ ಸಾಲಗಳನ್ನು ಯಾವುದೇ ಹಣಕಾಸು ಸಂಸ್ಥೆ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪಡೆಯಬಹುದು)
* 2 ವರ್ಷ 6 ತಿಂಗಳು ತುಂಬಿದ ಬಳಿಕ ಈ ಯೋಜನೆಯನ್ನು ಬೇಕಾದರೆ ರದ್ದು ಪಡಿಸಬಹುದು, ಆದರೆ ಕಡಿಮೆ ಬಡ್ಡಿ ನೀಡಲಾಗುತ್ತದೆ.
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ.
* ನಿಮ್ಮ ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಈ ಕೆಳಗಿನ ದಾಖಲೆಗಳನ್ನು ನೀಡಿ ಕಿಸಾನ್ ವಿಕಾಸ್ ಪತ್ರ ಖಾತೆ ತೆರೆಯಬಹುದು.
1. ಆಧಾರ್ ಕಾರ್ಡ್
2. ಪ್ಯಾನ್ ಕಾರ್ಡ್
3. ಇ-ಕೆವೈಸಿ
4. ಮೊಬೈಲ್ ನಂಬರ್