ದೇಶದಾದ್ಯಂತ ಇರುವ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲು ಇಚ್ಚಿಸುತ್ತೇವೆ. ಅದೇನೆಂದರೆ, ರೈಲ್ವೆ ಆಡಳಿತ ಮಂಡಳಿಯು (RRB) ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಲ್ಲಿ (RPF) ಖಾಲಿ ಇರುವ ಸುಮಾರು 4000ಕ್ಕೂ ಹೆಚ್ಚು ರೈಲ್ವೆ ಕಾನ್ಸ್ಟೇಬಲ್ ಹಾಗೂ ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರದಡಿಯಲ್ಲಿ ರೈಲ್ವೆ ಇಲಾಖೆಯು ಕಾರ್ಯನಿರ್ವಹಿಸುವುದರಿಂದ ಉತ್ತಮ ವೇತನದೊಂದಿಗೆ ಸರ್ಕಾರಿ ಹುದ್ದೆ ಎನ್ನುವ ಗೌರವ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳು ಸಿಗುತ್ತವೆ. ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ಸಂಪೂರ್ಣ ಗೈಡ್ಲೈನ್ಸ್ ಕೂಡ ಈ ನೋಟಿಫಿಕೇಶನ್ ನೊಂದಿಗೆ ಹೊರಡಿಸಲಾಗಿದೆ. ಆಸಕ್ತರಿಗಾಗಿ ಈ ಅಂಕಣದಲ್ಲೂ ಕೂಡ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಮಾಹಿತಿ ಬಗ್ಗೆ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಅಂಚೆ ಕಛೇರಿಯ ಈ ಯೋಜನೆಯಲ್ಲಿ, 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಡಬಲ್ ಲಾಭ
ನೇಮಕಾತಿ ಸಂಸ್ಥೆ:- ರೈಲ್ವೆ ಆಡಳಿತ ಮಂಡಳಿ (RRB)
ಉದ್ಯೋಗ ಇಲಾಖೆ:- ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RCSF)
ಹುದ್ದೆ ಹೆಸರು:-
* ಕಾನ್ಸ್ಟೇಬಲ್
* ಸಬ್ ಇನ್ಸ್ಪೆಕ್ಟರ್
ಹುದ್ದೆಗಳ ವಿವರ:-
* ಕಾನ್ಸ್ಟೇಬಲ್ – 4,208
* ಸಬ್ ಇನ್ಸ್ಪೆಕ್ಟರ್ – 452
ವೇತನ ಶ್ರೇಣಿ:-
* ಕಾನ್ಸ್ಟೇಬಲ್ – ರೂ.21,700 ರಿಂದ ಆರಂಭ
* ಸಬ್ ಇನ್ಸ್ಪೆಕ್ಟರ್ – ರೂ.35,400 ರಿಂದ ಆರಂಭ
ಉದ್ಯೋಗ ಸ್ಥಳ:- ಭಾರತದಾದ್ಯಂತ…
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಜಮೆ ಆಗದವರು.? ಈ ಕೆಲಸ ಮಾಡಿ ಸಾಕು ಹಣ ಅಕೌಂಟ್ ಗೆ ಬರುತ್ತೆ.!
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* RRB ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ನೋಟಿಫಿಕೇಶನ್ ಓದಿಕೊಂಡು ಮುಂದುವರೆಯಿರಿ
* ವೆಬ್ ಸೈಟ್ ವಿಳಾಸ:- http://www.rrbbnc.gov.in/
* ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿ
* ನಿಮ್ಮ ವರ್ಗಕ್ಕೆ ಅನುಗುಣವಾಗಿ ಸೂಚಿಸಿರುವ ಅರ್ಜಿ ಶುಲ್ಕವನ್ನು ಪಾವತಿಸಿ ಇ-ರಸೀತಿ ತಪ್ಪದೆ ಪಡೆಯಿರಿ.
* ಅರ್ಜಿ ಸಲ್ಲಿಕೆ ಯಶಸ್ವಿ ಆದ ನಂತರ ತಪ್ಪದೆ ಅರ್ಜಿ ಸ್ವೀಕೃತಿ ಕೂಡ ಪಡೆದುಕೊಳ್ಳಿ ಮುಂದಿನ ದಿನಗಳಲ್ಲಿ ಇದರ ಅವಶ್ಯಕತೆ ಬರುತ್ತದೆ.
ಈ ಸುದ್ದಿ ಓದಿ:- ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!
ಆಯ್ಕೆ ವಿಧಾನ:-
* ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ (CBT), ಕನ್ನಡ, ಕೊಂಕಣಿ ಸಿರಿದಂತೆ 13ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಎದುರಿಸಲು ಅವಕಾಶ ಇದೆ
* ನಂತರ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿ ಅರ್ಹರ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಅರ್ಜಿ ಶುಲ್ಕ:-
* SC/ST, ಮಾಜಿ ಸೈನಿಕರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ರೂ.250 (CBT ನಂತರ ಪೂರ್ತಿ ಹಿಂತಿರುಗಿಸಲಾಗುತ್ತದೆ)
* ಉಳಿದ ಅಭ್ಯರ್ಥಿಗಳಿಗೆ ರೂ.500 (CBT ನಂತರ ರೂ.400 ಹಿಂತಿರುಗಿಸಲಾಗುತ್ತದೆ)
* ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಅಥವಾ UPI ಆಧಾರಿತ ಆಪ್ ಮೂಲಕ ಪಾವತಿ ಮಾಡಬಹುದು.
ಈ ಸುದ್ದಿ ಓದಿ:- 1 ಎಕರೆ ಜಮೀನಿಗೆ ಸುತ್ತ ತಂತಿ ಬೇಲಿ ಹಾಕುವುದಕ್ಕೆ ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18 ಮೇ, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಕಾನ್ಸ್ಟೇಬಲ್ ನೋಟಿಫಿಕೇಶನ್ – https://drive.google.com/file/d/1Slg-cf2_X64B-m8rnb9OAlXFVG3b64eI/view
* ಸಬ್ ಇನ್ಸ್ಪೆಕ್ಟರ್ ನೋಟಿಫಿಕೇಶನ್ – https://drive.google.com/file/d/1L8okEPyUUQaGVXrsa4lbU6GRVNf0GU8M/view?usp=sharing