ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯಕ್ಕೆ ಬರ ಪರಿಹಾರದ ಹಣ (droight releif fund) ಮಂಜೂರಾದ ಮೇಲೆ ರಾಜ್ಯದ ರೈತನಿಗೆ ಮೇ 6ನೇ ತಾರೀಖಿನಿಂದ ತಾಲ್ಲೂಕುವಾರು ಹಂತ ಹಂತವಾಗಿ ಬರ ಪರಿಹಾರದ ಹಣ DBT ಮೂಲಕ ರೈತನ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆ.
ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದ ಉಂಟಾದ ಆರ್ಥಿಕ ನ’ಷ್ಟದಿಂದ ನೊಂದಿದ್ದ ರೈತನಿಗೆ ಈ ಪರಿಹಾರದ ಹಣವು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ನಿಜ ಆದರೆ ಎಲ್ಲಾ ರೈತರು ಕೂಡ ಈ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ತಾವು ರೈತರಾಗಿದ್ದು ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಹಾಕಿದ್ದರು ಲಕ್ಷಾಂತರ ರೈತರ ಖಾತೆಗೆ ಬರ ಪರಿಹಾರದ ಹಣ ವರ್ಗಾವಣೆ ಆಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.
ಈ ಸುದ್ದಿ ಓದಿ:- ವರ್ಷಕ್ಕೆ 50 ಲಕ್ಷ ಗಳಿಸಬಹುದಾದ ಬಿಸಿನೆಸ್, ಹಳ್ಳಿಯಲ್ಲಿ ಇರುವವರು ಹೆಣ್ಣು ಮಕ್ಕಳು ಯಾರು ಬೇಕಾದರೂ ಇದರ ಫ್ರಾಂಚೈಸಿ ಪಡೆಯಬಹುದು.!
ಇದಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಈಗಾಗಲೇ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು (Revenue Minister Krishna bairegowda) ಹಣ ವರ್ಗಾವಣೆಯಾಗದೆ ಇರಲು ಏನೆಲ್ಲ ಕಾರಣಗಳಾಗಿರಬಹುದು ಎನ್ನುವುದನ್ನು ವಿವರಣೆ ಸಹ ನೀಡಿದ್ದಾರೆ
ಮೊದಲನೇ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಮಾಡುವ ಮೊದಲೇ ರೈತರು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಡಿ ನೋಂದಾಯಿಸಿಕೊಂಡು FID ಪಡೆದಿರಬೇಕು ಎಂದು ಆಜ್ಞಾಪಿಸಲಾಗಿತ್ತು.
ಈ ಸುದ್ದಿ ಓದಿ:- ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!
ಆ ಪ್ರಕಾರವಾಗಿ ಯಾವ ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿದ್ದಾರೆ ಆ ರೈತರ ಖಾತೆಗಳಿಗೆ ಸಮಸ್ಯೆ ಇಲ್ಲದೆ ಹಣ ವರ್ಗಾವಣೆ ಆಗಿದೆ. ಆದರೆ ಪಹಣಿ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೂ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗದೆ ಇದ್ದರೆ DBT ಮೂಲಕ ಹಣ ವರ್ಗಾವಣೆ ಮಾಡಲು ಆಗುವುದಿಲ್ಲ.
ಹಾಗಾಗಿ ಯಾವ ರೈತರು ಈ ಬಗ್ಗೆ ಗೊಂದಲದಲ್ಲಿದ್ದಾರೆ ಭೂಮಿ (Bhoomi online) ಆನ್ಲೈನ್ ವೆಬ್ ಸೈಟ್ ನಲ್ಲಿ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡಿದರೆ ಯಾವ ಸಮಸ್ಯೆಯಿಂದ ನಿಮ್ಮ ಖಾತೆಗೆ ಹಣ ತಲುಪಿಲ್ಲ ಎನ್ನುವುದರ ವಿವರ ಅದರ ಮುಂದೆ ಬರುತ್ತದೆ.
ಈ ಸುದ್ದಿ ಓದಿ:- ಈ ರೈತರಿಗೆ ಮಾತ್ರ 3ನೇ ಕಂತಿನ ಬರ ಪರಿಹಾರ ಹಣ 3000 ಬಿಡುಗಡೆಯಾಗಿದೆ.!
ಒಂದು ವೇಳೆ Aadhar Seeding and NPCI Mapping ಆಗಿರದ ಕಾರಣದಿಂದಾಗಿ ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲ ಎನ್ನುವ ರೀಸನ್ ತೋರಿಸಿದರೆ ನೀವು ಮತ್ತೊಮ್ಮೆ UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ NPCI ಮ್ಯಾಪಿಂಗ್ ಆಗಿದೆಯಾ ಇಲ್ಲವೇ ಎನ್ನುವುದನ್ನು ಈ ಕೆಳಗಿನ ಹಂತಗಳನ್ನು ಪಾಲಿಸುವ ಮೂಲಕ ಪರೀಕ್ಷಿಸಿಕೊಳ್ಳಿ.
ಒಂದು ವೇಳೆ ಅದರಲ್ಲೂ NPCI ಮ್ಯಾಪಿಂಗ್ ಆಗಿಲ್ಲ ಎಂದು ತಿಳಿದು ಬಂದರೆ ನಿಮ್ಮ ಬ್ಯಾಂಕ್ ಶಾಖೆಗೆ ಬೇಟಿ ಕೊಟ್ಟು ಅರ್ಜಿ ಸಲ್ಲಿಸಿ ಜೊತೆಗೆ ಕೇಳಲಾಗುವ ದಾಖಲೆಗಳಾದ ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ NPCI ಮ್ಯಾಪಿಂಗ್ ಮಾಡಿಸಿ ಒಂದು ವಾರದೊಳಗೆ ಸಮಸ್ಯೆ ಬಗ್ಗೆ ಹರಿಯುತ್ತದೆ.
ಈ ಸುದ್ದಿ ಓದಿ:- ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ.!
NPCI ಮ್ಯಾಪಿಂಗ್ ಪರಿಶೀಲಿಸುವ ವಿಧಾನ:-
* https://myaadhar.uidai.gov.in/ ವೆಬ್ಸೈಟ್ ಗೆ ಭೇಟಿ ನೀಡಿ
* ನಿಮ್ಮ ಆಧಾರ್ ಸಂಖ್ಯೆ ಮತ್ತು ನೀಡಿರುವ ಕ್ಯಾಪ್ಚಾ ಎಂಟ್ರಿ Log in with OTP ಕ್ಲಿಕ್ ಮಾಡಿ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿ Log in ಮೇಲೆ ಕ್ಲಿಕ್ ಮಾಡಿ.
* ತಕ್ಷಣ ಸ್ಕ್ರೀನ್ ಮೇಲೆ ನಿಮ್ಮ ಆಧಾರ್ ಗೆ ಸಂಬಂಧಿಸಿದಂತೆ ಹತ್ತಾರು ಆಪ್ಷನ್ ಇರುತ್ತದೆ Bank Seeding Status ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಆಗಿದೆ ಎಂದು ಡೀಟೇಲ್ ಬರುತ್ತದೆ. ಒಂದು ವೇಳೆ Status ನಲ್ಲಿ inactive ಎಂದು ಇದ್ದರೆ ನಿಮ್ಮ ಬ್ರಾಂಕ್ ಗೆ ಭೇಟಿ ಕೊಡಿ.