ವರ್ಕ್ ಫ್ರಮ್ ಹೋಂ ಈ ರೀತಿಯ ಒಂದು ಕಾನ್ಸೆಪ್ಟ್ ಇಟ್ಟುಕೊಂಡು ಕಾರ್ಪೊರೇಟ್ ವಲಯವು ತಾವು ಇರುವ ಸ್ಥಳದಿಂದಲೇ ಕೆಲಸ ಮಾಡಬಹುದು ಎಂದು ಊಹೆಯು ಮಾಡಿರಲಿಲ್ಲ. ಆದರೆ ಬಹುಶಃ ಪ್ರಪಂಚವೇ ಇಂತಹದೊಂದು ಪರಿವರ್ತನೆಗೆ ತಯಾರಾಗಿತ್ತೋ ಏನೋ, ಕೊರೋನ ಎನ್ನುವ ಮಹಾಮಾರಿ ಪ್ರಪಂಚವನ್ನು ದಾ’ಳಿ ಮಾಡಿದ ವೇಳೆ ಇದು ಎಕ್ಸ್ಪ್ಲೋರ್ ಆಗಿ ಕಾರ್ಪೊರೇಟ್ ವಲಯ ಅನಿವಾರ್ಯವಾಗಿ ವರ್ಕ್ ಫ್ರಮ್ ಓಂ ಸೌಲಭ್ಯ ಕಲ್ಪಿಸಿ ಕೊಟ್ಟಿತು.
ದಿನ ಕಳೆಯುತ್ತಿದ್ದಂತೆ ಜನ ವರ್ಕ್ ಫ್ರಮ್ ಹೋಂ ಎನ್ನುವ ಕಾನ್ಸೆಪ್ಟ್ ಗೆ ಒಗ್ಗಿ ಹೋದರು ಎಂದರೆ ಈಗ ಕಾರ್ಪೊರೇಟ್ ವಲಯ ಮಾತ್ರವಲ್ಲದೆ ಶಾಲಾ ಕಾಲೇಜು ತರಗತಿಗಳು ಸೇರಿದಂತೆ, ಮನೆಯಲ್ಲಿ ಕುಳಿತು ಯಾವೆಲ್ಲ ಕೆಲಸಗಳನ್ನು ಮಾಡಲು ಸಾಧ್ಯ ಇದೆಯೋ ಆ ಎಲ್ಲಾ ಕೆಲಸಗಳಿಗೂ ಕೂಡ ನಾವಿದ್ದಲ್ಲಿಯೇ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳುವ ಮಟ್ಟಕ್ಕೆ ತಲುಪಿದೆ.
ಈ ರೀತಿ ಮನೆಯಲ್ಲಿ ಇದ್ದುಕೊಂಡು ಅಥವಾ ತಾವು ಇರುವ ದೂರದ ಊರುಗಳಲ್ಲಿಯೇ ಇದ್ದುಕೊಂಡು ಅಲ್ಲಿಂದಲೇ ಕಂಪೆನಿಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಅವರ ಅದೃಷ್ಟದ ಬಾಗಿಲು ಓಪನ್ ಆಗಿದೆ. ಭಾರತದಲ್ಲಿ ಪ್ರತಿಷ್ಠಿತ MNC ಕಂಪನಿ ಎಂದು ಕರೆಸಿಕೊಂಡಿರುವ ಕರ್ನಾಟಕ ಮೂಲದ ಇನ್ಫೋಸಿಸ್ ಸಂಸ್ಥೆಯು ಬೆಂಗಳೂರು, ಹೈದರಾಬಾದ್, ಮುಂಬೈ ಮುಂತಾದ ದೂರದ ಸ್ಥಳದಲ್ಲಿ ಇದ್ದುಕೊಂಡು.
ಅಲ್ಲಿಂದಲೇ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಂದ ಬಿಜಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ ಕೆಲಸ ಮಾಹಿತಿಯನ್ನು ಕೊಡುವ ಆಪ್ ಎಂದೀ ಕರೆಸಿಕೊಂಡ ಲಿಂಕ್ಡ್ ಇನ್ ಅಲ್ಲಿ ಇದರ ಮಾಹಿತಿ ಇದ್ದು, ಇನ್ಫೋಸಿಸ್ ಕೂಡ ತನ್ನ ಅಧಿಕೃತ ವೆಬ್ಸೈಟ್ ಅಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಇನ್ಫೋಸಿಸ್ ಕಂಪನಿಯು ಲಿಂಕ್ಡ್ ಇನ್ ಹಾಗೂ ಸ್ವತಃ ತನ್ನ ವೆಬ್ಸೈಟ್ ನಲ್ಲೂ ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಷನ್ ಆಫೀಸರ್ ಸೇರಿದಂತೆ ಇನ್ನೂ ಅನೇಕ ಹುದ್ದೆಗಳು ಖಾಲಿ ಇರುವ ಬಗ್ಗೆ ತಿಳಿಸಿ ವೆಬ್ಸೈಟ್ ನಲ್ಲಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಿದೆ. ಅವುಗಳಲ್ಲಿ ಬಿಸಿನೆಸ್ ಅನಲಿಸ್ಟ್ ಹಾಗೂ Apigee ಸಲಹೆಗಾರ ಹುದ್ದೆಗಳಿಗೆ ವರ್ಕ್ ಫ್ರಮ್ ಹೋಂ ಆಫರ್ ನೀಡಿದೆ, ಈ ಎರಡು ಹುದ್ದೆಗಳಿಗೂ ಸಹ ಉತ್ತಮವಾದ ಪ್ಯಾಕೇಜ್ ಅನ್ನು ಕೂಡ ಆಫರ್ ಮಾಡಿದೆ.
ವರ್ಕ್ ಫ್ರಮ್ ಹೋಂ ಕೆಲಸಗಳನ್ನು ಇಷ್ಟಪಡುವ ಹಾಗೆಯೇ ಒಳ್ಳೆಯ ಕಂಪನಿಗಳಲ್ಲಿ ಉತ್ತಮ ಪೋಸ್ಟ್ ಅಲ್ಲಿ ಉದ್ಯೋಗ ಮಾಡಲು ಬಯಸುವ ಉದ್ಯೋಗಾಸಕ್ತರಿಗೆ ಇನ್ಫೋಸಿಸ್ ನೀಡಿರುವ ಜಾಬ್ ಆಫರ್ ಸುವರ್ಣ ಅವಕಾಶವಾಗಿದೆ. ಆಸಕ್ತರು ಅರ್ಹತೆ, ಸಂಬಳ ಅನುಭವ ಅಥವಾ ಕೆಲಸದ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಇನ್ಫೋಸಿಸ್ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
ಇನ್ನೂ ಬಿಸಿನೆಸ್ ಅನಲಿಸ್ಟ್ ಹುದ್ದೆಗಳಿಗೂ ಸಹ ವರ್ಕ್ ಫ್ರಮ್ ಹೋಂ ಆಫರ್ ನೀಡಿದ್ದು, ಈ ಹುದ್ದೆಗಳಿಗೆ ಬರೋಬ್ಬರಿ 8 ಲಕ್ಷ ರೂಪಾಯಿಗಳವರೆಗೂ ಸಂಬಳ ನೀಡುವುದಾಗಿ ತಿಳಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫ್ರೆಷರ್ ಗಳಿಗೂ ಕೂಡ ಅವಕಾಶ ನೀಡಲಾಗಿದೆ. ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಾ ಇರುವವರಿಂದ 5 ವರ್ಷಗಳವರೆಗೆ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಕಾಶವನ್ನು ಅವಶ್ಯಕತೆ ಇದ್ದವರು ಸದುಪಯೋಗ ಪಡಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕೂಡ ಈ ಉದ್ಯೋಗ ಮಾಹಿತಿ ಬಗ್ಗೆ ತಿಳಿಸಿ.