ಕೆಮ್ಮು, ಕಫ ಈ ರೀತಿ ಆರೋಗ್ಯ ಸಮಸ್ಯೆಗಳು ವಾತಾವರಣ ಸ್ವಲ್ಪ ಬದಲಾದರೂ ಕೂಡ ಬರುತ್ತವೆ. ಜೊತೆಗೆ ಇವು ಬಂದರೆ ಕನಿಷ್ಠ ವಾರಗಟ್ಟಲೆ ಕಾಡುತ್ತವೆ. ಯಾವುದೇ ಸಿರಪ್ ತೆಗೆದುಕೊಂಡರು, ಆಂಟಿಬಯೋಟಿಕ್ ತೆಗೆದು ಕೊಂಡರೂ, ಮಾತ್ರೆಗಳನ್ನು ಸೇವಿಸಿದರು ಕೂಡ ನಿಮಗೆ ಸಮಾಧಾನಕರವಾದ ರಿಸಲ್ಟ್ ಸಿಗಲಿಲ್ಲ ಎಂದರೆ ಈಗ ನಾವು ಹೇಳುವ ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ.
ಯಾಕೆಂದರೆ ಹಿಂದಿನ ಕಾಲದಲ್ಲೆಲ್ಲಾ ನಮ್ಮ ಹಿರಿಯರು ಕೆಮ್ಮು, ಕಫ, ಶೀತ, ಜ್ವರದಂತಹ ಸಮಸ್ಯೆಗೆ ಯಾವುದೇ ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ, ಬದಲಾಗಿ ಮನೆಯಲ್ಲೇ ಸಿಗುವ ಕೆಲವು ಔಷಧಿ ಗುಣವಿರುವ ಆಹಾರ ಪದಾರ್ಥಗಳಿಂದ ಮನೆ ಮದ್ದು ಮಾಡಿ ಸೇವಿಸುತ್ತಿದ್ದರು. ಮತ್ತು ಶೀಘ್ರವಾಗಿ ಅದು ರಿಸಲ್ಟ್ ಕೂಡ ಕೊಡುತ್ತಿತ್ತು ಇಂದು ಈ ಅಂಕಣದಲ್ಲಿ ಅದೇ ರೀತಿ ಸುಲಭವಾಗಿ ಮಾಡಬಹುದಾದಂತಹ ಪರಿಣಾಮಕಾರಿಯಾಗಿ ಕೆಲಸ ಮಾಡುವ ಒಂದು ಮನೆಮದ್ದಿನ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.
ಮನೆಯಲ್ಲಿ ಮಕ್ಕಳಿಗೆ ಶೀತ ಆದಾಗ ಕೆಮ್ಮು, ಕಫ ಕಾಡುತ್ತಿದ್ದಾಗ ಈಗ ನಾವು ಹೇಳುವ ಈ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡು ಮನೆ ಮದ್ದು ಮಾಡಿ. ಒಂದು ವೇಳೆ ನೀವು ಮನೆಯಲ್ಲಿರುವ ದೊಡ್ಡವರಿಗೆ ಔಷಧಿ ಮಾಡಿ ಕೊಡುವುದಾದರೆ ಇದರ ಪ್ರಮಾಣವನ್ನು ಸ್ವಲ್ಪ ಜಾಸ್ತಿ ಮಾಡಿಕೊಳ್ಳಬಹುದು. ಮೊದಲಿಗೆ ಅಡುಗೆಗೆ ಬಳಸುವ ಸಣ್ಣ ಈರುಳ್ಳಿಯನ್ನು ಒಂದು ಹಿಡಿಯಷ್ಟು ತೆಗೆದುಕೊಳ್ಳಿ.
ಅವುಗಳ ಸಿಪ್ಪೆಯನ್ನು ಚೆನ್ನಾಗಿ ಸುಲಿದು ಅದನ್ನು ಒಂದು ಕುಟ್ಟಣಿಗೆಯಲ್ಲಿ ಹಾಕಿ ಚೆನ್ನಾಗಿ ಜಜ್ಜಿ ಈ ರೀತಿ ಮಾಡುವಾಗ ಯಾವುದೇ ಕಾರಣಕ್ಕೂ ಇದಕ್ಕೆ ನೀರನ್ನು ಬೆರೆಸಬಾರದು ನೀವು ಒಂದು ಕಲ್ಲಿನ ಮೇಲೆ ಹಾಕಿಕೊಂಡು ಈರುಳ್ಳಿಯನ್ನು ಅರೆಯುವ ಪ್ರಯತ್ನ ಕೂಡ ಮಾಡಬಹುದು. ಸ್ವಲ್ಪ ನುಣ್ಣಗಾದ ಮೇಲೆ ಅದನ್ನು ಒಂದು ಬಿಳಿ ಬಣ್ಣದ ಶುದ್ಧವಾದ ಕಾಟನ್ ಬಟ್ಟೆಗೆ ಹಾಕಿ ಹಿಂಡಿ, ಕನಿಷ್ಠ ಒಂದರಿಂದ ಒಂದುವರೆ ಚಮಚದಷ್ಟು ಈರುಳ್ಳಿ ರಸ ನಿಮಗೆ ಸಿಗಬೇಕು.
ನಂತರ ಆ ಈರುಳ್ಳಿ ರಸಕ್ಕೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮತ್ತು ಒಂದು ಚಮಚದಷ್ಟು ಶುದ್ಧವಾದ ಜೇನುತುಪ್ಪವನ್ನು ಸೇರಿಸಿ. ಈಗ ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಔಷಧಿಯನ್ನು ಮಕ್ಕಳಿಗೆ ಸೇವಿಸಲು ಕೊಡಿ. ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಬಾರಿ ಮತ್ತು ಕೆಮ್ಮು ಕಫ ಹೆಚ್ಚಿಗೆ ಇದ್ದಾಗ ರಾತ್ರಿ ಮಲಗುವ ವೇಳೆ ಕೂಡ ಒಂದು ಬಾರಿ ಈ ರೀತಿ ಮನೆ ಮದ್ದನ್ನು ಮಾಡಿ ಮಕ್ಕಳಿಗೆ ಕುಡಿಸಿ.
ಹೀಗೆ ಮಾಡುವುದರಿಂದ ಬಹಳ ಬೇಗ ಮಕ್ಕಳಿಗಾಗಿರುವ ಕೆಮ್ಮು ಹೋಗುತ್ತದೆ, ಕಫ ಕೂಡ ಕೀಳುತ್ತದೆ. ದೊಡ್ಡವರು ಕೂಡ ಈ ಪ್ರಮಾಣದನ್ನು ಸ್ವಲ್ಪ ಹೆಚ್ಚಿಗೆ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಸೇವಿಸಿದರೆ ಅವರು ಸಹ ಆದಷ್ಟು ಬೇಗ ಕೆಮ್ಮು ಕಫದಿಂದ ಮುಕ್ತಿ ಪಡೆಯುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಹೊರಗೆ, ಉದ್ಯೋಗಕ್ಕೆ ಹೋಗುವವರು ಮಳೆಯಲ್ಲಿ ಕೆಲಸ ಸಮಯ ಓಡಾಡುವ ಪರಿಸ್ಥಿತಿ ಬಂದಾಗ ಪದೇಪದೇ ಈ ರೀತಿ ಶೀತವಾಗಿ ಅದು ಕೆಮ್ಮು ಕಫ ಆಗುತ್ತದೆ.
ಆ ರೀತಿ ಎಲ್ಲ ಸಮಯದಲ್ಲೂ ಕೂಡ ಇದೇ ರೀತಿ ಮನೆಮದ್ದುಗಳನ್ನು ಮಾಡಿಕೊಡುವುದರಿಂದ ಕುಟುಂಬದವರ ಆರೋಗ್ಯವನ್ನು ಕಾಪಾಡಬಹುದು. ಇಂತಹ ಉಪಯುಕ್ತ ಮನೆ ಮದ್ದಿನ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಪ್ಪದೆ ಮಾಹಿತಿ ತಿಳಿಸಿಕೊಡಿ.