ನಮ್ಮ ರಾಜ್ಯದಲ್ಲಿ ಹಲವಾರು ನಿಗಮಗಳಿವೆ. ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ನಿಗಮ, ಅಲ್ಪಸಂಖ್ಯಾತರ ನಿಗಮ, ಇತ್ಯಾದಿಗಳು. ಇವುಗಳ ಸ್ಥಾಪನೆಯ ಮೂಲ ಉದ್ದೇಶ ತಮ್ಮ ವರ್ಗದಲ್ಲಿರುವ ಅಸಹಾಯಕರಿಗಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸಿ ಸರ್ಕಾರದ ನೆರವನ್ನು ಕೊಡಿಸುವುದು.
ಈ ರೀತಿಯ ನಿಗಮಗಳಿಂದ ವಿದ್ಯಾರ್ಥಿಗಳಿಗೆ, ರೈತರಿಗೆ, ಉದ್ಯಮ ಶುರು ಮಾಡುವ ಯುವ ಜನತೆಗೆ, ಮಹಿಳೆಯರಿಗೆ ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ 2020ರಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಬಹುಸಂಖ್ಯಾತರಾಗಿದ್ದರೂ ಕೂಡ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಶೇಕಡ 50%ಕ್ಕಿಂತ ಹಿಂದುಳಿದಿದ್ದಾರೆ.
ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?
ಹಾಗಾಗಿ ಇತರೆ ಮುಂದುವರೆದ ಸಮಾಜದೊಂದಿಗೆ ಸರಿಸಮವಾಗಿ ಬೆಳೆಸಲು ನಿಗಮವನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷವೂ ಕೂಡ ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.
ಈ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿ ಅರ್ಹರಾದ ಫಲಾನುಭವಿಗಳಿಗೆ ಅವರ ಬ್ಯಾಂಕ್ ಖಾತೆಗೆ DBT ಮೂಲಕ ಯೋಜನೆಯ ಅನುದಾನವನ್ನು ವರ್ಗಾಯಿಸಲಾಗುತ್ತದೆ. ಅಂತೆಯೇ 2023-24ನೇ ಸಾಲಿನಲ್ಲಿ ನಿಗಮದ ವತಿಯಿಂದ ಲಭ್ಯವಿರುವ ಕೆಲ ಯೋಜನೆಗಳ ಬಗ್ಗೆ ವಿವರ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂಪಾಯಿ ನೀಡುವ ಪಿಂಚಣಿ ಯೋಜನೆ ಜಾರಿ.!
ಯೋಜನೆಗಳು:-
● ಬಸವ ಬೆಳಗು ಯೋಜನೆ:-
ಈ ಯೋಜನೆ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಿಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಸೂಕ್ತ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ, ಕನಿಷ್ಠ 1 ಲಕ್ಷದಿಂದ ಗರಿಷ್ಠ 5 ಲಕ್ಷದವರೆಗೆ ವಾರ್ಷಿಕ 2% ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ.
● ವಿದೇಶ ವಿದ್ಯಾ ವಿಕಾಸ:-
ಈ ಯೋಜನೆಯಡಿ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಹೋಗಿ ಉನ್ನತ ವಿದ್ಯಾಭ್ಯಾಸಕ್ಕೆ ಪಡೆಯಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದರೆ ಅವರಿಗೆ ಷರತ್ತಿಗೆ ಒಳಪಟ್ಟ ನಿಬಂಧನೆಗಳ ಜೊತೆ ಮರುಪಾವತಿಗೆ ಅರ್ಹವಾದ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂಪಾಯಿ ನೀಡುವ ಪಿಂಚಣಿ ಯೋಜನೆ ಜಾರಿ.!
ಜೀವ ಜಲ ನೀರಾವರಿ ಯೋಜನೆ:-
ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಗಂಗಾ ಕಲ್ಯಾಣ ಯೋಜನೆಯಲ್ಲಿ ವೀರಶೈವ ಲಿಂಗಾಯತ ನಿಗಮದ ಮೂಲಕ ಈ ಸಮಾಜಕ್ಕೆ ಸೇರಿದ ರೈತನಿಗೆ ತನ್ನ ಜಮೀನಿಗೆ ತೆರೆದ ಬಾವಿ ಅಥವಾ ಕೊಳವೆಬಾವಿ ಸೌಲಭ್ಯ ಪಡೆಯಲು ಸಬ್ಸಿಡಿ ರೂಪದ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
● ಕಾಯಕ ಕಿರಣ ಯೋಜನೆ:-
ವೀರಶೈವ ಲಿಂಗಾಯತರು ಆರಾಧ್ಯ ದೈವವಾದ ಜಗಜ್ಯೋತಿ ಶ್ರೀ ಬಸವೇಶ್ವರರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಈ ಸಮುದಾಯಕ್ಕೆ ಸೇರಿದ ಯುವ ಜನತೆ ಸ್ವಂತವಾಗಿ ಉದ್ಯಮವನ್ನು ಆರಂಭಿಸಲು ಇಚ್ಛೆ ಪಟ್ಟರೆ ಘಟಕ ವೆಚ್ಚಕ್ಕೆ ಉಂಟಾಗುವ ಖರ್ಚಿಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸಿಗುತ್ತದೆ.
● ಭೋಜನಾಲಯ ಕೇಂದ್ರ ಸ್ಥಾಪನೆ:-
ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ್ದ ಕುಟುಂಬಗಳು ಹೋಟೆಲ್ ಅಥವಾ ಖಾನಾವಳಿ ಆರಂಭಿಸುವುದಾದರೆ ಅದಕ್ಕೂ ಕೂಡ ನಿಗಮದ ವತಿಯಿಂದ ಅನುಕೂಲಗಳಿವೆ. ಪ್ರಯೋಜನವನ್ನು ಪಡೆದುಕೊಂಡು ಹೋಟೆಲ್ ಉದ್ಯಮದಲ್ಲಿ ಅವರು ಯಶಸ್ವಿಯಾಗಬಹುದು.
● ವಿಭೂತಿ ಘಟಕ ನಿರ್ಮಾಣ:-
ವಿಭೂತಿ ಘಟಕ ನಿರ್ಮಾಣಕ್ಕೆ ಕೂಡ ನಿಗಮದ ವತಿಯಿಂದ ಭಾರಿ ಬೆಂಬಲ ಇದೆ. ನಿಗಮಕ್ಕೆ ಸಂಬಂಧಪಟ್ಟ ರೂಪುರೇಶೆಗಳನ್ನು ತಯಾರಿಸಿ ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸುವುದರ ಮೂಲಕ ನೆರವು ಪಡೆಯಬಹುದು.
ಜೀವಜಲ ಯೋಜನೆ, ಉಚಿತ ಕೊಳವೆಬಾವಿ ಸೌಲಭ್ಯಕ್ಕೆ ಸಣ್ಣ ರೈತರಿಗೆ 4.75 ಲಕ್ಷ ಸಹಾಯಧನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
● ಸ್ವಾವಲಂಬಿ ಸಾರಥಿ ಯೋಜನೆ:-
ನಾಲ್ಕು ಚಕ್ರದ ಎಲ್ಲೋ ಬೋರ್ಡ್ ಗಳ ಹೊಂದಿರುವ ವಾಹನಗಳನ್ನು ಖರೀದಿಸಲು ಸರ್ಕಾರ ವತಿಯಿಂದ ಬಾರಿ ದೊಡ್ಡ ಸಬ್ಸಿಡಿ ಸೌಲಭ್ಯ ಸಿಗುತ್ತದೆ. ಯಾವುದೇ ಕಾರಣಕ್ಕೂ ಈ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಈ ಅವಕಾಶವನ್ನು ಬಿಡದೆ ಸದುಪಯೋಗಪಡಿಸಿಕೊಳ್ಳಿ.
ಈ ಮೇಲೆ ತಿಳಿಸಲಾದ ಎಲ್ಲ ಯೋಜನೆಗಳಿಗೂ ಕೂಡ ನಿಗಮವು ಕೆಲ ಅರ್ಹತಾ ಮನದಂಡಗಳನ್ನು ರೂಪಿಸಿದೆ. ಅವುಗಳನ್ನು ಪೂರೈಸುವವನು ಮತ್ತು ಅದಕ್ಕೆ ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು. ಅರ್ಹ ಫಲಾನುಭವಿಗಳಿಗೆ ನಿಗಮದ ವತಿಯಿಂದ ನೆರವು ಸಿಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ
ವೆಬ್ಸೈಟ್ ವಿಳಾಸ:- https://kvldcl.karnataka.gov.in