ಮೇ 1 ಕಾರ್ಮಿಕರ ದಿನಾಚರಣೆ, ಈ ದಿನದಂದು ಸರ್ಕಾರದ ವತಿಯಿಂದ ಎಲ್ಲಾ ಕಾರ್ಮಿಕರಿಗೂ ಶುಭಾಶಯಗಳೊಂದಿಗೆ ಸಿಹಿ ಸುದ್ದಿ ಕೂಡ ಇದೆ. ಅದೇನೆಂದರೆ, ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಇಲಾಖೆಯಿಂದ ಲೇಬರ್ ಕಾರ್ಡ್ (Labour Card) ಪಡೆದಿದ್ದಂತಹ ಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ಆರೋಗ್ಯ, ಶಿಕ್ಷಣ, ಪಿಂಚಣಿಗೆ ಸೇರಿದಂತೆ ವಿಶೇಷ ಸವಲತ್ತುಗಳು ಸಿಗುತ್ತಿವೆ ಎನ್ನುವ ವಿಚಾರವು ಎಲ್ಲರಿಗೂ ತಿಳಿದಿದೆ.
ಇದರಲ್ಲಿ ಸದ್ಯಕ್ಕೆ ವಿಚಾರವೇನೆಂದರೆ, ಈಗ ಸರ್ಕಾರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ನೀಡುವುದಕ್ಕೆ ಅರ್ಜಿ ಆಹ್ವಾನಿಸಿ ಇದಕ್ಕೆ ಸಂಬಂಧಪಟ್ಟ ಪ್ರಕಟಣೆಯನ್ನು ಹೊರಡಿಸಿದೆ. 2023-24 ನೇ ಸಾಲಿನ ಸ್ಕಾಲರ್ಶಿಪ್ (Scholarship) ಪಡೆಯಲು ಅರ್ಹರಾಗಿರುವ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಬಹುದು. ಇದಕ್ಕಿರುವ ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಇತ್ಯಾದಿ ವಿವರಕ್ಕಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- ಮೇ 1 ರಿಂದ 4 ಹೊಸ ರೂಲ್ಸ್ ಜಾರಿ.! ಗ್ಯಾಸ್, ಬ್ಯಾಂಕ್ ಅಕೌಂಟ್, ವಾಹನ ಇರುವವರು ತಪ್ಪದೆ ತಿಳಿದುಕೊಳ್ಳಿ.!
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ಲೇಬರ್ ಕಾರ್ಡ್ ಎನ್ನುವ ಕಾನ್ಸೆಪ್ಟ್ ಜಾರಿಗೆ ತಂದಿತು. ಹಾಗಾಗಿ ಇದು ನಮ್ಮ ರಾಜ್ಯದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ದೇಶದ ಗಡಿಯೊಳಗೆ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರಲ್ಲಿ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಕಾರ್ಮಿಕರಾಗಿರಬೇಕು ಮತ್ತು ಕಾರ್ಮಿಕರ ಕಾರ್ಡ್ ಹೊಂದಿರಬೇಕು( ಕಾರ್ಮಿಕರ ಕಾರ್ಡ್ ನಲ್ಲಿ ಕುಟುಂಬದ ವಿವರದ ವಿಭಾಗದಲ್ಲಿ ವಿದ್ಯಾರ್ಥಿ ಹೆಸರು ಕೂಡ ಸೇರಿರಬೇಕು).
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು
* ಹತ್ತನೇ ತರಗತಿ, PUC, ಡಿಪ್ಲೋಮಾ, ITI, ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಗೆ ಅನುಗುಣವಾಗಿ ಈ ಸ್ಕಾಲರ್ಶಿಪ್ ಪಡೆಯುತ್ತಾರೆ.
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ವಾರ್ಷಿಕವಾಗಿ 8 ಲಕ್ಷ ಮೀರಿರಬಾರದು
* ಒಂದು ಲೇಬರ್ ಕಾರ್ಡ್ ನಲ್ಲಿ ಆ ಕುಟುಂಬದ ಒಬ್ಬ ಮಗ ಅಥವಾ ಮಗಳು ಮಾತ್ರ ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಬಗ್ಗೆ ಪುರಾವೆಗಾಗಿ ಪೋಷಕರ ಲೇಬರ್ ಕಾರ್ಡ್
* ಪೋಷಕರ ಆಧಾರ್ ಕಾರ್ಡ್
* ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ಧೃಡೀಕರಣ ಪತ್ರ
* ಪ್ರಸಕ್ತ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪುರಾವೆಗಾಗಿ ವ್ಯಾಸಂಗ ಪ್ರಮಾಣ ಪತ್ರ ಅಥವಾ ಶಾಲೆಗೆ ದಾಖಲಾಗಿ ಶುಲ್ಕ ಪಾವತಿ ಮಾಡಿರುವ ರಸೀದಿ ಅಥವಾ ಕಾಲೇಜಿನಲ್ಲಿ ನೀಡಿರುವ ID ಕಾರ್ಡ್
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿ ಹತ್ತಿರದಲ್ಲಿರುವ ಯಾವುದೇ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು
* ಅಥವಾ ನೀವೇ ನೇರವಾಗಿ ಅರ್ಜಿ ಸಲ್ಲಿಸುವುದಾದರೆ https://klwbapps.karnataka.gov.in/ ಲಾಗಿನ್ ಆಗಿ
* ಲೇಬರ್ ಕಾರ್ಡ್ ಸ್ಕಾಲರ್ಶಿಪ್ ವಿಭಾಗಕ್ಕೆ ಹೋಗಿ ಅರ್ಜಿ ನಮೂನೆ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಒದಗಿಸಿ ಅಪ್ಲೈ ಮಾಡಬಹುದು
* ಯಾವುದೇ ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31.05.2024.