ಹಳ್ಳಿಗಳಲ್ಲಿ ಇರುವವರೇ ಏನು ಆದಾಯ ಇಲ್ಲ ಎಂದು ನಗರ ಪ್ರದೇಶಗಳನ್ನು ಸೇರುತ್ತಿರುವ ಈ ಕಾಲದಲ್ಲಿ ಹುಟ್ಟಿದಾಗಲಿಂದಲೂ ಕೂಡ ಬೆಂಗಳೂರಿನಲ್ಲಿಯೇ ಬೆಳೆದು ವಿದ್ಯಾಭ್ಯಾಸ ಮಾಡಿ. ನಂತರ ಸಿಟಿಯ ರೋಟೆಟ್ ಲೈಫ್ ತುಂಬಾ ಆಯಾಸದಾಯಕ ಎನಿಸಿದ ಕಾರಣ ಟೆನ್ಶನ್ ಫ್ರೀ ಆಗಿ ಹಳ್ಳಿಯಲ್ಲಿ ಬದುಕಬೇಕು ಎಂದು ನಿರ್ಧರಿಸಿದ ಕುಟುಂಬ ಒಂದು.
ಹಾಸನದ ಬಳಿ 7 ಎಕರೆ ಜಮೀನು ಖರೀದಿಸಿ ಮನೆ ಬಳಕೆಗೆ ಹಾಲು ಬೇಕು ಎಂದು ಖರೀದಿಸಿದ ಒಂದು ಹಸುವಿನಿಂದ ಸಿಕ್ಕ ಆದಾಯ ನೋಡಿ ಹೈನುಗಾರಿಕೆಯನ್ನು ತಮ್ಮ ಕುಟುಂಬದ ಆದಾಯ ಮೂಲವನ್ನಾಗಿ ಬದಲಾಯಿಸಿಕೊಂಡು ತಿಂಗಳಿಗೆ ಎಲ್ಲಾ ಖರ್ಚು ಕಳೆದು ಒಂದು ಲಕ್ಷಕ್ಕಿಂತ ಹೆಚ್ಚು ಹಣ ಉಳಿಸುತ್ತಿದ್ದಾರೆ. ಈ ಕಥೆಯು ರಾಜ್ಯದ ಬಹುತೇಕ ಯುವ ಜನತೆಗೆ ಸ್ಪೂರ್ತಿ ಆಗಬಹುದು ಹಾಗಾಗಿ ತಪ್ಪದೆ ಈ ಯುವ ರೈತ ಹೈನುಗಾರಿಕೆ ಬಗ್ಗೆ ನೀಡಿದ ಸಲಹೆಗಳನ್ನು ಆಲಿಸಿರಿ.
ಇವರು ಹೇಳುವುದೇನೆಂದರೆ, ನಮಗೆ ಒಂದು ದಿನವೂ ಕೂಡ ಹಸು ಸಾಕಿ ಗೊತ್ತಿರಲಿಲ್ಲ ಅಂಗಡಿಯಿಂದ ಹಾಲಿನ ಪ್ಯಾಕೆಟ್ ತರುತ್ತಿದ್ದೆವು ಇಲ್ಲಿ ಸಿಟಿ ಬಿಟ್ಟು ಹಳ್ಳಿ ಸೇರದ ಮೇಲೆ ಮನೆ ಬಳಕೆಗೆ ಎಂದು ಒಂದು ಮಲೆನಾಡು ಗಿಡ್ಡ ತಂದ ಮೇಲೆ ನಮಗೆ ಇದರಿಂದಲೂ ಕೂಡ ಹಣ ಗಳಿಸಬಹುದು ಎನ್ನುವುದು ಅರ್ಥವಾಯಿತು.
ಈ ಸುದ್ದಿ ಓದಿ:- ಮಾರ್ಡನ್ ಅಗ್ರಿಕಲ್ಚರ್ ಟೆಕ್ನಿಕ್ ಬಳಸಿಕೊಂಡು ದ್ರಾಕ್ಷಿ ಬೆಳೆಯುತ್ತಿರುವ ರೈತ, ಈ ತಳಿಯಿಂದ ಎಕರೆಗೆ 10 ಲಕ್ಷ ಲಾಭ.!
ಹೀಗೆ ವರ್ಷದಿಂದ ವರ್ಷಕ್ಕೆ ಒಂದೊಂದು ಕಲಿಯುತ್ತಾ ಇಂದು ಬಹಳ ಸಂತೋಷವಾಗಿ ಆರಾಮಾಗಿ ಬೆಳಗ್ಗೆ ಹಾಗೂ ಸಂಜೆ ಮೂರು ಮೂರು ಗಂಟೆ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿರುವುದು ಜೊತೆಗೆ ಪ್ರಕೃತಿ ಜೊತೆ ಹೊಂದಿಕೊಂಡು ಬದುಕುತ್ತಿರುವುದು ಬಹಳ ಸಂತೋಷ ತಂದಿದೆ ಎನ್ನುತ್ತಾರೆ ಇವರು.
ಇನ್ನು ಹಸು ಸಾಕುವುದರ ಬಗ್ಗೆ ಇವರು ನೀಡುವ ಟಿಪ್ಸ್ ಏನೆಂದರೆ ಹಸುಗಳಿಗೆ ಮೂಗುದಾರ ಹಾಕಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಹೀಗೆ ಮಾಡಿದರೆ ಹಸುವಿನ ಎಲ್ಲಾ ಕಾನ್ಸಂಟ್ರೇಶನ್ ಮೂಗಿನ ಮೇಲೆ ಇರುತ್ತದೆ ಹಾಗಾಗಿ ಅವಶ್ಯಕತೆ ಇರುವಾಗ ಮಾತ್ರ ಈ ರೀತಿ ಮಾಡಬೇಕು ಬಾಕಿ ಸಮಯದಲ್ಲಿ ಫ್ರೀ ಆಗಿ ಬಿಟ್ಟರೆ ಅವು ಆರೋಗ್ಯವಾಗಿ ಆನಂದವಾಗಿರುತ್ತದೆ.
ನೀವು ಈ ಪ್ರಯೋಗ ಮಾಡಿ ನೋಡಿ ನಿಮ್ಮ ಹಸು ಹಿಂದೆ ಕೊಡುತ್ತಿದ್ದ ಇಳುವರಿಗಿಂತ ಹೆಚ್ಚು ಹಾಲು ಕೊಡುತ್ತದೆ ಜೊತೆಗೆ ನಮಗೆ ಬರುವ ಆದಾಯದಲ್ಲಿ ಹಸುವಿಗೆ ಕೂಡ ಖರ್ಚು ಮಾಡಬೇಕು. ಇಂಡಿ, ಫೀಡ್ಸ್ ಎಲ್ಲವೂ ಕೂಡ ಕೊಡಬೇಕು ಆದರೆ ಅದು ಸಮತೋಲನ ಆಹಾರವಾಗಿರಬೇಕು.
ಈ ಸುದ್ದಿ ಓದಿ:- ಒಂದು ಕ್ಯಾಪ್ಸೂಲ್ ಒಂದು ಮೂಟೆ ಗೊಬ್ಬರಕ್ಕೆ ಸಮ, ಕೇವಲ ರೂ.100 ರ ಈ ಕ್ಯಾಪ್ಸೂಲ್ ನಿಂದ ನಿಮ್ಮ ಬೆಳೆಯ ಇಳುವರಿ ದುಪ್ಪಟ್ಪಾಗುತ್ತದೆ.!
ಹಸು ಹಾಲು ಕೊಡುವಾಗ ಕೊಡುವುದು ಅದು ಗರ್ಭ ಧರಿಸಿದ ಸಮಯದಲ್ಲಿ ನಿಲ್ಲಿಸುವುದು ಈ ರೀತಿ ವ್ಯತ್ಯಾಸ ಮಾಡಬಾರದು ಯಾವಾಗಲೂ ಸಮತೋಲನ ಆಹಾರ ಕೊಟ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈ ವಿಷಯದಲ್ಲಿ ರೈತರಿಗೆ ಹೇಳುವ ಕಿವಿಮಾತು ಏನೆಂದರೆ ಇಂಡಿ ಬೆಲೆ ಹೆಚ್ಚಾಗಿದೆ ಅದರ ಬದಲು ಗೊಬ್ಬರದ ಗಿಡ ಎನ್ನುವ ಗಿಡ ಸಿಗುತ್ತದೆ.
ಅದು ಕಡಿಮೆ ನೀರಲಿ ಚೆನ್ನಾಗಿ ಬೀಳುತ್ತದೆ ನಿಮ್ಮ ಹೊಲಗದ್ದೆಗಳಲ್ಲಿ ಅದನ್ನು ಬೆಳೆಸಿ ಆ ಸೊಪ್ಪು ಹಾಕಿ ಇದರಲ್ಲಿ ಹಸುವಿನ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಇವೆ ಜೊತೆಗೆ ಅದು ಹೀಟ್ ಗೆ ಬಂದಾಗ ಆರೈಕೆ ಮಾಡಿ ನೋಡಿಕೊಂಡು ಕ್ರಾಸ್ ಮಾಡಿಸಬೇಕು. ಎಲ್ಲರೂ ಹಾಲು ಕರೆದ ಮೇಲೆ ಅದಕ್ಕೆ ಹುಲ್ಲು ಸೊಪ್ಪು ಹಾಕುತ್ತಾರೆ ಇದು ತಪ್ಪು.
ಮೊದಲಿಗೆ ಅದಕ್ಕೆ ಆಹಾರ ಕೊಟ್ಟು ನಂತರ ಹಾಲು ಕರೆದರೆ ಅದು ಸುಸ್ತಾಗುವುದಿಲ್ಲ ಜೊತೆಗೆ ಅದು ಕೂಡ ನೆಮ್ಮದಿಯಾಗಿ ನಿಂತುಕೊಳ್ಳುತ್ತದೆ. ಹೀಗೆ ಸಣ್ಣ ಪುಟ್ಟದನ್ನು ಪ್ರತಿಯೊಂದು ಅರ್ಥ ಮಾಡಿಕೊಂಡು ಅನುಸರಿಸಿಕೊಂಡು ಹೋದರೆ ಹೈನುಗಾರಿಕೆ ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲ ಎನ್ನುತ್ತಾರೆ ಇವರು.
ಈ ಸುದ್ದಿ ಓದಿ:- ಮೇ 1 ರಿಂದ 4 ಹೊಸ ರೂಲ್ಸ್ ಜಾರಿ.! ಗ್ಯಾಸ್, ಬ್ಯಾಂಕ್ ಅಕೌಂಟ್, ವಾಹನ ಇರುವವರು ತಪ್ಪದೆ ತಿಳಿದುಕೊಳ್ಳಿ.!
ಈ ರೀತಿಯಾಗಿ ತಮ್ಮ ಆಸಕ್ತಿಯಿಂದ ಇಂದು ಮೂವತ್ತಕ್ಕೂ ಹೆಚ್ಚು ಹಸುಗಳನ್ನು ಇಟ್ಟುಕೊಂಡು ದಿನಕ್ಕೆ 300 ಲೀಟರ್ ಹಾಲು ಇಳುವರಿ ಪಡೆಯುತ್ತಾ ಒಂದು ಲಕ್ಷಕ್ಕಿಂತ ಹೆಚ್ಚು ಆದಾಯ ಮಾಡುತ್ತಿರುವ ಈ ರೈತನ ಮಾತುಗಳನ್ನು ಕೇಳಲು ಇವರು ನೀಡಿರುವ ಇನ್ನಷ್ಟು ಸಲಹೆಗಳನ್ನು ಆಲಿಸಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.