ಮೊದಲೆಲ್ಲಾ ಕೃಷಿ ಮಾಡುವವರನ್ನು ತಾತ್ಸಾರವಾಗಿ ಕಾಣಲಾಗುತ್ತಿತ್ತು. ಆದರೆ ಈಗ ಮನುಷ್ಯ ಎಷ್ಟೇ ದುಡಿದರು ಆಹಾರ ಪದಾರ್ಥಗಳೇ ಹೊಟ್ಟೆ ತುಂಬಿಸುವುದು ಎನ್ನುವ ಅರಿವು ಎಲ್ಲರಿಗೂ ಮೂಡಿದೆ.
ಜೊತೆಗೆ ಹಿಂದೆ ರೈತನು ಬಹಳ ನಷ್ಟದಲ್ಲಿದ್ದ ಆದರೆ ಈಗ ಪ್ರಸ್ತುತವಾಗಿ ಬೇಡಿಕೆಯಲ್ಲಿರುವ ತನಗೆ ಲಾಭ ಕೊಡುವಂತಹ ಬೆಳೆಗಳನ್ನು ಆಧುನಿಕ ಕೃಷಿ ಪದ್ಧತಿ ಅನುಸರಿಸಿಕೊಂಡು ಸರಾಗವಾಗಿ ಬೆಳೆದು ಉತ್ತಮ ಆರ್ಥಿಕ ಸ್ಥಿತಿಯಲ್ಲಿ ಇದ್ದಾನೆ ಖಂಡಿತವಾಗಿಯೂ ಇದು ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ವಿಷಯವಾಗಿದೆ.
ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
ಇಂತಹ ಯಶಸ್ವಿ ರೈತರೊಬ್ಬರ ಉದಾಹರಣೆಯೊಂದಿಗೆ ಅವರನ್ನು ಕೈಹಿಡಿದಿರುವ ದ್ರಾಕ್ಷಿ ಬೆಳೆ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಬೆಂಗಳೂರಿನ ದೇವನಹಳ್ಳಿ ಸಮೀಪದಲ್ಲಿರುವ ಹಳ್ಳಿಯ ರೈತರೊಬ್ಬರು ಕಳೆದ 12 ವರ್ಷಗಳಿಂದ ದ್ರಾಕ್ಷಿ ಬೆಳೆ ಬೆಳೆಯುವುದರಲ್ಲಿ ಫೇಮಸ್ ಆಗಿದ್ದಾರೆ.
ಈ ರೈತರು ಹೇಳುವುದು ಏನೆಂದರೆ, ಸಾಮಾನ್ಯವಾಗಿ ಎಲ್ಲರೂ ಕೃಷ್ಣ, ಬೆಂಗಳೂರು ಬೆರಿ, ದಿಲ್ ಕುಶ್ ಈ ತಳಿಗಳನ್ನು ಬೆಳೆಯುತ್ತಾರೆ ಆದರೆ ನಾನು ಸಾಂಗ್ಲಿ ಯಿಂದ ರೆಡ್ ಲೋಗೋ ತಳಿ ತಂದು ಈ ಕೆಂಪು ಬಣ್ಣದ ದ್ರಾಕ್ಷಿ ಬೆಳೆದೆ. ಅಕ್ಕಪಕ್ಕದ ರೈತರನ್ನು ನೋಡಿ ನಾನು ಕೃಷಿ ಮಾಡಬೇಕು ಎಂದು ನಿರ್ಧರಿಸಿ ಒಂದು ಎಕರೆಗೆ ಎರಡು ಬೋರವೆಲ್ ಕೊರೆಸಿ ಈ ದ್ರಾಕ್ಷಿ ಕೃಷಿ ಮಾಡಿದೆ.
ಈ ತಳಿಯನ್ನು ಆರಿಸಿಕೊಳ್ಳುವುದಕ್ಕೆ ಕಾರಣ ಏನೆಂದರೆ ಇದು ನೀರು ಹೆಚ್ಚಾದರೂ ಕಡಿಮೆಯಾದರೂ ಸ್ವಲ್ಪ ತಡೆಯುತ್ತದೆ ಎನ್ನುವುದೇ ಸಮಾಧಾನ ಎಂದು ಹೇಳುತ್ತಾರೆ. ಇಂದು ಇದೇ ಒಂದು ಎಕರೆ ಜಮೀನಿನಲ್ಲಿ 3 ರಿಂದ 4 ಲಕ್ಷ ಬಂಡವಾಳ ಹಾಕಿ ಎಕರೆಗೆ 20 ಟನ್ ದ್ರಾಕ್ಷಿ ಬೆಳೆದು 10 ಲಕ್ಷ ಲಾಭ ಮಾಡುತ್ತಿದ್ದಾರಂತೆ, ಇನ್ನು ಹೆಚ್ಚಿನ ನಿಗಾ ವಹಿಸಿದರೆ 40 ಟನ್ ವರೆಗೂ ಕೂಡ ಬೆಳೆಯಬಹುದು ಎನ್ನುವ ಮಾತನ್ನು ಕೂಡ ಇವರು ಹೇಳುತ್ತಾರೆ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಇರುವ ಮಹಿಳೆಯರಿಗೆ ಒಂದೇ ತಿಂಗಳಿಗೆ 2 ಬಾರಿ ಗೃಹಲಕ್ಷ್ಮಿ ಯೋಜನೆ 4000 ಹಣ ಬಂದಿದೆ.! ನೀವು ಚೆಕ್ ಮಾಡಿ
ದ್ರಾಕ್ಷಿ ಬೆಳೆಗೆ ಖಂಡಿತವಾಗಿಯೂ ನೀರಿನ ಸೌಕರ್ಯ ಬೇಕು. ಯಾವಾಗಲೂ ನೀರು ಹರಿಯುತ್ತಲೇ ಇರಬೇಕು ಎನ್ನುವುದಿಲ್ಲ ಆದರೆ ದಿನವೊಂದಕ್ಕೆ ಎರಡು ಗಂಟೆಗಳ ಕಾಲವಾದರೂ ನೀರು ಕೊಡಬೇಕು. ನಾನು ಒಂದು ಎಕರೆಯಲ್ಲಿ 1000 ದ್ರಾಕ್ಷಿ ಗಿಡಗಳನ್ನು ಬೆಳೆದಿದ್ದೇನೆ. ದ್ರಾಕ್ಷಿ ಬೆಳೆಯುವುದಕ್ಕೆ ಜುಲೈ ಉತ್ತಮ ಸಮಯ ಜುಲೈನಲ್ಲಿ ಎಲ್ಲವನ್ನು ಸಿದ್ಧಪಡಿಸಿಕೊಂಡರೆ ನವೆಂಬರ್ ಡಿಸೆಂಬರ್ ನಲ್ಲಿ ಅಂಟು ಮಾಡಿ ಕಸಿ ಮಾಡಬೇಕು.
ನಂತರ ಮೇ ತಿಂಗಳಲ್ಲಿ ಇಳುವರಿ ಬರುತ್ತದೆ. ಇದು ವರ್ಷಕ್ಕೆ ಒಂದೇ ಬೆಳೆ ನಾನು ಜಮೀನನ್ನು ಕೊಟ್ಟಿಗೆ ಗೊಬ್ಬರ ಹಾಕಿ ಸಿದ್ಧಪಡಿಸಿಕೊಂಡು ಚಪ್ಪರಕ್ಕೆ ಕಂಬಗಳ ಸಿದ್ಧತೆ ಎಲ್ಲವನ್ನು ಮಾಡಿಕೊಂಡೆ ಒಮ್ಮೆ ಬಂಡವಾಳ ಹಾಕಿದ ಮೇಲೆ ಮತ್ತೆ ಇದಕ್ಕೆಲ್ಲಾ ಹಾಕಬೇಕಾದ ಅವಶ್ಯಕತೆ ಇಲ್ಲ ಪ್ರತಿ ವರ್ಷವೂ ಬೆಳೆ ಬರುತ್ತದೆ ಇದನ್ನು ಕಸಿ ಮಾಡಿದರೆ ಮಾತ್ರ ಉತ್ತಮ ಇಳುವರಿ ಕೊಡುವುದು.
ಇದು ವರ್ಷದಲ್ಲಿ ಎರಡು ಬಾರಿ ಬೆಳೆ ಬರುತ್ತದೆ ಆದರೆ ಮೊದಲ ಬರುವುದನ್ನು ನಾವು ಬ್ಯಾಕ್ ಕಟ್ಟಿಂಗ್ ಎಂದು ಮಾಡಿಸುತ್ತೇವೆ ಮತ್ತೊಂದು ಬಾರಿ ಬರುವುದನ್ನು ಮಾತ್ರ ಮಾರಾಟ ಮಾಡಲು ಕಟಿಂಗ್ ಮಾಡಿಸುವುದು. ಮಾರ್ಕೆಟಿಂಗ್ ಗೆ ಯಾವುದೇ ಸಮಸ್ಯೆ ಇಲ್ಲ, ಜಮೀನಿಗೆ ಬಂದು ಅವರೇ ಬೆಲೆ ನಿರ್ಧರಿಸಿ ಕಡಿದುಕೊಂಡು ಹೋಗುತ್ತಾರೆ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು
ಹಬ್ಬ ಹರಿದಿನ ಇದ್ದರೆ ಒಳ್ಳೆ ಲಾಭ ಹೆಚ್ಚಿನ ಲೇಬರ್ ಅವಶ್ಯಕತೆಯೂ ಇಲ್ಲ ಹಾಗಾಗಿ ಲೇಬರ್ ಕೊರತೆ ಇಲ್ಲದೆ ಮನೆಯಲ್ಲಿರುವ ಒಬ್ಬರು ಇಬ್ಬರು ಅಡ್ಜಸ್ಟ್ ಮಾಡಿಕೊಂಡು ಆರಾಮಾಗಿ ದ್ರಾಕ್ಷಿ ಬೆಳೆಯಬಹುದು. ಆದರೆ ಇದರಲ್ಲಿ ಇಂಟರ್ ಕ್ರಾಪ್ ಬೆಳೆಯಲು ಆಗುವುದಿಲ್ಲ ದ್ರಾಕ್ಷಿ ಹಾಕಿದ ಮೇಲೆ ಅದಕ್ಕೆ ಪೂರ್ತಿಯಾಗಿ ಬಿಟ್ಟು ಬಿಡಬೇಕು.
ಗೊಬ್ಬರ ಹಾಕುವುದು ಹಾಗೂ ಕೀಟಬಾಧೆ ತಪ್ಪಿಸಿಕೊಳ್ಳಲು ಸ್ಪ್ರೇ ಮಾಡಬೇಕಾದ ಅವಶ್ಯಕತೆ ದ್ದೇ ಇರುತ್ತದೆ ಹೀಗಾಗಿ ಇದನ್ನು ಮಾಡಲು ನೀರು ಕಟ್ಟಲು ಜನ ಇದ್ದರೆ ಸಾಕು ಎಂದು ತಮ್ಮ ಅನುಭವವನ್ನು ಹೇಳುತ್ತಾರೆ. ಅವರ ಮಾತಿನಲ್ಲಿ ಈ ಬಗ್ಗೆ ಪೂರ್ತಿ ಡೀಟೇಲ್ಸ್ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.