ಯಶಸ್ವಿನಿ ಕಾರ್ಡ್ (Yashaswini Card) ಎನ್ನುವುದು ಸಹಕಾರಿ ಸಂಘದ ಸದಸ್ಯರ ಆರೋಗ್ಯ ರಕ್ಷಣೆ ಯೋಜನೆಯಾಗಿದೆ. ಈ ಯೋಜನೆಯಡಿ ಫಲಾನುಭವಿಯ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ ಗರಿಷ್ಠ 5 ಲಕ್ಷದವರೆಗೆ ಉಚಿತವಾಗಿ ನೀಡಲಾಗುತ್ತದೆ. ಯಾವುದೇ ಸಹಕಾರಿ ಸಂಘ ಅಥವಾ ಸ್ವಸಹಾಯ ಗುಂಪಿನಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ ನೇಮಕವಾಗಿ ಮೂರು ತಿಂಗಳು ಆಗಿದ್ದರೆ.
ಅವರ ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಿ ವಾರ್ಷಿಕ ವಂತಿಕೆ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಬಹುದು. ಯಶಸ್ವಿನಿ ಕಾರ್ಡ್ ಹೊಂದಿರುವ ಫಲಾನುಭವಿಯು ಯಾವುದೇ ದು’ರಂ’ತದಿಂದ ಆಸ್ಪತ್ರೆಗೆ ದಾಖಲಾದರೆ 2 ರಿಂದ 4 ಗಂಟೆಯೊಳಗೆ ಕ್ಷಿಪ್ರಗತಿಯಲ್ಲಿ ಶಸ್ತ್ರ ಚಿಕಿತ್ಸೆಗಳಿಗೆ ಪೂರ್ವಾನುಮತಿ ಕೊಡಲಾಗುತ್ತದೆ.
ಈ ಸುದ್ದಿ ಓದಿ:- ಮನೆಗೆ ಇ-ಸ್ವತ್ತು ಮಾಡಿಸುವುದು ಎಷ್ಟು ಮುಖ್ಯ.? ಮತ್ತು ಇ-ಸ್ವತ್ತು ಮಾಡಿಸುವುದು ಹೇಗೆ ನೋಡಿ.!
ಯಶಸ್ವಿನಿ ಕಾರ್ಡ್ ಪಡೆಯಲು ಅರ್ಹತೆಗಳು:-
* ಯಾವುದೇ ಸಹಕಾರ ಸಂಘಗಳ ಅಥವಾ ಸ್ವಸಹಾಯ ಗುಂಪಿನ ಸದಸ್ಯರು
* ಸಹಕಾರಿ ಮೀನುಗಾರರು
* ಸಹಕಾರಿ ಬೀಡಿ ಕಾರ್ಮಿಕರು
* ಸಹಕಾರಿ ನೇಕಾರರು
* ವಾರ್ಷಿಕವಾಗಿ ರೂ.30,000 ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರಡಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸಹಕಾರಿ ಸಂಘಗಳ ನೌಕರರು ಅರ್ಜಿ ಸಲ್ಲಿಸಬಹುದು.
ಹೊಸದಾಗಿ ಅರ್ಜಿ ಸಲ್ಲಿಸಲು ಮತ್ತು ರಿನೀವಲ್ ಗಾಗಿ ಬೇಕಾಗುವ ದಾಖಲೆಗಳು:-
* ಯಾವ ಸಹಕಾರಿ ಸಂಘದಲ್ಲಿ ಸದಸ್ಯರಾಗಿರುತ್ತಾರೋ ಆ ID Card
* ಕುಟುಂಬದ ಸದಸ್ಯರೆಲ್ಲರ ಆಧಾರ್ ಕಾರ್ಡ್
* ಕುಟುಂಬದ ಎಲ್ಲಾ ಸದಸ್ಯರ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರಗಳು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟದ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಈ ಸುದ್ದಿ ಓದಿ:-ಇನ್ಮುಂದೆ ಗೃಹಲಕ್ಷ್ಮಿ ಹಣ ಪಡೆಯೋಕೆ 4 ಹೊಸ ನಿಯಮ ಜಾರಿಗೆ ತಂದ ಸರ್ಕಾರ.! ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ಹಣ.!
ಅರ್ಜಿ ಸಲ್ಲಿಸುವ ವಿಧಾನ:-
* ತಾವು ಸದಸ್ಯರಾಗಿರುವ ಸಹಕಾರ ಸಂಘಗಳಲ್ಲಿಯೇ ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಂಡು ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಇನ್ನಿತರ ಪ್ರಮುಖ ಅಂಶಗಳು:-
* ಗ್ರಾಮೀಣ ಸಹಕಾರ ಸಂಘಗಳ ಅಥವಾ ಸ್ವ ಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500 ವಂತಿಗೆ ಮತ್ತು ನಾಲ್ಕಕ್ಕಿಂತ ಮೆಚ್ಚಿನ ಸದಸ್ಯರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 20% ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯನಿಗೆ ರೂ.100 ಪಾವತಿಸಬೇಕು.
ಈ ಸುದ್ದಿ ಓದಿ:-ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಡೆಡ್ ಲೈನ್.! ಮೊಬೈಲ್ ನಲ್ಲೆ ಲಿಂಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
* ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕವಾಗಿ ರೂ.1,000 ವಂತಿಕೆ ಮತ್ತು ನಾಲ್ಕಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ಪ್ರತಿಯೊಬ್ಬ ಸದಸ್ಯರಿಗೂ 20% ಹೆಚ್ಚುವರಿಯಾಗಿ ಅಂದರೆ ಹೆಚ್ಚುವರಿ ಪ್ರತಿಯೊಬ್ಬ ಸದಸ್ಯನಿಗೂ ರೂ.200 ಪಾವತಿಸಬೇಕು.
* ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವ ವಂತಿಕೆಯನ್ನು ಸರ್ಕಾರವೇ ಭರಿಸುತ್ತದೆ.
ಈ ಸುದ್ದಿ ಓದಿ:-SSLC ಆಗಿರುವವರಿಗೆ ಸಿಹಿಸುದ್ಧಿ ಭರ್ಜರಿ 25,000 ಉದ್ಯೋಗವಕಾಶ, ನೀವು ಇರುವ ಊರಿನಲ್ಲಿಯೇ ಕೆಲಸ 15,000 ವೇತನ, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!
* https://sahakarasindhu.karnataka.gov.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಯಶಸ್ವಿನಿ ಯೋಜನೆಗೆ ಲಿಂಕ್ ಆಗಿರುವ ಆಸ್ಪತ್ರೆಗಳ ಲಿಸ್ಟ್ ಪಡೆಯಬಹುದು ಮತ್ತು ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡ ಇದೇ ವೆಬ್ಸೈಟ್ನಲ್ಲಿ ಪಡೆಯಬಹುದು.
* ಈ ಯೋಜನೆ ಕುರಿತು ಯಾವುದೇ ಗೊಂದಲ ಅಥವಾ ಸಮಸ್ಯೆ ಇದ್ದರೆ ಪರಿಹಾರಕ್ಕಾಗಿ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
080-26671616