ತಲೆನೋವು ಇದೆಯಾ.? ಈಸಿಯಾಗಿ ವಾಸಿ ಆಗಬೇಕಾ.? ಮೈಗ್ರೇನ್ ಎಂದರೇನು?. ಯಾವುದೇ ರೀತಿ ತಲೆನೋವು ಇದ್ದರೂ ಸುಲಭ ಪರಿಹಾರ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ತಲೆನೋವು ಎನ್ನುವ ಆರೋಗ್ಯ ಸಮಸ್ಯೆ ಬಂದೇ ಬಂದಿರುತ್ತದೆ. ಆದರೆ ಎಲ್ಲರಿಗೂ ಒಂದೇ ರೀತಿಯ ತಲೆನೋವು ಬರುವುದಿಲ್ಲ. ಕೆಲವರಿಗೆ ಹೆಚ್ಚು ಶಬ್ದ ಕಿವಿಗೆ ಬಿದ್ದಾಗ ಆ ಸೌಂಡ್ ಗೆ ತಲೆನೋವು ಬರುತ್ತದೆ, ಕೆಲವರಿಗೆ ಪ್ರಯಾಣ ಮಾಡಿದಾಗ, ಹೊರಗೆ ಪೆಟ್ರೋಲ್ ಡೀಸೆಲ್ ವಾಸನೆ ಬಿದ್ದಾಗ ಸಹಿಸಲಾಗದ ತಲೆನೋವು ಬರುತ್ತದೆ.

ಕೆಲವರಿಗೆ ನಿದ್ರೆ ಕಡಿಮೆ ಆದಾಗ ತಲೆನೋವು ಬರುತ್ತದೆ, ಇನ್ನು ಕೆಲವರಿಗೆ ಹಸಿವಿನಿಂದ ಇದ್ದಾಗ, ಊಟ ಜೀರ್ಣವಾಗದೇ ಇದ್ದಾಗ, ಟೆನ್ಶನ್ ಗಳಿಂದ, ಹೆಚ್ಚು ಯೋಚನೆ ಮಾಡಿ ಮಾಡಿ ತಲೆನೋವು ಬಂದಿರುತ್ತದೆ.ಹೀಗೆ ಹತ್ತಾರು ಕಾರಣಗಳನ್ನು ಕೊಡಬಹುದು.

ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ಹೊಸ ಹುದ್ದೆಗಳ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

ಹಾಗಾದರೆ ಇತ್ತೀಚಿಗೆ ಎಲ್ಲರೂ ಹೇಳುವ ಮೈಗ್ರೇನ್ ತಲೆನೋವು ಎಂದರೇನು ಎಂದು ನೋಡುವುದಾದರೆ ಎಲ್ಲಾ ರೀತಿಯ ತಲೆನೋವನ್ನು ಒಟ್ಟಾಗಿ ಮೈಗ್ರೇನ್ ಎನ್ನುತ್ತಾರೆ ಎಂದು ಸುಲಭವಾಗಿ ಹೇಳಬಹುದು. ಇದರಲ್ಲಿ ಎಲ್ಲಾ ವಿಧದ ತಲೆನೋವು ಇರುತ್ತದೆ, ಸಹಿಸಿಕೊಳ್ಳಲಾಗದಷ್ಟು ನೋವು ಮತ್ತು ಪದೇ ಪದೇ ಕಾಡುವ ನೋವು, ಸುಲಭಕ್ಕೆ ಗುಣವಾಗದ್ದು ಎಲ್ಲ ರೀತಿಯ ತಲೆನೋವಿನ ಲಕ್ಷಣಗಳಿರುವವರು ಮೈಗ್ರೇನ್ ಪೇಷೆಂಟ್ ಗಳಾಗಿರುತ್ತಾರೆ

ಪರಿಹಾರವೇನೆಂದು ನೋಡುವುದಾದರೆ ಸಾಮಾನ್ಯ ವಾಗಿ ನಾವೆಲ್ಲರೂ ತಲೆನೋವು ಬಂದಾಗ ಹತ್ತಿರದಲ್ಲಿರುವ ಯಾವುದೇ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ತೆಗೆದುಕೊಂಡು ಬಂದು ತಿನ್ನುತ್ತೇವೆ, ಆದರೆ ಅದು ಪೇನ್ ಕಿಲ್ಲರ್ ಕ್ಷಣಕ್ಕೆ ಆ ಸಮಸ್ಯೆ ಹೋಗಬಹುದು ಹೊರತು ಅದಕ್ಕೆ ಪರ್ಮನೆಂಟ್ ಪರಿಹಾರ ಸಿಕ್ಕಿರುವುದಿಲ್ಲ.

ಕೋರ್ಟ್ ಅಥವಾ ವಕೀಲರಿಂದ ಲೀಗಲ್ ನೋಟಿಸ್ ಬಂದಾಗ ಜನರು ಯಾಕೆ ಅಷ್ಟು ಹೆದರುತ್ತಾರೆ.? ಆ ತಕ್ಷಣ ಏನು ಮಾಡಬಹುದು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಮತ್ತೆ ಮರುದಿನವೂ ಅಥವಾ ಒಂದೆರಡು ದಿನಗಳು ಬಿಟ್ಟು ಮತ್ತೆ ತಲೆನೋವು ಕಾಣಿಸಿಕೊಳ್ಳುತ್ತದೆ ಹಾಗಾದರೆ ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ ಎಂದರೆ ಖಂಡಿತವಾಗಿ ಇದೆ. ತಲೆನೋವು ಮಾತ್ರವಲ್ಲದೆ ದೇಹದ ಎಲ್ಲಾ ಆರೋಗ್ಯ ಸಮಸ್ಯೆಗೂ ಕೂಡ ಪರಿಹಾರ ಇದ್ದೆ ಇದೆ.

ಪರಿಹಾರ ಮಾಡಿಕೊಳ್ಳಬೇಕು ಎಂದರೆ ಮೊದಲು ಅದರ ಕಾರಣವನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಯಾವ ಕಾರಣಕ್ಕಾಗಿ ತಲೆನೋವು ಎನ್ನುವುದು ಬರುತ್ತಿದೆ ಎಂದು ಅರ್ಥ ಮಾಡಿಕೊಂಡರೆ ಅರ್ಧ ತಲೆನೋವು ಕಡಿಮೆ ಆದಂತೆಯೇ, ಈಗ ನಿಮಗೆ ಯಾಕೆ ತಲೆನೋವು ಬರುತ್ತಿದೆ ಎಂದು ನಿಮಗೆ ಗೊತ್ತಿರುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಕರೆಯಲಾದ ಸರ್ಕಾರಿ ಹುದ್ದೆಗಳು, 10ನೇ ತರಗತಿ ಆದವರಿಗೂ ಇದೆ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!

ಈ ಮೇಲೆ ತಿಳಿಸಿದ ಕಾರಣಗಳಲ್ಲಿ ಒಂದಿರಬಹುದು, ಅಥವಾ ಮತ್ಯಾವುದೋ ನಿಮ್ಮ ದೇಹಕ್ಕೆ ಒಗ್ಗದ ಒಂದು ಕಾರಣ ಇರಬಹುದು. ಆ ತಪ್ಪನ್ನು ಮಾಡುತ್ತಿದ್ದರೆ ದೇಹ ಅದನ್ನು ದೇಹ ಸಹಿಸಿಕೊಳ್ಳದೇ ರಿಯಾಕ್ಟ್ ಮಾಡುತ್ತದೆ. ಆ ಇರಿಟೇಶನ್ ತಲೆ ನೋವಾಗಿ ಪರಿಣಮಿಸುತ್ತದೆ. ಉದಾಹರಣೆಗೆ ಕೆಲವರಿಗೆ ಯಾವುದೋ ಒಂದು ವಾಸನೆ ಇಷ್ಟ ಆಗುವುದಿಲ್ಲ ಎಂದು ಇಟ್ಟುಕೊಳ್ಳೋಣ ಮಲ್ಲಿಗೆ ಹೂವಿನ ವಾಸನೆ ಅಥವಾ ಪರ್ಫ್ಯೂಮ್ ಆ ಸ್ಮೆಲ್ ಗೆ ತಲೆ ನೋವು ಬರುತ್ತದೆ.

ಈಗ ನಿಮಗೆ ಇದೇ ಕಾರಣಕ್ಕಾಗಿ ತಲೆನೋವು ಬರುತ್ತಿದ್ದರೆ ನೀವು ಅದನ್ನು ಯೂಸ್ ಮಾಡುವುದನ್ನು ಬಿಡುವುದೇ ಒಳ್ಳೆಯದು, ಆಗ ನಿಮಗೆ ಈ ಸಮಸ್ಯೆ ಬರುವುದಿಲ್ಲ. ನಿಮ್ಮ ದೇಹಕ್ಕೆ ಏನಾದರೂ ಸಮಸ್ಯೆ ಆದಾಗ ಅದನ್ನು ಸರಿಪಡಿಸಿಕೊಳ್ಳುವ ತನಕ ದೇಹಕ್ಕೆ ತಲೆನೋವು ಬರುತ್ತದೆ. ಜೊತೆಗೆ ಇದು ಜೀರ್ಣಾಂಗವ್ಯೂಹಕ್ಕೂ ಕೂಡ ಸಂಬಂಧಿಸಿದೆ. ಹೇಗೆಂದರೆ, ನಿಮ್ಮ ಹೊಟ್ಟೆ ಎಷ್ಟು ಕ್ಲೀನ್ ಆಗಿರುತ್ತದೆ ನಿಮ್ಮ ಮೈಂಡ್ ಅಷ್ಟು ಫ್ರೆಶ್ ಆಗಿರುತ್ತದೆ.

ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಮುಖ್ಯಮಂತ್ರಿಗಳಿಂದ ಸಿಹಿ ಸುದ್ದಿ, ವೃದ್ದಾಪ್ಯ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ ಸಿ.ಎಂ ಸಿದ್ದರಾಮಯ್ಯ.!

ಹಾಗೆ ನಿಮ್ಮ ಮೈಂಡ್ ಎಷ್ಟು ಫ್ರೆಶ್ ಆಗಿರುತ್ತದೆಯೋ ನಿಮ್ಮ ಚಯಾಪಚಯ ಕ್ರಿಯೆಗಳು ಕೂಡ ಅಷ್ಟು ಸರಾಗವಾಗಿ ನಡೆಯುತ್ತವೆ. ಹಾಗಾಗಿ ತಲೆನೋವಿಗೆ ಔಷಧೀಯ ಬದಲು ಪರ್ಮನೆಂಟ್ ಸೊಲ್ಯೂಷನ್ ಹುಡುಕಿಕೊಳ್ಳಿ. ಒತ್ತಡವಿದ್ದರೆ ಒತ್ತಡ ರಹಿತವಾಗಿ ಬದುಕಲು ಪ್ರಯತ್ನಿಸಿ, ಯೋಗ ಪ್ರಾಣಾಯಾಮ ಇವುಗಳಿಗೆ ಸಮಯ ಕೊಡಿ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಿರಿ, ಪೋಷಕಾಂಶಯುಕ್ತ ಆಹಾರಗಳ ಸೇವನೆ ಮಾಡಿ. ಯಾವಾಗಲೂ ನಗು ನಗುತ್ತಾ ಇರಿ ಆಗ ನ್ಯಾಚುರಲ್ ಆಗಿ ತಲೆನೋವು ವಾಸಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now