ITI, PUC, ಡಿಪ್ಲೊಮ, ಡಿಗ್ರಿ, ಪಿಜಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಅಂದರೆ ITI, PUC, ಡಿಪ್ಲೋಮಾ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ರ ಅಲೆಮಾರಿ / ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ ಯೋಜನೆಯಡಿ ಊಟ ಮತ್ತು ವಸತಿ ಸಹಾಯ ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ.

ಅವಶ್ಯಕತೆ ಇರುವವರು ತಪ್ಪದೆ ಅರ್ಜಿ ಸಲ್ಲಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಿ. ಅರ್ಜಿ ಸಲ್ಲಿಸುವವರಿಗೆ ಕೆಲ ಕಂಡಿಷನ್ ಗಳಿದ್ದು ಅದರ ಕುರಿತು ಮಾಹಿತಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಬೇಕಾಗುವ ದಾಖಲೆಗಳ ಕುರಿತು ಮಾಹಿತಿ ಹೇಗಿದೆ ನೋಡಿ.

ಅರ್ಜಿ ಸಲ್ಲಿಸಲು ಯಾರು ಅರ್ಹರು:-

ಮೆಟ್ರಿಕ್ ನಂತರದ ವಿದ್ಯಾಭ್ಯಾಸ ಎಂದರೆ ಹತ್ತನೇ ತರಗತಿ ಆದ ನಂತರ ದಾಖಲಾಗುವ ತರಗತಿಗಳಾದ PUC, ITI, D.ed, B.ed, ಡಿಪ್ಲಮೋ, ಯಾವುದೇ ಪದವಿ, ಇಂಜಿನಿಯರಿಂಗ್, ಡಿ.ಫಾರ್ಮಾ, ಪ್ಯಾರಾಮೆಡಿಕಲ್, ನರ್ಸಿಂಗ್ ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
* ಕರ್ನಾಟಕ ರಾಜ್ಯದ ನಿವಾಸಿಗಳಾಗಿರುವ ಹಾಗೂ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಷ್ಟೇ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-1 ರ ಅಲೆಮಾರಿ / ಅರೆ ಅಲೆಮಾರಿ  ವಿದ್ಯಾರ್ಥಿಗಳಾಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

* ವಿದ್ಯಾರ್ಥಿಗಳ SATS ಗುರುತಿನ ಸಂಖ್ಯೆ ಅಥವಾ ಕಾಲೇಜು ನೋಂದಣಿ ಸಂಖ್ಯೆ
* ವಿದ್ಯಾರ್ಥಿ ಆಧಾರ್ ಸಂಖ್ಯೆ
* ಪೋಷಕರ ಆಧಾರ್ ಸಂಖ್ಯೆ
* ವಿದ್ಯಾರ್ಥಿ ಮೊಬೈಲ್ ಸಂಖ್ಯೆ
* ವಿದ್ಯಾರ್ಥಿಯ ಹೆಸರಿನಲ್ಲಿರುವ RD ಇಂದ ಶುರುವಾಗುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಂಖ್ಯೆ
* ಆರ್ಥಿಕವಾಗಿ ದುರ್ಬಲ ವಿಭಾಗದ (ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ) ಪ್ರಮಾಣ ಪತ್ರಗಳ ಸಂಖ್ಯೆ.
* ಇ-ದೃಢೀಕರಿಸಿದ ದಾಖಲೆಗಳ ಸಂಖ್ಯೆಗಳು
* ದಿವ್ಯಾಂಗ ವಿದ್ಯಾರ್ಥಿಯಾಗಿದ್ದಲ್ಲಿ ಭಾರತ ಸರ್ಕಾರದಿಂದ ನೀಡಿರುವ ಅಂಗವೈಕಲ್ಯ ಕಾರ್ಡ್‌ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ:-

* SSP Scholarship ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ
* ರಾಜ್ಯ SSP ವಿದ್ಯಾರ್ಥಿವೇತನ ವೆಬ್ಸೈಟ್ ಮುಖಪುಟ ಓಪನ್ ಆಗುತ್ತದೆ.
* 2023-24ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಆಪ್ಷನ್ ಕ್ಲಿಕ್ ಮಾಡಿ
* ನಂತರ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ Login ಆಗಿ ಅರ್ಜಿ ಸಲ್ಲಿಸಬೇಕು.

* SSP ಪೋರ್ಟಲ್‌ನಲ್ಲಿ ID & Password ಹೊಂದಿಲ್ಲದೆ ಇದ್ದವರು ಅಕೌಂಟ್ ತೆರೆದು ಅರ್ಜಿ ಸಲ್ಲಿಸಬೇಕು
* ಇದೇ ವೆಬ್‌ ಪೋರ್ಟಲ್‌ನಲ್ಲಿ ಹೊಸ ಖಾತೆಯನ್ನು ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ ಎನ್ನುವ ಆಪ್ಷನ್ ಇರುತ್ತದೆ ಖಾತೆ ತೆರೆದು ನಂತರ ಅರ್ಜಿ ಸಲ್ಲಿಸುವಿಕೆ ಮುಂದುವರೆಸಿ
* ಅಥವಾ ಹತ್ತಿರದ ಯಾವುದೇ CSC ಕೇಂದ್ರಗಳಿಗೆ ಹೋಗಿ ಈ ಮೇಲೆ ತಿಳಿಸಿದ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ
* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು SSP ವೆಬ್‌ಸೈಟ್‌ ವಿಳಾಸ : https://ssp.postmatric.karnataka.gov.in

ಪ್ರಮುಖ ದಿನಾಂಕಗಳು:-

* ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10 ಜನವರಿ, 2024.
* ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ (ಊಟ ಮತ್ತು ವಸತಿ ಸಹಾಯ ಯೋಜನೆ) ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆಯಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now