ಕಳೆದ ವರ್ಷ ಸುಪ್ರೀಂಕೋರ್ಟ್ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದು ಸೂಚಿಸಿತ್ತು. ಅದರ ಪ್ರಕಾರ
ರಾಜ್ಯ ಸರ್ಕಾರವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರು, ಬಾಣಂತಿಯರಿಗೆ ಹಿಂದೆ ನೀಡುತ್ತಿದ್ದ ಫುಡ್ ಮೆನು ಬದಲಾಯಿಸಿದೆ.
ಆದರೆ ಈ ಹಿಂದೆ ನೀಡುತ್ತಿದ್ದ ಆಹಾರವೇ ಪೌಷ್ಟಿಕವಾಗಿತ್ತು ಈಗ ಇರುವ ಮೆನು ಪ್ರಕಾರ ನೀಡುತ್ತಿರುವ ಆಹಾರದಲ್ಲಿ ರುಚಿಯೂ ಇಲ್ಲ ಪೌಷ್ಟಿಕತೆಯು ಸಿಗುವುದಿಲ್ಲ ಎಂದು ಹಾವೇರಿಯಲ್ಲಿ ಅಂಗನವಾಡಿ ಮಕ್ಕಳ ಪೋಷಕರು ಮತ್ತು ಬಾಣಂತಿ ತಾಯಂದಿರ ಪೋಷಕರು ಆರೋಪಿಸುತ್ತಿದ್ದಾರೆ.
ಚಿಕ್ಕಮಕ್ಕಳಿಗೆ ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ಈ ಆಹಾರ ಪೌಷ್ಠಿಕಾಂಶ ಒದಗಿಸುವುದಿಲ್ಲ ಬದಲಿಗೆ ಅವರನ್ನು ಮತ್ತಷ್ಟು ದುರ್ಬಲ ಮಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಮೆನು ಬರುವ ಮೊದಲು ಅಂಗನವಾಡಿಯಲ್ಲಿ ಮಕ್ಕಳಿಗೆ ಮೊಟ್ಟೆ, ಬೆಲ್ಲ, ಸಕ್ಕರೆ, ಹೆಸರು ಕಾಳು, ಹೆಸರು ಬೇಳೆ, ಅಡುಗೆ ಎಣ್ಣೆ , ಶೇಂಗಾ ಸೇರಿದಂತೆ ವಿವಿಧ ಪೌಷ್ಠಿಕಾಂಶ ಭರಿತ ಆಹಾರ ಧಾನ್ಯ ಬರುತ್ತಿತ್ತು.
ಈ ಸುದ್ದಿ ಓದಿ:-ರಾಜ್ಯದಲ್ಲಿ ಮತ್ತೊಮ್ಮೆ ಶಿಕ್ಷಕರ ನೇಮಕಾತಿ, 10,000 GPSTR, HSTR ನೇಮಕಾತಿ ಆರಂಭ.!
ಇದರಿಂದ ಗರ್ಭಿಣಿಯರು ಮತ್ತು ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಅನ್ನಸಾಂಬಾರ್, ಮೂರು ದಿನ ಪಾಯಸ, ಒಂದು ದಿನ ಕಿಚಡಿ ಹಾಗೂ ವಾರಕ್ಕೆ ಎರಡು ಸಲ ಮೊಟ್ಟೆ, ಶೇಂಗಾ ಕಾಳು, ಹೆಸರು ಕಾಳು ಮತ್ತು 5 ದಿನ ಹಾಲು ನೀಡುತ್ತಿತ್ತು. ಆದರೆ ಏಕಾಏಕಿ ಇದನ್ನೆಲ್ಲಾ ನಿಲ್ಲಿಸಿರುವ ಸರ್ಕಾರ ಇದೀಗ ಹೊಸಮೆನು ಎಂದು ಪೌಷ್ಟಿಕ ಸ್ವೀಟ್, ಪೌಷ್ಟಿಕ ಲಡ್ಡು, ಮಿಲೇಟ್ಸ್ ಪೌಡರ್ ನೀಡಿದ್ದು ಅದನ್ನು ಮಕ್ಕಳಿಗೆ ಬಿಸಿನೀರಲ್ಲಿ ಮಿಕ್ಸ್ ಮಾಡಿ ತಿನ್ನಿಸಬೇಕಾಗಿದೆ.
ಈ ರೀತಿ ಪೌಡರ್ ಮಿಕ್ಸ್ ಮಾಡಿ ಮಕ್ಕಳಿಗೆ ಆಹಾರ ತಿನ್ನಿಸುವುದರಿಂದ ಮಕ್ಕಳಿಗೆ ಬೇಧಿ ಅಧಿಕವಾಗುತ್ತಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಈ ಹಿಂದೆ ಬರುತ್ತಿದ್ದ ಆಹಾರವನ್ನು ಇಷ್ಟಪಟ್ಟು ತಿನ್ನುತ್ತಿದ್ದ ಮಕ್ಕಳು ಹೊಸ ಆಹಾರವನ್ನು ಒಲ್ಲದ ಮನಸ್ಸಿನಿಂದ ಸೇವಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಮಕ್ಕಳ ಪೋಷಕರು.
ಒಂದು ದಿನ ಮಿಲ್ಲೇಟ್ ಲಾಡು, ಇನ್ನೊಂದು ದಿನ ಪುಷ್ಟಿ ಲಾಡು, ಪ್ರತಿ ದಿನ ಮಧ್ಯಾಹ್ನ ಅನ್ನ ಕಿಚಡಿ, ಇನ್ನೊಂದು ದಿನ ಅನ್ನ ಸಾಂಬಾರು ನೀಡಲಾಗ್ತಿದೆ. ಇದರಲ್ಲಿ ಒಂದು ತರಕಾರಿ ಪದಾರ್ಥವೂ ಇರುವದಿಲ್ಲ ಎಣ್ಣೆ ನೀಡದ ಕಾರಣ ಒಗ್ಗರಣೆಯೂ ಇಲ್ಲ, ಅನ್ನ ಮತ್ತು ಕಿಚಡಿಯಲ್ಲಿ ಕೆಂಪಗಿರುವ ಖಾರವೇ ತುಂಬಿರುತ್ತೆ.
ಈ ಸುದ್ದಿ ಓದಿ:-ಆಯುಷ್ಮಾನ್ ಕಾರ್ಡ್ ಕಳೆದು ಹೋಗಿದ್ಯಾ.! ಮೊಬೈಲ್ ಮೂಲಕ ಮತ್ತೆ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ನೋಡಿ.!
ಮಕ್ಕಳು ಒಲ್ಲದ ಮನಸ್ಸಿನಿಂದ ಖಾರವಾದ ಕಿಚಡಿಯನ್ನೇ ತಿನ್ನುತ್ತಾರೆ, ಮೊದಲ ರೀತಿ ಆಸಕ್ತಿಯಿಂದ ಇಷ್ಟಪಟ್ಟು ತಿನ್ನುತ್ತಿಲ್ಲ. ಅದರಲ್ಲೂ ಅಂಗನವಾಡಿಗಳಲ್ಲಿ ಕೊಡ್ತಿರೋ ಸಾಂಬಾರ್ ಗೆ ತರಕಾರಿ , ಸೊಪ್ಪು, ಅಡುಗೆ ಎಣ್ಣೆ ಬಳಸದೇ ಸಾಂಬಾರ್ ಮಾಡಿ ಅನ್ನಕ್ಕೆ ಬಡಿಸಲಾಗುತ್ತಿದೆ, ಸತ್ವ ರಹಿತ ಅನ್ನ ಸಾಂಬಾರ್ ಆಗಿದೆ. ಈ ರೀತಿ ಆಹಾರ ತಿಂದರೇ ಮಕ್ಕಳ ಪೌಷ್ಠೀಕಾಂಶ ಹೇಗೆ ಆಗಬೇಕು ಎನ್ನುತ್ತಿದ್ದಾರೆ ಮಕ್ಕಳ ಪೋಷಕರು.
ತರಕಾರಿ, ಕಾಳುಗಳು ಇಲ್ಲದ ಆಹಾರವನ್ನ ಯಾರು ತಿನ್ನುತ್ತಾರೆ? ಸರ್ಕಾರ ಈ ಕೂಡಲೇ ಹೊಸ ಆಹಾರ ಪದ್ದತಿ ನಿಲ್ಲಿಸಬೇಕು ಮತ್ತು ಈ ಹಿಂದೆ ಇದ್ದ ಹಳೆಯ ಪದ್ದತಿ ಜಾರಿಗೆ ತರಬೇಕು ಎಂದು ಬಾಣಂತಿಯರ ಪೋಷಕರು ಕೂಡ ಒತ್ತಾಯಿಸಿದ್ದಾರೆ. ಆದರೆ ಇದರ ಮೇಲ್ವಿಚಾರಣೆ ಮಾಡಿ ಮನವಿ ಸಲ್ಲಿಸಲು ಮೇಲಾಧಿಕಾರಿಗಳಿಗೆ ಆಸಕ್ತಿ ಹಾಗೂ ಸಮಯ ಇಲ್ಲ ಎಂದು ಕೂಡ ಆರೋಪಿಸುತ್ತಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಅಂಗನವಾಡಿಯಲ್ಲಿ ಊಟ ಮಾಡಬೇಕಾದ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರ ಅಳಲು ಕೇಳದೆ ನೋಡಬೇಕಿದೆ.