ಈಗಾಗಲೇ ನಿಮಗೆ ತಿಳಿಸಿರುವಂತೆ ಪ್ರತಿಯೊಬ್ಬರ ಜಮೀನಿನಲ್ಲಿಯೂ ಕೂಡ ಕೆಲವೊಮ್ಮೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ ಅದರಲ್ಲೇ ಒಂದಾಗಿರುವಂತಹ ಸಮಸ್ಯೆ ಯಾವುದು ಎಂದರೆ ನಿಮ್ಮ ಜಮೀನಿನ ಒತ್ತುವರಿ! ಹೌದು ನಿಮ್ಮ ಜಮೀನೇನಾದರೂ ಬೇರೆಯವ ರಿಗೆ ಒತ್ತುವರಿ ಆಗಿದ್ದರೆ ಆ ಒತ್ತುವರಿ ಜಾಗವನ್ನು ನೀವು ಪಡೆದುಕೊಳ್ಳ ಬೇಕು ಎಂದು ಬಯಸಿದ್ದರೆ ಹಾಗೂ ನಿಮ್ಮ ಜಮೀನಿನ ಒತ್ತುವರಿಯನ್ನು ಪಡೆದುಕೊಂಡಿರುವವರು ಅದನ್ನು ಬಿಡುವುದಿಲ್ಲ ಎಂದು ನಿಮ್ಮ ಮೇಲೆ ಪ್ರಶ್ನೆ ಹಾಕುತ್ತಿದ್ದರೆ.
ಈ ಒಂದು ಸಮಸ್ಯೆಯನ್ನು ಹೇಗೆ ಸರಿಪಡಿಸಿ ಕೊಳ್ಳುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳೋಣ. ಸಾಮಾನ್ಯವಾಗಿ ಕೆಲವೊಮ್ಮೆ ಇಬ್ಬರ ಬಳಿಯೂ ಕೂಡ ಸರಿಯಾದ ದಾಖಲಾತಿಗಳು ಇಲ್ಲದೆ ಇದ್ದರೆ. ಜಮೀನು ಒತ್ತುವರಿಯಾಗಿರುತ್ತದೆ ನಂತರ ನಿಮ್ಮ ದಾಖಲಾತಿಗಳು ನಿಮ್ಮ ಕೈ ಸೇರಿದ ನಂತರ ಅದನ್ನು ಅಳತೆ ಮಾಡಿಸುವುದರ ಮೂಲಕ ನಿಮ್ಮ ಜಮೀನಿನ ಸರಿಯಾದ ಅಳತೆಗೆ ಹದ್ದು ಬಸ್ತನ್ನು ಮಾಡಿಕೊಳ್ಳು ವುದರಿಂದ ನಿಮ್ಮ ಜಮೀನಿನ ಸುತ್ತಳತೆ ಸಿಗುತ್ತದೆ.
ಆದರೆ ಕೆಲವೊಮ್ಮೆ ನಿಮ್ಮ ಅಕ್ಕಪಕ್ಕದ ಜಮೀನಿನವರು ನಿಮಗೆ ಸೇರಬೇಕಾಗಿರುವಂತಹ ಜಾಗವನ್ನು ನಿಮಗೆ ತಿಳಿಯದ ಹಾಗೆ ಹಿಂದಿನ ದಿನದಿಂದಲೂ ಕೂಡ ಒತ್ತುವರಿಯನ್ನು ಮಾಡಿಕೊಂಡಿದ್ದರೆ ಅದನ್ನು ಹೇಗೆ ನೀವು ಪಡೆಯ ಬಹುದು? ಹಾಗೂ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಜಮೀನಿನ ಸರಿಯಾದ ಅಳತೆಯನ್ನು ಪಡೆಯಬಹುದು ಎಂದು ನೋಡುವುದಾದರೆ. ನೀವು ಯಾವುದೇ ವಿಷಯವಾಗಿ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ.
ಎಂದರೆ ಅದನ್ನು ಮೊದಲನೆಯದಾಗಿ ನಿಮ್ಮ ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳುವುದು ಉತ್ತಮ. ಬದಲಿಗೆ ಚಿಕ್ಕ ಪುಟ್ಟ ವಿಷಯಕ್ಕೂ ಕೂಡ ಕೋರ್ಟ್ ಮೆಟ್ಟಿಲನ್ನು ಏರುವುದರಿಂದ ನಿಮ್ಮ ಸಮಯ, ನಿಮ್ಮ ಹಣ, ನಿಮ್ಮ ಶ್ರಮ ಎಲ್ಲವೂ ಕೂಡ ವ್ಯರ್ಥವಾಗುತ್ತದೆ ಆದರೆ ಸರಿಯಾದ ಅಳತೆ ಹೊಂದಿರುವವರಿಗೆ ಇದು ಸರಿ ಹೋಗಬಹುದು. ಆದರೆ ಸುಳ್ಳು ಸಾಕ್ಷಿಗಳನ್ನು ನೀಡಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಸಮಯವೂ ಹಾಳು ಒತ್ತುವರಿ ಮಾಡಿಕೊಂಡಿರುವ ಜಾಗವು ಕೂಡ ಹಾಳು ಎಂಬಂತಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೊದಲನೆಯದಾಗಿ ಮಾತುಕತೆಯ ಮೂಲಕ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಮಾಡಿಕೊಂಡರೆ ಉತ್ತಮ. ಹಾಗೇನಾದರೂ ನಿಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡಿ ರುವವರು ಇದು ನನಗೆ ಸೇರಬೇಕು ನಾನು ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಇಷ್ಟು ಅಳತೆಯು ನನ್ನ ಹೆಸರಿನಲ್ಲಿಯೇ ಇದೆ ಎಂದು ವಾದ ಮಾಡುತ್ತಿದ್ದರೆ.
ಆ ಸಮಯದಲ್ಲಿ ಅವನು ಮಾತುಕತೆಗೆ ಬರುವುದಿಲ್ಲ ಮೊದಲಿಗೆ ಕೋರ್ಟ್ ಮೆಟ್ಟಿಲನ್ನು ಏರುವುದರ ಮೂಲಕ ನೀವು ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು. ನಿಮ್ಮ ಜಮೀನಿನ ಅಳತೆ ಹಾಗೂ ಒತ್ತುವರಿ ಮಾಡಿಕೊಂಡಿರುವಂತಹ ಜಮೀನಿನವರ ಸಂಪೂರ್ಣ ವಿಳಾಸವನ್ನು ಕೊಡಬೇಕು. ಈ ಮೂಲಕ ಅವರು ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಒಂದು ನೋಟಿಸ್ ಕಳುಹಿಸುತ್ತಾರೆ ನಂತರ ಸರ್ವಯರ್ ಬಂದು ನಿಮ್ಮ ಜಾಗವನ್ನು ಹಾಗೂ ನೋಟಿಸ್ ಕಳಿಸಿರುವoತಹ ವ್ಯಕ್ತಿಯ ಜಾಗವನ್ನು ಕೂಡ ಅಳತೆ ಮಾಡುತ್ತಾರೆ.
ಆ ಸಮಯದಲ್ಲಿ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ನಾನು ಇದನ್ನು ಒಪ್ಪುವುದಿಲ್ಲ ಇದು ನನಗೆ ಸೇರಿದ್ದು ಎಂದು ವಾದ ಮಾಡಿದರೆ. ಆ ವ್ಯಕ್ತಿ ಮತ್ತೆ ಕೋರ್ಟ್ ಮುಖಾಂತರ ತನ್ನ ಉತ್ತರವನ್ನು ನೀಡಬಹುದು ಆದರೆ ಇದರಿಂದ ಒತ್ತುವರಿ ಕಳೆದು ಕೊಂಡಿರುವಂತಹ ವ್ಯಕ್ತಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.