ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ನಾಟಿ ವೈದ್ಯರು ಕಾಮಾಲೆ ರೋಗಕ್ಕೆ ಸಂಪೂರ್ಣ ವಾದಂತಹ ಔಷಧಿಯನ್ನು ಕೊಡುವುದರ ಮೂಲಕ ತಮ್ಮ ವೃತ್ತಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳ ಬಹುದು. ಹೌದು ಇವರು ಬಹಳ ವರ್ಷಗಳಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದು. ಈ ಒಂದು ಸಮಸ್ಯೆಗೆ ಉತ್ತಮವಾದಂತಹ ಪರಿಹಾರ ವನ್ನು ಕೊಡುವುದರ ಮೂಲಕ ಎಲ್ಲರ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತಿದ್ದಾರೆ ಎಂದು ಹೇಳಬಹುದು.
ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಯಾವುದೇ ಸಮಸ್ಯೆ ಬಂದರೆ ಅದನ್ನು ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುತ್ತೇವೆ. ಆದರೆ ಕಾಮಾಲೆ ರೋಗ ಬಂದರೆ ಹೆಚ್ಚಾಗಿ ಯಾರೂ ಕೂಡ ಇಂಗ್ಲೀಷ್ ಔಷಧಿಯನ್ನು ತೆಗೆದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಬದಲಿಗೆ ನಾಟಿ ಔಷಧಿ ಅಂದರೆ ಹಳ್ಳಿಗಳಲ್ಲಿ ಕೊಡುವಂತಹ ಹಸಿರು ಔಷಧಿಯನ್ನು ಉಪಯೋಗಿಸುವುದರ ಮೂಲಕ ಕಾಮಾಲೆ ರೋಗ ವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.
ಅದರಲ್ಲೂ ಈ ಸಮಸ್ಯೆ ಹೆಚ್ಚಾಗಿ ಯಾರಲ್ಲಿ ಕಂಡುಬರುತ್ತದೆ ಎಂದರೆ. ಯಾರು ಹೆಚ್ಚಾಗಿ ಮಧ್ಯಪಾನ ಧೂಮಪಾನ ಗುಟ್ಕಾ ಹೀಗೆ ಯಾವುದೆಲ್ಲ ರೀತಿಯ ಕೆಟ್ಟ ಚಟಗಳನ್ನು ಮಾಡುತ್ತಿರುತ್ತಾರೋ, ಅಂಥವರಲ್ಲಿ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು. ಜೊತೆಗೆ ವಿರುದ್ಧ ಆಹಾರ ವನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಕಾರಣವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯಾದಂತಹ ಕೆಟ್ಟ ಚಟಗಳನ್ನು ಅನುಸರಿಸುವುದು ಉತ್ತಮವಲ್ಲ.
ಬದಲಿಗೆ ಉತ್ತಮವಾದಂತಹ ಆಹಾರ ಪದ್ಧತಿಯನ್ನು ಅನುಸರಿಸುವುದರ ಮೂಲಕ ಒಳ್ಳೆಯ ಆಹಾರವನ್ನು ತಿನ್ನುವುದರಿಂದ ಈ ರೀತಿಯ ಸಮಸ್ಯೆ ಬಾರದಂತೆ ತಡೆಗಟ್ಟಬಹುದು. ಕಾಮಾಲೆ ಬಂದವರಿಗೆ ಲೋಕವೆಲ್ಲ ಹಳದಿ ಎಂಬುವಂತಹ ಗಾದೆ ಮಾತನ್ನು ನೀವೆಲ್ಲರೂ ಕೇಳಿಯೇ ಇರುತ್ತೀರ. ಹೌದು, ಹಳದಿ ಬಣ್ಣಕ್ಕೆ ತ್ವಚೆ ತಿರುಗುವುದು ಈ ಕಾಯಿಲೆಯ ಲಕ್ಷಣ ನಮ್ಮ ದೇಹದಲ್ಲಿ ಅತಿ ದೊಡ್ಡ ಅಂಗವಾದಂತ ಯಕೃತ್ ನಾವು ತಿಂದಂತಹ ಆಹಾರವನ್ನು ಜೀರ್ಣಗೊಳಿಸಲು ಮತ್ತು ಅದರಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವುದರಲ್ಲಿ ಇದು ನೆರವಾಗುತ್ತದೆ.
ಅಲ್ಲದೆ ಇದು ನಮ್ಮ ದೇಹದಲ್ಲಿರುವಂತಹ ಪ್ರೋಟೀನ್ ಮತ್ತು ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಮತ್ತು ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸಲು ಈ ಒಂದು ಯಕೃತ್ ದಿನವಿಡೀ ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ಆದ್ದರಿಂದ ಇದರ ಕೆಲಸ ಸದಾ ಕಾಲ ನಡೆಯುತ್ತಿರುತ್ತದೆ ಯಕೃತ್ ನಲ್ಲಿ ಏನಾದರೂ ತೊಂದರೆ ಉಂಟಾದರೆ ಫ್ರಿಬ್ರೋಸಿಸ್, ಕಾಮಾಲೆ ಅಥವಾ ಜಾಂಡೀಸ್, ಮತ್ತು ಫ್ಯಾಟಿ ಲಿವರ್ ಅಥವಾ ಯಕೃತ್ ನ ಕೊಬ್ಬು.
ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ಅಂಗಗಳಿಗೂ ಇಲ್ಲದೆ ಇರುವಂತಹ ಒಂದು ಪ್ರಮುಖವಾದಂತಹ ಶಕ್ತಿ ಯಕೃತ್ ಗೆ ಇದೆ ಎಂದು ಹೇಳಬಹುದು ಅದು ಹೇಗೆ ಎಂದರೆ ನಮ್ಮ ದೇಹದಲ್ಲಿರುವಂತಹ ಒಂದು ಭಾಗವನ್ನು ಕತ್ತರಿಸಿ ತೆಗೆದರೂ ಕೂಡ ಮತ್ತೊಂದು ಭಾಗ ತನ್ನ ಕಾರ್ಯ ಕ್ಷಮತೆಯನ್ನು ಮಾಡುತ್ತಿರುತ್ತದೆ ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದೇ ಹೇಳಬಹುದು.
ಅದೇ ರೀತಿ ಯಾಗಿ ಇದರ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ ಭಜಂತ್ರಿ ಎನ್ನುವಂತಹ ಈ ನಾಟಿ ವೈದ್ಯರು ಈ ಒಂದು ಕಾಮಾಲೆ ರೋಗಕ್ಕೆ ಔಷಧಿಯನ್ನು ಕೊಡುತ್ತಾರೆ. ಇವರು ಕಲಬುರ್ಗಿ ಜಿಲ್ಲೆಯ, ಆಳಂದ ತಾಲೂಕಿನ, ಮದಗುಣಕಿ ಗ್ರಾಮದವರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.