ಭಾರತೀಯ ಅಂಚೆ ಇಲಾಖೆಯಲ್ಲಿ (Indian Post department) ಪ್ರತಿ ವರ್ಷವೂ ಕೂಡ ಸಾವಿರಾರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಅದೇ ರೀತಿ 2023ನೇ ಸಾಲಿನಲ್ಲಿ ಖಾಲಿ ಇರುವ ಗ್ರಾಮೀಣ ಡಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್ (BPO), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPO) ಹುದ್ದೆಗಳಿಗಾಗಿ ಕೂಡ ಅರ್ಜಿ ಆಹ್ವಾನ ಮಾಡಲಾಗಿದೆ.
ಈ ಬಾರಿ ಕರ್ನಾಟಕ ಪೋಸ್ಟರ್ ಸರ್ಕಲ್ ನೇಮಕಾತಿ (Karnataka Postal Circle Recruitment) ಯಲ್ಲಿ ಬರೋಬ್ಬರಿ 1700+ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತು ಇಲಾಖೆಯಿಂದ ಪ್ರಕಟಣೆ ಕೂಡ, ಹೊರ ಬಿದ್ದಿದ್ದು ಅರ್ಜಿ ಸಲ್ಲಿಸುವ ಬಗ್ಗೆ ಹುದ್ದೆಗಳ ವಿವರ, ಪ್ರಮುಖ ದಿನಾಂಕ ,ಆಯ್ಕೆ ಪ್ರಕ್ರಿಯೆ ಇನ್ನು ಮುಂತಾದ ಸಂಪೂರ್ಣ ವಿವರವನ್ನು ತಿಳಿಸಿಕೊಡಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅದರ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಇಲಾಖೆ ಹೆಸರು:- ಭಾರತೀಯ ಅಂಚೆ ಇಲಾಖೆ
ಹುದ್ದೆಯ ಹೆಸರು:-
● ಗ್ರಾಮೀಣ ಡಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್)
● ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಡಕ್ ಸೇವಕ್
ಒಟ್ಟು ಹುದ್ದೆಗಳ ಸಂಖ್ಯೆ : 1714
ಉದ್ಯೋಗ ಸ್ಥಳ : ಕರ್ನಾಟಕದಾದ್ಯಂತ…
● ಬಾಗಲಕೋಟೆ- 29 ಹುದ್ದೆಗಳು
● ಬಳ್ಳಾರಿ- 43 ಹುದ್ದೆಗಳು
● ಬೆಳಗಾವಿ- 42 ಹುದ್ದೆಗಳು
● ಬೆಂಗಳೂರು ಪೂರ್ವ- 11 ಹುದ್ದೆಗಳು
● ಬೆಂಗಳೂರು ದಕ್ಷಿಣ- 4 ಹುದ್ದೆಗಳು
● ಬೆಂಗಳೂರು ಪಶ್ಚಿಮ- 6 ಹುದ್ದೆಗಳು
● ಬೀದರ್- 49 ಹುದ್ದೆಗಳು
● ಚನ್ನಪಟ್ಟಣ- 66 ಹುದ್ದೆಗಳು
● ಚಿಕ್ಕಮಗಳೂರು- 63 ಹುದ್ದೆಗಳು
● ಚಿಕ್ಕೋಡಿ- 45 ಹುದ್ದೆಗಳು
● ಚಿತ್ರದುರ್ಗ- 51 ಹುದ್ದೆಗಳು
● ದಾವಣಗೆರೆ ಕಚೇರಿ- 47 ಹುದ್ದೆಗಳು
● ಧಾರವಾಡ- 36 ಹುದ್ದೆಗಳು
● ಗದಗ- 63 ಹುದ್ದೆಗಳು
● ಗೋಕಾಕ್- 13 ಹುದ್ದೆಗಳು
● ಹಾಸನ- 84 ಹುದ್ದೆಗಳು
● ಹಾವೇರಿ- 33 ಹುದ್ದೆಗಳು
● ಕಲಬುರಗಿ- 44 ಹುದ್ದೆಗಳು
● ಕಾರವಾರ- 53 ಹುದ್ದೆಗಳು
● ಕೊಡಗು- 44 ಹುದ್ದೆಗಳು
● ಕೋಲಾರ-75 ಹುದ್ದೆಗಳು
● ಮಂಡ್ಯ- 78 ಹುದ್ದೆಗಳು
● ಮಂಗಳೂರು- 52 ಹುದ್ದೆಗಳು
● ಮೈಸೂರು- 43 ಹುದ್ದೆಗಳು
● ನಂಜನಗೂಡು- 41 ಹುದ್ದೆಗಳು
● ಪುತ್ತೂರು- 89 ಹುದ್ದೆಗಳು
● ರಾಯಚೂರು- 49
● RMS HB- 44 ಹುದ್ದೆಗಳು
● RMS Q- 6 ಹುದ್ದೆಗಳು
● ಶಿವಮೊಗ್ಗ- 74 ಹುದ್ದೆಗಳು
● ಸಿರ್ಸಿ- 48 ಹುದ್ದೆಗಳು
● ತುಮಕೂರು- 81 ಹುದ್ದೆಗಳು
● ಉಡುಪಿ- 110 ಹುದ್ದೆಗಳು
● ವಿಜಯಪುರ- 65 ಹುದ್ದೆಗಳು
● ಯಾದಗಿರಿ- 33 ಹುದ್ದೆಗಳು.
ಶಕ್ತಿ ಯೋಜನೆಯ ಉಚಿತ ಬಸ್ ಪಾಸ್ ವಿತರಣೆ ಆರಂಭ, ಪಾಸ್ ಪಡೆಯುವುದು ಹೇಗೆ ನೋಡಿ.!
ವೇತನ ಶ್ರೇಣಿ:-
● ಗ್ರಾಮೀಣ ಡಾಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್ – ರೂ.12,000 ದಿಂದ 29,380
● ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ರೂ.10,000 ದಿಂದ 24,470.
ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ:-
● ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ 40 ವರ್ಷಗಳು.
NIA ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 1,42,400/-
ವಯೋಮಿತಿ ಸಡಿಲಿಕೆ :
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು
● PWD ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
● ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು https://indianpostgdsonline.gov.in/ ವೆಬ್ಸೈಟ್‌ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.
● ಕೇಳಲಾಗುವ ಎಲ್ಲ ದಾಖಲೆಗಳ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿಯಾದ ನಂತರ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು.
ಸಾರ್ವಜನಿಕರಿಗೆ ಸಿಹಿ ಸುದ್ದಿ, ಸಹಕಾರಿ ಕೃಷಿ ಯೋಜನೆಯಿಂದ ಪ್ರತಿ ಕುಟುಂಬಕ್ಕೂ ಸಿಗಲಿದೆ 2 ಎಕರೆ ಜಮೀನು.!
ಆಯ್ಕೆ ಪ್ರಕ್ರಿಯೆ:-
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ, ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ಆಯ್ದುಕೊಳ್ಳಲಾಗುವುದು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 03.08.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23.08.2023.