ಭಾರತದಲ್ಲಿ ಪ್ರತಿಯೊಂದು ಕುಟುಂಬವು ಕೂಡ ಸ್ವಂತ ಸೂರಿನಡಿ ವಾಸ ಮಾಡಬೇಕು ಎನ್ನುವುದು ಸರ್ಕಾರಗಳ ಆಶಯ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಮನೆ ಕಟ್ಟಿಕೊಳ್ಳುವವರಿಗೆ ಸಹಾಯಧನ ಹಾಗೂ ಕೆಲವು ವರ್ಗಗಳಿಗೆ ಉಚಿತ ಮನೆಯ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿವೆ. ಆದರೂ ಕೂಡ ಇದು ಸಂಪೂರ್ಣವಾಗಿ ದೇಶದ ಕಡೆ ಕುಟುಂಬದವರೆ ತಲುಪಲು ಇನ್ನೂ ಸಾಕಷ್ಟು ವರ್ಷಗಳು ಬೇಕು ಎನ್ನುವುದು ಕೂಡ ವಾಸ್ತವ.
ಆದ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರ ಸಂಖ್ಯೆ ಯಥೇಚ್ಛವಾಗಿದೆ. ಈ ರೀತಿ ಬಾಡಿಗೆ ಮನೆಯಲ್ಲಿ ವಾಸಿಸುವವರು ಮತ್ತು ಮನೆಯನ್ನು ಬಾಡಿಗೆಗೆ ಕೊಡುವ ಓನರ್ ಗಳು ಸರ್ಕಾರದ ಈ ಹೊಸ ನಿಯಮದ (New rules for house Owners and Tenants) ಬಗ್ಗೆ ತಿಳಿದುಕೊಂಡಿರಲೇಬೇಕು.
ಶಕ್ತಿ ಯೋಜನೆಯ ಉಚಿತ ಬಸ್ ಪಾಸ್ ವಿತರಣೆ ಆರಂಭ, ಪಾಸ್ ಪಡೆಯುವುದು ಹೇಗೆ ನೋಡಿ.!
ಸಾಮಾನ್ಯವಾಗಿ ಬಾಡಿಗೆದಾರರು ಮತ್ತು ಮಾಲೀಕರ ನಡುವೆ ಬಾಡಿಗೆ ಒಪ್ಪಂದ (Rent agriment) ಆಗಿರುತ್ತದೆ. ಒಂದು ತಿಂಗಳಿಗೆ ಇಷ್ಟು ಬಾಡಿಗೆ, ಅಡ್ವಾನ್ಸ್ ರೂಪದಲ್ಲಿ ಇಂತಿಷ್ಟು ಹಣ ಕೊಡಬೇಕು, ನೀರಿನ ಬಿಲ್ ಮತ್ತು ಕರೆಂಟ್ ಬಿಲ್ ವಾಸ ಮಾಡುವವರೇ ಕಟ್ಟಬೇಕು, ಮನೆ ಖಾಲಿ ಮಾಡುವ ಸಮಯದಲ್ಲಿ ಮನೆಯಲ್ಲಿರುವ ಯಾವುದೇ ವಸ್ತುಗಳನ್ನು ಡ್ಯಾಮೇಜ್ ಮಾಡಿದರೆ ಅವುಗಳ ದುರಸ್ತಿಗಾಗಿ ಹಾಗೂ ಮನೆಗೆ ಪೈಂಟ್ ಮಾಡಿಸುವ ಖರ್ಚಿಗಾಗಿ ಅಡ್ವಾನ್ಸ್ ಹಣದಲ್ಲಿ ಕಡಿತಗೊಳಿಸಲಾಗುವುದು ಎಂದು ಆ ಕರಾರು ಪತ್ರದಲ್ಲಿ ತಿಳಿಸಿರಲಾಗುತ್ತದೆ.
ಇದನ್ನು ಓದಿ ಮಾಲೀಕರು ಹಾಗೂ ಬಾಡಿಗೆದಾರರು ತಪ್ಪದೆ ಸಹಿ ಮಾಡಿರಬೇಕು. ನಮ್ಮ ದೇಶದಲ್ಲಿ 11 ತಿಂಗಳಿಗೆ (Rent agriment duration 11 months ) ಮನೆ ಬಾಡಿಗೆ ಅಗ್ರಿಮೆಂಟ್ ಮಾಡಲಾಗುತ್ತದೆ. 11 ತಿಂಗಳ ಮೇಲೆ ಮತ್ತೆ ಅವರು ಅದೇ ಮನೆಯಲ್ಲಿ ವಾಸ ಮಾಡಿಲು ಇಚ್ಚಿಸಿದರೆ ಹೊಸದಾಗಿ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಾಲೀಕರಿಗೆ ಸಮಸ್ಯೆ ತಪ್ಪಿದ್ದಲ್ಲ.
NIA ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 1,42,400/-
ಯಾಕೆಂದರೆ ಸುಪ್ರೀಂ ಕೋರ್ಟ್ (Suprim Court Order) ಪ್ರಕರಣ ಒಂದರಲ್ಲಿ ಯಾವುದೇ ಜಮೀನು ಅಥವಾ ಮನೆಯಲ್ಲಿ ವ್ಯಕ್ತಿ ಒಬ್ಬ 12 ವರ್ಷಕ್ಕಿಂತ ಹೆಚ್ಚು ಕಾಲ ಅನುಭೋಗದಲ್ಲಿದ್ದರೆ ಆತ ಅದನ್ನು ಸ್ವಾಧೀನ ಪಡಿಸಿಕೊಳ್ಳಲು ಕೋರ್ಟ್ ನಲ್ಲಿ ದಾವೆ ಹೂಡಬಹುದು ಎಂದು ತಿಳಿಸಿದೆ. ನಂತರ ನ್ಯಾಯಾಲಯದಲ್ಲಿ ಇದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಕೊಟ್ಟು ಅದನ್ನು ಸಾಬೀತುಪಡಿಸಿಕೊಳ್ಳಬೇಕು.
12 ವರ್ಷಗಳ ಕಾಲ ನಿರಂತರವಾಗಿ ಆತ ಒಂದೇ ಮನೆಯಲ್ಲಿ ವಾಸವಿದ್ದು, ಆ ವಿಷಯ ಮಾಲೀಕನಿಗೆ ತಿಳಿದಿರಬೇಕು. ಜೊತೆಗೆ ಅಕ್ಕಪಕ್ಕದ ಮನೆ ನೆರೆಹೊರೆಮನೆಯವರೆಗೂ ಆತ ಅಲ್ಲಿ ವಾಸವಿರುವುದು ಗೊತ್ತಿರಬೇಕು. ವಿದ್ಯುತ್ ಬಿಲ್, ನೀರಿನ ಬಿಲ್ ಮುಂತಾದವರುಗಳಲ್ಲಿ ದಾವೆ ಸಲ್ಲಿಸಿರುವ ವ್ಯಕ್ತಿ ಪಾವತಿ ಮಾಡಿರುವುದಕ್ಕೆ ಪುರಾವೆಗಳು ಇರಬೇಕು.
ಸಾರ್ವಜನಿಕರಿಗೆ ಸಿಹಿ ಸುದ್ದಿ, ಸಹಕಾರಿ ಕೃಷಿ ಯೋಜನೆಯಿಂದ ಪ್ರತಿ ಕುಟುಂಬಕ್ಕೂ ಸಿಗಲಿದೆ 2 ಎಕರೆ ಜಮೀನು.!
ಇತ್ಯಾದಿ ಪ್ರತಿಕೂಲ ಸ್ವಾಧೀನಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನು ಹೊಂದಿದ್ದು ಆತ 12 ವರ್ಷಗಳ ಕಾಲ ಒಂದು ಮನೆಯಲ್ಲಿ ವಾಸವಿದ್ದರೆ ಆ ಮನೆ ಅವನದ್ದೇ ಆಗುತ್ತದೆ. ಆದ್ದರಿಂದ ಮಾಲೀಕರು ಯಾವುದೇ ಕುಟುಂಬಕ್ಕೆ ಅಥವಾ ವ್ಯಕ್ತಿಗೆ ನಿರಂತರವಾಗಿ 12 ವರ್ಷಗಳ ಕಾಲ ಮನೆ ಬಾಡಿಗೆ ಕೊಡದೇ ಇರುವುದೇ ಒಳ್ಳೆಯದು.
2014ರಲ್ಲಿ ಸುಪ್ರೀಂ ಕೋರ್ಟ್ ನ ದ್ವಿ ಸದಸ್ಯ ಪೀಠ ಈ ರೀತಿ 12 ವರ್ಷಗಳ ಕಾಲ ವಾಸವಿದ್ದ ಮಾತ್ರಕ್ಕೆ ಆ ಮನೆಯನ್ನು ಸ್ವಂತ ಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಜಮೀನುಗಳಾಗಿದ್ದರೆ ಅವುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಆ ಹಳೆಯ ಕಾನೂನನ್ನು ನಂತರ ರದ್ದುಪಡಿಸಿ ನ್ಯಾಯಮೂರ್ತಿ ಅರುಣ್ ಮಿಶ್ರ ಅವರಿದ್ದ ತ್ರಿ ಸದಸ್ಯ ಪೀಠವು ಈ ವಿಭಿನ್ನ ನಿಯಮವನ್ನು ಜಾರಿಗೆ ತಂದಿದೆ. ಆದ್ದರಿಂದ ಇನ್ನು ಮುಂದೆ ಮನೆ ಮಾಲೀಕರು ಈ ವಿಚಾರವಾಗಿ ಎಚ್ಚರದಿಂದಿರಬೇಕು.