ಇದೊಂದು ಕೆಲಸ ಮಾಡಿ ಸಾಕು, ಕೇವಲ 10 ದಿನದಲ್ಲಿ ನೀವು ಮಾಡಿರುವ ಎಲ್ಲಾ ಸಾಲ ತೀರುತ್ತೆ.!

ಜೀವನದಲ್ಲಿ ಸಾಲ ಮಾಡುವ ಪರಿಸ್ಥಿತಿ ಪ್ರತಿಯೊಬ್ಬರಿಗೂ ಕೂಡ ಬರುತ್ತದೆ. ಯಾವುದೋ ಒಳ್ಳೆಯ ಉದ್ದೇಶಕ್ಕಾಗಿ ಅಥವಾ ಕಷ್ಟಕ್ಕಾಗಿ ಸಾಲ ಮಾಡಿದ ಮೇಲೆ ನಂತರ ಅದನ್ನು ತೀರಿಸಲೇಬೇಕು. ಇಲ್ಲವಾದಲ್ಲಿ ಆಗುವ ಕಸಿವಿಸಿ ಅಷ್ಟಿಷ್ಟಲ್ಲ, ಬೇರೆಯವರ ಹಣವನ್ನು ನಾವು ತೆಗೆದುಕೊಂಡು ಕೊಡಲು ಆಗುತ್ತಿಲ್ಲ ಎನ್ನುವ ನೋ’ವು ಒಂದು ಕಡೆ.

WhatsApp Group Join Now
Telegram Group Join Now

ಆದರೆ ಹಲವು ಸಮಯಗಳಲ್ಲಿ ಸಾಲ ಕೊಟ್ಟವರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ ಎನ್ನುವ ಭ’ಯ, ಸ್ನೇಹಿತರಾಗಿದ್ದರೆ ನಮ್ಮ ಸ್ನೇಹವನ್ನು ಕಳೆದುಕೊಳ್ಳುತ್ತಾರೆ ನಾವು ಮೊದಲಿನ ರೀತಿ ಅವರ ಜೊತೆ ಇರಲು ಆಗುವುದಿಲ್ಲ, ಹೀಗೆ ಎಷ್ಟೋ ಸಂಬಂಧಗಳು ಕೂಡ ಈ ಸಾಲದಿಂದ ಹಾಳಾಗಿ ಹೋಗುತ್ತದೆ.

ಒಂದು ವೇಳೆ ನೀವು ಕೂಡ ಈ ರೀತಿ ಸಾಲದ ಸುಳಿಯೊಳಗೆ ಸಿಲುಕಿಕೊಂಡಿದ್ದರೆ ಎಷ್ಟೇ ಕಷ್ಟಪಟ್ಟರು ಅದರಿಂದ ಹೊರಬರಲು ಆಗುತ್ತಿಲ್ಲ ಎಂದರೆ ದೇವರ ಆಶೀರ್ವಾದದಿಂದ ಮಾತ್ರ ನಿಮಗೆ ಆ ಸಮಸ್ಯೆಯಿಂದ ಹೊರಬರಲು ಸಾಧ್ಯ. ಹಾಗಾಗಿ ಇಂದು ನಾವು ಈ ಅಂಕಣದಲ್ಲಿ ಹೇಗೆ ದೇವರ ಕೃಪೆಗೆ ಪಾತ್ರರಾಗಿ ಬಹಳ ಬೇಗ ನಿಮ್ಮ ಸಾಲದಿಂದ ಮುಕ್ತರಾಗಬಹುದು ಎನ್ನುವುದರ ಬಗ್ಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ.

ದೇವರು ಈ ಪ್ರಪಂಚದ ಪ್ರತಿಯೊಂದು ಜೀವಿಗಳಲ್ಲಿ ಕೂಡ ಇದ್ದಾನೆ. ಆದರೆ ಕೆಲವು ಮನುಷ್ಯರು ತನ್ನೊಳಗಿರುವ ಭಗವಂತನನ್ನು ಮರೆತು ಬಹಳ ಕೆ’ಟ್ಟವರಾಗಿ ರಾಕ್ಷಸರಾಗಿದ್ದಾರೆ. ಇನ್ನು ಸಹ ಮೂಕ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ದೇವರನ್ನು ಕಾಣಬಹುದು. ಹಾಗಾಗಿ ಈ ರೀತಿ ಅಸಹಾಯಕರ ಸಹಾಯ ಮಾಡುವುದರಿಂದ ಭಗವಂತನ ಕೃಪೆಗೆ ಬಹಳ ಬೇಗ ಪಾತ್ರರಾಗುತ್ತೇವೆ.

ನಮ್ಮ ಕಷ್ಟ ಕೂಡ ಹಾಗೆ ಕರಗುತ್ತಾ ಹೋಗುತ್ತದೆ. ನೀವು ಈಗ ನಾವು ಹೇಳುವ ಈ ಕೆಲಸಗಳನ್ನು ಮಾಡಿದರೆ 10 ದಿನಗಳಲ್ಲಿ ನಿಮ್ಮ ಸಾಲವನ್ನು ತೀರಿಸಿಕೊಳ್ಳುವುದಕ್ಕೆ ಮಾರ್ಗ ಕಂಡುಕೊಳ್ಳಬಹುದು ಅಥವಾ ಯಾವುದೋ ಒಂದು ಅನಿರೀಕ್ಷಿತ ಮಾರ್ಗದಿಂದ ಧನ ಲಾಭ ಉಂಟಾಗಿ ನಿಮ್ಮ ಸಾಲದಿಂದ ಸಂಪೂರ್ಣ ಹೊರ ಬರುತ್ತೀರಿ. ಆದರೆ ಮನಸ್ಸಿನಲ್ಲಿ ಸ್ವಚ್ಛವಾದ ಭಾವನೆ ಇಟ್ಟುಕೊಂಡು ನಂಬಿಕೆಯಿಂದ ಹಾಗೂ ಪ್ರೀತಿಯಿಂದ ಈ ಕೆಲಸಗಳನ್ನು ಮಾಡಬೇಕು.

* ಗೋವಿನಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಹಾಗಾಗಿ ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಹಸುಗೆ ಕೊಡಬೇಕು. ಒಂದು ವೇಳೆ ರಸ್ತೆ ಮಾರ್ಗದಲ್ಲಿ ಹೋಗುವಾಗ ಹಸುಗಳನ್ನು ಕಂಡರೆ ನಮ್ಮ ಕೈಲಾದಷ್ಟು ಬಾಳೆಹಣ್ಣುಗಳನ್ನು ತಿನ್ನಿಸಬೇಕು, ನೆನೆಸಿದ ಅಕ್ಕಿ ಹಾಗೂ ಬೆಲ್ಲವನ್ನು ಕೂಡ ಕೊಡಬಹುದು.

* ಮಂಗಳವಾರ ಹಾಗೂ ಶನಿವಾರದಂದು ಕೋತಿಗಳಿಗೆ ಬಾಳೆಹಣ್ಣು ಅಥವಾ ಅವರಿಗೆ ಇಷ್ಟವಾಗುವ ಆಹಾರವನ್ನು ಕೊಟ್ಟು ಅವುಗಳು ಖುಷಿಯಾಗುವಂತೆ ಮಾಡುವುದರಿಂದ ಆಂಜನೇಯನ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ, ಇದರಿಂದ ನಿಮ್ಮ ಕಷ್ಟಗಳಿಗೆ ಪರಿಹಾರ ಮಾರ್ಗ ಕಂಡುಬರುತ್ತದೆ.

* ತಪ್ಪದೇ ಪ್ರತಿ ಗುರುವಾರದಂದು ಸಾಧ್ಯವಾದರೆ ವಾರದ ಎಲ್ಲಾ ದಿನಗಳು ಪಕ್ಷಿಗಳಿಗೆ ಧಾನ್ಯಗಳನ್ನು ಹಾಕುವುದರಿಂದ ಕೂಡ ನಿಮ್ಮ ಸಾಲದ ಭಾದೆಯಿಂದದ ಮುಕ್ತಿ ಪಡೆಯಬಹುದು.
* ಬೀದಿನಾಯಿಗಳಿಗೆ ಬಿಸಿಯಾದ ಆಹಾರ ಅದರಲ್ಲೂ ಸಿಹಿಯಾದ ಆಹಾರವನ್ನು ಹಾಕುವುದರಿಂದ ಕೂಡ ಭಗವಂತ ಕೃಪೆ ತೋರುತ್ತಾನೆ, ಮನೆಯಲ್ಲಿರುವ ಕ’ಲ’ಹ’ಗಳು, ಎಲ್ಲಾ ರೀತಿಯ ಕಷ್ಟಗಳು ಕರಗುತ್ತವೆ.

* ಇರುವೆ ಗೂಡಿಗೆ ಸಿಹಿ ಪದಾರ್ಥಗಳನ್ನು ಅಥವಾ ಅವುಗಳಿಗೆ ಅನುಕೂಲವಾಗುವ ಆಹಾರ ಪದಾರ್ಥಗಳನ್ನು ಹಾಕುವುದರಿಂದ ಕೂಡ ಜೀವನದಲ್ಲಿ ಒಳ್ಳೆ ರೀತಿಯ ಕಾರ್ಯಗಳು ಜರುಗುತ್ತವೆ, ನಮ್ಮ ಕಷ್ಟಗಳು ಪರಿಹಾರ ಆಗುತ್ತವೆ.
* ಚಿಕ್ಕ ಮಕ್ಕಳಿಗೆ, ಅಸಹಾಯಕರಿಗೆ, ವಯಸ್ಸಾದ ವೃದ್ಧರಿಗೆ, ದುರ್ಬಲರಿಗೆ, ಅಬಲೆ ಹೆಣ್ಣು ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಸಹಾಯ ಮಾಡುವುದರಿಂದ ಕೂಡ ಭಗವಂತ ನಿಮ್ಮನ್ನು ಕಾಯುತ್ತಾನೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now