ಪ್ರತಿ ವರ್ಷವೂ ಕೂಡ ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೆಲವರು ಉದ್ಯೋಗ ಮಾಡಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಲು ಬಯಸುತ್ತಾರೆ.
ಕೌಟುಂಬಿಕ ಕಾರಣಗಳಿಂದಾಗಿ ಸಾವಿರಾರು ಮಂದಿ ತಾವಿರುವ ಸ್ಥಳದಿಂದ ಬೆಂಗಳೂರು ಮಹಾನಗರಗಳತ್ತ ಉದ್ಯೋಗ ಅರಸಿ ಬರುತ್ತಾರೆ ಮತ್ತು ಬೆಂಗಳೂರಿನಲ್ಲಿ ಹಲವರು ಈಗ ಇರುವ ಉದ್ಯೋಗವನ್ನು ಬದಲಾಯಿಸಿ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನೋಡುತ್ತಿರುತ್ತಾರೆ.
ಇವರಿಗೆಲ್ಲ ಒಂದು ಅನುಕೂಲಕರ ಸುದ್ದಿಯೊಂದನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಅದೇನೆಂದರೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದಲ್ಲಿ (Karnataka Apex Bank Recruitment – 2024) ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಸುದ್ದಿ ಓದಿ:- ಬತ್ತಿ ಹೋದ ಬೋರವೆಲ್ ನಲ್ಲಿ 4 ಇಂಚು ನೀರು ಬರುವ ಹಾಗೆ ಮಾಡಿ ಯಶಸ್ಸು ಕಂಡ ರೈತ.!
ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಉತ್ತಮ ವೇತನೊಂದಿಗೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಅವಕಾಶವೂ ಸಿಗುತ್ತದೆ. ಈ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ನೇಮಕಾತಿ ಸಂಸ್ಥೆ:- ಕರ್ನಾಟಕ ರಾಜ್ಯ ಸರಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ, ಬೆಂಗಳೂರು
ಹುದ್ದೆ ಹೆಸರು:- ಬ್ಯಾಂಕ್ ಸಹಾಯಕರು
ಒಟ್ಟು ಹುದ್ದೆಗಳ ಸಂಖ್ಯೆ:- 93 ಹುದ್ದೆಗಳು
ಉದ್ಯೋಗಸ್ಥಳ:- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿಯೇ ಕೆಲಸ ನಿರ್ವಹಿಸಬೇಕು.
ವೇತನ ಶ್ರೇಣಿ:- ಮಾಸಿಕವಾಗಿ ರೂ.28,425 ರಿಂದ ರೂ.87,125
ಈ ಸುದ್ದಿ ಓದಿ:- ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ, ಮಾರ್ಚ್ 14 ರ ಒಳಗೆ ಈ ಕೆಲಸ ಮಾಡಿದೆ ಹೋದರೆ ಆಧಾರ್ ಕಾರ್ಡ್ ರದ್ದು, ಗೃಹಲಕ್ಷ್ಮಿ ಹಣ ಕೂಡ ಬರಲ್ಲ.!
ಶೈಕ್ಷಣಿಕ ವಿದ್ಯಾರ್ಹತೆ:-
* ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಯಾವುದಾದರೂ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
* ಒಂದು ವೇಳೆ ಅಭ್ಯರ್ಥಿಗಳು ಸಹಕಾರ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿದ್ದರೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
* ಮತ್ತೊಂದು ಮುಖ್ಯವಾದ ಕಂಡಿಷನ್ ಏನೆಂದರೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 55%ರಷ್ಟು ಅಂಕಗಳೊಂದಿಗೆ ಪದವಿ ಪರೀಕ್ಷೆ ಉತ್ತೀರ್ಣರಾಗಿರಬೇಕು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಥವಾ ಅಂಗವಿಕಲ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪರೀಕ್ಷೆ ಉತ್ತೀರ್ಣರಾಗಿರಬೇಕು
* ಪದವಿ ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! ಇನ್ಮುಂದೆ ಇಂತವರಿಗೆ ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗಲ್ಲ, ಎಲ್ಲಾ ಸೌಲಭ್ಯಗಳು ಬಂದ್
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳು
* SC / ST, ಪ್ರವರ್ಗ – 1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
https://www.emsecure.in/ApexBankApplication/index.html ಇದು ಬ್ಯಾಂಕ್ ಅಧಿಕೃತ ವೆಬ್ಸೈಟ್ ಆಗಿದೆ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
* ಸ್ವ-ವಿವರ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸಲ್ಲಿಕೆ ಪ್ರತಿ ಮತ್ತು ಇ-ರಶೀದಿ ಪಡೆದುಕೊಳ್ಳಬೇಕು.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! ಇನ್ಮುಂದೆ ಇಂತವರಿಗೆ ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗಲ್ಲ, ಎಲ್ಲಾ ಸೌಲಭ್ಯಗಳು ಬಂದ್
ಆಯ್ಕೆ ವಿಧಾನ:-
ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಲಿಖಿತ ಪರೀಕ್ಷೆ ನಡೆಸಿ ಆಯ್ಕೆಯಾದವರ ದಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕ:-
* ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಆನ್ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿಸಬೇಕು
* ಸಾಮಾನ್ಯ ಮತ್ತು OBC ವರ್ಗದ ಅಭ್ಯರ್ಥಿಗಳಿಗೆ ರೂ.1000
* SC / ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.500
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಮಾರ್ಚ್ 07, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 06, 2024.