ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!

 

WhatsApp Group Join Now
Telegram Group Join Now

ಈಗಂತೂ ಹೂಡಿಕೆ ಮಾಡುವುದಕ್ಕೆ ಸಾಕಷ್ಟು ದಾರಿಗಳಿವೆ. ಸ್ಟಾಕ್ ಮಾರ್ಕೆಟ್, ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಈ ರೀತಿ ಹತ್ತಾರು ಆಪ್ಷನ್ ಗಳು ಮತ್ತು ಅತಿ ಹೆಚ್ಚಿನ ಬಡ್ಡಿದರ ನೀಡುವ ಬ್ಯಾಂಕ್ ಗಳು ಇದ್ದರೂ ಕೂಡ ನಮ್ಮ ಹಣದ ಮೇಲಿನ ಹೂಡಿಕೆಗೆ ಲಾಭವನ್ನು ಮಾತ್ರವಲ್ಲದೆ ನಾವು ಕೂಡಿದ ಹಣಕ್ಕೆ ಎಷ್ಟು ಸೆಕ್ಯೂರಿಟಿ ಇದೆ ಎನ್ನುವುದನ್ನು ಕೂಡ ಹೆಚ್ಚಿಗೆ ಗಮನವಹಿಸಿ ತಿಳಿದುಕೊಳ್ಳಬೇಕು.

ಇಲ್ಲವಾದಲ್ಲಿ ದೊಡ್ಡದಾದ ಲಾಭದ ಆಸೆಗೆ ಬಿದ್ದು, ನಾವು ನಮ್ಮ ಅಸಲನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು. ಈ ನಿಟ್ಟಿನಲ್ಲಿ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಹೂಡಿಕೆ ಮಾಡುವುದಕ್ಕೆ ಮತ್ತು ಅವರ ಹಣಕ್ಕೆ ಅಷ್ಟೇ ಭದ್ರತೆಯ ಭರವಸೆ ನೀಡುವುದಕ್ಕೆ ಅಂಚೆಕಛೇರಿಯ ಯೋಜನೆಗಳು (Post Office Schemes) ಫೇಮಸ್ ಆಗಿದೆ.

ಈ ಸುದ್ದಿ ಓದಿ:- ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…

ಅಂಚೆ ಕಛೇರಿಯಲ್ಲಿ ಕೂಡ ಸಾಕಷ್ಟು ಹೂಡಿಕೆ ಯೋಜನೆಗಳಿದ್ದು ಇದರಲ್ಲಿ ನಿಮ್ಮ ಹಣವನ್ನು ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ (Kisan Vikas Patra) ಎನ್ನುವ ವಿಶೇಷ ಯೋಜನೆಯ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಯೋಜನೆಯ ಹೆಸರು:- ಕಿಸಾನ್ ವಿಕಾಸ್ ಪತ್ರ (KVP)

ಯೋಜನೆಯ ಕುರಿತು ಪ್ರಮುಖ ಅಂಶಗಳು:-

* ಅಂಚೆ ಕಚೇರಿಯಲ್ಲಿ ನೀವು ಈ ಯೋಜನೆ ಖರೀದಿಸಬಹುದು
* ಭಾರತೀಯ ನಾಗರಿಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ
* ವಯಸ್ಕರು ತಮ್ಮ ಹೆಸರಿನಲ್ಲಿ ಈ ಯೋಜನೆಯನ್ನು ಖರೀದಿಸಬಹುದು, 18 ವರ್ಷ ವಯಸ್ಸಿಗಿಂತ ಕಡಿಮೆ ವಯೋಮಾನದ ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪೋಷಕರು ಹೂಡಿಕೆ ಮಾಡಬಹುದು.

ಈ ಸುದ್ದಿ ಓದಿ:-ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…

* ಯೋಜನೆ ಹೆಸರು ರೈತರನ್ನು ಸೂಚಿಸುತ್ತದೆ, ಪ್ರಾರಂಭದಲ್ಲಿ ಇದನ್ನು ರೈತರಿಗಾಗಿಯೇ ಪರಿಚಯಿಸಲಾಗಿತ್ತು, ನಂತರ ಎಲ್ಲಾ ವರ್ಗಕ್ಕೂ ಇದರಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಾಯಿತು.
* ವ್ಯಕ್ತಿ ಕಿಸಾನ್ ಖಾತೆಯನ್ನು ತೆರೆದ ದಿನ ಹೂಡಿಕೆ ಮಾಡಿರುವ ಮೊತ್ತ, ಅದಕ್ಕೆ ಅನ್ವಯವಾಗುವ ಬಡ್ಡಿದರ ಮತ್ತು ಮೆಚುರಿಟಿ ದಿನಾಂಕ ಹಾಗೂ ಹೂಡಿಕೆದಾರನ ವಿವರಗಳನ್ನೊಳಗೊಂಡ ಕಿಸಾನ್ ವಿಕಾಸ್ ಪತ್ರ ಸರ್ಟಿಫಿಕೇಟ್ ನೀಡಲಾಗುತ್ತದೆ.

* KVP ಖಾತೆಯನ್ನು ತೆರೆಯಲು ನೀಡಬೇಕಾಗದ ದಾಖಲೆಗಳು:-

1. ಆಧಾರ್ ಸಂಖ್ಯೆ
2. PAN ಕಾರ್ಡ್
3. KYC
4. ಇತ್ತೀಚಿನ ಭಾವಚಿತ್ರ
5. ಮೊಬೈಲ್ ಸಂಖ್ಯೆ
* ಈ ಯೋಜನೆಯಲ್ಲಿ ಕನಿಷ್ಠ ರೂ.1000 ಇಂದ ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು ಮತ್ತು ಒಬ್ಬ ವ್ಯಕ್ತಿ ಒಂದು ಖಾತೆಗಿಂತ ಹೆಚ್ಚಿನ KVP ಖಾತೆ ತೆರೆಯಬಹುದು
ಯೋಜನೆಯ ಮೆಚುರಿಟಿ ಅವಧಿ 115 ತಿಂಗಳು ಅಥವಾ 9.5 ವರ್ಷಗಳು.

* ಈ ಯೋಜನೆಗೆ ಪ್ರಸ್ತುತವಾಗಿ 7.5% ಬಡ್ಡಿದರ ವಿಧಿಸಲಾಗುತ್ತಿದೆ ಆದರೆ ಇದನ್ನು ಹಣ ದುಪ್ಪಟ್ಟು ಮಾಡುವ ಯೋಜನೆ ಎಂದೇ ಕರೆಯಲಾಗುತ್ತದೆ
* ಈ ಯೋಜನೆಯಡಿಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ 115 ತಿಂಗಳ ನಂತರ ನಿಮಗೆ 10 ಲಕ್ಷವನ್ನು ನೀಡಲಾಗುತ್ತದೆ.
* ಅಂಚೆ ಕಚೇರಿ ಉಳಿದ ಯೋಜನೆಗಳಂತೆ ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ ಮತ್ತು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಬದಲಾಯಿಸಿಕೊಳ್ಳಲು ಅವಕಾಶವೂ ಇದೆ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಈ ಸೇವೆ ಉಚಿತವಲ್ಲ.! ರೂಲ್ಸ್ ಚೇಂಜ್ ಮಾಡಿದ ಕೇಂದ್ರ ಸರ್ಕಾರ

* ಆನ್ಲೈನ್ನಲ್ಲಿಯೂ KVP ಖಾತೆ ತೆರೆಯಲು ಅನುಕೂಲತೆ ಮಾಡಿಕೊಡಲಾಗಿದೆ.
* ಯೋಜನೆ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now