ವಿಪರೀತವಾದ ಮಂಡಿನೋವು ಇದ್ದರೆ ಈರುಳ್ಳಿಯಿಂದ ತಯಾರಿಸಿದ ಈ ಮನೆಮದ್ದು ಹಚ್ಚಿ ಸಾಕು ಮಂಡಿ ನೋವು ತಕ್ಷಣ ಕಡಿಮೆ ಆಗುತ್ತದೆ. ಇದು ಹಳೆಯ ಕಾಲದ‌ ಮನೆ ಮದ್ದು ಬಹಳ ಪರಿಣಾಮಕಾರಿ.!

ಮಂಡಿ ನೋವು ಯಾರಿಗೆ, ಯಾವಾಗ, ಯಾವ ಸಮಯದಲ್ಲಿ ಬರುತ್ತದೆ ಎಂಬ ಅರಿವಿರುವುದಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ ಅಜ್ಜಿಯರಿಗೂ ಇದು ಕಾಡದೆ ಬಿಟ್ಟಿಲ್ಲ. ಕೆಲವೊಮ್ಮೆ ಸಣ್ಣದಾಗಿ ನೋಯಲು ಶುರುವಾಗಿ ನಂತರ ದೀರ್ಘ ಕಾಲದ ನೋವಾಗಿ ಬದಲಾಗಿ ವರ್ಷಾನುಗಟ್ಟಲೇ ಕಾಟ ಕೊಡುತ್ತದೆ. ಆದರೆ ಇದ್ದಕ್ಕಿದ್ದಂತೆ ಮಂಡಿ ನೋವು ಬರಲು ಕಾರಣ ಏನು ಎಂಬುದು ಮಾತ್ರ ಪತ್ತೆ ಹಚ್ಚುವುದು ಕಷ್ಟ. ಮೂಳೆಗಳ ಸಾಂದ್ರತೆ ಕಡಿಮೆಯಾಗಿ, ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣದ ಅಂಶ ಕಡಿಮೆಯಾಗಿ ಮತ್ತು ವಯಸ್ಸಾದವರಲ್ಲಿ ಸಾಮಾನ್ಯವಾಗಿರುವ ಮಾಂಸದ ಹರಿತ ಮೂಳೆಗಳ ಸವೆತದಿಂದ ಮಂಡಿ ನೋವು ಬರಬಹುದು. ಕೆಲವೊಮ್ಮೆ ಎಷ್ಟೋ ದಿನಗಳಿಂದ ಕಾಡುತ್ತಿದ್ದ ನೋವು ಇದ್ದಕ್ಕಿದ್ದಂತೆ ಮಾಯವಾಗಲೂಬಹುದು. ಬಿಡುವಿಲ್ಲದ ಅತಿ ಹೆಚ್ಚು ಕೆಲಸ, ಅತಿ ಹೆಚ್ಚಾಗಿ ಪುಟ್ಬಾಲ್ ಆಡುವುದು, ಇವುಗಳು ಸಹ ಮಂಡಿ ನೋವಿಗೆ ಕಾರಣಗಳೆಂದು ಹೇಳಬಹುದು. ಅತಿಯಾದ ಕೆಲಸದ ನಂತರ ಮೂಳೆಗಳಲ್ಲಿ ನೋವು ಕಾಣಿಸುವುದು ಸಾಮಾನ್ಯ.

WhatsApp Group Join Now
Telegram Group Join Now

ತಜ್ಞರು ಹೇಳುವ ಪ್ರಕಾರ ಮಂಡಿ ನೋವಿಗೆ ಅನೇಕ ರೀತಿಯ ಕಾರಣಗಳಿವೆ, ವಿಟಮಿನ್ – ಡಿ, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಕಡಿಮೆಯಾಗುತ್ತಿದ್ದಂತೆ ದೇಹದಲ್ಲಿ ಮಂಡಿ ನೋವು ಆರಂಭವಾಗುತ್ತದೆ. ಇದಕ್ಕೆ ವಯಸ್ಸಿನ ಬೇಧವಿಲ್ಲ. ಸಾಮಾನ್ಯವಾಗಿ ವಿಟಮಿನ್- ಡಿ ಅಂಶ ದೇಹದಲ್ಲಿ ಮೂಳೆಗಳ ರಕ್ಷಣೆ ಮಾಡುತ್ತದೆ. ಮಂಡಿ ನೋವಿಗೆ ಗುರಿಯಾದ ವಿಟಮಿನ್ ಡಿ ಕೊರತೆಯುಳ್ಳ ಅನೇಕ ರೋಗಿಗಳು ತಮ್ಮ ದೇಹದ ಇತರ ಭಾಗಗಳಲ್ಲೂ ನೋವನ್ನು ಕಾಣುತ್ತಾರೆ. ಮಂಡಿ ನೋವು ಬಂದಿದೆ ಎಂದರೆ ಅನೇಕರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ ಇಲ್ಲವೆ ವೈದ್ಯರ ಬಳಿ ಹೋಗಿ ಅನೇಕ ಮಾತ್ರೆಗಳನ್ನು ಬಳಸುತ್ತಾ ಇರುತ್ತಾರೆ. ಜೀವನದ ಉದ್ದಕ್ಕು ಮಾತ್ರೆಗಲನ್ನೇ ಸೇವಿಸುತ್ತಾ ಇರಬೇಕಾಗುತ್ತದೆ. ಇದರ ಬದಲಾಗಿ ನೈಸರ್ಗಿಕವಾಗಿ ಮನೆಮದ್ದನ್ನು ತಯಾರಿಸಿ ಬಳಸಿದರೆ ಮಂಡಿ ನೋವು ನಿವಾರಣೆ ಮಾಡಬಹುದು. ಇಲ್ಲಿ ಕೆಲವು ಮನೆಮದ್ದನ್ನು ತಯಾರಿಸುವ ವಿಧಾನವನ್ನು ಹಾಗೂ ಬಳಸುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಮಂಡಿ ನೋವಿಗೆ ಮನೆಮದ್ದನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:
1. ಹಸಿ ಈರುಳ್ಳಿ- ಇದರಲ್ಲಿ ಇರುವ ಸಲ್ಫರ್ ಅಂಶವು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲು ಈರುಳ್ಳಿ ರಸವನ್ನು ಬಿಸಿ ಮಾಡಿ ನಮ್ಮ‌ ಮಂಡಿ ನೋವಿಗೆ ಹೆಚ್ಚುವುದರಿಂದ ಎಷ್ಟೇ ಹಳೆಯ ಕಾಲದ ಮಂಡಿ ನೋವು ಇದ್ದರು ಕಡಿಮೆ ಆಗುತ್ತದೆ. 2. ಹರಿಶಿಣ ಪುಡಿ – ಇದರಲ್ಲಿ ಆ್ಯಂಟಿ ಸೆಪ್ಟಿಕ್ ಗುಣ ಇದ್ದು, ಮಂಡಿ ನೋವಿನಿಂದ ಊತ ಇದ್ದರೆ ಅದನ್ನು ಕಡಿಮೆ ಮಾಡಲು ಹರಿಶಿಣ ಪುಡಿ ಸಹಾಯ ಮಾಡುತ್ತದೆ. 3. ಸಾಸಿವೆ ಎಣ್ಣೆ – ವಾತಕಸದಿಂದ ಮಂಡಿ ನೋವು ಬಂದರೆ ಅಥವಾ ತುಂಬ ವಯಸ್ಸಾದ ನಂತರ ಮಂಡಿ‌ನೋವು ಬಂದರೆ ಅಂತಹ ನೋವುಗಳನ್ನು ನಿವಾರಿಸಲು ಸಾಸಿವೆ ಎಣ್ಣೆ ಉಪಯೋಗಕಾರಿ.

ಮಂಡಿ ನೋವಿಗೆ ಮನೆ ಮದ್ದು ತಯಾರಿಸುವ ವಿಧಾನ:
ಒಂದು ದಪ್ಪದಾದ ಈರುಳ್ಳಿ ಅನ್ನು ತೆಗೆದುಕೊಂಡು ಸಣ್ಣದಾಗಿ ತುರಿದುಕೊಳ್ಳಬೇಕು ಅಥವಾ ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿ ಅಲ್ಲಿ ರುಬ್ಬಿಕೊಳ್ಳಬೇಕು. ಹೀಗೆ ಮಾಡಿದ ಈರುಳ್ಳಿಯನ್ನು ಒಂದಯ ಪ್ರೈಯಿಂಗ್ ಪ್ಯಾನ್ ನಲ್ಲಿ ಹಾಕಿ, ಒಂದು ಚಮಚ ಅಷ್ಟು ಹರಿಶಿಣ ಪುಡಿಯನ್ನು ಹಾಕಿ ಈರುಳ್ಳಿ ರಸ ಮತ್ತು ಹರಿಶಿಣ ಪುಡಿಯನ್ನು ಚೆನ್ನಾಗಿ ‌ಮಿಕ್ಸ್ ಮಾಡಿಕೊಳ್ಳಿ ನಂತರ ಪ್ರೈ ಮಾಡಲು 2 ರಿಂದ 3 ಸ್ಪೂನ್ ನಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ‌ 1 ನಿಮಿಷಗಳ ವರೆಗೆ ಚೆನ್ನಾಗಿ ಪ್ರೈ ಮಾಡಿ. ಸ್ವಲ್ಪ ತಣ್ಣಗಾಗಲು ಬಿಡಿ, ಸ್ವಲ್ಪ ಬೆಚ್ಚಗೆ ಇರುವ ಪೇಸ್ಟ್ ಅನ್ನು ಮಂಡಿ ಮೇಲೆ ಹಚ್ಚಿ ಹಚ್ಚಿರುವ ಪೇಸ್ಟ್ ಜಾರದಂತೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಬೇಕು. ಈ ಪೇಸ್ಟ್ ಅನ್ನು ಗಾಯ ಇರುವ ಜಾಗದಲ್ಲಿ ಹಚ್ಚಬರದು, ಗಾಯವು ಸಂಪೂರ್ಣವಾಗಿ ಒಣಗಿದ ನಂತರ ಹಚ್ಚಬೇಕು. ಈ‌ ಪೇಸ್ಟ್ ಅನ್ನು ಮಂಡಿ ನೋವು ಮಾತ್ರವಲ್ಲದೆ ಸೊಂಟ ನೋವು, ಭುಜದ ನೋವು, ಮೊಣ ಕೈ ನೋವು ಇದ್ದರು ಈ ಪೇಸ್ಟ್ ಹಚ್ಚುವುದರಿಂದ ಬೇಗನೆ ನೋವು ನಿವಾರಣೆ ಆಗುತ್ತದೆ.

ಮಹಿಳೆಯರು ಹೆಚ್ಚಾಗಿ ಕೆಲಸ ಮಾಡುವುದರಿಂದ ಮಂಡಿ ನೋವು, ಸೊಂಟ ನೋವು ಬರುತ್ತದೆ. ಮಕ್ಕಳು ಹೆಚ್ಚಾಗಿ ಆಟ ಆಡುವುದರಿಂದ ಕಾಲು ನೋವು ಬಂರುತ್ತದೆ. ಅಂತಹ ಸಂದರ್ಭದಲ್ಲಿ ರಾತ್ರಿ ವೇಳೆ ಈ ಪೇಸ್ಟ್ ಅನ್ನು‌ ತಯಾರಿಸಿ ಸ್ವಲ್ಪ ಬೆಚ್ಚಗೆ ಮಕ್ಕಳ ಕಾಲುಗಳಿಗೆ ಹಚ್ಚಿದರೆ ಹಾಗೂ‌ ಮಹಿಳೆಯರು ಹಚ್ಚಿದರೆ ತುಂಬ ಬೇಗನೆ ನೋವು ನಿವಾರಣೆ ಆಗುತ್ತದೆ. ಅಲ್ಲದೆ ಮಂಡಿ ನೋವು ಬಂದ ಮೇಲೆ ಜೀವನದ ಉದ್ದಕ್ಕೂ ಮೂಳೆಗಳನ್ನು ಬಲ ಪಡಿಸಲು ಈ ಒಂದು ಮನೆ ಮದ್ದನ್ನು ತಯಾರಿಸಿ ಪ್ರತಿ ರಾತ್ರಿ ಕುಡಿಯಬೇಕು. ಒಂದು ಪ್ಯಾನ್ ನಲ್ಲಿ ಅರ್ಧ ಚಮಚ ತುಪ್ಪ ಹಾಕಿ ಅದಕ್ಕೆ ಅರ್ಧ ಚಮಚ ಗಸೆಗಸೆ ಹಾಕಿ ಉರಿಯಬೇಕು. ಗಸಗಸೆಯಲ್ಲಿ ಕಬ್ಬಿಣ ಹಾಗೂ ಕ್ಯಾಲ್ಸಿಯಂ ಅಂಶವು ಹೆಚ್ಚಾಗಿರುತ್ತದೆ. ಆದ್ದರಿಂದ ಉರಿದ ಗಸಗಸೆ ಯನ್ನು ಒಂದು ಲೋಟ ಹಾಲಿನಲ್ಲಿ ಹಾಕಿ ಪ್ರತಿ ನಿತ್ಯ ರಾತ್ರಿ ಕುಡಿಯುವುದರಿಂದ ಮೂಳೆಗಳಿಗೆ ಶಕ್ತಿ ಹೆಚ್ಚಾಗುತ್ತದೆ, ನಿದ್ರೆ ಚೆನ್ನಾಗಿ ಬರುತ್ತದೆ.‌ ತುಂಬಾ ಸಕ್ರಿಯರಾಗಿ ಇರುತ್ತಾರೆ ಹಾಗೂ ಜೀವನ ಪೂರ್ತಿ ಮಂಡಿ ನೋವಿನಿಂದ ಮುಕ್ತರಾಗುತ್ತೀರಿ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now