ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಗೆ ಮುಖ್ಯ ಆಸರೆಯೇ ಮಳೆ. ಆದರೆ ಇತ್ತೀಚಿನ ಜಾಗತಿಕ ಬದಲಾವಣೆಗಳ ಕಾರಣದಿಂದಾಗಿ ಮಳೆಯೂ ಅಕಾಲಿಕವಾಗಿದ್ದು, ಮಳೆ ಆಶ್ರಿತ ಬೆಳೆಗಳು ಕೂಡ ಅನಿಶ್ಚಿತತೆಯಿಂದ ಕೂಡಿದೆ ಹೀಗಾಗಿ ರೈತರು ಹೆಚ್ಚು ಬೆಳೆ ಬೆಳೆಯುವ ಉದ್ದೇಶದಿಂದ ನೀರಾವರಿ ಮೊರೆ ಹೋಗುತ್ತಾರೆ.
ನಮ್ಮ ದೇಶದಲ್ಲಿ ಹಿಂದೆ ಬಾವಿ ನೀರಾವರಿ ಪದ್ಧತಿ ಇತ್ತು ಈಗ ಕೊಳವೆ ನೀರಾವರಿ ಪದ್ಧತಿಗೆ ಹೆಚ್ಚಾಗಿದೆ. ಬೋರ್ವೆಲ್ ಪಾಯಿಂಟ್ ಗಳನ್ನು ಗುರುತಿಸಿ, ಬೋರ್ವೆಲ್ ಕೊರೆಸಿ ಆ ಮೂಲಕ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆಗಳನ್ನು ಬೆಳೆದು ನಮ್ಮ ಕಷ್ಟ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ರೈತರ ಲೆಕ್ಕಾಚಾರ ಆದರೆ ಎಲ್ಲಾ ರೈತರಿಗೂ ಕೂಡ ಇದು ಕೈ ಹಿಡಿಯುವುದಿಲ್ಲ.
ಈ ಸುದ್ದಿ ಓದಿ:- ಉಚಿತ ಟೈಲರಿಂಗ್ ತರಬೇತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ.!
ಬೋರ್ವೆಲ್ ಪಾಯಿಂಟ್ ಮಾಡಿಸಿ ತೋಟ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡು ಸತತವಾಗಿ 10 ಬಾರಿ ಬೋರ್ ಹಾಕಿಸಿ ಫೇಲ್ ಆಗಿರುವ ರೈತರ ಉದಾಹರಣೆಗಳು ಕೂಡ ಇವೆ. ಆದರೆ ಇದರಲ್ಲಿ ಆಶ್ಚರ್ಯಕರ ಸಂಗತಿಯೆಂದರೆ ಅವರ ಅಕ್ಕಪಕ್ಕದ ಜಮೀನುಗಳಿಗೆ ಒಂದೇ ಪಾಯಿಂಟ್ ಗೆ ಬೋರ್ವೆಲ್ ಯಶಸ್ವಿ ಆಗಿರುತ್ತದೆ.
ಹಾಗಾದರೆ ಮಧ್ಯದಲ್ಲಿರುವ ಜಮೀನಿಗೆ ಯಾಕೆ ಹೋಗುತ್ತಿಲ್ಲ ಎನ್ನುವ ಅನುಮಾನ ಬರದೆ ಇರದು ಈ ಕನ್ಫ್ಯೂಷನ್ ಗಳಿಗೆ ಉತ್ತರವನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ ಉದಾಹರಣೆಗೆ ನಿಮ್ಮ ಎದುರಿಗೆ 3 ಜಮೀನು ಇದೆ ಎಂದುಕೊಳ್ಳೋಣ. ಇದು ಉತ್ತರದಿಂದ ದಕ್ಷಿಣದ ಕಡೆಗೆ ಇದೆ ಇದರಲ್ಲಿ ಮೊದಲನೇ ಹಾಗೂ ಎರಡನೇ ಜಮೀನಿನಲ್ಲಿ ಬೋರ್ವೆಲ್ ಪಾಯಿಂಟ್ ಕೊರೆಸಿ ನೀರು ಬಂದಿದ್ದರೆ ಮೂರನೇಯವರಿಗೂ ಕೂಡ ಬರುವ ಸಾಧ್ಯತೆ ಇರುತ್ತದೆ.
ಆದರೆ ಮೊದಲನೇ ಹಾಗೂ ಮೂರನೇ ಜಮೀನಿಗೆ ಬೋರ್ವೆಲ್ ಬಂದಿದೆ ಹಾಗಾಗಿ ಮಧ್ಯದಲ್ಲಿರುವ ನಮಗೂ ಬರುತ್ತದೆ ಎಂದು ನಂಬಿ ಲೆಕ್ಕಚಾರ ಹಾಕಿಕೊಂಡರೆ ಅದು ಫೇಲಾಗುವ ಸಾಧ್ಯತೆ ಇರುತ್ತದೆ. ಯಾಕೆಂದರೆ ನೀರಿನ ಹರಿವು ಉತ್ತರದಿಂದ ದಕ್ಷಿಣ ಕಡೆಗೆ ಇರುತ್ತದೆ ಹೀಗಾಗಿ ಮೊದಲನೆದು ಸಹ ನೀರಿನ ಸೆಲೆ ಸಿಕ್ಕಿರುತ್ತದೆ, ಮೂರನೆಯದು ಬೇರೆ ನೀರಿನ ಸೆಲೆ ಸಿಕ್ಕಿರುತ್ತದೆ ಎರಡನೆಯದರಲ್ಲಿ ನೀರಿನ ಸೆಲೆ ಹರಿದು ಹೋಗದೆ ಇರಬಹುದು ಈ ಕಾರಣಕ್ಕೆ ಫೇಲ್ ಆಗುತ್ತಿರಬಹುದು.
ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!
ಹಾಗಾಗಿ ಒಂದು ವೇಳೆ ನಿಮ್ಮ ಜಮೀನಿನ ಭಾಗದಲ್ಲಿ ನೀರಿನ ಸೆಲೆಯು ಪೂರ್ವದಿಂದ ಪಶ್ಚಿಮಕ್ಕೆ ಹೋಗಿದೆ ಎನ್ನುವ ಗ್ಯಾರಂಟಿ ಸಿಕ್ಕರೆ ಮಾತ್ರ ನೀವು ಮೊದಲನೇಯವರು ಹಾಗೂ ಮೂರನೇಯವರು ಮೊದಲು ಪಾಯಿಂಟ್ ಹಾಕಿಸಿ ನೀರು ತೆರೆದಿದ್ದರೆ ನಮಗೂ ಬರುತ್ತದೆ ಎಂದು ನಂಬಿ ಹಾಕಬಹುದು ಇಲ್ಲವಾದಲ್ಲಿ ಅದೇ ಒಂದು ಕಾರಣ ಮಾಡಿಕೊಂಡು ನೂರಕ್ಕೆ ನೂರರಷ್ಟು ಗ್ಯಾರಂಟಿ ಕಟ್ಟಿಕೊಳ್ಳುವುದು ತಪ್ಪಾಗುತ್ತದೆ.
ಬಹಳ ವಿರಳ ಕೇಸ್ ಗಳಲ್ಲಿ ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ನೀರಿನ ಸೆಲೆ ಹರಿಯುವುದು ಹಾಗಾಗಿ ಬೋರ್ವೆಲ್ ಪಾಯಿಂಟ್ ಹಾಕಿಸುವ ಮುನ್ನ ಅಕ್ಕಪಕ್ಕದ ಜಮೀನು ನೋಡಿ ನಿರ್ಧಾರ ಮಾಡುವ ಬದಲು ರೈತನು ಟೆಕ್ನಾಲಜಿ ಉಪಯೋಗಿಸಿಕೊಂಡು.
ಈ ಸುದ್ದಿ ಓದಿ:- 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್, ಇನ್ಮುಂದೆ ಬಸ್ ಪ್ರಯಾಣ ಸಂಪೂರ್ಣ ಉಚಿತ.!
ಆಧುನಿಕ ಉಪಕರಣಗಳ ಆಧಾರದ ಮೇಲೆ ಪರೀಕ್ಷೆ ಮಾಡಿಸಿ ಮೊದಲು ನೀರಿನ ಸೆಲೆ ಯಾವ ದಿಕ್ಕಿನಲ್ಲಿ ಯಾವ ಕಡೆ ಹೋಗಿದೆ ಎನ್ನುವುದನ್ನು ತಿಳಿದುಕೊಂಡು ಲೆಕ್ಕಾಚಾರ ಹಾಕಿ ಮುಂದುವರಿದರೆ ಆತನಿಗೆ ಒಳ್ಳೆಯದು. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಿದ್ದರೆ ಅಥವಾ ಬೋರ್ವೆಲ್ ಪಾಯಿಂಟ್ ಮಾಡಿಸಲು ಅಥವಾ ಬೋರ್ವೆಲ್ ತೆಗೆಸಲು ಅನುಭವಿಸ್ಥರ ಸಹಾಯ ಬೇಕಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯಿರಿ. 9901983561