ಕರ್ನಾಟಕ ಸರ್ಕಾರದ ವತಿಯಿಂದ ಮತ್ತೊಂದು ನೇಮಕಾತಿ ನಡೆಯುತ್ತಿದೆ, ಕರ್ನಾಟಕದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯು (Karnataka State Rural Livelihood Promotion Society Recruitment) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗಾಗಿ ನೋಟಿಫಿಕೇಶನ್ ನಲ್ಲಿರುವ ಕೆಲ ಪ್ರಮುಖ ಅಂಶಗಳ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆಗೂ ಶೇರ್ ಮಾಡಿ.
ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
ನೇಮಕಾತಿ ಸಂಸ್ಥೆ:- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ (KSRLPS)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಹುದ್ದೆಗಳ ವಿವರ:-
* ಜಿಲ್ಲಾ ಮ್ಯಾನೇಜರ್ – 1
* ಕ್ಲಸ್ಟರ್ ಸೂಪರ್ವೈಸರ್ – 2
* DEO / MIS ಕೋ ಆರ್ಡಿನೇಟರ್ – 3
* ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್ -1
* ಬ್ಲಾಕ್ ಮ್ಯಾನೇಜರ್ – 2
ಒಟ್ಟು ಹುದ್ದೆಗಳ ಸಂಖ್ಯೆ:- 09 ಹುದ್ದೆಗಳು
ಉದ್ಯೋಗ ಸ್ಥಳ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ:-
* ಜಿಲ್ಲಾ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ B.Sc / M.Sc ಉತ್ತೀರ್ಣರಾಗಿರಬೇಕು
* ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಈ ಸುದ್ದಿ ಓದಿ:- ಅಂಗನವಾಡಿ ಟೀಚರ್ ಹುದ್ದೆ ನೇರ ನೇಮಕಾತಿ, SSLC ಆದವರೂ ಅರ್ಜಿ ಹಾಕಿ..
* DEO/MIS ಕೋಆರ್ಡಿನೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
* ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು
* ಬ್ಲಾಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:-
* https://ksrlps.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ
* ಮತ್ತೊಮ್ಮೆ ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಗಳ ವಿವರದ ಬಗ್ಗೆ ಓದಿಕೊಂಡು ಅರ್ಥೈಸಿಕೊಳ್ಳಿ
* ನೀವು ಇಚ್ಚಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಿರುವ ಮನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ.
* ಸ್ವ ವಿವರಗಳನ್ನು ಕೇಳಲಾಗಿರುತ್ತದೆ ಸರಿಯಾಗಿ ಭರ್ತಿ ಮಾಡಿ
* ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ ಸಬ್ಮಿಟ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ ಇದು ಭವಿಷ್ಯದಲ್ಲಿ ಅನುಕೂಲಕ್ಕೆ ಬರುತ್ತದೆ
* ಅರ್ಜಿಯಲ್ಲಿ ನಿಮ್ಮ ಇಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ, ನೇಮಕಾತಿಗೆ ಕುರಿತಂತೆ ಯಾವುದೇ ಅಪ್ಡೇಟ್ ಇದ್ದರೂ SMS ಮೂಲಕ ತಲುಪುತ್ತದೆ.
ಈ ಸುದ್ದಿ ಓದಿ:- ಈ ಟೆಕ್ನಿಕ್ ಮಾಡಿದರೆ ನಿಮ್ಮ ಗೋಡೆಯಲ್ಲಿ ಹೇರ್ ಲೈನ್ ಕ್ರಾಕ್ ಗಳು ಬರುವುದೇ ಇಲ್ಲ.!
ಆಯ್ಕೆ ವಿಧಾನ:-
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 11 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16 ಮಾರ್ಚ್,2024.